ಬೆಂಗಳೂರು ನಗರ (Bengaluru City) ಇತ್ತೀಚಿನ ದಿನಗಳಲ್ಲಿ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿದ್ದು, ಟ್ರಾಫಿಕ್ ಅವ್ಯವಸ್ಥೆ (Traffic), ಕೆಸರಿನಿಂದ ಕೂಡಿದ ರಸ್ತೆಗಳು (Mud Roads), ಹೆಚ್ಚುತ್ತಿರುವ ನೀರಿನ ಬೇಡಿಕೆ (Water Supply) ಹೀಗೆ ದೀರ್ಘಕಾಲದ ಸಮಸ್ಯೆಗಳ ಹೋರಾಟದಲ್ಲಿ ಯಶಸ್ವಿ ನಗರ ನಿರ್ವಹಣೆ ಮಾದರಿಗಳ ಹುಡುಕಾಟದಲ್ಲಿ ನಿರತವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಟೌನ್ಶಿಪ್ ಅಥಾರಿಟಿ (ELCITA) ಯ ಬಹು ಸ್ಮಾರ್ಟ್ ವ್ಯವಸ್ಥೆಗಳು ಪರಿಗಣಿಸಲು ಕಠಿಣವಾಗಿದ್ದರೂ ನಗರದ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಅಂತೆಯೇ ನಿಭಾಯಿಸಲು ತಂತ್ರಗಳನ್ನು ಒದಗಿಸುತ್ತದೆ.
ಬೆಂಗಳೂರಿನ ಅತ್ಯಂತ ದೊಡ್ಡ ಸಮಸ್ಯೆಗಳಲ್ಲಿ ಒಂದಾದ ರಸ್ತೆ ರಿಪೇರಿಯನ್ನು ನಿರ್ವಹಿಸಲು ಡೇಟಾ-ಚಾಲಿತ ವಿಧಾನವನ್ನು ಅಳವಡಿಸುವುದು ದೊಡ್ಡ ಸಮಸ್ಯೆಯೇನಲ್ಲ, ಏಕೆಂದರೆ ರಸ್ತೆಗಳಲ್ಲಿ ಗುಂಡಿಗಳ ಬಗ್ಗೆ ಸಾರ್ವಜನಿಕರ ದೂರು ಆಲಿಸುವಿಕೆ ಹಾಗೂ ಅದನ್ನು ದುರಸ್ತಿಗೊಳಿಸುವುದು ಬಿಬಿಎಂಪಿಯ ನಿತ್ಯದ ಕಾಯಕವಾಗಿದೆ.
ELCITA ಅಳವಡಿಸಿರುವ ವಿಧಾನಗಳಲ್ಲೊಂದಾದ ಹದಿನೈದು ಅಥವಾ ತಿಂಗಳಿಗೊಮ್ಮೆ ಚಲಿಸುವ ಕಾರಿಗೆ ಕೆಲವು ಮೊಬೈಲ್ ಕ್ಯಾಮೆರಾಗಳನ್ನು ಅಳವಡಿಸಿ ಜಾರಿಗೆ ಕೆಲವೊಂದು ವಿಧಾನಗಳನ್ನು ಪ್ರಯತ್ನಿಸಿ ನೋಡುವುದರಲ್ಲಿ ತಪ್ಪೇನೂ ಇಲ್ಲ ಎಂಬುದು ಹಲವರ ಮಾತಾಗಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ರಸ್ತೆಯ ಗುಂಡಿ ನಿರ್ವಹಣೆ ತಂತ್ರಗಳು
ಕಾರುಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಬೇರೆ ಬೇರೆ ಕೋನಗಳಿಂದ ರಸ್ತೆಯ ದೃಶ್ಯಗಳನ್ನು ಸೆರೆಹಿಡಿಯುತ್ತದೆ. ನಂತರ ಅದನ್ನು ಕೃತಕ ಬುದ್ಧಿಮತ್ತೆ (AI) ಚಾಲಿತ ಸಾಫ್ಟ್ವೇರ್ಗೆ ಅಪ್ಲೋಡ್ ಮಾಡಲಾಗುತ್ತದೆ.
ಸಿಸ್ಟಮ್ ಈ ದೃಶ್ಯಗಳನ್ನು ರಸ್ತೆಯ ಮೊದಲು ತೆಗೆದ ಚಿತ್ರಗಳೊಂದಿಗೆ ಹೋಲಿಸುತ್ತದೆ. ರಸ್ತೆಯ ಮೇಲ್ಮೈಯಲ್ಲಿರುವ ಯಾವುದೇ ಬಿರುಕು, ಗುಂಡಿ-ಕುಳಿ ಇಲ್ಲವೇ ತಗ್ಗುಗಳನ್ನು ಕೂಡಲೇ ಗುರುತಿಸಲಾಗುತ್ತದೆ ಹಾಗೂ ನಿಖರವಾದ ಸ್ಥಳವನ್ನು ಟ್ಯಾಗ್ ಮಾಡಲಾಗುತ್ತದೆ.
ಪ್ರಾಧಿಕಾರದ ಮೌಲ್ಯಮಾಪನ ತಂಡವು ಸ್ಥಳಕ್ಕೆ ತೆರಳಿ ದೋಷವನ್ನು ಸರಿಪಡಿಸಿ ಪ್ರಸ್ತುತ ಚಿತ್ರವನ್ನು ಅಪ್ಲೋಡ್ ಮಾಡುತ್ತದೆ. ಸಿಸ್ಟಮ್ ಸ್ವಯಂಚಾಲಿತವಾಗಿ ಕಾರ್ಯವನ್ನು ಸರಿಪಡಿಸಿದಂತೆ ನವೀಕರಿಸುತ್ತದೆ. ನೈಜ-ಸಮಯದ ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ.
ಹಳೆ ಮತ್ತು ಹೊಸ ಫೋಟೋ ವ್ಯತ್ಯಾಸ ಪತ್ತೆ
ಕೃತಕ ಬುದ್ಧಿಮತ್ತೆಯು ತೇಪೆ ಹಾಗೂ ಗುಂಡಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಹಾಯಕವಾಗಿರುವಂತೆ ತರಬೇತಿ ನೀಡಲಾಗುತ್ತಿದೆ. ಮಳೆಗಾಲದ ಸಮಯದಲ್ಲಿ ಈ ಉಪಕರಣಗಳ ಕಾರ್ಯಕ್ಷಮತೆ ಹೆಚ್ಚಬಹುದು ಹಾಗೂ ರಸ್ತೆ ಕಾಮಗಾರಿ ಕೂಡ ತ್ವರಿತವಾಗಿ ನಡೆಯಬಹುದು.
ಕೇವಲ 903 ಎಕರೆಗಳ ELCITA ದ ಅಧಿಕಾರ ವ್ಯಾಪ್ತಿಯ ಹೊರತಾಗಿಯೂ, ನಗರ ಪಾಲಿಕೆ ELCITA ಯು ಅಳವಡಿಸಿರುವ ತಂತ್ರಗಳನ್ನು ಪಾಲಿಸಬಹುದು.
ನಮ್ಮ ಮೆಟ್ರೋ ಆಗಮನದಿಂದ ನಿರೀಕ್ಷಿತ ಬದಲಾವಣೆಗಳು
ELCITA ಯ ಪ್ರಸ್ತಾವಿತ ಮೆಟ್ರೋ ಯೋಜನೆಯು ನಗರದ ಕೊನೆಯ ಮೈಲುಗಳನ್ನು ಸಂಪರ್ಕಿಸಲು ಪರಿಹಾರ ಕ್ರಮಗಳನ್ನು ಒದಗಿಸಿದೆ. ನಮ್ಮ ಮೆಟ್ರೊ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕವನ್ನು ಕಂಡುಕೊಳ್ಳುವ ಮುಂಚೆಯೇ, ಬಹಳಷ್ಟು ಪ್ರಯಾಣಿಕರು ತಮ್ಮ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಂದ ಅನುಕೂಲಕರವಾದ ಸಮೂಹ ಸಾರಿಗೆ ಆಯ್ಕೆಗೆ ಬದಲಾಯಿಸುತ್ತಾರೆ ಎಂದು ಪ್ರಾಧಿಕಾರವು ಅರಿತುಕೊಂಡಿದೆ.
ಎಲೆಕ್ಟ್ರಾನಿಕ್ ಸಿಟಿಯ ಕಿರಿದಾದ ರಸ್ತೆಗಳ ನಿರ್ಬಂಧಗಳನ್ನು ಬೈಪಾಸ್ ಮಾಡಲು, ಮೆಟ್ರೋ ಎತ್ತರದ ಮಾರ್ಗಗಳಲ್ಲಿ ಚಲಿಸುತ್ತದೆ. ರಬ್ಬರ್ ಟೈರ್ಗಳನ್ನು ಅಳವಡಿಸಲಾಗಿರುವ ಎಲೆಕ್ಟ್ರಿಕ್ ಬಸ್ ಕೋಚ್ಗಳು ಮೇಲ್ಭಾಗದ ತಂತಿಗಳಿಂದ ವಿದ್ಯುತ್ ಪಡೆದುಕೊಳ್ಳಲಿದೆ. 250 ಪ್ರಯಾಣಿಕರ ಸಾಮರ್ಥ್ಯವನ್ನು ಪ್ರತಿ ಕೋಚ್ ಹೊಂದಲಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಪ್ರವಾಹದ ಕುರಿತು ಏಕೆ ದೂರುಗಳಿಲ್ಲ
ನಗರದಲ್ಲಿ ಉಂಟಾಗಿದ್ದ ಮಳೆ ಪ್ರವಾಹವು ಔಟರ್ ರಿಂಗ್ ರಸ್ತೆಯ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪ್ರಯಾಣಿಕರಿಗೆ ತೊಂದರೆಯುಂಟು ಮಾಡಿದ್ದು, ಕಳಪೆ ಚರಂಡಿ ಈ ಸಮಸ್ಯೆಗೆ ಕಾರಣವಾಗಿದೆ.
ಇದನ್ನೂ ಓದಿ: School Bag: ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್; ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!
ಇಲೆಕ್ಟ್ರಾನಿಕ್ ಸಿಟಿಯಲ್ಲಿ ಇಂತಹ ಸಮಸ್ಯೆ ತಲೆದೋರದೇ ಇರಲು ಕಾರಣವೆಂದರೆ ಅಗತ್ಯವಿರುವಲ್ಲಿ ಚರಂಡಿ ವಿಸ್ತರಣೆ ಕಾರ್ಯಗಳನ್ನು ಕೈಗೊಳ್ಳಲಾಯಿತು ಅಂತೆಯೇ ಬಳಕೆದಾರರ ದೂರುಗಳನ್ನು ಕ್ಷಿಪ್ರ ಸಮಯದಲ್ಲಿ ಪರಿಹರಿಸಲಾಯಿತು. ಹಾಗಾಗಿಯೇ ಈ ವಲಯದಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ ಎಂಬುದು ತಿಳಿದುಬಂದಿದೆ.
ELCITA ಅನ್ನು ಅನುಕರಿಸುವುದು ಬಿಬಿಎಂಪಿಗೆ ಸುಲಭದ ಮಾತಲ್ಲ ಏಕೆ?
ಎಲೆಕ್ಟ್ರಾನಿಕ್ ಸಿಟಿಯು ವೈಯಕ್ತಿಕ ಕಂಪನಿಗಳು, ELCITA ಯ ಸ್ವಂತ ಸಿಬ್ಬಂದಿ, ನಗರ ಪೊಲೀಸ್ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಗಳ ಭದ್ರತಾ ವ್ಯವಸ್ಥೆಗಳನ್ನು ಸಂಯೋಜಿಸುವ ಸ್ಥಳದಲ್ಲಿ ದೃಢವಾದ ಭದ್ರತಾ ವ್ಯವಸ್ಥೆಯನ್ನು ಹೊಂದಿದೆ.
ಇಲ್ಲಿನ ನಿವಾಸಿಗಳು ಹೇಳೋದೇನು?
ELCITA (ಎಲೆಕ್ಟ್ರಾನಿಕ್ ಸಿಟಿ ಟೌನ್ಶಿಪ್ ಅಥಾರಿಟಿ ) ನ ಯೋಜನೆಯನ್ನು ಬಿಬಿಎಂಪಿ ಮಟ್ಟಕ್ಕೆ ಹೆಚ್ಚಿಸುವುದು ದುಸ್ತರ ಸವಾಲಾಗಿ ಕಾಣಿಸಬಹುದು. ಇನ್ನು ಎಲೆಕ್ಟ್ರಾನಿಕ್ ಸಿಟಿ ಹೊಂದಿರುವ ಸಮಗ್ರ ದೃಷ್ಟಿಕೋನ ಬಿಬಿಎಂಪಿ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿ ಇಲ್ಲದೇ ಇರುವುದೇ ಮುಖ್ಯ ಕಾರಣವಾಗಿರಬಹುದು ಎಂದು ಎಲೆಕ್ಟ್ರಾನಿಕ್ ಸಿಟಿ ನಿವಾಸಿ ರವಿಚಂದರ್ ಅಭಿಪ್ರಾಯವಾಗಿದೆ.
ಕೆಲವೊಂದು ಪರಿಹಾರ ವಿಧಾನಗಳನ್ನು ನಗರದಲ್ಲಿರುವ ಕೈಗಾರಿಕಾ ವಲಯಗಳಿಗೆ ಅನ್ವಯಿಸುವುದು ನಿರೀಕ್ಷಿತ ಪರಿಹಾರವನ್ನೊದಗಿಸುವುದಿಲ್ಲ ಎಂಬುದು ರವಿಚಂದರ್ ಭಾವನೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ