Crime News: ಗಂಡನ ಕೊಲೆಗೆ ಸುಪಾರಿ ಕೊಟ್ರೆ ಆ ಹಂತಕರು ಮಾಡಿದ್ದೇ ಬೇರೆ! ಸಾಯಬೇಕಾದವ ಸೀದಾ ಮನೆಗೇ ಬಂದ!

ಆಕೆ ಆತನ ಹಿಂದೆ ಬಿದ್ದು, ಗಂಡನನ್ನು ದೂರ ಮಾಡಲು ಮುಂದಾದಳು. ಸಾಲದ್ದಕ್ಕೆ ಪ್ರಿಯಕರನ ಜೊತೆಗೂಡಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಳು. ಸುಪಾರಿ ಪಡೆದ ಹಂತಕರು ಗಂಡನ ಕಿಡ್ನಾಪ್ ಮಾಡಿ, ಕೊಲ್ಲೋದಕ್ಕೂ ಟ್ರೈ ಮಾಡಿದ್ರು. ಆದ್ರೆ ಕಥೆಗೆ ಟ್ವಿಸ್ಟ್ ಅಂದ್ರೆ ಕೊಲೆ ಆಗಬೇಕಾದ ಗಂಡ, ವಾಪಸ್ ಮನೆಗೆ ಬಂದ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಇದೊಂಥರಾ ವಿಚಿತ್ರ ಕೇಸ್ (Case). ಇಲ್ಲಿ ಗಂಡ (Husband), ಹೆಂಡತಿ (Wife) ನಿನಗೆ ನಾನು, ನನಗೆ ನೀನು ಅಂದುಕೊಂಡು ಸುಖವಾಗಿದ್ರು. ಅವರ ಮಧ್ಯೆ ಮತ್ತೊಬ್ಬನ ಪ್ರವೇಶ ಆಗುತ್ತಿದ್ದಂತೆ ಸಂಸಾರದಲ್ಲಿ ಅಲ್ಲೋಲ ಕಲ್ಲೋಲ ಆಯ್ತು. ಆಕೆ ಆತನ ಹಿಂದೆ ಬಿದ್ದು, ಗಂಡನನ್ನು ದೂರ ಮಾಡಲು ಮುಂದಾದಳು. ಸಾಲದ್ದಕ್ಕೆ ಪ್ರಿಯಕರನ (Lover) ಜೊತೆಗೂಡಿ ಗಂಡನ ಹತ್ಯೆಗೆ (Murder) ಸುಪಾರಿ (Supari) ಕೊಟ್ಟಳು. ಸುಪಾರಿ ಪಡೆದ ಹಂತಕರು ಗಂಡನ ಕಿಡ್ನಾಪ್ ಮಾಡಿ, ಕೊಲ್ಲೋದಕ್ಕೂ ಟ್ರೈ ಮಾಡಿದ್ರು. ಆದ್ರೆ ಕಥೆಗೆ ಟ್ವಿಸ್ಟ್ (Twist) ಅಂದ್ರೆ ಕೊಲೆ ಆಗಬೇಕಾದ ಗಂಡ, ವಾಪಸ್ ಮನೆಗೆ ಬಂದ. ಕೊಲೆ ಮಾಡಲು ಸುಪಾರಿ ಕೊಟ್ಟ ಪ್ರಿಯಕರ ಸೂಸೈಡ್ (Suicide) ಮಾಡಿಕೊಂಡ! ಮುಂದೇನಾಯ್ತು ಅಂತ ತಿಳಿದುಕೊಳ್ಳೋದಕ್ಕೆ ಈ ಸುದ್ದಿ ಓದಿ…

ಗಂಡ, ಹೆಂಡತಿ ಸುಖ ಸಂಸಾರದ ಮಧ್ಯೆ ಅವನ ಪ್ರವೇಶ

ಬೆಂಗಳೂರು ನಗರದ ಪೀಣ್ಯ ಸಮೀಪದ ದೊಡ್ಡಬಿದರಕಲ್ಲು ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಅನುಪಲ್ಲವಿ ಮದುವೆಯಾಗಿ ಸಂಸಾರ ಸಾಗಿಸುತ್ತಿದ್ದರು. ಈ ನಡುವೆ ಅನುಪಲ್ಲವಿಗೆ ಹಿಮಂತ್ ಕುಮಾರ್ ಎಂಬಾತನ ಪರಿಚಯವಾಗಿದೆ. ಇಬ್ಬರ ನಡುವೆ ಸಲುಗೆ ಬೆಳೆದು, ಅದು ಪ್ರೇಮಕ್ಕೆ ತಿರುಗಿ, ಅನೈತಿಕ ಸಂಬಂಧಕ್ಕೂ ದಾರಿ ಮಾಡಿಕೊಟ್ಟಿದೆ.

ಆರೋಪಿ ಅನುಪಲ್ಲವಿ


ಗಂಡನನ್ನು ಮುಗಿಸಲು ಸುಪಾರಿ ಕೊಟ್ಟ ಹೆಂಡತಿ

ಹಿಮಂತ್ ಹಾಗೂ ಅನುಪಲ್ಲವಿ ನಡುವಿನ ಸಂಬಂಧಕ್ಕೆ ಆಕೆಯ ಪತಿ ನವೀನ್ ಕುಮಾರ್ ಅಡ್ಡಿಯಾಗಿದ್ದಾನೆ. ಪತಿ ನವೀನ್​ನನ್ನೇ ಮುಗಿಸಲು ಇವರಿಬ್ಬರೂ ಪ್ಲಾನ್​ ಮಾಡಿದ್ದರು.ಅದರಂತೆ ಅನುಪಲ್ಲವಿ, ಗಂಡನನ್ನು ಕೊಲೆ ಮಾಡಲು ಪ್ರಿಯಕರ ಹಿಮಂತನಿಗೆ ಕೊಲೆಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದಳು.

ಇದನ್ನೂ ಓದಿ: Crime News: ಸರ್ಕಾರಿ ಕೆಲಸ ಸಿಗದ್ದಕ್ಕೆ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!

ಸ್ನೇಹಿತರ ಮೂಲಕ ಹತ್ಯೆಗೆ ಮುಂದಾದ ಹಿಮಂತ್

ಸುಪಾರಿ ಪಡೆದ ಹಿಮಂತ, ತನ್ನಿಬ್ಬರು ಸ್ನೇಹಿತರಾದ ಹರೀಶ್ ಹಾಗೂ ನಾಗರಾಜ್ ಎಂಬುವರಿಗೆ ಹಣ ಕೊಟ್ಟು, ನವೀನ್ ಕುಮಾರ್‌ನನ್ನು ಕೊಲ್ಲುವ ಪ್ಲಾನ್ ಮಾಡಿದ್ದ. ಹರೀಶ್ ಹಾಗೂ ನಾಗರಾಜ್ ಎಂಬಿಬ್ಬರು ನವೀನ್‌ನನ್ನು ಜುಲೈ 23ರಂದು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಮಾಡಿ ತಮಿಳುನಾಡಿನ ವಿರೂದ್ ನಗರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಕೊಲೆ ಮಾಡಲು ತಮಿಳುನಾಡಿನ ಮುಗಿಲನ್ ಹಾಗು ಕಣ್ಣನ್ ಎಂಬುವರನ್ನು ಕರೆಸಿಕೊಂಡಿದ್ದರು.

ಆರೋಪಿ ಹರೀಶ್


ಹಂತಕರೊಂದಿಗೆ ಪಾರ್ಟಿ ಮಾಡಿದ ಗಂಡ

ವಿಚಿತ್ರ ಅಂದ್ರೆ ಯಾರು ತನ್ನನ್ನು ಕಿಡ್ನಾಪ್ ಮಾಡಿದ್ದರೋ ಅವರೊಂದಿಗೆ ನವೀನ್ ಕುಮಾರ್ ಫ್ರೆಂಡ್‌ಶಿಪ್ ಮಾಡಿಕೊಂಡಿದ್ದಾನೆ. ಅವರೊಂದಿಗೆ ಪಾರ್ಟಿ ಸಹ ಮಾಡಿದ್ದಾನೆ. ಕೊನೆಗೆ ಆತನನ್ನು ಕೊಲೆ ಮಾಡುವ ಪ್ಲಾನ್ ಅನ್ನೇ ಹಂತಕರು ಚೇಂಜ್ ಮಾಡಿದ್ದಾರೆ.

ಅನುಪಲ್ಲವಿ ತಾಯಿ


ಮೈಮೇಲೆ ಟೊಮ್ಯಾಟೋ ಕೆಚಪ್ ಹಾಕಿ ಫೋಟೋ ಕಳಿಸಿದ ಹಂತಕರು

ಕೊಲೆಗೆ ನವೀನ್ ಕುಮಾರ್‌ಗೆ ಮತ್ತು ಬರುವಂತೆ ಮಾಡಿ, ಆತನ ಮೈಮೇಲೆ ಟೊಮೇಟೋ ಕೆಚಪ್ ಹಾಕಿ, ರಕ್ತ ಎನ್ನುವಂತೆ ಬಿಂಬಿಸಿದ್ದಾರೆ. ಆ ಫೋಟೋಗಳನ್ನು ತೆಗೆದು ಬೆಂಗಳೂರಿನಲ್ಲಿದ್ದ ಹಿಮಂತ್ ಹಾಗೂ ಅನುಪಲ್ಲವಿಗೆ ಕಳಿಸಿದ್ದಾರೆ.

ಆರೋಪಿ ಮುಗಿಲನ್


ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ

ಇನ್ನು ಫೋಟೋ ನೋಡಿ ಗಾಬರಿಗೊಂಡ ಹಿಮಂತ, ನವೀನ್ ಕೊಲೆಯಾದ ಎಂದು ಪೊಲೀಸರಿಗೆ ಹೆದರಿ ಆ.1ರಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಈ ಆತ್ಮಹತ್ಯೆ ಬಗ್ಗೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಘಟನೆ ನಡೆದಾಗ ಆತ್ಮಹತ್ಯೆ ಬಗ್ಗೆ ಕಾರಣ, ಸುಳಿವು ಪತ್ತೆಯಾಗಿರಲಿಲ್ಲ. ಸದ್ಯ ಈ ಸುಪಾರಿ ಪ್ರಕರಣದ ಬಳಿಕವೇ ಆತ್ಮಹತ್ಯೆ ಕಾರಣ ಬಯಲಾಗಿದೆ.

ಆರೋಪಿ ನಾಗರಾಜ


ಇದನ್ನೂ ಓದಿ: Praveen Nettar: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು‌ ಹಂತಕರನ್ನು ಬಂಧಿಸಿದ ತಂಡಕ್ಕೆ ಬಹುಮಾನ

ಪತ್ನಿ, ಆಕೆಯ ತಾಯಿಯೂ ಅರೆಸ್ಟ್

ಇನ್ನು ಪ್ರಿಯಕರನ ಮೂಲಕ ಗಂಡನ ಕೊಲ್ಲಲು ಸುಪಾರಿ ನೀಡಿದ ಅರ್ಧಾಂಗಿ ಜೈಲುಪಾಲಾಗಿದ್ದಾಳೆ. ಘಟನೆ ಸಂಬಂಧ ಅನುಪಲ್ಲವಿ ಮತ್ತು ಆಕೆಯ ತಾಯಿ ಅಮುಜಮ್ಮ ಹಾಗೂ ಸಹಚರರಾದ ಪೀಣ್ಯ ಬಡಾವಣೆಯ ಹರೀಶ್, ನಾಗರಾಜು ಮತ್ತು ಮುಗಿಲನ್ ಎಂಬುವರನ್ನು ಬಂಧಿಸಲಾಗಿದೆ. ಕೊಲೆಯಾಗಬೇಕಿದ್ದ ನವೀನ್ ಕುಮಾರ್ ಅದೃಷ್ಟವಶಾತ್ ಮನೆಗೆ ವಾಪಸ್ಸಾಗಿದ್ದಾನೆ.
Published by:Annappa Achari
First published: