HOME » NEWS » State » WIFE CONSPIRED TO MURDER HUSBAND SESR

ಶೀಲ ಶಂಕಿಸಿ ನಿತ್ಯ ಕಿರುಕುಳ; ಗಂಡನನ್ನೆ ಕೊಲೆಗೆ ಸಂಚು ರೂಪಿಸಿದ ಹೆಂಡತಿ

ವಯಸ್ಸಿಗೆ ಬಂದ ಮಕ್ಕಳಿದ್ದರೂ ಈತನ ಈ ದುರ್ವತನೆ ನಿಂತಿರಲಿಲ್ಲ. ಈ ಹಿನ್ನಲೆ ಆತನ ಕಿರುಕುಳ ತಾಳಲಾರದೇ ಈ ಘಟನೆ ಮಾಡಿರುವುದಾಗಿ ಆರೋಪಿ ತಪ್ಪು ಒಪ್ಪಿಕೊಂಡಿದ್ದಾಳೆ.

news18-kannada
Updated:May 17, 2021, 8:21 PM IST
ಶೀಲ ಶಂಕಿಸಿ ನಿತ್ಯ ಕಿರುಕುಳ; ಗಂಡನನ್ನೆ ಕೊಲೆಗೆ ಸಂಚು ರೂಪಿಸಿದ ಹೆಂಡತಿ
ವಯಸ್ಸಿಗೆ ಬಂದ ಮಕ್ಕಳಿದ್ದರೂ ಈತನ ಈ ದುರ್ವತನೆ ನಿಂತಿರಲಿಲ್ಲ. ಈ ಹಿನ್ನಲೆ ಆತನ ಕಿರುಕುಳ ತಾಳಲಾರದೇ ಈ ಘಟನೆ ಮಾಡಿರುವುದಾಗಿ ಆರೋಪಿ ತಪ್ಪು ಒಪ್ಪಿಕೊಂಡಿದ್ದಾಳೆ.
  • Share this:
ಬೆಂಗಳೂರು (ಮೇ. 17): ಹೆಂಡತಿಯ ಶೀಲ ಶಂಕಿಸಿ, ನಿತ್ಯ ಕುಡಿದು ಬಂದು ಹಲ್ಲೆ ಮಾಡುತ್ತಿದ್ದ ಗಂಡನ ವರ್ತನೆಗೆ ಬೇಸತ್ತ ಮಹಿಳೆಯೇ ಆತನ ಹತ್ಯೆಗೆ ಸಂಚು ರೂಪಿಸಿ ಸಿಕ್ಕಿ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಲೋಕನಾಥ್​ ಸಾವನ್ನಪ್ಪಿದ ವ್ಯಕ್ತಿ. ಆಕೆಯ ಹೆಂಡತಿ ಯಶೋಧ ಬಂಧಿತ ಆರೋಪಿ. ಈಕೆಗೆ ಸಹಾಯ ಮಾಡಿದ ಮುನಿರಾಜು, ಪ್ರಭು ಕೂಡ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಜೀವನದ ಬಂಡಿ ಸಾಗಿಸಲು ನಾಲ್ಕು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿ ಮೇಲೆ ಪ್ರತಿ ನಿತ್ಯ ಅನುಮಾನಿಸುತ್ತಿದ್ದ ಗಂಡ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದ. ವಯಸ್ಸಿಗೆ ಬಂದ ಮಕ್ಕಳಿದ್ದರೂ ಈತನ ಈ ದುರ್ವತನೆ ನಿಂತಿರಲಿಲ್ಲ. ಈ ಹಿನ್ನಲೆ ಆತನ ಕಿರುಕುಳ ತಾಳಲಾರದೇ ಈ ಘಟನೆ ಮಾಡಿರುವುದಾಗಿ ಆರೋಪಿ ತಪ್ಪು ಒಪ್ಪಿಕೊಂಡಿದ್ದಾಳೆ.

ಲೋಕನಾಥ್​ ಮತ್ತು ಯಶೋಧಾಗೆ ಇಬ್ಬರು ಮಕ್ಕಳ್ಳಿದ್ದಾರೆ. 26 ವರ್ಷದ ಮಗಳನ್ನು ಮದುವೆ ಮಾಡಲಾಗಿದೆ. 24 ವರ್ಷದ ಮಗನಿದ್ದರೂ ಲೋಕನಾಥ್​ ಮಾತ್ರ ಹೆಂಡತಿ ಬಗ್ಗೆ ಇನ್ನಿಲ್ಲದ ಅನುಮಾನ. ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ ಈತ ಪ್ರತಿನಿತ್ಯ ಕುಡಿದು ಬಂದು ಆಕೆಯನ್ನು ಅವಮಾನಿಸಿ, ನಿಂದಿಸುತ್ತಿದ್ದನಂತೆ, ಜೊತೆ ಹಲ್ಲೆ ನಡೆಸಿ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದನಂತೆ. ದುಡಿಯದಿದ್ದರೂ ಈತನ ಕಿರುಕುಳ ಮಾತ್ರ ನಿಂತಿರಲಿಲ್ಲ.

ಇದನ್ನು ಓದಿ: ಪ್ರತಿದಿನ ಹಸುವಿನ ಮೂತ್ರ ಕುಡಿಯುತ್ತೇನೆ; ನನಗೆ ಕೊರೋನಾ ಬರಲ್ಲ ಎಂದ ಸಂಸದೆ ಪ್ರಗ್ಯಾ ಠಾಕೂರ್​​

ಈತನ ಈ ಕಿರುಕುಳಕ್ಕೆ ಬೇಸತ್ತ ಹೆಂಡತಿ ಕಡೆಗೆ ಆತನನ್ನೇ ಕೊಂದರೆ ಈ ಸಮಸ್ಯೆ ಇರುವುದಿಲ್ಲ ಎಂದು ಸ್ನೇಹಿತರೊಂದಿಗೆ ಆತನ ಕೊಲೆಗೆ ಸಂಚು ರೂಪಿಸಿದ್ದಾಳೆ. ಇದಕ್ಕಾಗಿ ತನ್ನ ಪರಿಚಯಸ್ಥ ಮುನಿರಾಜು ಎಂಬುವವನಿಗೆ ಕೊಲೆ ಮಾಡುವಂತೆ ತಿಳಿಸಿದ್ದಾಳೆ.
ಯಶೋಧ ಮಾತಿನ ಅನುಸಾರ ರಾತ್ರಿ ಪ್ರಭು ಜೊತೆ ಸೇರಿದ ಮುನಿರಾಜು ಮಧ್ಯಪಾನ ಮಾಡಲು ಹೋಗೋಣ ಎಂದು ಲೋಕನಾಥನನ್ನು ಕರೆದೊಯ್ದಿದ್ದಾರೆ. ಬಾಣಸವಾಡಿಯ ಕಸ್ತೂರಿ ಬಾ ರೈಲ್ವೆ ಜಂಕ್ಷನ್ ಬಳಿ ಕರೆದೊಯ್ದು ಕಂಠ ಪೂರ್ತಿ ಕುಡಿಸಿ ಹತ್ಯೆಗೆ ಯೋಜನೆ ರೂಪಿಸಿದ್ದಾರೆ.

ಲೋಕನಾಥ್​ ನಶೆಯಲ್ಲಿರುವಾಗ್ಲೇ ಕತ್ತಿಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆ ಬಳಿಕ ರೈಲ್ವೆ ಹಳಿ ಮೇಲೆ ಮಲಗಿಸಿ ಆತ್ಮಹತ್ಯೆ ಎಂದು ಬಿಂಬಿಸಲು ತಯಾರಿ ನಡೆಸಿದ್ದಾರೆ. ಆದರೆ, ಇದು ಕೊಲೆ ಪ್ರಕರಣ ಎಂದು ಪತ್ತೆ ಹಚ್ಚವಲ್ಲಿ ಬೈಯಪ್ಪನಹಳ್ಳಿ ಪೊಲೋಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣ ದಾಖಲಾದ 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

(ವರದಿ: ಗಂಗಾಧರ್​​ ವಾಗಾಟ)
Published by: Seema R
First published: May 17, 2021, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories