ಜಮೀನು ಖ್ಯಾತೆ; ಗಂಡನನ್ನು ತೆಂಗಿನ ಮಟ್ಟೆಯಿಂದಲೇ ಹೊಡೆದು ಕೊಂದ ಹೆಂಡತಿ!

ಇಂದು ಬೆಳಗ್ಗೆ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಇಬ್ಬರ ನಡುವೆಯೂ ಜಗಳ ಆರಂಭವಾಗಿದೆ. ತೋಟಕ್ಕೆ ನೀರು ಹಾಯಿಸಲು ಬಿಡದ್ದಕ್ಕೆ ರುಕ್ಮಿಣಿ ತನ್ನ ಗಂಡ ಜಯಚಂದ್ರ ನಾಯ್ಡು ಮೇಲೆ ತೆಂಗಿನ ಮಟ್ಟೆಗಳಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ತೀವ್ರ ಗಾಯಕ್ಕೆ ಒಳಗಾಗಿದ್ದ ಜಯಚಂದ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

MAshok Kumar | news18-kannada
Updated:April 2, 2020, 9:38 AM IST
ಜಮೀನು ಖ್ಯಾತೆ; ಗಂಡನನ್ನು ತೆಂಗಿನ ಮಟ್ಟೆಯಿಂದಲೇ ಹೊಡೆದು ಕೊಂದ ಹೆಂಡತಿ!
ಪ್ರಾತಿನಿಧಿಕ ಚಿತ್ರ
  • Share this:
ಚಿತ್ರದುರ್ಗ (ಏಪ್ರಿಲ್ 02); ಜಮೀನು ಖ್ಯಾತೆಯಿಂದಾಗಿ ಹೆಂಡತಿಯೇ ತನ್ನ ಗಂಡನನ್ನು ತೆಂಗಿನ ಮಟ್ಟೆಯಲ್ಲಿ ಹೊಡೆದು ಕೊಂದಿರುವ ಘಟನೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬಲ್ಲಾಳ ಸಮುದ್ರ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಜಯಚಂದ್ರ ನಾಯ್ಡು(60) ಎಂದು ಗುರುತಿಸಲಾಗಿದೆ.

ರುಕ್ಮಿಣಿ ಹಾಗೂ ಜಯಚಂದ್ರ ನಾಯ್ಡು ಕಳೆದ 13 ವರ್ಷದಿಂದ ಬೇರೆಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ, 1 ಎಕರೆ ತೆಂಗಿನ ತೋಟವನ್ನು ಇಬ್ಬರೂ ಭಾಗ ಮಾಡಿಕೊಂಡಿದ್ದರು. ಆದರೆ. ಜಮೀನು ವಿಚಾರದಲ್ಲಿ ಗಂಡ- ಹೆಂಡತಿ ನಡುವೆ ನಿರಂತರ ಜಗಳ ನಡೆದೇ ಇತ್ತು.

ಇಂದು ಬೆಳಗ್ಗೆ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ಇಬ್ಬರ ನಡುವೆಯೂ ಜಗಳ ಆರಂಭವಾಗಿದೆ. ತೋಟಕ್ಕೆ ನೀರು ಹಾಯಿಸಲು ಬಿಡದ್ದಕ್ಕೆ ರುಕ್ಮಿಣಿ ತನ್ನ ಗಂಡ ಜಯಚಂದ್ರ ನಾಯ್ಡು ಮೇಲೆ ತೆಂಗಿನ ಮಟ್ಟೆಗಳಿಂದ ಹಲ್ಲೆ ನಡೆಸಿದ್ದಾಳೆ. ಈ ವೇಳೆ ತೀವ್ರ ಗಾಯಕ್ಕೆ ಒಳಗಾಗಿದ್ದ ಜಯಚಂದ್ರ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಚಿಕಿತ್ಸೆಗೆಂದು ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆಯೇ ಜಯಚಂದ್ರ ನಾಯ್ಡು ಸಾವನ್ನಪ್ಪಿದ್ದಾರೆ. ಇಲ್ಲಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ರುಕ್ಮಿಣಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

(ವರದಿ - ವಿನಾಯಕ ತೊಡರನಾಳ್ ,ಚಿತ್ರದುರ್ಗ)

ಇದನ್ನೂ ಓದಿ : ಕಷ್ಟಕಾಲದಲ್ಲಿ ರಾಜ್ಯಕ್ಕೆ ಸಿಗುತ್ತಾ ಕೇಂದ್ರದ ನೆರವು?; ಮೋದಿ ಏರ್ಪಡಿಸಿರುವ ಸಿಎಂ ಗಳ ಸಭೆಯಲ್ಲಿ ಬಾಕಿ ಕೇಳಲಿರುವ ಬಿಎಸ್‌ವೈ
First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading