• Home
 • »
 • News
 • »
 • state
 • »
 • ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಕೇಂದ್ರದ ವೈರುಧ್ಯ ಅಭಿಪ್ರಾಯಗಳು ಯಾಕೆ; ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ

ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಕೇಂದ್ರದ ವೈರುಧ್ಯ ಅಭಿಪ್ರಾಯಗಳು ಯಾಕೆ; ಸದನದಲ್ಲಿ ಸಿದ್ದರಾಮಯ್ಯ ಪ್ರಶ್ನೆ

ಸಿದ್ದರಾಮಯ್ಯ

ಸಿದ್ದರಾಮಯ್ಯ

ಜಿಎಸ್​ಟಿ ಜಾರಿಯಲ್ಲಿ ಆದ ಲೋಪಕ್ಕೆ ಬಿಜೆಪಿ ಸರ್ಕಾರ ಕಾರಣ. ಜಿಎಸ್​ಟಿ ಸ್ಲಾಬ್ ಗಳನ್ನು ಮಾಡಿದ್ದು ಯಾರು? ಯಾರು ಜಿಎಸ್ ಟಿ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ? ರಾಜ್ಯಗಳಿಗೆ ಜಿಎಸ್​ ಪಾಲಿನಲ್ಲಿ ನಷ್ಟವಾಗಿದೆ.  ಆಗಿರುವ ನಷ್ಟವನ್ನು ಯಾಕೆ ಕೇಂದ್ರ ಸರಕಾರ ತುಂಬಿಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದರು.

ಮುಂದೆ ಓದಿ ...
 • Share this:

  ಬೆಂಗಳೂರು; ಮಧ್ಯಾಹ್ನದ ಭೋಜನದ ಬಳಿಕ ಆರಂಭವಾದ ವಿಧಾನಸಭೆ ಅಧಿವೇಷನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುತ್ತಿರುವ ಕೇಂದ್ರದ ತಿರ್ಮಾನವನ್ನು ಪ್ರಸ್ತಾಪಿಸಿದರು. ಈಗ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಕೇಂದ್ರ ಹೊರಟಿದೆ. ಇದರಿಂದ ಎಪಿಎಂಸಿಗಳು ಮುಚ್ಚಿ ಹೋಗಲಿದೆ.  ಕೇಂದ್ರದ ಹಣಕಾಸು ಸಚಿವರು ಎಪಿಎಂಸಿ ಮುಚ್ಚಲು ಸೂಕ್ತ ಸಮಯ ಅಂದಿದ್ದಾರೆ. ಆದರೆ ಪ್ರಧಾನಿ ಮಂತ್ರಿಯವರು ಎಪಿಎಂಸಿ ಮುಚ್ಚೋದಿಲ್ಲ ಅಂತಿದ್ದಾರೆ. ಈ ತರಹ ವೈರುಧ್ಯ ಅಭಿಪ್ರಾಯ ಯಾಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.


  ಸದನದಲ್ಲಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಎಪಿಎಂಸಿ ಕಾಯಿದೆಯನ್ನು ತಿದ್ದುಪಡಿ ಮಾಡಲು ರಾಹುಲ್ ಗಾಂಧಿ ಸಹಸಹಮತ ಹೊಂದಿದ್ದರು ಎಂದು ಹೇಳಿದರು. ಆದರೆ ಇದನ್ನು ಸಿದ್ದರಾಮಯ್ಯ ಅವರು ತಿರಸ್ಕರಿಸಿದರು. ಬಳಿಕ ಮಾತನಾಡಿದ ಕೆ.ಜೆ.ಜಾರ್ಜ್​ ಅವರು ಜಿಎಸ್​ಟಿ ವಿಚಾರದಲ್ಲಿ ಗುಜ ರಾತ್ ಸಿಎಂ ಆಗಿದ್ದಾಗ ಏನ್ ಹೇಳಿದ್ದರು ಎಂದು ಪ್ರಶ್ನೆ ಮಾಡಿದರು. ಜಿಎಸ್​ಟಿ ಕಾಂಗ್ರೆಸ್‌ ಕೂಸು ಎಂದು ಮಾಧುಸ್ವಾಮಿ ಪ್ರತಿಕ್ರಿಯಿಸಿದರು. ಮಾಧುಸ್ವಾಮಿ ಹೇಳಿಕೆಯನ್ನು ಕಾಂಗ್ರೆಸ್ ಸದಸ್ಯರು ವಿರೋಧಿಸಿದರು.


  ಇದನ್ನು ಓದಿ: ಮೂರು ತಿಂಗಳಾದರೂ ರೈತರ ಕೈ ಸೇರದ ಬೆಳೆ ಹಾನಿ ಪರಿಹಾರ, ಸಂಕಷ್ಟದಲ್ಲಿ ರೈತರು


  ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಜಿಎಸ್​ಟಿ ಜಾರಿಯಲ್ಲಿ ಆದ ಲೋಪಕ್ಕೆ ಬಿಜೆಪಿ ಸರ್ಕಾರ ಕಾರಣ. ಜಿಎಸ್​ಟಿ ಸ್ಲಾಬ್ ಗಳನ್ನು ಮಾಡಿದ್ದು ಯಾರು? ಯಾರು ಜಿಎಸ್ ಟಿ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ? ರಾಜ್ಯಗಳಿಗೆ ಜಿಎಸ್​ ಪಾಲಿನಲ್ಲಿ ನಷ್ಟವಾಗಿದೆ.  ಆಗಿರುವ ನಷ್ಟವನ್ನು ಯಾಕೆ ಕೇಂದ್ರ ಸರಕಾರ ತುಂಬಿಕೊಟ್ಟಿಲ್ಲ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದರು.

  Published by:HR Ramesh
  First published: