ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಸೈಲೆಂಟ್ ಆಗಿರುವುದೇಕೆ?; ಮೌನ ಮುರಿದ ಟ್ರಬಲ್ ಶೂಟರ್

ಉಪ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರಕ್ಕೆ ಟಿಕೆಟ್ ಫೈನಲ್ ಆಗದ ವಿಚಾರಕ್ಕೆ ಸಂಬಂಧಿಸಿ ಡಿಕೆಶಿ ಮಾತನಾಡಿದ್ದು, ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ನಾಯಕರು ಎಲ್ಲವನ್ನೂ ಫೈನಲ್​ ಮಾಡಿದ್ದಾರೆ ಎಂದರು.

Rajesh Duggumane | news18-kannada
Updated:November 17, 2019, 12:48 PM IST
ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಸೈಲೆಂಟ್ ಆಗಿರುವುದೇಕೆ?; ಮೌನ ಮುರಿದ ಟ್ರಬಲ್ ಶೂಟರ್
ಡಿಕೆ ಶಿವಕುಮಾರ್​
  • Share this:
ಬೆಂಗಳೂರು (ನ.17): ಕಾಂಗ್ರೆಸ್​-ಜೆಡಿಎಸ್​ ಸರ್ಕಾರದ ವಿರುದ್ಧ ಶಾಸಕರು ರೆಬೆಲ್​ ಆದಾಗ ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಸಿಡಿದೆದ್ದಿದ್ದರು. ಕಾಂಗ್ರೆಸ್​ಗೆ ದ್ರೋಹ ಬಗೆದ ಎಲ್ಲ ಶಾಸಕರನ್ನು ಸೋಲಿಸುತ್ತೇನೆ ಎಂದು ಸವಾಲು ಹಾಕಿದ್ದರು. ಅಷ್ಟೇ ಅಲ್ಲ, ಅನರ್ಹ ಶಾಸಕ ಎಂಟಿಬಿಗೆ ‘ಇನ್ನು ನನ್ನ ನಿನ್ನ ಭೇಟಿ ರಣರಂಗದಲ್ಲಿ’ ಎಂದಿದ್ದರು. ಆದರೆ, ಈ ಬಾರಿಯ ಕರ್ನಾಟಕ ಉಪಚುನಾವಣೆಯಲ್ಲಿ ಡಿಕೆಶಿ ಸೈಲೆಂಟ್​ ಆಗಿದ್ದಾರೆ. ಹೀಗಿರಲು ಕಾರಣವೇನು ಎನ್ನುವ ವಿಚಾರದ ಬಗ್ಗೆ ಅವರು ಮೌನ ಮುರಿದಿದ್ದಾರೆ.

ದಾಖಲೆ ರಹಿತ ಹಣ ಸಿಕ್ಕ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿಕೆಶಿಯನ್ನು ವಶಕ್ಕೆ ಪಡೆದಿತ್ತು. ಕೆಲ ಕಾಲ ಅವರು ಜೈಲಿನಲ್ಲೂ ಇದ್ದರೂ. ಇದೇ ವೇಳೆ ಅವರಿಗೆ ಅನಾರೋಗ್ಯವೂ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಉಪ ಚುನಾವಣಾ ಪ್ರಚಾರಕ್ಕೆ ಮುಂದಾಗಿಲ್ಲ ಎನ್ನಲಾಗಿತ್ತು. ಈ ವಿಚಾರವಾಗಿ ಮಾತನಾಡಿದ ಅವರು, ‘ಮಾಧ್ಯಮದವರು ಸೈಲೆಂಟ್​ ಆಗಿದ್ದರೆ ನಾನೂ ಸೈಲೆಂಟ್​ ಆಗಿರುತ್ತೇನೆ’ ಎಂದು ನಗೆಚಟಾಕಿ ಹಾರಿಸಿದರು.

“ಕಾಂಗ್ರೆಸ್ ಪಾರ್ಟಿ ಏನು ಹೇಳುತ್ತದೆಯೋ ನಾನು ಅದನ್ನ ಮಾಡುತ್ತೇನೆ. ಕಾಂಗ್ರೆಸ್ ನಾಯಕರಿಗೂ ನನ್ನ‌ ಪರಿಸ್ಥಿತಿ ಗೊತ್ತಿದೆ. ಹಾಗಾಗಿ ಅವರೇ ಎಲ್ಲವನ್ನೂ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನಾಗಿ ಏನೆಲ್ಲ ಸಾಧ್ಯವೋ ಅದನ್ನು ಶಕ್ತಿ ಮೀರಿ ಮಾಡುತ್ತಿದ್ದೇನೆ. ನನ್ನ ಪರಿಸ್ಥಿತಿ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ,” ಎಂದರು ಡಿಕೆಶಿ.

ಇದನ್ನೂ ಓದಿ: ಅನರ್ಹರನ್ನು ಸಚಿವರನ್ನಾಗಿ ಮಾಡುತ್ತೇವೆ, ಶರತ್​ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಚಾಟಿಸುತ್ತೇವೆ; ಸಿಎಂ ಬಿಎಸ್​ವೈ ಶಪಥ(ಕರ್ನಾಟಕ ವಿಧಾನಸಭೆಯಲ್ಲಿ ಗುಡುಗಿದ್ದ ಡಿಕೆಶಿ)
ಉಪ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರಕ್ಕೆ ಟಿಕೆಟ್ ಫೈನಲ್ ಆಗದ ವಿಚಾರಕ್ಕೆ ಸಂಬಂಧಿಸಿ ಡಿಕೆಶಿ ಮಾತನಾಡಿದ್ದು, ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ನಾಯಕರು ಎಲ್ಲವನ್ನೂ ಫೈನಲ್​ ಮಾಡಿದ್ದಾರೆ ಎಂದರು. ಈ ಮೂಲಕ ಶೀಘ್ರದಲ್ಲೇ ಈ ಬಗ್ಗೆ ಘೋಷಣೆ ಆಗಲಿದೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.

ರಮೇಶ್​ ಜಾರಕಿಹೊಳಿ ಬಗ್ಗೆಯೂ ಡಿಕೆಶಿ ಸೈಲೆಂಟ್​:

ಬೆಳಗಾವಿ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಹಸ್ತಕ್ಷೇಪ ಮಾಡಿದ್ದರು. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೋಳಿ ಆರೋಪ ಮಾಡಿದ್ದರು. ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಮೌನ ಮುಂದುವರಿಸಿದ್ದಾರೆ. “ಅವರೆಲ್ಲ ದೊಡ್ಡವರು. ಅವರ ಸುದ್ದಿ ನನಗೆ ಬೇಡ,” ಎಂದು ಜಾರಿಕೊಂಡರು.

(ವರದಿ: ಶ್ರೀನಿವಾಸ ಹಳಿಕಟ್ಟಿ)

First published:November 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ