ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಮಂಡ್ಯವನ್ನೇ ಬೆಚ್ಚಿ ಬೀಳಿಸಿದ್ದ ಬರ್ಬರ ಹತ್ಯೆಯನ್ನು ಒಂದೇ ದಿನದಲ್ಲಿ ಬೇಧಿಸಿದ ಪೊಲೀಸರು

ಈ ಕೊಲೆ ಸುದ್ದಿ ಸೋಮವಾರ ಇಡೀ ಮಂಡ್ಯದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆ ತಿಳಿಯುತ್ತಿದ್ದಂತೆ ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದರು. ಆದರೆ, ಕೊಲೆಗೆ ಕಾರಣ ಏನು? ಕೊಲೆ ಮಾಡಿದವರು ಯಾರು? ಎಂಬ ಕುರಿತು ಮಾಹಿತಿ ಕಲೆ ಹಾಕುವುದು ಮಾತ್ರ ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವಾಗಿತ್ತು.

news18india
Updated:January 21, 2020, 7:56 PM IST
ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ; ಮಂಡ್ಯವನ್ನೇ ಬೆಚ್ಚಿ ಬೀಳಿಸಿದ್ದ ಬರ್ಬರ ಹತ್ಯೆಯನ್ನು ಒಂದೇ ದಿನದಲ್ಲಿ ಬೇಧಿಸಿದ ಪೊಲೀಸರು
ಕೊಲೆಯಾಗಿರುವ ಬುಂಡಾರಾಮ್.
  • Share this:
ಮಂಡ್ಯ (ಜನವರಿ 21) : ರಾಜಸ್ತಾನ ಮೂಲದ ಬುಂಡಾರಾಮ್​ ಎಂಬ ವ್ಯಕ್ತಿಯನ್ನು ಕೈ ಕಾಲು ಕಟ್ಟಿಹಾಕಿ ಕತ್ತು ಕುಯ್ದು ಹತ್ಯೆ ಮಾಡಿರುವ ಘಟನೆ ನಿನ್ನೆ ಮಂಡ್ಯದಲ್ಲಿ ನಡೆದಿದ್ದು  ಸ್ಥಳೀಯರಲ್ಲಿ ಆತಂಕವನ್ನು ಮೂಡಿಸಿತ್ತು. ಆದರೆ, ಪ್ರಕರಣವನ್ನು ಒಂದೇ ದಿನದಲ್ಲಿ ಬೇಧಿಸಿರುವ ಪೊಲೀಸರು ಪತ್ನಿಯೇ ತನ್ನ ಪತಿಯ ಹತ್ಯೆಗೆ ಸುಪಾರಿ ಕೊಟ್ಟಿದ್ದಾಳೆ ಎಂಬ ಆತಂಕಕಾರಿ ಮಾಹಿತಿಯನ್ನು ಹೊರಗೆಡವಿದ್ದಾರೆ.

ಬುಂಡಾರಾಮ್ ಮಂಡ್ಯದ ವಿದ್ಯಾನಗರದಲ್ಲಿ 3 ಅಂತಸ್ಥಿನ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ. ಅಲ್ಲದೆ, ಗುತ್ತಲು ನಗರದಲ್ಲಿ ಹಾರ್ಡ್​ವೇರ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಆದರೆ, ನೆನ್ನೆ ರಾತ್ರಿ ಮೂರ್ನಾಲ್ಕು ದುಷ್ಕರ್ಮಿಗಳ ತಂಡ ಏಕಾಏಕಿ ಮನೆಗೆ ನುಗ್ಗಿದೆ. ಹೀಗೆ ಮನೆಗೆ ನುಗ್ಗಿದವರು ಮನೆಯಲ್ಲಿದ್ದ ಎಲ್ಲರ ಕೈ ಕಾಲುಗಳನ್ನೂ ಕಟ್ಟಿಹಾಕಿ ಮಲಗಿದ್ದ ಬುಂಡಾರಾಮ್ ನನ್ನು ಕತ್ತು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಕೊಲೆ ಸುದ್ದಿ ಸೋಮವಾರ ಇಡೀ ಮಂಡ್ಯದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆ ತಿಳಿಯುತ್ತಿದ್ದಂತೆ ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದರು. ಆದರೆ, ಕೊಲೆಗೆ ಕಾರಣ ಏನು? ಕೊಲೆ ಮಾಡಿದವರು ಯಾರು? ಎಂಬ ಕುರಿತು ಮಾಹಿತಿ ಕಲೆ ಹಾಕುವುದು ಮಾತ್ರ ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವಾಗಿತ್ತು.

ಆದರೆ, ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಒಂದೇ ದಿನದಲ್ಲಿ ಪ್ರಕರಣವನ್ನು ಬೇಧಿಸಿದ್ದಾರೆ. ಅಸಲಿಗೆ ಘಟನೆಯ ಬೆನ್ನಿಗೆ ಚನ್ನರಾಯಪಟ್ಟಣದಲ್ಲಿ ರಾಜಸ್ತಾನ ಮೂಲದ ಇಬ್ಬರು ಆರೋಪಿಗಳು ಮಾರಕಾಸ್ತ್ರಗಳಿದ್ದ ಬ್ಯಾಗ್​ನೊಂದಿಗೆ ಹಾಸನ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬ್ಯಾಗ್​ನಲ್ಲಿದ್ದ ಡ್ರ್ಯಾಗನ್​ ಹಾಗೂ ಪಿಸ್ತೂಲನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಂಡ್ಯ ಕೊಲೆ ಪ್ರಕರಣದಲ್ಲಿ ಇವರೇ ಪ್ರಮುಖ ಆರೋಪಿಗಳು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಸ್ವತಃ ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾಳೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪತ್ನಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ಬಳಿಕ ಕೊಲೆಗೆ ನಿಖರ ಕಾರಣ ಏನು? ಎಂಬುದು ಬೆಳಕಿಗೆ ಬರಲಿದೆ.

ಇದನ್ನೂ ಓದಿ : ಫುಡ್​ ಡೆಲಿವರಿ ಸಮಯವನ್ನು 40 ನಿಮಿಷಕ್ಕೆ ಹೆಚ್ಚಿಸಿ, ಇಲ್ಲ ಕಂಬಿ ಎಣಿಸಲು ಸಿದ್ಧರಾಗಿ: ಸ್ವಿಗ್ಗಿ ಸಂಸ್ಥೆಯನ್ನು ಬೆಂಡೆತ್ತಿದ ಬೆಂಗಳೂರು ಕಮೀಷನರ್
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ