• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Vijayanagara: ಗಂಡನನ್ನು ಬಿಟ್ಟು ಬದುಕುವ ಶಕ್ತಿ, ಯುಕ್ತಿ ನನಗಿಲ್ಲ; ಆತ್ಮಹತ್ಯೆಗೆ ಶರಣಾದ ಗೃಹಿಣಿ

Vijayanagara: ಗಂಡನನ್ನು ಬಿಟ್ಟು ಬದುಕುವ ಶಕ್ತಿ, ಯುಕ್ತಿ ನನಗಿಲ್ಲ; ಆತ್ಮಹತ್ಯೆಗೆ ಶರಣಾದ ಗೃಹಿಣಿ

ರೂಪಾ ಮತ್ತು ಅರ್ಜನ್

ರೂಪಾ ಮತ್ತು ಅರ್ಜನ್

ಆತ್ಮಹತ್ಯೆ ಮಹಾಪಾಪ ಅಂತ ನನಗೆ ಗೊತ್ತು. ಆದ್ರೂ ಕೂಡ ನಾನು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದೆ ಎಂದು ಬಸಮ್ಮ ಡೆತ್​ನೋಟ್​ ನಲ್ಲಿ ಬರೆದಿದ್ದಾರೆ.

  • Share this:

ವಿಜಯನಗರ: ಡೆತ್ ನೋಟ್​ ಬರೆದಿಟ್ಟು ಗೃಹಿಣಿ (Woman) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ (Huvina Hadagali, Vijayanagara) ನಡೆದಿದೆ. 33 ವರ್ಷದ ರೂಪಾ ಅಲಿಯಾಸ್ ಬಸಮ್ಮ ಆತ್ಮಹತ್ಯೆಗೆ ಶರಣಾದ ಮಹಿಳೆ. ನಮ್ಮ ಮಗಳಿಗೆ ಆಕೆಯ ಗಂಡ ಅರ್ಜುನ್ ಪರಶೆಟ್ಟಿ ಮಾನಸಿಕ ಕಿರುಕುಳ (Mental harassment) ನೀಡುತ್ತಿದ್ದನು. ಜೊತೆಗೆ ವರದಕ್ಷಿಣೆ (Dowry harassment) ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ರೂಪಾ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ರೂಪಾ ತಾಯಿ ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದಾರೆ. ದೂರಿನ ಅನ್ವಯ ಅರ್ಜುನ್ ಶೆಟ್ಟಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ (FIR Filed) ದಾಖಲಾಗಿದೆ.


ನನ್ನ ಪತಿ ನನ್ನ ಜತೆ ಜೀವನ‌ ಮಾಡುತ್ತಿಲ್ಲ. ನಾನು ನನ್ನ ಗಂಡನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ನಾನು ಎಷ್ಟು, ಪರಿಪರಿಯಾಗಿ ಕೇಳಿದ್ರೂ, ನನ್ನ ಜತೆ ಜೀವನ ಮಾಡಲಿಲ್ಲ. ಆತ್ಮಹತ್ಯೆ ಮಹಾಪಾಪ ಅಂತ ನನಗೆ ಗೊತ್ತು. ಆದ್ರೂ ಕೂಡ ನಾನು ಅನಿವಾರ್ಯವಾಗಿ ಈ ನಿರ್ಧಾರಕ್ಕೆ ಬಂದೆ ಎಂದು ಬಸಮ್ಮ ಡೆತ್​ನೋಟ್​ ನಲ್ಲಿ ಬರೆದಿದ್ದಾರೆ.


ಡೆತ್​ ನೋಟ್​ನಲ್ಲಿ ಏನಿದೆ?


ನನ್ನ ಗಂಡ ನನ್ನ ಜೊತೆ ಜೀವನ ನಡೆಸಲು ನಿರಾಕರಿಸಿದ ಕಾರಣ ಮಾನಸಿಕವಾಗಿ ಬಹಳ ನೊಂದು ಸಾಯಲು ನಿರ್ಧಾರ ಮಾಡಿದ್ದೇನೆ. ನನ್ನ ಗಂಡನ ಬಳಿ ಎಷ್ಟು ಪರಿಪರಿಯಾಗಿ ಬೇಡಿದ್ರೂ ನನ್ನ ಜೊತೆ ಜೀವನ ಮಾಡಲು ಒಪ್ಪುತ್ತಿಲ್ಲ. ಅವನ ಅರ್ಥವಿಲ್ಲ ನಿರ್ಧಾರ ನನ್ನ ಸಾವಿಗೆ ಕಾರಣವಾಗಬಹುದು ಎಂದು ತಿಳಿದರೂ ಅವನು ತನ್ನ ನಿರ್ಧಾರ ಬದಲಿಸಲಿಲ್ಲ. ನನ್ನ ಗಂಡನನ್ನು ಬಿಟ್ಟು ಬದುಕುವ ಶಕ್ತಿ ಆಗಲಿ, ಯುಕ್ತಿ ಆಗಲಿ ನನಗಿಲ್ಲ. ನಾನು ನನ್ನ ಜೀವಕ್ಕಿಂತ ಹೆಚ್ಚು ನನ್ನ  ಗಂಡನನ್ನು ಪ್ರೀತಿಸುತ್ತೇನೆ.


ಆತ್ಮಹತ್ಯೆ ಮಾಹಾ ಪಾಪ ಎಂಬುವುದು ನನಗೆ ಗೊತ್ತಿದೆ. ನನಗೆ ಬದುಕಲು ನನ್ನ ಗಂಡನೇ ಅವಕಾಶ ಮಾಡಿಕೊಡುತ್ತಿಲ್ಲ. ನಾನು ಬದುಕುವದಾದ್ರೆ ಅದು ನನ್ನ ಗಂಡನ ಜೊತೆ ಮತ್ತು ಅವನ ಮನೆಯಲ್ಲಿ. ಆದರೆ ನನಗೆ ನನ್ನನ್ನು ಆತನ ಜೊತೆ ಬದುಕಲು ಅವಕಾಶ ಮಾಡಿಕೊಡುತ್ತಿಲ್ಲ. ಹಾಗಾಗಿ ಬೇರೆ ದಾರಿ ಇಲ್ಲದೇ ಸಾಯುವ ನಿರ್ಧಾರ ಮಾಡಿ ಎಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ ಸಾಧ್ಯವಾದ್ರೆ, ಧನ್ಯವಾದಗಳು


ಇಂತಿ ನಿಮ್ಮ


ರೂಪ (ಬಸಮ್ಮ)
ಎರಡು ಅಡಿ ಜಾಗಕ್ಕೆ ಮಾರಾಮಾರಿ


ಕೇವಲ ಎರಡು ಅಡಿ ಜಾಗಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆ ಚಿಕ್ಕಮಗಳೂರಿನ ತರೀಕೆರೆ (Tarikete, Chikkamagaluru) ತಾಲೂಕಿನ ದೊಡ್ಡ ಲಿಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಲ್ಲು, ದೊಣ್ಣೆಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.


ಈ ಘಟನೆಯಲ್ಲಿ ಗಾಯತ್ರಿ ಬಾಯಿ, ಅಮರ್ ನಾಯ್ಕ್, ರಾಮನಾಯ್ಕ್‌ ಎಂಬವರಿಗೆ ಗಂಭೀರ ಗಾಯವಾಗಿದೆ. ಹಲ್ಲೆ ಮಾಡಿದ ಮಂಜಾ ನಾಯ್ಕ್, ಉಮೇಶ್ ನಾಯ್ಕ್, ಅಣ್ಣಾನಾಯ್ಕ್, ತೇಜು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲು ಲಿಂಗದಹಳ್ಳಿ ಪೊಲೀಸರು ಹಿಂದೇಟು ಹಾಕ್ತಿದ್ದಾರೆ ಅಂತ ಹಲ್ಲೆಗೊಳಗಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Crime News: 16 ಬಾರಿ ಚುಚ್ಚಿ ಚುಚ್ಚಿ ಯುವತಿಯ ಕೊಲೆ; ಇದು ದಿನಕರ್-ಲೀಲಾ ಪ್ರೇಮ್ ಕಹಾನಿ


ದೇವಸ್ಥಾನ ಪ್ರವೇಶಿಸಿದ್ದಕ್ಕೆ ಹೊಡಿಬಡಿ!


ದಲಿತರು ದೇವಸ್ಥಾನದ ಒಳಗೆ ಹೋಗಿದ್ದಕ್ಕೆ ಮೇಲ್ವರ್ಗದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಹಾವೇರಿ  ರಾಣೇಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವೇಶ್ವರ ದೇವರ ಜಾತ್ರೆಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು