Sedam Husband Murder: ಗಂಡ ಸತ್ತ 2 ತಿಂಗಳಲ್ಲಿ ಯುವಕನೊಂದಿಗೆ ಹಾಸಿಗೆ ಮೇಲೆ ಸಿಕ್ಕಿ ಬಿದ್ದ ಹೆಂಡತಿ; ಬಯಲಾಯ್ತು ಅಸಲಿ ಸತ್ಯ!

ಹೆಂಡತಿ ಕಳ್ಳ ಬೆಕ್ಕಿನಿಂದ ಪಕ್ಕದ ಮನೆ ಹೊಕ್ಕುತ್ತಿರುವುದನ್ನು ತಿಳಿಯಲು ಗಂಡ ರಾಜಪ್ಪ ರೆಡ್ಡಿಗೆ ಹೆಚ್ಚೇನು ಸಮಯ ಹಿಡಿಯಲಿಲ್ಲ. ಪತ್ನಿ ಬೇರೊಬ್ಬನ ಸಹವಾಸಕ್ಕೆ ಬಿದ್ದಿದ್ದಾಳೆ ಎಂದು ಅರಿತ ಗಂಡ ಕುದ್ದುಹೋಗಿದ್ದ.

ಅನುಸೂಯ, ಶ್ರೀಶೈಲ

ಅನುಸೂಯ, ಶ್ರೀಶೈಲ

 • Share this:
  ಕಲಬುರಗಿ: ಕೆಲ ತಿಂಗಳುಗಳ ಹಿಂದೆ ಕೊರೊನಾ(corona) 2ನೇ ಅಲೆಯಿಂದ ಸೋಂಕಿನ ತೂಗುಗತ್ತಿ ಪ್ರತಿಯೊಬ್ಬರ ತಲೆಯ ಮೇಲೂ ಇತ್ತು. ಆತಂಕದಲ್ಲೇ ಜನ ಬದುಕಿದ್ದರು. 2ನೇ ಬಾರಿ ಲಾಕ್​ಡೌನ್(lockdown)​​ ಹೇರಿದಾಗ ಬಹುತೇಕರು ತಮ್ಮ ಗ್ರಾಮಗಳತ್ತ ಮುಖ ಮಾಡಿದ್ದರು. ನಗರಗಳಿಗಿಂತ ಗ್ರಾಮಗಳಿಗೆ ಹೋಗಿ ಕೆಲ ಸಮಯ ನೆಲಸುವುದೇ ಸೇಫ್​ ಅಂದುಕೊಂಡಿದ್ದರು. ಸೇಡಂ (Sedam) ತಾಲೂಕಿನ ಈರ್ನಾಪಲ್ಲಿಯ ದಂಪತಿ ಕೂಡ ಇದೇ ರೀತಿ ಯೋಚಿಸಿದ್ದರು. ಗಂಡ ರಾಜಪ್ಪ ರೆಡ್ಡಿ ಹಾಗೂ ಹೆಂಡತಿ ಅನುಸೂಯ ಇಬ್ಬರು ಲಾಕ್​ಡೌನ್​ ವೇಳೆ ತೆಲಂಗಾಣದ (telangana) ಅಂತಾವರಂ ಗ್ರಾಮಕ್ಕೆ ತೆರಳಿದ್ದರು. ಅಂತಾವರಂನಲ್ಲಿರುವ ಪತ್ನಿ ಅನುಸೂಯಳ ತವರು ಮನೆಯಲ್ಲಿಯೇ ದಂಪತಿ ಕೆಲ ಕಾಲ ನೆಲೆಸಿದ್ದರು. ಹಾಲಿನಂತಿದ್ದ ಸಂಸಾರಕ್ಕೆ ಹುಳಿ ಬಿದ್ದಿದ್ದು ಅಲ್ಲೇ ನೋಡಿ. ಅಲ್ಲಿಂದ ಶುರುವಾದ ಅನಾಚಾರ ಕೊಲೆಯಲ್ಲಿ ಅಂತ್ಯ ಕಂಡಿದೆ.

  ಪಕ್ಕದ ಮನೆಯವನ ಸಹವಾಸ

  ಲಾಕ್​ಡೌನ್​ ವೇಳೆ ಯಾರ ಸಂಪರ್ಕವೂ ಇಲ್ಲದೇ ಸೋಂಕಿಗೆ ಒಳಗಾಗದೇ ಇದ್ದರೆ ಸಾಕಪ್ಪ ಅಂತ ಪತಿ ರಾಜಪ್ಪ ರೆಡ್ಡಿ ಯೋಚಿಸುತ್ತಿದ್ದ. ಆದರೆ ಹೆಂಡತಿ ಅನುಸೂಯ ಮನಸ್ಸಲ್ಲಿ ಮಾತ್ರ ಬೇರೆಯಂತೆ ಯೋಚನೆ ಇತ್ತು. ಎಲ್ಲೂ ಹೋಗದೇ ಮನೆಯಲ್ಲೇ ಇರ ತೊಡಗಿದಾಗ ಅನುಸೂಯ ಪಕ್ಕದ ಮನೆಯ ಯುವಕನ ಜೊತೆ ಮಾತನಾಡಲು ಶುರು ಮಾಡಿದ್ದಳು. ಮಾತಿನಿಂದ ಸಲುಗೆ ಬೆಳೆದು ಇಬ್ಬರ ಮಧ್ಯೆ ಅಕ್ರಮ ಸಂಬಂಧ ಎದ್ದು ನಿಂತಿತ್ತು. ತವರು ಮನೆಯಲ್ಲಿ ಗಂಡನೊಂದಿಗೆ ಇದ್ದರೂ ಅನುಸೂಯ ಪಕ್ಕದ ಮನೆಯವನ ಸಹವಾಸಕ್ಕೆ ಬಿದ್ದಿದ್ದಳು.

  ಕಳ್ಳ ಬೆಕ್ಕು ಸಿಕ್ಕಿ ಬಿದ್ದಿತ್ತು

  ಹೆಂಡತಿ ಕಳ್ಳ ಬೆಕ್ಕಿನಿಂದ ಪಕ್ಕದ ಮನೆ ಹೊಕ್ಕುತ್ತಿರುವುದನ್ನು ತಿಳಿಯಲು ಗಂಡ ರಾಜಪ್ಪ ರೆಡ್ಡಿಗೆ ಹೆಚ್ಚೇನು ಸಮಯ ಹಿಡಿಯಲಿಲ್ಲ. ಪತ್ನಿ ಬೇರೊಬ್ಬನ ಸಹವಾಸಕ್ಕೆ ಬಿದ್ದಿದ್ದಾಳೆ ಎಂದು ಅರಿತ ಗಂಡ ಕುದ್ದುಹೋಗಿದ್ದ. ಮೊದಲು ಆ ಜಾಗದಿಂದ ದೂರವಾಗಬೇಕೆಂದು ಪತ್ನಿ ಸಮೇತ ಈರ್ನಾಪಲ್ಲಿಗೆ ಮರಳಿದ್ದ. ಅಲ್ಲಿಗೆ ಹೆಂಡತಿಯ ಅಕ್ರಮ ಸಂಬಂಧಕ್ಕೆ ಫುಲ್​ ಸ್ಟಾಪ್​ ಇಟ್ಟಾಗಿದೆ ಅಂತಲೇ ರಾಜಪ್ಪ ರೆಡ್ಡಿ ಭಾವಿಸಿದ್ದ. ಆದರೆ ಪತ್ನಿಯ ಅಕ್ರಮ ಸಂಬಂಧ ತೆಲಂಗಾಣದಿಂದ ಕರ್ನಾಟಕಕ್ಕೆ ಶಿಫ್ಟ್​ ಆಗಿತ್ತು.

  ಓಡೋಡಿ ಬಂದಿದ್ದ ಲವರ್​

  ವಿವಾಹಿತೆ ಅನುಸೂಯ ಮೋಹಕ್ಕೆ ಬಿದ್ದಿದ್ದ ಪಕ್ಕದ ಮನೆಯ ಶ್ರೀಶೈಲ ಆಕೆಗಾಗಿ ಕಲಬುರಗಿಗೆ ಬಂದಿದ್ದ. ಇಬ್ಬರು ಥೇಟ್​ ಹದಿಹರೆಯದ ಪ್ರೇಮಿಗಳಂತೆ ಲವ್ವಿಡವ್ವಿ ಶುರು ಮಾಡಿದ್ದರು. ತವರಿನಿಂದ ಬಂದ ಪ್ರಿಯಕರನೊಂದಿಗೆ ಅನುಸೂಯ ಸಂಬಂಧ ಮುಂದುವರೆಸಿದ್ದಳು. ಮೋಹ-ಕಾಮದಲ್ಲಿ ಮುಳುಗೆದ್ದಿದ್ದ ಇಬ್ಬರಿಗೂ ಈಗ ಗಂಡ ರಾಜಪ್ಪ ರೆಡ್ಡಿ ವಿಲನ್​ನಂತೆ ಕಾಣುತ್ತಿದ್ದ. ತಮ್ಮಿಬ್ಬರ ಸಂಬಂಧ ಸ್ವೇಚ್ಛೆಯಿಂದ ನಡೆಯಬೇಕೆಂದರೆ ಗಂಡ ರಾಜಪ್ಪ ಇರಬಾರದು ಅಂತ ಅನುಸೂಯ-ಶ್ರೀಶೈಲ ನಿರ್ಧರಿಸಿದ್ದರು. ಪ್ರಿಯಕರನ ಜೊತೆ ಸೇರಿ ಹೆಂಡತಿ, ಗಂಡನ ಸಾವಿಗೆ ಮುಹೂರ್ತ ಇಟ್ಟಿಯೇ ಬಿಟ್ಟಳು.

  ಗಂಡನನ್ನು ಕೊಂಡು ಭರ್ಜರಿ ನಾಟಕ

  ಗಂಡನನ್ನು ಕೊಲ್ಲಬೇಕು ಎಂದು ನಿರ್ಧರಿಸಿದ್ದ ಅನುಸೂಯಗೆ ನಿಜಕ್ಕೂ ಕೊಲೆ ಮಾಡುವುದು ಹೆಚ್ಚು ಕಷ್ಟವೇ ಆಗಲಿಲ್ಲ. ಮೊದಲೇ ಕುಡಿತದ ಚಟಕ್ಕೆ ಬಿದ್ದಿದ್ದ ರಾಜಪ್ಪನಿಗೆ ಕಂಠಪೂರ್ತಿ ಕುಡಿಸಿ, ನಿದ್ರೆ ಮಾತ್ರೆ ಹಾಕಿ ಪರಲೋಕಕ್ಕೆ ಸುಲಭವಾಗಿ ಕಳುಹಿಸಬಿಟ್ಟಳು. ಅಯ್ಯೋ ಗಂಡ ಕುಡಿದು ಕುಡಿದು ಸತ್ತೋದ ಎಂದು ಬಾಯಿ ಬಡಿದುಕೊಂಡು ಎಲ್ಲರನ್ನೂ ನಂಬಿಸಿದ್ದಳು. ಕುಟುಂಬಸ್ಥರು, ಸಂಬಂಧಿಕರು ಸೇರಿದಂತೆ ಸುತ್ತಮುತ್ತಲಿನವರು ಅನುಸೂಯ ನಾಟಕವನ್ನು ನಂಬಿಬಿಟ್ಟರು. ರಾಜಪ್ಪ ರೆಡ್ಡಿಯದ್ದು ಸಹಜ ಸಾವು ಎಂದು ಭಾವಿಸಿ ಅಂತ್ಯಕ್ರಿಯೆ ನಡೆಸಿದ್ದರು.

  ಕೊಲೆಯಾದ ರಾಜಪ್ಪ ರೆಡ್ಡಿ


  ಅಪಾರವಾದ ಖುಷಿಯಲ್ಲಿದ್ದಾಗ ಎಡವಟ್ಟು

  ಇತ್ತ ಅನುಸೂಯ-ಶ್ರೀಶೈಲನ ಪ್ಲಾನ್​ ಸಕ್ಸಸ್​ ಆಗಿತ್ತು. ಅವರಿಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲ. ಗಂಡ ಅನ್ನೋ ಮನುಷ್ಯ ಈಗ ಅವರಿಗೆ ಅಡ್ಡಿಯಾಗಿ ಇರಲಿಲ್ಲ. ಹಾಗಾಗಿ ಶ್ರೀಶೈಲ​ ಸೀದಾ ಬಂದು ಅನುಸೂಯ ಮನೆ ಹೊಕ್ಕಿದ್ದ. ಗಂಡ ಸತ್ತ 2 ತಿಂಗಳಲ್ಲೇ ಅನುಸೂಯ ವರ್ತನೆ ಬಗ್ಗೆ ಅಕ್ಕಪಕ್ಕದವರಿಗೆ ಅನುಮಾನ ಬಂದಿದೆ. ಆ ಮನೆಯಲ್ಲಿ ಹರೆಯದ ಹುಡುಗ, ವಿಧವೆಯ ಮಧ್ಯೆ ನಡೆಯಬಾರದ್ದು ನಡೆಯುತ್ತಿದೆ ಎಂದು ಸ್ಥಳೀಯರ ಗಮನಕ್ಕೆ ಬಂದೇ ಬಿಟ್ಟಿತು. ಮೊನ್ನೆ ರಾತ್ರಿ ಮನೆಗೆ ನುಗ್ಗಿದ ಸ್ಥಳೀಯರು ಹಾಸಿಗೆ ಮೇಲಿದ್ದ ಅನುಸೂಯ-ಶ್ರೀಶೈಲನನ್ನು ರೆಡ್​ ಹ್ಯಾಂಡ್ ಆಗಿ ಹಿಡಿದಿದ್ದರು.

  ಇದನ್ನೂ ಓದಿ: Banashankari Women Murder Twist: 17 ವರ್ಷದ ಬಾಲಕನೊಂದಿಗೆ ಲವ್ವಿಡವ್ವಿ; ಆಂಟಿ ಪ್ರೀತ್ಸೆ ಲವ್ ಕಹಾನಿ ಕೊಲೆಯಲ್ಲಿ ಅಂತ್ಯ!

  ಅಕ್ರಮ ಸಂಬಂಧ ಹೊಂದಿದ್ದ ಶ್ರೀಶೈಲನನ್ನು ಕಂಬಕ್ಕೆ ಕಟ್ಟಿ ನಾಲ್ಕು ಜಾಡಿಸುತ್ತಿದಂತೆ ಎಲ್ಲವನ್ನೂ ಬಾಯ್ಬಿಟ್ಟಿದ್ದಾನೆ. ಆಗಸ್ಟ್ 24 ರಂದು ಸಾವನ್ನಪ್ಪಿದ ರಾಜಪ್ಪನದ್ದು ಕೊಲೆ ಎಂಬ ಸತ್ಯ ಬಯಲಾಗಿದೆ. ಗ್ರಾಮಸ್ಥರು ಇಬ್ಬರು ಆರೋಪಿಗಳನ್ನು ಮುಧೋಳ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಅನುಸೂಯ-ಶ್ರೀಶೈಲ ಮೇಲೆ ಕೊಲೆ ಕೇಸ್​ ದಾಖಲಾಗಿದೆ.
  Published by:Kavya V
  First published: