Master Hirannaiah: ಹಿರಣ್ಣಯ್ಯ ಬಿಟ್ಟರೂ, ಅವರನ್ನು ಕೊನೆವರೆಗೂ ಕೈ ಬಿಡದ ರಂಗಭೂಮಿ..!

ಸಿನಿಮಾಗೆ ಕಾಲಿಡಲು ಆಗಿನ ಕಾಲಕ್ಕೆ ರಂಗಭೂಮಿ ಒಂದು ಪ್ರಮುಖವಾದ ಮಾರ್ಗವಾಗಿತ್ತು. ಹಾಗೆಯೇ ಸಾಕಷ್ಟು ಕಲಾವಿದರು, ಸಂಗೀತ ನಿರ್ದೇಶಕರು ಸಹ ಸಿನಿಮಾಗಳಿಗೆ ಬಂದು ಹೆಸರು ಮಾಡಿದ್ದಾರೆ. ಹಾಗೇ ಹಿರಣ್ಣಯ್ಯ ಅವರೂ ಹೆಸರು ಮಾಡಲು ಸಿನಿಮಾಗೆ ಕಾಲಿಟ್ಟವರು. ಆದರೆ ಚಿತ್ರರಂಗ ಎಂದೂ ಅವರ ಕೈ ಹಿಡಿಯಲಿಲ್ಲ.

Anitha E | news18
Updated:May 2, 2019, 4:05 PM IST
Master Hirannaiah: ಹಿರಣ್ಣಯ್ಯ ಬಿಟ್ಟರೂ, ಅವರನ್ನು ಕೊನೆವರೆಗೂ ಕೈ ಬಿಡದ ರಂಗಭೂಮಿ..!
ನಾಟಕ ನಿಧಿ ಹಿರಣ್ಣಯ್ಯ
Anitha E | news18
Updated: May 2, 2019, 4:05 PM IST
- ಅನಿತಾ ಈ, 

ಮಾಸ್ಟರ್​ ಹಿರಣ್ಣಯ್ಯ... ಅವರ ಹೆಸರೇ ಹೇಳುವಂತೆ ವೃತ್ತಿ ರಂಗಭೂಮಿಯ ನಟಸಾರ್ವಭೌಮ. ರಂಗಭೂಮಿಯ ನಿಧಿ ಹಿರಣ್ಣಯ್ಯ ಅವರನ್ನು ಈ ಬಣ್ಣದ ಲೋಕದಿಂದ ದೂರ ಇಡಲು ಅವರ ತಂದೆ ಕೆ. ಹಿರಣ್ಣಯ್ಯ ತುಂಬಾ ಪ್ರಯತ್ನಪಟ್ಟಿದ್ದರಂತೆ. ಆದರೂ ಕಲಾದೇವಿ ಸರಸ್ವತಿ ಅವರನ್ನು ಹುಡುಕಿ ಒಲಿದಿದ್ದಳು.

ಕಲ್ಪನಾ ಚಿತ್ರಮಂದಿರ ಆ ಕಾಲಕ್ಕೆ ನಾಟಕ ಪ್ರದರ್ಶಿಸುವ ಕಲಾ ಕೇಂದ್ರವಾಗಿತ್ತು. ಅಲ್ಲಿ ಹಿರಣ್ಣಯ್ಯ ಅವರ ತಂದೆ ನಾಟಕಗಳು ಸೆಟ್ಟೇರುತ್ತಿದ್ದವು. ತಂದೆಯನ್ನು ನೋಡಲು ಮಾಸ್ಟರ್​ ಹಿರಣ್ಣಯ್ಯ ಅಲ್ಲಿಗೆ ಬಂದಾಗಲೆಲ್ಲ, ಅವರ ತಂದೆ ಅಲ್ಲಿಂದ ಓಡಿಸುತ್ತಿದ್ದರಂತೆ. ಅಪ್ಪ ಎಷ್ಟೇ ಪ್ರಯತ್ನ ಪಟ್ಟರೂ ಮಾಸ್ಟರ್​ ಹಿರಣ್ಣಯ್ಯ ಅವರನ್ನು ರಂಗಭೂಮಿಯಿಂದ ದೂರವಿಡಲು ಸಾಧ್ಯವಾಗಲೇ ಇಲ್ಲ.  

ಇದನ್ನೂ ಓದಿ: Master Hirannaiah: ರಂಗಭೂಮಿಯ ನಿಧಿ ಮಾಸ್ಟರ್​ ಹಿರಣ್ಣಯ್ಯ ಇಸ್ಪೀಟ್​ ಆಡುವುದರಲ್ಲೂ ನಿಸ್ಸೀಮರು

ರಂಗಭೂಮಿಯ ಬದುಕು ಎಷ್ಟು ಕಷ್ಟ ಎಂದು ತಿಳಿದೇ ಹಿರಣ್ಣಯ್ಯ ಅವರ ತಂದೆ ಅವರನ್ನು ಕಲಾವಿದನಾಗುವ ಪ್ರಯತ್ನಕ್ಕೆ ತಣ್ಣೀರೆರಚಿದ್ದರು. ಆದರೂ ರಂಗಭೂಮಿಯ ಸೆಳೆತ ಅವರನ್ನು ಬಣ್ಣದ ಲೋಕಕ್ಕೆ ತಂದು ನಿಲ್ಲಿಸಿತ್ತು. 

ರಂಗಭೂಮಿಯಲ್ಲಿ ಮುಕುಟವಿಲ್ಲದ ಅರಸನಂತೆ ರಾರಾಜಿಸುತ್ತಿದ್ದ ಹಿರಣ್ಣಯ್ಯ ಅವರಿಗೂ ಹೆಸರು ಮಾಡುವ ಆಸೆ ಹುಟ್ಟಿಕೊಂಡಿತ್ತು. ಅದಕ್ಕೆ ಅವರು ಒಂದು ಕಾಲದಲ್ಲಿ ಸಿನಿ ರಂಗಕ್ಕೂ ಪ್ರವೇಶಿಸಿದ್ದರು. ಆದರೆ ಅವರು ಎಷ್ಟೇ ಪ್ರಯತ್ನಿಸಿದರೂ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಾಣಲು ಸಾಧ್ಯವಾಗಿರಲಿಲ್ಲ. 

'ಅವರದ್ದೇ ಪ್ರಸಿದ್ಧ 'ದೇವದಾಸಿ' ನಾಟಕವನ್ನು ಬೆಳ್ಳಿ ತೆರೆಗೆ ತಂದರಾದರೂ, ಅದು ಸಹ ನೆಲಕಚ್ಚಿತ್ತು. ಆ ಸಮಯಕ್ಕೆ ಅವರು ರಂಗಭೂಮಿಯನ್ನು ಬಿಟ್ಟು, ಸಿನಿಮಾಗಳತ್ತ ಮುಖ ಮಾಡಿದ್ದರೂ ರಂಗಭೂಮಿ ಮಾತ್ರ ಅವರ ಕೈ ಬಿಡಲಿಲ್ಲ' ಎನ್ನುತ್ತಾರೆ ಹಿರಿಯ ನಟ ಶಿವರಾಂ​. 
Loading...

ಇದನ್ನೂ ಓದಿ: Master Hirannaiah: ತುರ್ತು ಪರಿಸ್ಥಿತಿ ಟೀಕಿಸುತ್ತಿದ್ದ ಹಿರಣ್ಣಯ್ಯ ಅವರ ಸಂಭಾಷಣೆಯನ್ನು ಕೇಳುತ್ತಿದ್ದರು ಇಂದಿರಾಗಾಂಧಿ

'ಆಗ ಸಿನಿಮಾಗಳಲ್ಲಿ ಅವರಿಗೆ ಯಶಸ್ಸು ಸಿಗದಿದ್ದರೂ, ಅವರ ಆರ್ಥಿಕ ಪರಿಸ್ಥಿತಿ ಮಾತ್ರ ಒಂದು ಮಟ್ಟಕ್ಕೆ ಉತ್ತಮವಾಗಿತ್ತು. ಅದಕ್ಕೆ ಕಾರಣ ರಂಗಭೂಮಿ. ಅವರಿಗೆ ಆಗಲೂ ಒಂದಲ್ಲಾ ಒಂದು ಕಡೆಯಿಂದ ನಾಟಕ ಮಾಡುವಂತೆ ಬೇಡಿಕೆ ಬರುತ್ತಲೇ ಇತ್ತು' ಎಂದು ಅವರೊಂದಿಗೆ ಕಳೆದ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಅವರು.

ನಾಟಕಗಳನ್ನು ನಿರ್ದೇಶಿಸುತ್ತಿದ್ದ ಹಿರಣ್ಣಯ್ಯ ಸಿನಿಮಾಗಳಲ್ಲಿ ನಾಯಕನಾಗಲು ಹೋಗಿ ಕೈ ಸುಟ್ಟುಕೊಂಡಿದ್ದರು. ಆದರೆ ಅವರನ್ನೇ ಅರಸಿ ಬಂದಿದ್ದ ಕಲಾ ದೇವಿ ಸರಸ್ವತಿ ಮಾತ್ರ ನಾಟಕಗಳ ರೂಪದಲ್ಲಿ ಅವರನ್ನು ಎಂದಿಗೂ ಕೈ ಬಿಟ್ಟಿರಲಿಲ್ಲ ಅನ್ನೋದು ಅವರ ಜೀವನದಲ್ಲಿ ಸಾಕಷ್ಟು ಸಲ ಸಾಬೀತಾಗಿತ್ತು.

 

Exclusive Photos: ಮಾಸ್ಟರ್​ ಹಿರಣ್ಣಯ್ಯರ 'ಲಂಚಾವತಾರ' ನಾಟಕ ಹಾಗೂ 'ಋಣಮುಕ್ತಳು' ಸಿನಿಮಾದ ಚಿತ್ರಗಳು.

First published:May 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...