HOME » NEWS » State » WIDESPREAD CORRUPTION BY THE YEDIYURAPPA FAMILY PEOPLE ARE REMINDED OF THE DEFEAT OF CONGRESS SAYS SIDDARAMAIAH HK

ಯಡಿಯೂರಪ್ಪ ಕುಟುಂಬದಿಂದ ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಸೋಲಿಸಿದ ಬಗ್ಗೆ ಜನರ ಮರುಕ ; ಸಿದ್ಧರಾಮಯ್ಯ

ಜಿಎಸ್ ಟಿ ನಷ್ಟವನ್ನು ತುಂಬಲು ಕರ್ನಾಟಕಕ್ಕೆ 4,900 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಲು 15 ಫೈನಾನ್ಸ್ ಕಮಿಷನ್ ಶಿಫಾರಸ್ಸು ಮಾಡಿದೆ. ಶಿಫಾರಸ್ಸು ಮಾಡಿರುವ ಹಣವನ್ನೇ ರಾಜ್ಯ ಬಿಜೆಪಿ ಸರ್ಕಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ

news18-kannada
Updated:September 27, 2020, 7:12 PM IST
ಯಡಿಯೂರಪ್ಪ ಕುಟುಂಬದಿಂದ ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಸೋಲಿಸಿದ ಬಗ್ಗೆ ಜನರ ಮರುಕ ; ಸಿದ್ಧರಾಮಯ್ಯ
ಸಿದ್ದರಾಮಯ್ಯ
  • Share this:
ಬೆಂಗಳೂರು(ಸೆಪ್ಟೆಂಬರ್​. 27): ಸಿಎಂ ಯಡಿಯೂರಪ್ಪನವರ ಕುಟುಂಬ ಭ್ರಷ್ಟಾಚಾರ ನಡೆಸಿದೆ. ಬಿಜೆಪಿ ಭ್ರಷ್ಟಾಚಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಜನರೇ ಕಾಂಗ್ರೆಸ್ ಸೋಲಿಸಿದ ಬಗ್ಗೆ ಮರುಕಪಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರುವುದಕ್ಕೆ ಜನರೇ ನಿರ್ಧರಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾವು ಹಿಂದೆ ಜೆಡಿಎಸ್ ಗೆ  ಬೆಂಬಲ ಕೊಟ್ಟಿದ್ದೆವು. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಬಂದಿತ್ತು. ಬಿಜೆಪಿ ಮುಖಂಡರು ಹಣ, ಅಧಿಕಾರದ ಆಸೆ ತೋರಿಸಿ 17 ಶಾಸಕರುಗಳನ್ನು ರಾಜೀನಾಮೆ ಕೊಡಿಸಿದ್ದರು. ಆಪರೇಷನ್ ಕಮಲ ಮಾಡಿ ನೂರಾರು ಕೋಟಿ ಖರ್ಚು ಮಾಡಿದ್ದರು. ಒಬ್ಬ ಶಾಸಕನಿಗೆ 25/30 ಕೋಟಿ ರೂಪಾಯಿ ಕೊಟ್ಟರು. ಹಾಗಾಗಿ ನಮ್ಮ ಶಾಸಕರು ಇದಕ್ಕೆ ಬಲಿಯಾದರು. ಇದನ್ನ ತಡೆಯುವುದಕ್ಕೆ ನಮ್ಮಿಂದ ಸಾಧ್ಯವಾಗಲಿಲ್ಲ ಎಂದರು.

ಆಪರೇಷನ್ ಕಮಲ 2008 ರಲ್ಲಿ ಯಡಿಯೂರಪ್ಪನವರಿಂದ ಚಾಲ್ತಿಗೆ ಬಂತು. ಆಗ ಯಡಿಯೂರಪ್ಪನವರಿಗೆ ಬಹುಮತ ಇರಲಿಲ್ಲ. ಆಗ ಕೋಟ್ಯಂತರ ರೂ ಖರ್ಚು ಮಾಡಿ ಸಿಎಂ ಆದರು. ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದರು. ಈಗಲೂ ಅವರ ಕುಟುಂಬ ಭ್ರಷ್ಟಾಚಾರ ಮಾಡಿದೆ ಎಂದು ಸಿಎಂ ಬಿಎಸ್​ವೈ ವಿರುದ್ದ ಸಿದ್ದರಾಮಯ್ಯ ಆರೋಪ ಮಾಡಿದರು.

 ಸತ್ತ ಹೆಣಗಳ ಮೇಲೆ ಹಣ ಹೊಡೆದಿದ್ದಾರೆ

ಕೊರೋನಾ ಸಂದರ್ಭದಲ್ಲಿ ಸರ್ಕಾರ ಹಣ ಲೂಟಿ ಹೊಡೆದಿದೆ. 4167 ಕೋಟಿ ರೂಪಾಯಿ ಕೊರೋನಾ ಖರ್ಚು ಕೇಳಿದ್ದೆವು. ಆದರೆ, ನಾವು ಮಾಡಿರುವುದೇ ಕೇವಲ 327 ಕೋಟಿ ರೂಪಾಯಿ ಅಂತ ಹೇಳಿದರು. ನಿನ್ನೆ 4227 ಕೋಟಿ ಖರ್ಚಾಗಿದೆ ಎಂದು ವೈದ್ಯಕೀಯ ಸಚಿವ ಸುಧಾಕರ್ ಅವರೇ ಒಪ್ಪಿಕೊಂಡಿದ್ದಾರೆ. 330 ರೂ ಪಿಪಿಎ ಕಿಟ್ ಗೆ 2,700 ರೂ ಕೊಟ್ಟಿದ್ದಾರೆ. 4 ಲಕ್ಷದ ವೆಂಟಿಲೇಟರ್ ಗೆ 18 ಲಕ್ಷ ರೂ ಕೊಟ್ಟಿದ್ದಾರೆ ಎಂದರು.

ರೈತರು ಬೆಳೆದ ಬೆಳೆ ರಸ್ತೆ, ಗುಂಡಿಗೆ ಸುರಿದು ಬಿಟ್ಟರು. ನಮ್ಮ ಮುಖಂಡರು ರೈತರ ಜಮೀನಿಗೆ ಹೋಗಿ ಅವರು ಬೆಳೆದ ಫಸಲು ಕೊಂಡು ಹಂಚಿದರು. ಇದರ ಬಗ್ಗೆ ಯಾವ ಕ್ರಮಗಳನ್ನೂ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿಲ್ಲ. ಜನ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಯ್ತು. ಸಿಎಎ ವೇಳೆ ಗೋಲಿಬಾರ್ ಮಾಡಿಸಿದರು. ಡಿಜೆಹಳ್ಳಿ ಗಲಾಟೆಯಲ್ಲಿ ನಮ್ಮ ಶಾಸಕರ ಮನೆಗೆ ಬೆಂಕಿ ಹಚ್ಚಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಕಲಬುರ್ಗಿ ಪೊಲೀಸರ ಕಾರ್ಯಾಚರಣೆ ; ಗಾಂಜಾ ಮಾರಾಟ, ಜೂಜಾಟ ನಿರತ 26 ಜನರ ಬಂಧನ

ಆರ್ಥಿಕವಾಗಿ ರಾಜ್ಯ ದಿವಾಳಿ ಆಗುತ್ತಿದೆ. ಬಿಜೆಪಿಯವರು ಹೆಡಿಗಳು, ಕೇಂದ್ರ ಸರ್ಕಾರದ ಬಳಿ ಹೋಗಿ ಹಣ ಕೇಳುವ ಧೈರ್ಯ ಇಲ್ಲ. 15 ಫೈನಾನ್ಸ್ ಕಮಿಷನ್ ಶಿಫಾರಸ್ಸು ಮಾಡಿರುವ ಅನುದಾನವನ್ನ ಪಡೆಯುವುದಕ್ಕೆ ಆಗಿಲ್ಲ. ಜಿಎಸ್ ಟಿ ನಷ್ಟವನ್ನು ತುಂಬಲು ಕರ್ನಾಟಕಕ್ಕೆ 4,900 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಲು 15 ಫೈನಾನ್ಸ್ ಕಮಿಷನ್ ಶಿಫಾರಸ್ಸು ಮಾಡಿದೆ. ಶಿಫಾರಸ್ಸು ಮಾಡಿರುವ ಹಣವನ್ನೇ ರಾಜ್ಯ ಬಿಜೆಪಿ ಸರ್ಕಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ನಾಚಿಕೆ ಆಗಬೇಕು ಕೇಂದ್ರದ ಬಳಿ ಹೋಗಿ ಕೇಳುವುದಕ್ಕೆ ಇವರಿಗೆ ಬಾಯಿ ಇಲ್ಲ. ರಾಜ್ಯ ಸರ್ಕಾರದ ಸಾಲ 4 ಲಕ್ಷ ಕೋಟಿ ದಾಟಿಲಿದೆ. ವರ್ಷಕ್ಕೆ ಸಾವಿರಾರು ಕೋಟಿ ಸಾಲದ ಹಣ, ಬಡ್ಡಿ ಕಟ್ಟುತ್ತಿದ್ದೇವೆ. ಅಭಿವೃದ್ದಿ ಕಾರ್ಯಗಳು ಹೇಗೆ ಆಗುತ್ತೆ ಎಂದರು.ಕಾರ್ಮಿಕರ ಕಾಯ್ದೆ ಕಂಪನಿಗಳ ಪರವಾಗಿದೆ : ಖರ್ಗೆ

ರೈತರ ಮೇಲೆ ವಿಶ್ವಾಸವಿದೆ ಅಂತ ಬಿಜೆಪಿಯವರು ಹೇಳುತ್ತಾರೆ. ಆದರೆ ಈಗ ರೈತ ವಿರೋಧಿ ಕಾಯ್ದೆಯನ್ನ ತಂದಿದ್ದಾರೆ. ಹೀಗೆ ಆದರೆ ಶಿವಮೊಗ್ಗದ ಹೋರಾಟ ಮರುಕಳಿಸುತ್ತದೆ ಎಂದು ಕಾಗೋಡು ಸತ್ಯಾಗ್ರಹವನ್ನ‌ ನೆನಪಿಸಿ ರಾಜ್ಯ ಸರ್ಕಾರದ ವಿರುದ್ದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜು ಖರ್ಗೆ  ಆಕ್ರೋಶ ವ್ಯಕ್ತಪಡಿಸಿದರು.

ನಾವೆಲ್ಲರೂ ಒಗ್ಗೂಡಿ ಪಕ್ಷ ಮುನ್ನಡೆಸಬೇಕಿದೆ. ಹಾಗಾದಾಗ ಮಾತ್ರ ಪಕ್ಷದ ಬೆಳವಣಿಗೆ ಸಾಧ್ಯ. ಪ್ರಸ್ತುತ ಸರ್ಕಾರ ಎಪಿಎಂಸಿ, ಕಾರ್ಮಿಕ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ತಂದಿದೆ. ಇವು ಕಾರ್ಮಿಕರ ಕಾಯ್ದೆ ಕಂಪನಿಗಳ ಪರವಾಗಿದೆ. ಇದರ ಬಗ್ಗೆ ಹೋರಾಟ ಅನಿವಾರ್ಯವಾಗಬೇಕಿದೆ. ರೈತರ ಜೊತೆ ಲೇಬರ್ ಬಗ್ಗೆಯೂ ನಾವು ಧ್ವನಿ ಎತ್ತಬೇಕು.  ಶೇ. 82 ರಷ್ಟು ಇರುವ ಸಣ್ಣರೈತರ ಪರವಾಗಿಯೂ ನಾವಿರಬೇಕು. ಇವರ ವಿರುದ್ಧವಾಗಿಯೇ ಸರ್ಕಾರ ಕಾಯ್ದೆಗಳನ್ನ ತಂದಿದೆ. ಮೊದಲು ಕಾರ್ಮಿಕರು 8 ಗಂಟೆ ಕೆಲಸ ಮಾಡಬೇಕಿತ್ತು. ಆದರೆ, ಈಗ 12 ಗಂಟೆ ಕೆಲಸದ ಅವಧಿ ತಂದಿದೆ. ಮಾಲಿಕರ ಪರವಾಗಿ ಕಾಯ್ದೆಗಳನ್ನ ತಂದಿದೆ ಎಂದರು.
Published by: G Hareeshkumar
First published: September 27, 2020, 7:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories