ಚುನಾವಣೆ ಯಾಕೆ ಮಾಡ್ತೀರಾ? ದೆಹಲಿಯಿಂದಲೇ ಸಿಎಂ ಆಯ್ಕೆ ಮಾಡಿ: ಠಾಕ್ರೆ ಆಕ್ರೋಶ


Updated:May 18, 2018, 9:25 AM IST
ಚುನಾವಣೆ ಯಾಕೆ ಮಾಡ್ತೀರಾ? ದೆಹಲಿಯಿಂದಲೇ ಸಿಎಂ ಆಯ್ಕೆ ಮಾಡಿ: ಠಾಕ್ರೆ ಆಕ್ರೋಶ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ

Updated: May 18, 2018, 9:25 AM IST
ನ್ಯೂಸ್ 18 ಕನ್ನಡ

ಬೆಂಗಳೂರು(ಮೇ.18): ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಕೇಂದ್ರವು ರಾಜ್ಯಪಾಲರನ್ನು ನಿಯೋಜಿಸುವಂತೆ ರಾಜ್ಯದ ಮುಖ್ಯಮಂತ್ರಿಗಳನ್ನೂ ನಿಯೋಜಿಸಬೇಕು, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅವಮಾನ ಮಾಡಲಾಗುತ್ತಿದೆ ಎನ್ನುವ ಮೂಲಕ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಗುರುವಾದಂದು ಉಲ್ಲಾಸ್​ನಗರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ "ಒಂದು ವೇಳೆ ಪ್ರಜಾಪ್ರಭುತ್ವವನ್ನು ಅವಮಾನಿಸುವುದೇ ಆದರೆ ನಮ್ಮ ದೇಶವನ್ನು ಪ್ರಜಾಪ್ರಭುತ್ವ ದೇಶ ಎಂದು ಕರೆಸಿಕೊಳ್ಳುವುದರಲ್ಲಿ ಏನು ಲಾಭ? ಚುನಾವಣೆಯನ್ನೇ ರದ್ದುಗೊಳಿಸಿ, ಪ್ರಧಾನಮಂತ್ರಿಯೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕು. ಈ ಮೂಲಕ ಪ್ರಧಾನಿ ಮೋದಿ ಯಾವುದೇ ತೊಡಕಿಲ್ಲದೇ ವಿದೇಶದಲ್ಲಿ ಸುತ್ತಾಡಿ ಬರಬಹುದು" ಎಂದಿದ್ದಾರೆ.

ಕಾಂಗ್ರೆಸ್​ ಸಲ್ಲಿಸಿರುವ ಪಟ್ಟಿಯಲ್ಲಿ ಶಾಸಕರ ನಕಲಿ ಸಹಿ

ಕಾಂಗ್ರೆಸ್​ ತಾನು ಸರ್ಕಾರ ರಚಿಸುವುದಾಗಿ ರಾಜ್ಯಪಾಲರಿಗೆ ಸಲ್ಲಿಸಿರುವ ಶಾಸಕರ ಪಟ್ಟಿಯಲ್ಲಿರುವ ಹಲವಾರು ಮಂದಿ ಶಾಸಕರ ಹಸ್ತಾಕ್ಷರ ನಕಲಿ ಎಂದು ಬಿಜೆಪಿ ಆರೋಪಿಸಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ "ಶಾಸಕರು ಬೆಂಗಳೂರಿಗೆ ಯಾವಾಗ ತಲುಪಿದರು ಹಾಗೂ ಕಾಂಗ್ರೆಸ್​ ಶಾಸಕರ ಸಭೆಗೂ ಮುನ್ನವೇ ಅವರು ಹೇಗೆ ಸಹಿ ಸಂಗ್ರಹಿಸಿದರು ಎಂಬುವುದು ಯಾರಿಗೂ ತಿಳಿದಿಲ್ಲ" ಎಂದಿದ್ದಾರೆ.

ನಕಲಿ ಸಹಿ ಹಾಗೂ ದಾಖಲೆಗಳನ್ನು ಸೃಷ್ಟಿಸುವುದು ಕಾಂಗ್ರೆಸ್​ಗೆ ಹೊಸದೇನಲ್ಲ. ಮಣಿಪುರದಲ್ಲಿ ಚುನಾವಣಾ ಫಲಿತಾಂಶ ಬಂದ ಬಳಿಕ ಮಣಿಪುರ ಪೀಪಲ್ಸ್​ ಪಾರ್ಟಿ ತಮ್ಮನ್ನು ಬೆಂಬಲಿಸುತ್ತಿದೆ ಎಂಬ ನಕಲಿ ಪತ್ರ ಸಲ್ಲಿಸಿದ್ದರು ಎಂದೂ ಜಾವ್ಡೇಕರ್ ಆರೋಪಿಸಿದ್ದಾರೆ.
First published:May 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...