HOME » NEWS » State » WHY GIVING THIS MUCH PROTECTION TO MY HOME BS YEDIYURAPPA ASK QUESTIONS TO POLICE KGV RMD

ನನ್ನ ಮನೆಗೇಕೆ ಇಷ್ಟೊಂದು ಭದ್ರತೆ?; ಸಿಎಂ ಬಿಎಸ್​ವೈ ಪ್ರಶ್ನೆಗೆ ಕಂಗಾಲಾದ ಪೊಲೀಸರು

ಬಿಎಸ್​ವೈ ಕೃಷ್ಣಾ ನಿವಾಸದಿಂದ ವಿಧಾನಸೌಧದ ಕಡೆ ತೆರಳುವವರಿದ್ದರು. ಈ ವೇಳೆ ಕಾವೇರಿ ನಿವಾಸದ ಬಳಿ ವಾಹನ ನಿಲ್ಲಿಸುವಂತೆ ಅವರು ಸೂಚಿಸಿದ್ದರು. ಈ ವೇಳೆ ಪೊಲೀಸರಿಗೆ ಅವರು ಪ್ರಶ್ನೆಯ ಸುರಿಮಳೆ ಸುರಿಸಿದ್ದಾರೆ.

news18-kannada
Updated:March 18, 2020, 11:24 AM IST
ನನ್ನ ಮನೆಗೇಕೆ ಇಷ್ಟೊಂದು ಭದ್ರತೆ?; ಸಿಎಂ ಬಿಎಸ್​ವೈ ಪ್ರಶ್ನೆಗೆ ಕಂಗಾಲಾದ ಪೊಲೀಸರು
ಸಿಎಂ ಬಿ.ಎಸ್​​ ಯಡಿಯೂರಪ್ಪ.
  • Share this:
ಬೆಂಗಳೂರು (ಮಾ.18): ಮಧ್ಯಪ್ರದೇಶ ಶಾಸಕರನ್ನು ಬೆಂಗಳೂರಿನ ಹೊರ ವಲಯದಲ್ಲಿರುವ ರಮಾಡ ರೆಸಾರ್ಟ್​ನಲ್ಲಿ ಇಡಲಾಗಿದೆ. ಇದನ್ನು ವಿರೊಧಿಸಿ ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಸೇರಿ ಹಲವು ಕೈ ನಾಯಕರು ರೆಸಾರ್ಟ್​ ಹೊರ ಭಾಗದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್​ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸರ್ಕಾರಿ ಬಂಗಲೆ ಕಾವೇರಿ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಈ ಬಗ್ಗೆ ಬಿಎಸ್​ವೈ ಸಿಟ್ಟಾಗಿದ್ದಾರೆ.

ಬಿಎಸ್​ವೈ ಕೃಷ್ಣಾ ನಿವಾಸದಿಂದ ವಿಧಾನಸೌಧದ ಕಡೆ ತೆರಳುವವರಿದ್ದರು. ಈ ವೇಳೆ ಕಾವೇರಿ ನಿವಾಸದ ಬಳಿ ವಾಹನ ನಿಲ್ಲಿಸುವಂತೆ ಅವರು ಸೂಚಿಸಿದ್ದರು. ತಾವು ಮನೆಯಲ್ಲಿ ಇಲ್ಲದಿದ್ದರೂ ಇಷ್ಟೊಂದು ಭದ್ರತೆ ಒದಗಿಸಿರುವುದನ್ನು ಕಂಡು ಬಿಎಸ್​ವೈ ಪೊಲೀಸರಿಗೆ ಪ್ರಶ್ನೆಯ ಸುರಿಮಳೆಯನ್ನೇ ಗೈದಿದ್ದಾರೆ.

“ಅನಾವಶ್ಯಕವಾಗಿ ಯಾಕೆ ಇಷ್ಟು ಭದ್ರತೆ ಒದಗಿಸಿದ್ದೀರಿ? ನಾನು ಮನೆಯಲ್ಲಿ ವಾಸವಿದ್ದಾಗ ಬೇಕಿದ್ದರೆ ಭದ್ರತೆ ಕೊಡಿ. ನಾನು ಇಲ್ಲದೆ ಇರುವಾಗ ಯಾಕೆ ಇಷ್ಟು ಪೊಲೀಸರನ್ನು ನಿಯೋಜನೆ ಮಾಡಿದ್ದೀri,” ಎಂದು ಹಿರಿಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ವಿದೇಶದಿಂದ ಬಂದವರಲ್ಲಿ ಕೊರೋನಾ ಇಲ್ಲದಿದ್ದರೂ 14 ದಿನ ಗೃಹಬಂಧನ ಕಡ್ಡಾಯ; ಐಸಿಎಂಆರ್​

ಸಿಎಂ ಕಾರು ನಿಲ್ಲಿಸಿ ಈ ರೀತಿ ಪ್ರಶ್ನೆ ಮಾಡಿದ್ದನ್ನು ಕಂಡು ಪೊಲೀಸರು ಒಂದು ಕ್ಷಣ ಗಾಬರಿಯಾದರು. ‘ಕಾಂಗ್ರೆಸ್​ನಿಂದ ಪ್ರತಿಭಟನೆ ಇರುವ ಹಿನ್ನೆಲೆಯಲ್ಲಿ ಕಾವೇರಿ ನಿವಾಸಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಿದ್ದಿರುವುದಾಗಿ’ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
Youtube Video
First published: March 18, 2020, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories