• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ, ತಾಕತ್ತಿದ್ರೆ ನಿಷೇಧಿಸಲಿ: ದಿನೇಶ್ ಗುಂಡೂರಾವ್ ಸವಾಲ್

SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ, ತಾಕತ್ತಿದ್ರೆ ನಿಷೇಧಿಸಲಿ: ದಿನೇಶ್ ಗುಂಡೂರಾವ್ ಸವಾಲ್

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ. SDPI ಸಂಘಟನೆ ನಿಷೇಧವಾಗುವುದು BJP ಯವರಿಗೂ ಸುತಾರಾಂ ಇಷ್ಟವಿಲ್ಲ. ಈ ಸತ್ಯ ಜೋಶಿಯವರಿಗೂ ಗೊತ್ತಿದೆ

  • Share this:

SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ (SDPI State President Abdul Majeed) ನೀಡಿದ ಮಳಲಿಯ ಜುಮ್ಮಾ ಮಸೀದಿ (Malali Mosque) ಕುರಿತಾಗಿ ನೀಡಿದ ಹೇಳಿಕೆ ಬಗ್ಗೆ ಚರ್ಚೆಗಳು ನಡೆದಿವೆ. ಮಜೀದ್ ಹೇಳಿಕೆ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi) ಸಹ ಪ್ರತಿಕ್ರಿಯೆ ನೀಡಿದ್ದರು. ಇದೀಗ ಜೋಶಿಯವರ ಹೇಳಿಕೆಗೆ ಕಾಂಗ್ರೆಸ್ (Congreess) ಮಾಜಿ ಸಚಿವ ದಿನೇಶ್ ಗುಂಡೂರಾವ್ (Former Minister Dinesh Gundurao) ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. SDPI ಕಾಂಗ್ರೆಸ್ ಕೂಸು ಎಂದಿರುವ ಪ್ರಲ್ಹಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.


ಮುಸ್ಲಿಮರನ್ನು ಪ್ರಚೋದಿಸಿ ಚುನಾವಣೆಯಲ್ಲಿ BJPಗೆ ಅನುಕೂಲ ಮಾಡಿಕೊಡುತ್ತಿರುವ SDPI ಕಾಂಗ್ರೆಸ್ ಕೂಸಾಗಲು ಸಾಧ್ಯವೆ? SDPI ಮತ್ತು ಓವೈಸಿಯ AIMIM ಪಕ್ಷ BJPಯ ಬೀ ಟೀಂ ಎಂದು ದೇಶಕ್ಕೆ ಗೊತ್ತಿದೆ‌.


AIMIM & ನಾಗಪುರ ನಡುವಿನ ಕನೆಕ್ಷನ್ ಏನು?


ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ?  ಪ್ರಲ್ಹಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು SDPI, ಓವೈಸಿಯ AIMIM ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ.


ಇದನ್ನೂ ಓದಿ:  Malali Mosque: ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ: ಮಜೀದ್ ಹೇಳಿಕೆಗೆ ಮುತಾಲಿಕ್ ತಿರುಗೇಟು


ತಾಕತ್ತಿದ್ದರೆ SDPIನ್ನು ನಿಷೇಧಿಸಲಿ


RSS ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ‌ SDPI ಪಾತ್ರವೇನು? ಓವೈಸಿಯ ರೋಲ್ ಏನು ಎಂದು ದೇಶಕ್ಕೆ ತಿಳಿಯಲಿ. ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ SDPIನ್ನು ನಿಷೇಧಿಸಲಿ. SDPIನಿಂದ ರಾಜಕೀಯ ಲಾಭ ಪಡೆಯುತ್ತಿರುವ BJP ಯವರು‌ SDPI ಸಂಘಟನೆ ಕಾಂಗ್ರೆಸ್ ಕೂಸು ಎಂದು ಹಲುಬುವುದ್ಯಾಕೆ?


SDPI ಸಂಘಟನೆಯ ಬಗ್ಗೆ ಕಾಂಗ್ರೆಸ್‌ ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ BJPಯ ಸರ್ಕಾರವೇ ಇದೆ. SDPI ಸಂಘಟನೆಯನ್ನು ನಿಷೇಧಿಸದಂತೆ BJPಯವರ ಕೈ ಕಟ್ಟಿ ಹಾಕಿರುವವರ‌್ಯಾರು? ತಾಕತ್ತಿದ್ದರೆ ನಿಷೇಧಿಸಲಿ.


ಕಾಂಗ್ರೆಸ್‌ ಗೆ ಏನು ಲಾಭ ಜೋಶಿಯವರೆ?


SDPI ಸಂಘಟನೆ BJPಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ. SDPI ಸಂಘಟನೆ ನಿಷೇಧವಾಗುವುದು BJP ಯವರಿಗೂ ಸುತಾರಾಂ ಇಷ್ಟವಿಲ್ಲ. ಈ ಸತ್ಯ ಜೋಶಿಯವರಿಗೂ ಗೊತ್ತಿದೆ. ಆದರೂ ಜೋಶಿಯವರು ಜನರ ಕಣ್ಣಿಗೆ ಮಣ್ಣೆರಚಲು SDPIನೊಂದಿಗೆ ಕಾಂಗ್ರೆಸ್‌‌ಗೆ ಸಂಬಂಧ ಕಲ್ಪಿಸುತ್ತಾರೆ. ಅಷ್ಟಕ್ಕೂ SDPI ಸಂಘಟನೆಯಿಂದ ಕಾಂಗ್ರೆಸ್‌ ಗೆ ಏನು ಲಾಭ ಜೋಶಿಯವರೆ?


ಅಬ್ದುಲ್ ಮಜೀದ್ ಹೇಳಿದ್ದೇನು?


ಮಳಲಿ ಮಸೀದಿಯ ಒಂದು ಹಿಡಿ ಮರಳು ಕೊಡಲಾರೆವು. ಮಸೀದಿ ಬಿಟ್ಟು ಕೊಡುತ್ತಾರೆ ಅನ್ನೋ ಕನಸು ಕಾಣಬೇಡಿ. ಈ ದೇಶ ನಮ್ಮದು, ಇದಕ್ಕಾಗಿ ರಕ್ತ ಹರಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಮಳಲಿ ಮಸೀದಿ ವಿಚಾರದಲ್ಲಿ ಮಾತಾಡದಂತೆ ತಮ್ಮ ಶಾಸಕರಿಗೆ ಹೇಳಿದ್ದಾರೆ. ಕಾಂಗ್ರೆಸ್ (Congress) ಮುಸ್ಲಿಮರ (Muslim) ಪರ ಅಲ್ಲ ಅನ್ನೋದನ್ನ ತಿಳಿದುಕೊಳ್ಳಿ. ತಾಂಬೂಲ ಪ್ರಶ್ನೆ (Tambula Prashne) ಎಂದು ಬರುವವರನ್ನು ಪೊಲೀಸರು (Police) ಒದ್ದು ಒಳಗೆ ಹಾಕಬೇಕು ಎಂದು ಹೇಳಿದ್ದಾರೆ.


ಇದನ್ನೂ ಓದಿ:  Vijayapur: ಜಿಹಾದಿ ಟೆರರಿಸ್ಟ್ ಗಳಿಗೆ ಸಿದ್ದರಾಮಯ್ಯರನ್ನ ಹೋಲಿಸಿದ ಹಿಂದೂ ಸಂಘಟನೆ ನಾಯಕಿ


ತಾಂಬೂಲ ಪ್ರಶ್ನೆ ಎಂದು ಬರುವವರರನ್ನು 'ಪೂಜಾ ಸ್ಥಳ ಕಾಯ್ದೆ 1991' ಪ್ರಕಾರ ಮೂರು ವರ್ಷ ಜೈಲಿಗೆ ಹಾಕಬೇಕು. ಈ ಆ್ಯಕ್ಟ್ ಅನ್ನು ಪೊಲೀಸರು ಓದಿಲ್ವೇ? 2006ರಲ್ಲಿ 200 ವರ್ಷಗಳಷ್ಟು ಹಳೆಯದಾದ ಸಂಡೂರಿನ ಸುಗ್ಗುಲಮ್ಮ ದೇವಾಲಯ ಒಡೆದು ಹಾಕಿದ್ದರಲ್ಲ. ಸಂಘ ಪರಿವಾರದ ಕಾರ್ಯಕರ್ತರು ತಾಕತ್ತಿದ್ದರೆ ಅದರ ಬಗ್ಗೆ ತಾಂಬೂಲ ಪ್ರಶ್ನೆ ಇಡಲಿ ಎಂದು ಸವಾಲು ಹಾಕಿದರು.

Published by:Mahmadrafik K
First published: