• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡಂತಾಯಿತು ಸ್ಟೇ ತಂದ 6 ಸಚಿವರ ಪರಿಸ್ಥಿತಿ; ಸದನದಲ್ಲಿ ಸಿದ್ದರಾಮಯ್ಯ ಟೀಕೆ

ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡಂತಾಯಿತು ಸ್ಟೇ ತಂದ 6 ಸಚಿವರ ಪರಿಸ್ಥಿತಿ; ಸದನದಲ್ಲಿ ಸಿದ್ದರಾಮಯ್ಯ ಟೀಕೆ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಆರು ಜನ ಸಚಿವರು ಕೋರ್ಟ್​ನಿಂದ ಸ್ಟೇ ತಂದಿದ್ದು ಮಾಧ್ಯಮಗಳ ಗಮನಕ್ಕೆ ಬರುತ್ತದೆ. ಮಾಧ್ಯಮಗಳು ಇದನ್ನು ವರದಿ ಮಾಡುತ್ತವೆ. ರಾಜಶೇಖರ್ ಮುಲಾಲಿ ಕೂಡ ಸ್ಟೇಟ್ ಮೆಂಟ್ ಕೊಡ್ತಾರೆ. 19 ಸಚಿವರು, ಶಾಸಕರ ಸಿಡಿಗಳು ಇವೆ ಅನ್ನೋದನ್ನು ಹೇಳ್ತಾರೆ. ಈ ಸಚಿವರು ಯಾಕೆ ಕೋರ್ಟ್ ನಲ್ಲಿ ಸ್ಟೇ ತರಬೇಕು?. ಯಾವುದೇ ತಪ್ಪಿಲ್ಲದೆ ಯಾಕೆ ತಂದ್ರು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಮುಂದೆ ಓದಿ ...
 • Share this:

  ಬೆಂಗಳೂರು: ಲೈಂಗಿಕ ಹಗರಣದ ಬಗ್ಗೆ ಮಾಧ್ಯಮ ಗಳಲ್ಲಿ ಪ್ರಸಾರ ಆಗುತ್ತೆ. ಅದು ಹೇಗೆ ಪ್ರಸಾರ ಆಯ್ತು ಅನ್ನೋದರ ಬಗ್ಗೆ ಇಡೀ ದೇಶಕ್ಕೆ ಗೊತ್ತಿರುವ ವಿಷಯ. ಇದು ಆಗಿದ್ದು ಮಾರ್ಚ್ 2ನೇ ತಾರೀಖು. ಸುಮಾರು 6.45 ಗಂಟೆಗೆ ವೀಡಿಯೋ ಬಿಡುಗಡೆ ಆಗಿದೆ. ದಿನೇಶ್ ಕಲ್ಲಹಳ್ಳಿ ಅನ್ನುವ ವ್ಯಕ್ತಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಭೇಟಿ ಮಾಡಿ ಅವರಿಗೆ ದೂರು ಕೊಟ್ಟಿದ್ದರು. ರಾಜ್ಯ ಸರ್ಕಾರದ ಒಬ್ಬ ಮಂತ್ರಿ ಗಳು, ರಮೇಶ್ ಜಾರಕಿಹೊಳಿ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಿಡಿ ಕುರಿತು ದೂರು ಕೊಟ್ಟಿದ್ದರು ಎಂದು ವಿಧಾನಸಭೆ ಸದನದಲ್ಲಿ ಸಿದ್ದರಾಮಯ್ಯ ಅವರು ಸಿಡಿ ವಿಷಯವಾಗಿ ಪ್ರಸ್ತಾಪ ಮಾಡಿದರು.


  ಭೋಜನ ವಿರಾಮದ ನಂತರ ವಿಧಾನಸಭೆ ಕಲಾಪ ಆರಂಭವಾದ ನಂತರ ನಿಯಮ 69ರ ಅಡಿಯಲ್ಲಿ ಸಿಡಿ ಬಗ್ಗೆ ಸಿದ್ದರಾಮಯ್ಯ ಚರ್ಚೆ ಆರಂಭಿಸಿದರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ಪಡೆಯೋಕೆ ಆಗಲ್ಲ ಅಂತಾ ದಿನೇಶ್ ಕಲ್ಲಹಳ್ಳಿ ಕೊನೆಗೆ ಕಬ್ಬನ್ ಪಾರ್ಕ್ ಸ್ಟೇಷನ್ ಗೆ ಬಂದು ದೂರು ಕೊಡ್ತಾರೆ. ಆ ಮೇಲೆ ಇಡೀ ರಾಜ್ಯದಲ್ಲಿ ಸಿಡಿ ಪ್ರಸಾರ ಆಗುತ್ತೆ. ಅವರು ಒಬ್ಬ ಹೆಣ್ಣು ಮಗಳ ಜೊತೆ ಇದ್ರು. ಆ ಹುಡುಗಿ ಕೆಲಸ ಕೇಳಿಕೊಂಡು ಸಚಿವರ ಬಳಿಗೆ ಹೋಗಿದ್ರು. ರಮೇಶ್ ಜಾರಕಿಹೊಳಿ, ಸರ್ಕಾರದಲ್ಲಿ ಒಬ್ಬ‌ ಸಚಿವರು. ಕೆಲಸ ಕೇಳಿಕೊಂಡು ಹೋದಾಗ ಆ ಹುಡುಗಿಯನ್ನು ಲೈಂಗಿಕತೆ ಗೆ ಬಳಸಿಕೊಂಡಿದ್ರು ಎಂಬ ವಿಷಯ ಪ್ರಸಾರವಾಗುತ್ತದೆ. ದಿನೇಶ್ ಕಲ್ಲಹಳ್ಳಿ ಕೊಟ್ಟ ದೂರಿನ ಬಗ್ಗೆ ಠಾಣೆಯಲ್ಲಿ ಎಫ್ಐಆರ್ ಆಗಿಲ್ಲ. ಈ ವಿಷಯ ಗೊತ್ತಾಗ್ತಾ ಇದ್ದಂತೆ, ರಮೇಶ್ ಜಾರಕಿಹೊಳಿ ಹೇಳ್ತಾರೆ ಇದೊಂದು ಫೇಕ್ ವೀಡಿಯೋ ಅಂತಾ. ಈ ಹೇಳಿಕೆ ನೀಡಿದ ಬಳಿಕ ಅವರಿಗೆ ಒತ್ತಡ ಬಂದ ಮೇಲೆ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.


  ಇದನ್ನು ಓದಿ: ಕೋರ್ಟ್​ನಿಂದ ಸ್ಟೇ ತಂದಿದ್ದು ಏನು ಇಲ್ಲ ಸರ್, ಅದರ ಬಗ್ಗೆ ಚರ್ಚೆ ಯಾಕೆ?: ಸಿದ್ದರಾಮಯ್ಯ ಬಳಿ ಸಚಿವರಿಬ್ಬರ ಮನವಿ!


  ಅದಕ್ಕಿಂತ ಮುನ್ನ ರಮೇಶ್ ಜಾರಕಿಹೊಳಿ ಅವರು ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ ಅಂದ್ರು. ಆಮೇಲೆ ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ನಾನು ಇದನ್ನು ಫೈಟ್ ಮಾಡ್ತೀನಿ ಅಂತಾರೆ. ಆ ಮೇಲೆ ನಾಲ್ಕನೇ ತಾರೀಖು ದಿನೇಶ್ ಕಲ್ಲಹಳ್ಳಿ ವಿಚಾರಣೆಗೆ ಹೋಗ್ತಾರೆ. ಇದಾದ ಮೇಲೆ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಕೊಡ್ತಾರೆ. ಆ ನಂತರ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ಮಾಡ್ತಾರೆ. ಈ ಸಿಡಿ ತಯಾರು ಮಾಡಲು ಸುಮಾರು 20 ಕೋಟಿ ಖರ್ಚಾಗಿದೆ ಎಂದು ಹೇಳಿ, ಒಂದು ಅಪಾರ್ಟ್ಮೆಂಟ್ ಹೆಸರು ಹೇಳ್ತಾರೆ.  ಅದು ಯಶವಂತಪುರದ ಒರಿಯಾನ್ ಮಾಲ್ ಬಳಿ ಇದೆ ಅಂತಾರೆ. ಆದರೆ ಯಾರು ಮಾಡಿದ್ದಾರೆ, ಇದರ ಕರ್ತೃ ಯಾರು ಅಂತಾ ಮಾತ್ರ ಹೇಳೋದಿಲ್ಲ. ಇದಾದ ನಂತರ ಸರ್ಕಾರದ 6 ಜನ ಮಂತ್ರಿ ಗಳು, ಕೋರ್ಟ್ ಗೆ ಹೋಗ್ತಾರೆ. ಇವರ ಹೆಸರು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಆದರೂ ಅವರ ಹೆಸರನ್ನು ಇಲ್ಲಿ ಪ್ರಸ್ತಾಪ ಮಾಡ್ತೀನಿ. ಬಿಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜ್, ನಾರಾಯಣ ಗೌಡ, ಸುಧಾಕರ್, ಎಸ್ ಟಿ ಸೋಮಶೇಖರ್ ಅವರು ಸಿಟಿ ಸಿವಿಲ್ ಕೋರ್ಟ್​ನಿಂದ ಇಂಜಕ್ಷನ್ ತರುತ್ತಾರೆ. 67 ಟಿವಿ, ಪ್ರಿಂಟ್ ಮೀಡಿಯಾ, ಸೋಶಿಯಲ್ ಮೀಡಿಯಾ, ಪ್ಲಸ್ 1 ರಾಜಶೇಖರ ಮುಲಾಲಿ ವಿರುದ್ದ ಇಂಜೆಕ್ಷನ್ ತರುತ್ತಾರೆ. ನಮ್ಮ ಹಳ್ಳಿಯ ಕಡೆ ಒಂದು ಗಾದೆ ಇದೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ಆಗಿದೆ ಸ್ಟೇ ತಂದ ಆರು ಸಚಿವರ ಪರಿಸ್ಥಿತಿ ಎಂದು ಸಿದ್ದರಾಮಯ್ಯ ಅವರು ಟೀಕೆ ಮಾಡಿದರು.


  ಆರು ಜನ ಸಚಿವರು ಕೋರ್ಟ್​ನಿಂದ ಸ್ಟೇ ತಂದಿದ್ದು ಮಾಧ್ಯಮಗಳ ಗಮನಕ್ಕೆ ಬರುತ್ತದೆ. ಮಾಧ್ಯಮಗಳು ಇದನ್ನು ವರದಿ ಮಾಡುತ್ತವೆ. ರಾಜಶೇಖರ್ ಮುಲಾಲಿ ಕೂಡ ಸ್ಟೇಟ್ ಮೆಂಟ್ ಕೊಡ್ತಾರೆ. 19 ಸಚಿವರು, ಶಾಸಕರ ಸಿಡಿಗಳು ಇವೆ ಅನ್ನೋದನ್ನು ಹೇಳ್ತಾರೆ. ಈ ಸಚಿವರು ಯಾಕೆ ಕೋರ್ಟ್ ನಲ್ಲಿ ಸ್ಟೇ ತರಬೇಕು?. ಯಾವುದೇ ತಪ್ಪಿಲ್ಲದೆ ಯಾಕೆ ತಂದ್ರು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

  Published by:HR Ramesh
  First published: