ಪತ್ನಿಯ ಕಿರುಕುಳಕ್ಕೆ (Wife harassment) ಪತಿ ಅತ್ಮಹತ್ಯೆಗೆ (Husband Death) ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆ ಮದುವೆಯಾಗಿತ್ತು. ಆದ್ರೆ ಪತ್ನಿ ಹಣಕ್ಕಾಗಿ (Money) ಮಗನಿಗೆ ಕಿರುಕುಳ ನೀಡುತ್ತಿದ್ದಳು ಎಂದು ಯುವಕನ ಪೋಷಕರು (Parents) ಆರೋಪಿಸಿ, ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಎಂವಿ ಲೇಔಟ್ ಉಲ್ಲಾಳದ ಬಳಿ ಘಟನೆ ನಡೆದಿದ್ದು, 24 ವರ್ಷದ ಮಹೇಶ್ವರ್ ಆತ್ಮಹತ್ಯೆಗೆ ಶರಣಾದ ನವವಿವಾಹಿತ. ಆಗಸ್ಟ್ 21 ರಂದು ರಾಮನಗರ ಮೂಲದವರಾದ ಮಹೇಶ್ವರ್ ಮದುವೆ ಕವನ (22) ಎಂಬಾಕೆ ಜೊತೆ ನಡೆದಿತ್ತು. ಮದುವೆ ಬಳಿಕ ಜೋಡಿ ಬೆಂಗಳೂರಿನ ಬಾಡಿಗೆ ಮನೆಯಲ್ಲಿ (Rent House) ವಾಸವಾಗಿದ್ದರು. ಐದು ದಿನಗಳ ಹಿಂದೆ ಮನೆಯಲ್ಲಿಯೇ ಮಹೇಶ್ವರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಮಹೇಶ್ವರ್ ತಾಯಿ ರತ್ನಮ್ಮ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಐಪಿಸಿ ಸೆಕ್ಷನ್ 34, 306 ಅಡಿಯಲ್ಲಿ ಕವನ ಮತ್ತು ಆಕೆಯ ಪೋಷಕರಅದ ಆತ್ಮಾನಂದ್ ಮತ್ತು ಪದ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.
ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ
ಮೃತ ಮಹೇಶ್ವರ್ ಚನ್ನಪಟ್ಟಣ ತಾಲೂಕಿನ ಕೊಡರು ಗ್ರಾಮದವರು. ಆಗಸ್ಟ್ 21ರಂದು ಮದ್ದೂರಿನ ಮದ್ದೂರಮ್ಮ ದೇವಾಲಯದ ಪರಿಸರದಲ್ಲಿ ಮಗನ ಮದುವೆ ನಡೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಹೊಂದಾಣಿಕೆ ಸರಿ ಇರಲ್ಲ. ಮಗನ ಜೊತೆ ಕವನ ಪದೇ ಪದೇ ಜಗಳ ಮಾಡುತ್ತಿದ್ದಳು ಎಂದು ರತ್ನಮ್ಮಾ ಆರೋಪಿಸಿದ್ದಾರೆ.
ಮದುವೆಯಾದ ದಿನದಿಂದಲೂ ದುರಹಂಕಾರದಿಂದ ವರ್ತಿಸುತ್ತಿದ್ದ ಕವನ ಹಿರಿಯರಿಗೆ ಗೌರವ ಕೊಡುತ್ತಿರಲಿಲ್ಲ. ಚಿನ್ನಾಭರಣ, ದುಬಾರಿ ಬೆಲೆ ವಸ್ತುಗಳನ್ನು ನೀಡುವಂತೆ ಪೀಡಿಸುತ್ತಿದ್ದಳು. ಒಂದು ವೇಳೆ ಕೊಡಿಸದಿದ್ದರೆ ಮಗನನ್ನು ನಿಂದಿಸುತ್ತಿದ್ದಳು. ಇದರ ಜೊತೆಗೆ ತನ್ನ ತಂದೆಗೆ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದಳು.
ತವರು ಮನೆಯ ಜವಾಬ್ದಾರಿ ಹೊರುವಂತೆ ಕಿರುಕುಳ
ಮಹೇಶ್ವರ್ ಮತ್ತು ಕವನ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಮಗನೇ ಅವರ ಕುಟುಂಬವನ್ನು ನೋಡಿಕೊಳ್ಳುತ್ತಿದ್ದನು. ವಿವಾಹದ ಬಳಿಕವೂ ತನ್ನ ತವರು ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುವಂತೆ ಹಿಂಸೆ ಕೊಡುತ್ತಿದ್ದಳು ಎಂದು ರತ್ನಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಮಗೆ ಒಬ್ಬನೇ ಮಗ ಆಗಿದ್ದರಿಂದ ಬೆಂಗಳೂರಿನಲ್ಲಿ ಪ್ರತ್ಯೇಕ ಮನೆ ಮಾಡಿಕೊಡಲಾಗಿತ್ತು. ವಾಸ ಮಾಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದ್ರೂ ಕವನ ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದಳು. ಪ್ರತಿನಿತ್ಯ ಹಿಂಸೆ ಕೊಡುತ್ತಿರುವ ಕಾರಣ ಮಹೇಶ್ವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇಬ್ಬರು ಬೈಕ್ ಸವಾರರ ದುರ್ಮರಣ
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಐಟಿಐ ಕಾಲೇಜು ಎದುರು ರಾಷ್ಟ್ರೀಯ ಹೆದ್ದಾರಿ 67ರಲ್ಲಿ ನಡೆದಿದೆ.
ಇದನ್ನೂ ಓದಿ: Kalaburgi: ರೈತರಿಗೆ ಸಿಹಿ ಸುದ್ದಿ; ಇನ್ಮುಂದೆ ಮಧ್ಯವರ್ತಿ ಕಾಟವಿಲ್ಲ, ಸರ್ಕಾರದ 'ಬೆಂಬಲ'!
ಜಕ್ಕಹಳ್ಳಿ ಗ್ರಾಮದ ಚಂದ್ರು ಹಾಗೂ ಲಕ್ಕೂರು ಗ್ರಾಮದ ಅನಿಲ್ ಮೃತ ದುರ್ದೈವಿಗಳು. ಬೈಕ್ನಲ್ಲಿದ್ದ ಗುಂಡ್ಲುಪೇಟೆಯ ವೇಣು ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ದೊಡ್ಡಬಳ್ಳಾಪುರದಲ್ಲಿ ಅಪಘಾತ
ದೊಡ್ಡಬಳ್ಳಾಪುರದಲ್ಲಿ ಆಟೋ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದೆ. ದೊಡ್ಡಬಳ್ಳಾಪುರದ ಬ್ಯಾಂಕ್ ಸರ್ಕಲ್ ಬಳಿ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ