ಪರಪುರುಷನ ತೆಕ್ಕೆಯಲ್ಲಿ ಮಲಗಿ ಸುಖಿಸಲು ಗಂಡ ಅಡ್ಡಿಯಾಗುತ್ತಾನೆಂದು ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಹೆಂಡತಿ!

ಪ್ರಕರಣ ದಾಖಲಿಸಿಕೊಂಡ ಸುದ್ದಗುಂಟೆ ಪಾಳ್ಯ ಪೊಲೀಸರು, ಪತ್ನಿ ತಸ್ಲೀಮ್ ಬಾನು , ಆಕೆಯ ಪ್ರಿಯಕರ ಅಪ್ಸರ್ ಖಾನ್ ಸೇರಿ 10 ಮಂದಿಯನ್ನ ಬಂಧಿಸಿದ್ದಾರೆ. ಹಣದ ಆಸೆಗೆ ಪುಂಡರ ಗ್ಯಾಂಗ್ ಮಾರಕಾಸ್ತ್ರಗಳನ್ನ ಕದ್ದು ಕೊಲೆ ಮಾಡಿರೋದು ಗೊತ್ತಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಫೋನ್, ಸುಪಾರಿಗೆ ಪಡೆದಿದ್ದ ಹಣವನ್ನ ಹಾಗೂ ಅಪ್ಸರ್ ತನ್ನ ಮನದನ್ನೆಗೆ ನೀಡಿದ್ದ ಪ್ರೀತಿಯ ಉಡುಗೊರೆಗಳನ್ನು ಜಪ್ತಿ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಇದು ರಾಜಧಾನಿ ಬೆಂಗಳೂರನ್ನ ಬೆಚ್ಚಿ ಬೀಳಿಸುವ ಭಯಾನಕ ಸುದ್ದಿ. ಅನೈತಿಕ ಸಂಬಂಧಕ್ಕೆ  ಅಡ್ಡಬಾರದೆಂದು ಪತಿಯನ್ನೇ ಮಸಣಕ್ಕೆ ಕಳಿಸಿದ ಪತ್ನಿ. ಹೀಗೆ ಪ್ರಿಯಕರನ ಮೂಲಕ ಪುಂಡರಿಗೆ ಸುಫಾರಿ ಕೊಟ್ಟು ಹತ್ಯೆ ಮಾಡಿಸಿ ಮುಗ್ಧಳಂತಿದ್ದ ಮಾಯಾಂಗಿನಿಯನ್ನು ಕೊನೆಗೂ ಖಾಕಿ ಪಡೆ ಕಂಬಿ ಹಿಂದೆ ಕಳಿಸಿದೆ. ಈ ಕೊಲೆಯನ್ನು ನೋಡಿದರೆ ಒಮ್ಮೆ ಎಂಥವರಿಗೂ ನೋಡಿದಾಗ ಮೈ ಜುಮ್ಮೆನ್ನುತ್ತೆ. ಅಬ್ಬಾ. ಇದೇನೋ ಹೊರರಾಜ್ಯದಲ್ಲಿ ನಡೆದಿರೋ ಘಟನೆಯಲ್ಲ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರೋದು.

ಹೌದು, ಇದೇ ತಿಂಗಳ 19 ರಂದು ಗುರಪ್ಪನಪಾಳ್ಯದ ಟಿಂಬರ್ ಬಳಿ ಸಂಜೆ 6.30 ರ‌ ಸುಮಾರಿಗೆ ಮೊಹಮ್ಮದ್ ಶಫಿ ಎಂಬಾತನನ್ನು ದುಷ್ಕರ್ಮಿಗಳು ಬರ್ಬರವಾಗಿ ಮಾರಕಾಸ್ತ್ರ ಬೀಸಿ ಹತ್ಯೆ ಮಾಡಿದ್ದರು. ಕೊಲೆ ಮಾಡಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ಹಿಂದೆ ಬಿದ್ದ ಪೊಲೀಸರಿಗೆ ಮಾಯಾಂಗಿನಿ ಪತ್ನಿ ತಸ್ಲಿಂ ಬಾನು ಹಾಗೂ ಪ್ರಿಯಕರ ಅಪ್ಸರ್ ಖಾನ್ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಿದಾಗ ಅನೈತಿಕ ಸಂಬಂಧಕ್ಕೆ ತೊಂದರೆಯಾಗಬಾರದೆಂದು ಸುಪಾರಿ ಕೊಟ್ಟು ಹತ್ಯೆ ಮಾಡಿಸಿರೋ ವಿಷಯ ಬೆಳಕಿಗೆ ಬಂದಿದೆ.

ಇದನ್ನು ಓದಿ: ಆನ್​ಲೈನ್ ಶಾಪಿಂಗ್​ನಲ್ಲಿ ಮೋಸ‌ ಹೋದ ಯುವಕ; ಬರೋಬ್ಬರಿ ಲಕ್ಷ ರೂಪಾಯಿ ಕಳೆದುಕೊಂಡ ಅಸಾಮಿ!

ಕೊಲೆಯಾದ ಮೊಹಮ್ಮದ್ ಶಫಿ ಪತ್ನಿ ತಸ್ಲೀಂ ಬಾನು ಎಂಬಾಕೆ ಅಫ್ಸರ್ ಖಾನ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡ್ಕೊಂಡಿದ್ದ  ಅಪ್ಸರ್ ಖಾನ್ ಕಳೆದ ಎರಡು ವರ್ಷಗಳ ಹಿಂದೆ ತಸ್ಲೀಂ ಬಾನುಗೆ ಪರಿಚಯವಾಗಿದ್ದ. ಆ ಬಳಿಕ ಇಬ್ಬರೂ ಮೃತ ಶಫಿ ಕಣ್ತಪ್ಪಿಸಿ ಸುತ್ತಾಡ್ತಿದ್ರು. ಮೃತ ಶಫಿ ಸಹ ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದು, ಅಪ್ಸರ್ ಪರಿಚಯ ಮಾಡಿಕೊಂಡಿದ್ದ. ಆ ಬಳಿಕ ಶಫಿ ಮೂಲಕವೇ ಎಪ್ಪತೈದು ಲಕ್ಷ ಹಣವನ್ನು ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಮೇಲೆ ಅಪ್ಸರ್ ಇನ್ವೆಸ್ಟ್ ಮಾಡಿಸಿದ್ದ. ಆ ಬಳಿಕ ಕಮಿಷನ್ ಹಣ ಕೊಡೋದಾಗಿ ಆಗಾಗ ಕರೆದು ಹಣ ಕೊಡ್ತಿದ್ದ. ಜೊತೆಗೆ ಆತನ ಪತ್ನಿ ಜೊತೆ ಲವ್ವಿ ಡವ್ವಿ ಶುರುಮಾಡಿದ್ದ. ಇನ್ನು ಮುಂದೆ ಶಫಿಯಿಂದ ತೊಂದರೆಯಾಗುತ್ತೆ ಎಂದು ತಿಳಿದು ಮಾಟಮಂತ್ರ ಮಾಡಿಸಿ ಹತ್ಯೆ ಮಾಡಲು ಮುಂದಾಗಿದ್ದು, ಸಕ್ಸಸ್ ಆಗಿರಲಿಲ್ಲ. ಆ ಬಳಿಕ ಪ್ರಿಯಕರನಿಗೆ ಪತ್ನಿಯೇ ಸುಪಾರಿ ಕೊಟ್ಟು ಹತ್ಯೆ ಮಾಡಿಸುವ ಪ್ಲಾನ್ ಕೊಟ್ಟು, ಎರಡು ಲಕ್ಷಕ್ಕೆ ಡೀಲ್ ಮಾಡಿಕೊಳ್ಳುತ್ತಾರೆ. ಇಬ್ಬರು ಕ್ರಿಮಿನಲ್ ಆಕ್ಟಿವಿಟೀಸ್ ಹಿನ್ನಲೆವುಳ್ಳ ತಬ್ರೇಜ್ ಮತ್ತು ವಸೀಂ ಎಂಬುವರಿಗೆ ಸುಪಾರಿ ಕೊಟ್ಟಿದ್ದ ಅಪ್ಸರ್ ಪಾಷ, ಐದು ಲಕ್ಷ ಕಮಿಷನ್ ಕೊಡೋದಾಗಿ ಮಹಮ್ಮದ್ ಶಫಿಯನ್ನ ಕರೆಸಿದ್ದ. ಈ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಮೊಹಮ್ಮದ್ ಶಫಿಯನ್ನ ದುಷ್ಕರ್ಮಿಗಳು ಕೊಲೆ ಮಾಡಿ ಎಸ್ಕೇಪ್ ಆಗಿದ್ರು.

ಪ್ರಕರಣ ದಾಖಲಿಸಿಕೊಂಡ ಸುದ್ದಗುಂಟೆ ಪಾಳ್ಯ ಪೊಲೀಸರು, ಪತ್ನಿ ತಸ್ಲೀಮ್ ಬಾನು , ಆಕೆಯ ಪ್ರಿಯಕರ ಅಪ್ಸರ್ ಖಾನ್ ಸೇರಿ 10 ಮಂದಿಯನ್ನ ಬಂಧಿಸಿದ್ದಾರೆ. ಹಣದ ಆಸೆಗೆ ಪುಂಡರ ಗ್ಯಾಂಗ್ ಮಾರಕಾಸ್ತ್ರಗಳನ್ನ ಕದ್ದು ಕೊಲೆ ಮಾಡಿರೋದು ಗೊತ್ತಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಫೋನ್, ಸುಪಾರಿಗೆ ಪಡೆದಿದ್ದ ಹಣವನ್ನ ಹಾಗೂ ಅಪ್ಸರ್ ತನ್ನ ಮನದನ್ನೆಗೆ ನೀಡಿದ್ದ ಪ್ರೀತಿಯ ಉಡುಗೊರೆಗಳನ್ನು ಜಪ್ತಿ ಮಾಡಿದ್ದಾರೆ. ಅದೇನೇ ಇರಲಿ ಇಬ್ಬರು ಮಕ್ಕಳಿದ್ದು, ಸುಖಸಂಸಾರ ನಡೆಸ್ತಿದ್ದ ಆಕೆ ಪರಪುರಷನ ತೆಕ್ಕೆಯಲ್ಲಿ ಮಲಗಿ ಸಂಸಾರವನ್ನು ನಡುಬೀದಿಗೆ ತಂದಿದ್ದು ವಿಪರ್ಯಾಸವೇ ಸರಿ.
Published by:HR Ramesh
First published: