Suicide: ಪ್ರಿಯಕರನೊಂದಿಗೆ ಮೂರು ಮಕ್ಕಳ ತಾಯಿ ಎಸ್ಕೇಪ್, ಮನೆಯಲ್ಲಿದ್ದ ಕಂದಮ್ಮಗಳ ಪಾಲಿಗೆ ತಂದೆಯೇ ಯಮನಾದ!

ಗಂಡ, ಮನೆ, ಮೂವರು ಮಕ್ಕಳು, ನನ್ನ ಸಂಸಾರ ಅಂತ ಇದ್ದ ಆ ಮಹಿಳೆ ಗಂಡ, ಮನೆ ಅಷ್ಟೇ ಅಲ್ಲ, ಮಕ್ಕಳನ್ನೂ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಮಾನ ಹೋಯ್ತು ಅಂತ ತಲೆ ಮೇಲೆ ಕೈ ಹೊತ್ತು ಕುಳಿತ ಗಂಡ, ದುಡುಕಿ ಮಾಡಬಾರದ ಅನಾಹುತ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು: ಈ ಜಗತ್ತಿನಲ್ಲಿ ಕೆಟ್ಟ ತಂದೆ (Bad Father) ಇರಬಹುದು, ಆದ್ರೆ ಕೆಟ್ಟ ತಾಯಿ (Bad Mother) ಇರಲಿಕ್ಕಿಲ್ಲ ಅಂತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಗಂಡ (Husband), ಮನೆ (Home), ಮೂವರು ಮಕ್ಕಳು (Children), ನನ್ನ ಸಂಸಾರ (Family) ಅಂತ ಇದ್ದ ಆ ಮಹಿಳೆ ಗಂಡ, ಮನೆ ಅಷ್ಟೇ ಅಲ್ಲ, ಮಕ್ಕಳನ್ನೂ ಬಿಟ್ಟು ಪ್ರಿಯಕರನೊಂದಿಗೆ (Lover) ಪರಾರಿಯಾಗಿದ್ದಾಳೆ. ಮಾನ ಹೋಯ್ತು ಅಂತ ತಲೆ ಮೇಲೆ ಕೈ ಹೊತ್ತು ಕುಳಿತ ಗಂಡ, ದುಡುಕಿ ಮಾಡಬಾರದ ಅನಾಹುತ ಮಾಡಿದ್ದಾನೆ. ಹೆಂಡತಿ ಓಡಿ ಹೋದ ಸಿಟ್ಟೋ, ಮರ್ಯಾದೆ ಹೋಯ್ತು ಎನ್ನುವ ನೋವಿಗೋ ಮಕ್ಕಳಿಗೆ ವಿಷ (Poison) ಕೊಟ್ಟು, ತಾನೂ ವಿಷ ಕುಡಿದಿದ್ದಾನೆ. ಇದೀಗ ಆತ ಪ್ರಾಣ ಬಿಟ್ಟಿದ್ದರೆ, ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

 ಗಂಡ, ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಎಸ್ಕೇಪ್

 ತುಮಕೂರು ನಗರದ ಪಿಎಚ್‌ ಕಾಲನಿಯಲ್ಲಿ ಮೂರು ಮಕ್ಕಳ ತಾಯಿಯೋರ್ವಳು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಸಮೀವುಲ್ಲಾ ಎಂಬುವರ ಹೆಂಡತಿ ಸಾಯಿರಾ ಬಾನು ಎಂಬಾಕೆಯೇ ತನ್ನ ಮೂವರು ಮಕ್ಕಳನ್ನು, ಗಂಡನನ್ನೂ ಬಿಟ್ಟು ತನ್ನ ಪ್ರಿಯಕರನೊಂದಿಗೆ ಗಲ್ಫ್‌ ದೇಶಕ್ಕೆ ಎಸ್ಕೇಪ್ ಆಗಿದ್ದಾಳೆ.

ವಿಡಿಯೋ ಕಾಲ್ ಮಾಡಿ ಗಂಡನನ್ನು ರೇಗಿಸುತ್ತಿದ್ದ ಪತ್ನಿ

ಹಾಗೆ ಪ್ರಿಯಕರನೊಂದಿಗೆ ಎಸ್ಕೇಪ್ ಆದ ಪತ್ನಿ, ಅಲ್ಲಿಂದಲೇ ಸಮೀವುಲ್ಲಾನನ್ನು ಕಾಡಲು ತೊಡಗಿದ್ದಾಳೆ. ತನ್ನ ಪ್ರಿಯಕರನೊಂದಿಗೆ ತಾನು ಸುಖವಾಗಿದ್ದೇನೆ ಅಂತ ತೋರಿಸುವುದಕ್ಕೆ ಆತನಿಗೆ ವಿಡಿಯೋ ಕಾಲ್ ಮಾಡಿ ಟಾರ್ಚರ್ ಮಾಡಿದ್ದಾಳೆ. ಮಕ್ಕಳು ವಾಪಸ್ ಬರುವಂತೆ ಕಣ್ಣೀರು ಹಾಕಿ, ಗೋಳಿಟ್ಟರೂ ಆಕೆಯ ಮನಸ್ಸು ಮಾತ್ರ ಕರಗಿಲ್ಲ.

ಇದನ್ನೂ ಓದಿ: Tight Hug: ಆತ ಕರಡಿಯಂತೆ ಬಾಚಿ ತಪ್ಪಿಕೊಂಡ, ಆಕೆಯ ಎದೆಯ ಎಲುಬು ಚಟಾರ್ ಅಂತ ಮುರಿದು ಹೋಯ್ತು!

ಆತ್ಮಹತ್ಯೆಗೆ ನಿರ್ಧರಿಸಿದ ಗಂಡ

 ಅತ್ತ ಹೆಂಡತಿ ತನ್ನ ಪ್ರಿಯಕರನೊಂದಿಗೆ ಎಸ್ಕೇಪ್ ಆಗುತ್ತಿದ್ದಂತೆ ಮನೆಯಲ್ಲಿದ್ದ ಸಮೀವುಲ್ಲಾ ಕಂಗಾಲಾಗಿದ್ದಾನೆ. ಮರ್ಯಾದೆ ಹೋಯ್ತು ಅಂತ ಕಂಗೆಟ್ಟ ಆತ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದಾನೆ. ಆದರೆ ತಾನು ಸತ್ತರೆ ಇಬ್ಬರು ಹೆಣ್ಣು, ಓರ್ವ ಗಂಡು ಸೇರಿದಂತೆ ಮೂವರು ಮಕ್ಕಳನ್ನು ನೋಡಿಕೊಳ್ಳುವವರು ಯಾರು ಅಂತ ಯೋಚಿಸಿದ್ದಾನೆ. ಹೀಗಾಗಿ ಮಕ್ಕಳನ್ನೂ ಸಾಯಿಸಲು ನಿರ್ಧರಿಸಿದ್ದಾನೆ.

ಮಕ್ಕಳಿಗೆ ವಿಷ ಕುಡಿಸಿ, ತಾನೂ ಕುಡಿದ ತಂದೆ

ಮೊದಲು ಮೂವರು ಮಕ್ಕಳಿಗೆ ಬಲವಂತವಾಗಿ ವಿಷ ಕುಡಿಸಿದ್ದಾನೆ. ಬಳಿಕ ಸಮೀವುಲ್ಲಾ ತಾನೂ ವಿಷ ಕುಡಿದಿದ್ದಾನೆ. ಆದರೆ ಆಸ್ಪತ್ರೆಗೆ ದಾಖಲಿಸಿದರೂ ಸಮೀವುಲ್ಲಾ ಮೃತಪಟ್ಟಿದ್ದಾನೆ.

ಗಂಡನ ಮೊಬೈಲ್‌ನಲ್ಲಿ ಹೆಂಡತಿಯ ಪಾಪ ಕೃತ್ಯದ ಸಾಕ್ಷ್ಯ

ಇನ್ನು ಹೆಂಡತಿ ಸಾಯಿರಾ ಬಾನು ತಾನು ಸಿಗರೇಟು ಸೇದುತ್ತಾ ಸಮೀವುಲ್ಲಾಗೆ ಕರೆ ಮಾಡುತ್ತಿದ್ದಳು. ನೀನೆಷ್ಟೇ ಅತ್ತರೂ ನಾನು ವಾಪಸ್‌ ಬರುವುದಿಲ್ಲ. ನೀನು ಅಳ್ಳುವುದನ್ನು ನೋಡಿ ಖುಷಿ ಪಡಲೆಂದೇ ವಿಡಿಯೋ ಕರೆ ಮಾಡುತ್ತೇನೆ ಎಂದು ಕುಚೋದ್ಯ ಮಾಡುತ್ತಿದ್ದಳು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಮೃತ ಸಮೀವುಲ್ಲಾ ಮೊಬೈಲಿನಲ್ಲಿ ಹಲವು ಸ್ಕ್ರೀನ್‌ ಗ್ರಾಬ್‌ ಕೂಡ ಲಭ್ಯವಾಗಿದ್ದು ಅದರಲ್ಲಿ ಆಕೆ ಎಲೆಕ್ಟ್ರಿಕ್‌ ಸಿಗರೇಟ್‌ ಸೇದುತ್ತಿರುವ ಫೋಟೊಗಳು ಲಭ್ಯವಾಗಿವೆ.

ಇದನ್ನೂ ಓದಿ: Love Marriage: ಪ್ರೀತಿಸಿ ಮದ್ವೆಯಾದ ಜೋಡಿ, ಗ್ಯಾಂಗ್ ಕಟ್ಕೊಂಡು ಬಂದು ಹುಡುಗನ ಮನೆ ಮೇಲೆ ದಾಳಿ

ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಮಕ್ಕಳ ಹೋರಾಟ

ಸದ್ಯ ಮೂವರು ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷ ಕುಡಿದು ಅಸ್ವಸ್ಥಗೊಂಡ ಮಕ್ಕಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಗಂಡನ ಮೇಲೆ ಪ್ರೀತಿ ಇಲ್ಲ ಎಂದರೆ ಒಪ್ಪಬಹುದು. ಆದರೆ ಮುದ್ದಾದ ಮಕ್ಕಳ ಕಣ್ಣೀರಿಗೂ ಕರಗದೇ ಇರುವ ಸಾಹೇರಾ ಭಾನು ವಿರುದ್ಧ ನೆರೆಹೊರೆಯವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆ ಕುರಿತಂತೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Annappa Achari
First published: