ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆಗೈದ ಹೆಂಡತಿ; ಪತ್ನಿ ಸೇರಿ ಏಳು ಮಂದಿ ಬಂಧನ

ಘಟನೆ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರವಿಕುಮಾರ್ ಮೃತರಾದ ಬಳಿಕ ಪೊಲೀಸರು ಹೆಂಡತಿ ಗಾಯತ್ರಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು; ಪತಿಯೇ ಪರದೈವ ಎಂದು ಕರೆಯುತ್ತಾರೆ. ಆದರೆ, ಇಲ್ಲಿ ಕೈ ಹಿಡಿದ ಗಂಡನನ್ನೇ ಪತ್ನಿ ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದಿರುವ ಕರುಣಾಜನಕ ಘಟನೆ ನಡೆದಿದೆ.

  ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ರವಿಕುಮಾರ್ ಹಾಗೂ ಗಾಯತ್ರಿ ಎಂಬ ದಂಪತಿಗಳು ವಾಸವಾಗಿದ್ದರು. ಈ ವೇಳೆ ಗಾಯತ್ರಿ ಸತೀಶ್ ಎಂಬ ಎಂಬಾತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಬಳಿಕ ಪ್ರಿಯಕರನೊಂದಿಗೆ ಸೇರಿ ತನ್ನ ಗಂಡ ರವಿಕುಮಾರ್ ಅವರನ್ನು ಕೊಲೆ ಮಾಡಲಾಗಿದೆ.

  ತಮ್ಮ ಸಂಬಂಧಕ್ಕೆ ಗಂಡ ರವಿಕುಮಾರ್ ಅಡ್ಡಿಯಾಗಿದ್ದರು. ಹೀಗಾಗಿ ಆತನನ್ನು ಕೊಲೆ ಮಾಡಲು ಹೆಂಡತಿ ಮತ್ತು ಪ್ರಿಯಕರ ಸೇರಿ ಸ್ಕೆಚ್ ಹಾಕಿದ್ದಾರೆ. ಜುಲೈ 17 ರಂದು ರಾತ್ರಿ ಆಟೋದಲ್ಲಿ ದಾಸನಪುರ ಎಪಿಎಂಸಿ ಮಾರ್ಕೆಟ್‌ ಬಳಿ ರವಿಕುಮಾರ್ ಹೋಗುತ್ತಿದ್ದಾಗ ಸತೀಶ್ ಮತ್ತು ಆತನ ಸಹಚರರು ಮೂರು ಬೈಕ್​ಗಳಲ್ಲಿ ಐದು ಜನರು ದರೋಡೆ ಮಾಡುವ ಸೋಗಿನಲ್ಲಿ ಆಟೋ ಅಡ್ಡಗಟ್ಟಿದ್ದಾರೆ. ಬಳಿಕ ರವಿಕುಮಾರ್ ಮತ್ತು ಆಟೋ ಚಾಲಕನ ಮೊಬೈಲ್ ಕಿತ್ತುಕೊಂಡು, ಚಾಕು ಇರಿದು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ರವಿಕುಮಾರ್ ಅವರು ಜುಲೈ 19ರಂದು ಸಾವನ್ನಪ್ಪಿದ್ದರು.

  ಇದನ್ನು ಓದಿ: Rafale Jets: ಭಾರತಕ್ಕೆ ಬಂದಿಳಿದ ರಫೇಲ್ ಯುದ್ಧ ವಿಮಾನಗಳು; ನಮ್ಮ ಸೇನಾ ಇತಿಹಾಸದಲ್ಲಿ ಹೊಸ ಶಕೆ ಆರಂಭ ಎಂದ ರಾಜನಾಥ ಸಿಂಗ್

  ಘಟನೆ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರವಿಕುಮಾರ್ ಮೃತರಾದ ಬಳಿಕ ಪೊಲೀಸರು ಹೆಂಡತಿ ಗಾಯತ್ರಿಯನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ. ಕೊಲೆ ಆರೋಪದ ಮೇಲೆ ಈಗ ಹೆಂಡತಿ ಗಾಯತ್ರಿ, ಪ್ರಿಯಕರ ಸತೀಶ್, ಇರ್ಫಾನ್, ಸದ್ದಾಂ, ನಯಾಜ್, ಕಲೀಂ, ರಾಮ್ ಪ್ರಶಾಂತ್ ಎಂಬುವವರನ್ನು ಬಂಧಿಸಲಾಗಿದೆ. 
  Published by:HR Ramesh
  First published: