ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಕರೆದ ಸುದ್ದಿಗೋಷ್ಠಿಯಲ್ಲಿ ಸೋದರ, ಸಂಸದ ಡಿಕೆ ಸುರೇಶ್ (MP DK Suresh) ಕನಕಪುರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ಯಾಕೆ ಎಂಬುದರ ರಹಸ್ಯ ಬಿಚ್ಚಿಟ್ಟರು. ನನ್ನ ಅಫಿಡವಿಡ್ ಎಷ್ಟೆಷ್ಟು ಡೌನ್ ಲೌಡ್ ಮಾಡಿದ್ದಾರೆ ಮಾಹಿತಿ ಸಿಗಲಿದೆ. ನನ್ನ ಅಫಿಡವಿಟ್ ಯಾರ್ಯಾರು ತೆಗೆದಿದ್ದಾರೆ ಗೊತ್ತಿದೆ. ಕಳೆದ ಬಾರಿಯೇ ನನ್ನ ಅಪ್ಲಿಕೇಶನ್ ರದ್ದತಿಗೆ ಪ್ರಯತ್ನಿಸಿದ್ದರು. ನಾನೇ ಐಟಿ ಕಚೇರಿಗೆ ಹೋಗಿ ಮಾಹಿತಿ ಕೊಟ್ಟಿದ್ದೆ. ಕಳೆದ 15 ವರ್ಷಗಳಿಂದ ಆಸ್ತಿ ಏರಿಕೆಯಾಗಿಲ್ಲ. ನನಗೂ ಅಧಿಕಾರಿಗಳು ಗೊತ್ತಿದ್ದಾರೆ. ಅವರು ಯಾವ ರಾಜಕಾರಣ ಬೇಕಾದ್ರೂ ಮಾಡಲಿ. ನಮ್ಮನ್ನ ಚಚ್ಚಿ ಚಚ್ಚಿ ಹಾಕ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಏನೇ ನಮ್ಮ ಯಾವ ಕಾರ್ಯಕ್ರಮ ನಿಲ್ಲಿಸಲಾಗಿಲ್ಲ. ಮೇಕೆದಾಟು, ಭಾರತ್ ಜೋಡೋ ಯಾತ್ರೆ ತಡೆಯಲಾಗಲಿಲ್ಲ, ಅವರು ಬಹಳ ದೊಡ್ಡ ಗುರಿ ಇಟ್ಟಿದ್ದಾರೆ. ಅವರು ಯಾವ ಗುರಿ ಬೇಕಾದ್ರೂ ಇಟ್ಕೊಳ್ಳಲಿ. ಯಡಿಯೂರಪ್ಪ ಸರ್ಕಾರ ನನ್ನ ಮೇಲೆ ಸಿಬಿಐ ಕೇಸ್ ಕೊಟ್ಟರು. ಯಾವ ಕೇಸ್ ಸಿಬಿಐಗೆ ಕೊಟ್ಟಿರಲಿಲ್ಲ. ನನ್ನ ಕೇಸ್ ಮಾತ್ರ ಸಿಬಿಐಗೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಅವರನ್ನೇ ಬಿಡಲಿಲ್ಲ
ರಾಹುಲ್ ಗಾಂಧಿಯವರ ಪ್ರಕರಣದ ವಿಚಾರಣೆಯನ್ನು ಕೇವಲ 15 ದಿನದಲ್ಲಿ ಮುಗಿಸಲಾಯ್ತು. ಎರಡು ದಿನದಲ್ಲೇ ಸಂಸತ್ ಸ್ಥಾನ ತೆಗೆದರು. ಮನೆಯನ್ನ ಖಾಲಿ ಮಾಡಬೇಕೆಂದರು. ರಾಹುಲ್ ಗಾಂಧಿ ಅವರನ್ನೇ ಬಿಡಲಿಲ್ಲ. ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಸೋನಿಯಾ ತಾಯಿಗೆ ಕೊಡಬಾರದ ಕಿರುಕುಳ ಕೊಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ನಾಮಪತ್ರ ತಿರಸ್ಕಾರದ ಷಡ್ಯಂತ್ರ
ನಾಮಪತ್ರ ತಿರಸ್ಕಾರದ ಷಡ್ಯಂತ್ರವಿದೆ. ಅಧಿಕಾರ ದುರುಪಯೋಗವಿದೆ. ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಕಲ್ಲು ಬಂಡೆ ಅಂತ ನೀವೇ ಕರೆದಿದ್ದೀರಿ. ಕಲ್ಲು ಕಡೆದರೆ ಆಕೃತಿ, ಹಾಕಿದರೆ ಮೆಟ್ಟಿಲು. ಒಂದೇ ದಿನಕ್ಕೆ ತೆಗೆದು ಮನೆಯಿಂದ ಆಚೆ ಹಾಕಿದ್ರೆ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: BJP: ಬೆಳ್ಳಂಬೆಳಗ್ಗೆ ಈಶ್ವರಪ್ಪಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದೇನು?
ಅಧಿಕಾರಿಗಳನ್ನು ದುರಪಯೋಗ ಮಾಡಿಕೊಂಡು ನಾಮಪತ್ರದ ಮೇಲೆ ನೋ ನಾಟ್ ಅಂತ ಬರೆದ್ರೆ ಹೇಗೆ? ಹಾಗಾಗಿ ನಮ್ಮ ಎಚ್ಚರಿಕೆಯಲ್ಲಿದ್ದೇವೆ. ಆದ್ದರಿಂದ ನಮ್ಮ ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ