ವರದಕ್ಷಿಣೆ ಕಿರುಕುಳ ಆರೋಪ - ಗಂಡನ ವಿರುದ್ಧ ವಿದೇಶಿ ಮೂಲದ ವಿವಾಹಿತೆ ದೂರು

ಸಂತ್ರಸ್ಥೆ ದಕ್ಷಿಣ ಅಮೇರಿಕಾದ ಚಿಲಿ ದೇಶದ ಹೆಂಡತಿ ಕಾರ್ಲಾ ಮಾರ್ಟೂಸ್ ಬ್ರಾವೂ ದೂರಿನ ಹಿನ್ನಲೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಡ ವಿಕ್ರಂ ವಿರುದ್ಧ ಎಫ್ಐಆರ್ ದಾಖಲಾಗಿದೆ.

news18-kannada
Updated:January 25, 2020, 9:02 AM IST
ವರದಕ್ಷಿಣೆ ಕಿರುಕುಳ ಆರೋಪ - ಗಂಡನ ವಿರುದ್ಧ ವಿದೇಶಿ ಮೂಲದ ವಿವಾಹಿತೆ ದೂರು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜ.25) : ವಿದೇಶಿ ಮೂಲದ ವಿವಾಹಿತೆಯೊಬ್ಬಳು ಗಂಡನ ವಿರುದ್ದ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಹೆಂಡತಿ ಕಾರ್ಲಾ ಮಾರ್ಟೂಸ್ ಬ್ರಾವೂ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಂತ್ರಸ್ಥೆ ದಕ್ಷಿಣ ಅಮೇರಿಕಾದ ಚಿಲಿ ದೇಶದ ಹೆಂಡತಿ ಕಾರ್ಲಾ ಮಾರ್ಟೂಸ್ ಬ್ರಾವೂ ದೂರಿನ ಹಿನ್ನಲೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಡ ವಿಕ್ರಂ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾರ್ಲಾ ಭರತನಾಟ್ಯ, ಕಥಕ್ ಕಲಿಯಲು 2017 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕಾರ್ಲಾ ಮಾರ್ಟೂಸ್ ಗೆ  ಹೈದರಾಬಾದ್ ಮೂಲದ ವಿಕ್ರಂ ಮಾಡಾ ಜತೆ ಪ್ರೇಮಾಂಕುರವಾಗಿತ್ತು. 2018 ರ ಜುಲೈನಲ್ಲಿ ಹಿಂದೂ ಸಂಪ್ರಾದಾಯದಂತೆ ವಿವಾಹವಾಗಿದ್ದರು.

ಮದುವೆ ಬಳಿಕ ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ವಾಸವಾಗಿದ್ದರು. 2019 ರಲ್ಲಿ ದಂಪತಿ ಪತ್ನಿ ಕಾರ್ಲಾಳ ಚಿಲಿ ದೇಶಕ್ಕೆ ಹೋಗಿ ಬಂದಿದದ್ದರು. ಆ ಬಳಿಕ ಪತ್ನಿ ಮನೆಯ ಸ್ಥಿತಿಗತಿ ಕಂಡು ಪತಿ ಹಣಕ್ಕಾಗಿ ಕಿರುಕುಳ ನೀಡಲಾರಂಭಿಸಿದ್ದ.  ಪತ್ನಿಯನ್ನು ಅನುಮಾನಿಸಿ ಪೋನ್ ಚೆಕ್ ಮಾಡಿ ಪತಿ ಕಿರುಕುಳ ನೀಡುತ್ತಿದ್ದಾಗಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಆಸ್ತಿ ವಿವಾದ: ಮೂರು ವರ್ಷದ ಮಗು, ನಾದಿನಿ ಮುಖಕ್ಕೆ ಆ್ಯಸಿಡ್​ ಎರಚಿದ ಕಿರಾತಕ

ವಿಚ್ಛೇದನ ನೀಡಲು ಪರಸ್ಪರ ನಿರ್ಧರಿಸಿ ಮಾತನಾಡಲು ತೆರಳಿದ್ದಾಗ ವಿಕ್ರಂ ಮಾಡಾ ಹಲ್ಲೆ ಮಾಡಿರೋದಾಗಿ ಕಾರ್ಲಾ ಆರೋಪಿಸಿದ್ದಾರೆ. ಸದ್ಯ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
First published:January 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ