• Home
  • »
  • News
  • »
  • state
  • »
  • Bengaluru Parks: ಬೆಳಗ್ಗೆ 10 ಗಂಟೆಗೆ ಬಿಬಿಎಂಪಿ ಪಾರ್ಕ್​ ಕ್ಲೋಸ್ ಮಾಡೋದ್ಯಾಕೆ? ಜನರು ಹೇಳೋದೇನು?

Bengaluru Parks: ಬೆಳಗ್ಗೆ 10 ಗಂಟೆಗೆ ಬಿಬಿಎಂಪಿ ಪಾರ್ಕ್​ ಕ್ಲೋಸ್ ಮಾಡೋದ್ಯಾಕೆ? ಜನರು ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಪ್ರದೇಶದಲ್ಲಿ ಹಲವಾರು ಮರಗಳಿದ್ದು ಅವುಗಳ ಸುತ್ತಲೂ ಸಾರ್ವಜನಿಕರಿಗೆ ವಿರಮಿಸಲು ಸ್ಥಳಗಳನ್ನು ನಿರ್ಮಿಸಲು ಬಯಸಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

  • Share this:

ಗಂಟೆ ಹತ್ತಾಗುತ್ತಿದ್ದಾಂತೆಯೇ ಬೆಂಗಳೂರಿನ ಉದ್ಯಾನವನದಲ್ಲಿರುವ (Bengaluru BBMP Park) ಭದ್ರತಾ ಸಿಬ್ಬಂದಿ (Security Team)ಪಾರ್ಕ್ನಲ್ಲಿರುವ ಜನರನ್ನು ಆತುರ ಆತುರವಾಗಿ ಹೊರಗೆ ಕಳುಹಿಸುತ್ತಾರೆ. ಇಲ್ಲದಿದ್ದರೆ ತುಸು ಗಡುಸಾಗಿಯೇ ಹೊರಹೋಗುವಂತೆ ಆದೇಶಿಸುತ್ತಾರೆ ಎಂಬುದು ಉದ್ಯಾನವನದಲ್ಲಿ ವಿಹರಿಸಲು ಬರುವ ಹಿರಿಯರು, ಯುವಕರು, ಮಕ್ಕಳ ಮಾತಾಗಿದೆ ಹೆಚ್ಚಿನ ಎಲ್ಲಾ ಉದ್ಯಾನಗಳನ್ನು ಬೆಳಗ್ಗೆ 10 ಗಂಟೆಗೆ ಮುಚ್ಚಲಾಗುತ್ತಿದ್ದು ಪುನಃ ತೆರೆಯುವುದು ಸಂಜೆ 4 ರಿಂದ ರಾತ್ರಿ 8:30 ರವರೆಗೆ ಎಂಬುದು ನಿವಾಸಿಗಳ ಮಾತಾಗಿದೆ. ಉದ್ಯಾನವನದ ನಿರ್ವಹಣೆ ಎಂಬ ಕಾರಣ ನೀಡಿ ಉದ್ಯಾನವನಗಳ ಬಳಕೆಯನ್ನು (Park Use) ಸಿಬ್ಬಂದಿ ಮಿತಿಗೊಳಿಸುತ್ತಿದ್ದಾರೆ ಎಂಬುದು ಸಮೀಪದ ನಿವಾಸಿಗಳ ಆಪಾದನೆಯಾಗಿದೆ.


ಹಾಗಿದ್ದರೆ ಈ ಉದ್ಯಾನಗಳನ್ನು ಯಾರಿಗಾಗಿ ನಿರ್ಮಿಸಲಾಗಿದೆ ಎಂಬುದು ಮಲ್ಲೇಶ್ವರದ ನಿವಾಸಿಯಾಗಿರುವ 62 ರ ಹರೆಯದ ಶ್ರೀನಿವಾಸ್ ಅವರ ಪ್ರಶ್ನೆಯಾಗಿದೆ. ಸಾರ್ವಜನಿಕ ಸ್ಥಳಗಳ ಕೊರತೆ, ಹೊರಾಂಗಣದಲ್ಲಿ ಸಮಯ ಕಳೆಯಲು ವ್ಯಯಿಸಬೇಕಾದ ವೆಚ್ಚವು ಸಾಮಾಜಿಕ ಮಾಧ್ಯಮದಲ್ಲಿ ಇದೀಗ ನಿರಂತರ ಚರ್ಚೆಯಾಗುತ್ತಿದೆ. ಈ ಸಮಸ್ಯೆಯ ಕುರಿತು ಬಿಬಿಎಂಪಿಯ ಕೆಲವು ಸಿಬ್ಬಂದಿ ಮೊದಲೇ ತಿಳಿದಿರುವುದಾಗಿ ಕೂಡ ಹೇಳುತ್ತಾರೆ.


ಆಧುನಿಕ 'ಕಟ್ಟೆ' ಬಿಬಿಎಂಪಿಯ ಯೋಜನೆ


ನಗರದ ಹೃದಯಭಾಗದಲ್ಲಿ ನಿರ್ಲಕ್ಷಿಸಲಾದ ಹಾಗೂ ಜನಸಂಚಾರವಿಲ್ಲದ ಸ್ಥಳವು ಇದೀಗ ಮುಕ್ತವಾದ ಸಾರ್ವಜನಿಕ ಸ್ಥಳವಾಗಿ ಮಾರ್ಪಟ್ಟಿದ್ದು ಆಧುನಿಕ ದಿನದ ಹರಟೆ ಕಟ್ಟೆಯಾಗಿ ಪ್ರಸಿದ್ಧವಾಗಿದೆ.


ಫ್ರೀಡಂ ಪಾರ್ಕ್ ಬಳಿಯ ಮೌರ್ಯ ವೃತ್ತದಲ್ಲಿ ‘ಕಟ್ಟೆ’ ರಚಿಸಲು ಬಿಬಿಎಂಪಿಯು ನಗರ ಸಂಸ್ಥೆ ಸೆನ್ಸಿಂಗ್ ಲೋಕಲ್ ಮತ್ತು ಆರ್ಕಿಟೆಕ್ಚರ್ ಸಂಸ್ಥೆ ದಿ ಹಲ್‌ನೊಂದಿಗೆ ಸಹಕರಿಸಿದೆ.
ಯಾರಿಗೂ ಬೇಡವಾಗಿದ್ದ ಸ್ಥಳವನ್ನು ಆಧುನಿಕ ಸ್ಪರ್ಶದೊಂದಿಗೆ ಮಾರ್ಪಾಡುಗೊಳಿಸಿರುವ ಬಿಬಿಎಂಪಿ ಕಸ ಸುರಿಯಲು ಬಳಸುತ್ತಿದ್ದ ಸ್ಥಳವನ್ನೇ ಕಟ್ಟೆ ಎಂಬ ಶೀರ್ಷಿಕೆ ನೀಡಿ ಜನರಿಗೆ ಉಪಯೋಗಕಾರಿಯಾಗಿ ರೂಪಿಸಿದೆ.


ಸಾರ್ವಜನಿಕ ಸ್ಥಳಗಳ ಬಳಕೆಗೆ ಪ್ಲಾನ್


ಜನರು ಹರಟೆ ಹೊಡೆಯಲು ಬಳಸುತ್ತಿದ್ದ ಸ್ಥಳವಾಗಿದ್ದ ಕಟ್ಟೆಯ ಅದೇ ವಿಧಾನದಲ್ಲಿ ಆಧುನಿಕ ಕಟ್ಟೆಯನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಹಲವಾರು ಮರಗಳಿದ್ದು ಅವುಗಳ ಸುತ್ತಲೂ ಸಾರ್ವಜನಿಕರಿಗೆ ವಿರಮಿಸಲು ಸ್ಥಳಗಳನ್ನು ನಿರ್ಮಿಸಲು ಬಯಸಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸ್ಥಳವನ್ನು ಕಟ್ಟೆಯನ್ನಾಗಿ ರೂಪಿಸಲು ಐದು ತಿಂಗಳ ಸಂಶೋಧನೆಯನ್ನು ಅಧಿಕಾರಿಗಳು ಕೈಗೊಂಡಿದ್ದರು. ಒಟ್ಟಿನಲ್ಲಿ ಸಾರ್ವಜನಿಕವಾಗಿ ಈ ಸ್ಥಳ ಬಳಕೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂಬುದು ಅಧಿಕಾರಿಗಳ ಮಾತಾಗಿದೆ.


ಫ್ಲೈ ಓವರ್ ಕೆಳಗೆ ಪಾರ್ಕ್ ನಿರ್ಮಾಣ


ಇಂತಹುದೇ ಹಲವಾರು ಸಾರ್ವಜನಿಕ ಸ್ಥಳಗಳನ್ನು ಆಧುನೀಕರಣಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ ಎಂಬುದು ಅಧಿಕಾರಿ ಲೋಕೇಶ್ ಅವರ ಮಾತಾಗಿದೆ. ಆನಂದ್ ರಾವ್ ಸರ್ಕಲ್‌ ಅಡಿಯಲ್ಲಿರುವ ಫ್ಲೈಓವರ್‌ಗೂ ಇದೇ ರೀತಿಯ ಯೋಜನೆ ರೂಪಿಸುತ್ತಿದ್ದೇವೆ ಎಂಬುದು ಅವರ ಹೇಳಿಕೆಯಾಗಿದೆ. ಇಂತಹ ಸ್ಥಳಗಳು ನಗರವನ್ನು ಸುಂದರಗೊಳಿಸುವಲ್ಲಿ ಸಹಕಾರಿಯಾಗಿದೆ ಎಂಬುದು ಅವರ ಮಾತಾಗಿದೆ.


why most public parks close by 10 am in bengaluru stg mrq
ಸಾಂದರ್ಭಿಕ ಚಿತ್ರ


ಇಂತಹ ‘ಕಟ್ಟೆಗಳು’ ಪ್ರತಿ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳಗಳನ್ನು ನಿರ್ಮಿಸಲು ಉತ್ತಮ ವಿಧಾನವಾಗಿದೆ ಎಂದು ಮಲ್ಲೇಶ್ವರಂನ ವಾಸ್ತುಶಿಲ್ಪಿ, ಲೇಖಕಿ ಮತ್ತು ನಿವಾಸಿ ಯಶಸ್ವಿನಿ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.


ಗೇಟ್ ಬಳಸಿ ಸಾರ್ವಜನಿಕರಿಗೆ ನಿರ್ಬಂಧ


ಸಾರ್ವಜನಿಕ ಸ್ಥಳಗಳಲ್ಲಿ ಗೇಟುಗಳನ್ನು ಬಳಸಿ ದಿಗ್ಬಂಧನ ವಿಧಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಇದೀಗ ನಗರದಲ್ಲಿ ಚಾಲ್ತಿಯಲ್ಲಿದೆ ಎಂಬುದು ಯಶಸ್ವಿನಿಯವರ ಹೇಳಿಕೆಯಾಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಸಾರ್ವಜನಿಕ ಸ್ಥಳಗಳಿವೆ ಆದರೆ ಅವುಗಳನ್ನೆಲ್ಲಾ ಗೇಟುಗಳಿಂದ ಮುಚ್ಚಲಾಗುತ್ತಿದೆ.


10 ಗಂಟೆಯ ನಂತರ ಪಾರ್ಕ್​​ಗಳು ಕ್ಲೋಸ್


ಮೊದಲೆಲ್ಲಾ ನಾವು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾಗ ವಿಧಾನಸೌಧದ ಸುತ್ತ ನಡೆದಾಡಿಕೊಂಡು ಅಲ್ಲಿಯೇ ಇದ್ದ ಉದ್ಯಾನವನದಲ್ಲಿ ಪುಸ್ತಕಗಳನ್ನು ಓದುತ್ತಿದ್ದೆವು ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಇಂದು ಅದೆಲ್ಲವನ್ನೂ ಗೇಟುಗಳಿಂದ ಮುಚ್ಚಲಾಗಿದೆ. ಲಾಲ್‌ಬಾಗ್‌ಗೂ ಸಾರ್ವಜನಿಕರು ಓಡಾಡದಂತೆ ಗೇಟುಗಳನ್ನು ಬಳಸಲಾಗಿದೆ ಎಂಬುದು ಅವರ ಮಾತಾಗಿದೆ.


ಇದನ್ನೂ ಓದಿ:  Deepinder Goyal: ಬೆಂಗಳೂರು ಮಹಿಳೆಯ ಒಂದೇ ಒಂದು ದೂರಿಗೆ ಜೊಮ್ಯಾಟೋ CEO ಪ್ರತಿಕ್ರಿಯೆ


ವಾಸ್ತುಶಿಲ್ಪಿ ಹಾಗೂ ಅರ್ಬನ್ ಡಿಸೈನರ್ ನರೇಶ್ ಸಿಂಹನ್ ಹೇಳುವಂತೆ ಬೆಂಗಳೂರಿನಲ್ಲಿ ಕೆಲವೊಂದು ಸ್ಥಳಗಳಿದ್ದು ಅವುಗಳನ್ನು ಸಾರ್ವಜನಿಕ ಬಳಕೆಗೆ ಬಳಸಿಕೊಳ್ಳಬಹುದು ಎಂಬುದಾಗಿದೆ. ಉದಾಹರಣೆಗೆ, ಪರೇಡ್ ಗ್ರೌಂಡ್ ಮತ್ತು ಅದರ ಸಮೀಪದಲ್ಲಿರುವ ಆರ್ಮಿ ಪಾರ್ಕ್‌ಗೆ ಸಾರ್ವಜನಿಕ ಪ್ರವೇಶವಿಲ್ಲ.


ಮಿಲಿಟರಿಗೆ ಅಗತ್ಯವಿರುವಾಗ ಈ ಪ್ರದೇಶಗಳನ್ನು ಸಾರ್ವಜನಿಕ ಬಳಕೆಗಾಗಿ ಮುಚ್ಚಬಹುದು ಉಳಿದ ಸಮಯದಲ್ಲಿ ಸಾರ್ವಜನಿಕರಿಗೆ ತೆರೆಯಬಹುದು ಎಂಬುದು ನರೇಶ್ ಅಭಿಪ್ರಾಯವಾಗಿದೆ.


ನಾಗರಿಕರ ಅಭಿಪ್ರಾಯ


33 ವರ್ಷದ ತನುಜಾ, ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದು ಮುಂಬೈ ಹಾಗೂ ಕೋಲ್ಕತ್ತಾಗೆ ಹೋಲಿಸಿದಾಗ ಬೆಂಗಳೂರು ತುಂಬಾ ದುಬಾರಿ ಎಂದು ತಿಳಿಸಿದ್ದಾರೆ. ಇಲ್ಲಿ ಯಾವುದೇ ಸ್ಥಳಕ್ಕೆ ಹೋಗಲು ಹಣ ಖರ್ಚು ಮಾಡಬೇಕು. ಸಾರ್ವಜನಿಕರಿಗೆ ಉಚಿತವಾಗಿರುವುದು ಕೆಲವೊಂದಿಷ್ಟಿದೆಯಾದರೂ ಅವುಗಳಿಗೂ ನಿರ್ಬಂಧವಿದೆ ಎಂದು ಬೇಸರ ಹೊರ ಹಾಕುತ್ತಾರೆ.


ಇದನ್ನೂ ಓದಿ:  Success Story: ಕಲಿತ ವಿಶ್ವವಿದ್ಯಾಲಯಕ್ಕೇ ಕುಲಸಚಿವೆಯಾದ ವಿದ್ಯಾರ್ಥಿ!


ಕಬ್ಬನ್ ಪಾರ್ಕ್‌ಗೆ ಸಾರ್ವಜನಿಕರು ಪ್ರವೇಶಿಸಬೇಕು ಎಂದಾದಲ್ಲಿ


why most public parks close by 10 am in bengaluru stg mrq
ಸಾಂದರ್ಭಿಕ ಚಿತ್ರ


ನಿಯಮಗಳ ದೊಡ್ಡ ಪಟ್ಟಿಯನ್ನೇ ಅವರು ಪಾಲಿಸಬೇಕು. ಹಸಿರಿನ ಆನಂದವನ್ನು ಸವಿಯುವುದಕ್ಕಿಂತ ಹೆಚ್ಚು ಅಲ್ಲಿರುವ ಸಿಬ್ಬಂದಿಗಳ ಕಿರಿಕಿರಿಯನ್ನು ತಾಳಿಕೊಳ್ಳಬೇಕಾಗುತ್ತದೆ. ಹಾಗಾಗಿ, ಉದ್ಯಾನಕ್ಕೆ ಹೋಗುವುದನ್ನೇ ನಾವು ನಿಲ್ಲಿಸಿದ್ದೇವೆ ಎಂದು ನಿವೇಧಾ ಸುಧೀರ್ ತಿಳಿಸಿದ್ದಾರೆ.

Published by:Mahmadrafik K
First published: