ಶ್ರೀರಾಮುಲು ದೊಡ್ಡವರು, ಅವರು ಗೆಲ್ಲಬೇಕು; ಡಿಕೆ ಶಿವಕುಮಾರ್​ ವ್ಯಂಗ್ಯ

Seema.R | news18
Updated:October 12, 2018, 3:16 PM IST
ಶ್ರೀರಾಮುಲು ದೊಡ್ಡವರು, ಅವರು ಗೆಲ್ಲಬೇಕು; ಡಿಕೆ ಶಿವಕುಮಾರ್​ ವ್ಯಂಗ್ಯ
ಶ್ರೀರಾಮುಲು - ಡಿಕೆ ಶಿವಕುಮಾರ್​​
  • News18
  • Last Updated: October 12, 2018, 3:16 PM IST
  • Share this:
ಶ್ರೀನಿವಾಸ್​ ಹಳಕಟ್ಟಿ, ನ್ಯೂಸ್​ 18 ಕನ್ನಡ

ಬೆಂಗಳೂರು (ಅ.12): ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ  ಡಿಕೆ ಶಿವಕುಮಾರ್​ ಪ್ರಭಾವಿ ಸಚಿವರಾಗಿರಬಹುದು. ಅವರ ಬಳಿ ಸರ್ಕಾರವೇ ಇರಬಹುದು. ಆದರೆ, ಅವರ ಶಕ್ತಿ ಅವರಿಗೆ, ನಮ್ಮ ಶಕ್ತಿ ನಮಗೆ ಎಂದು ಶಾಸಕ ಬಿ. ಶ್ರೀರಾಮುಲು  ಹೇಳಿಕೆಗೆ ಇಂದು ಜಲಸಂಪನ್ಮೂಲ ಸಚಿವರು ಟಾಂಗ್​ ನೀಡಿದ್ದಾರೆ.

ಶ್ರೀರಾಮುಲು ಶಕ್ತಿಯುತ ನಾಯಕ. ಅವರು ಬಹಳ ದೊಡ್ಡವರು. ನಾವೆಲ್ಲಾ ಕಾರ್ಯಕರ್ತರು. ಈ ಚುನಾವಣೆಯಲ್ಲಿ ಶ್ರೀರಾಮುಲು  ಅವರು ಗೆಲ್ಲಲಿ ಪಾಪ ಎಂದು ಡಿಕೆ ಶಿವಕುಮಾರ್​ ವ್ಯಂಗ್ಯವಾಡಿದರು.

ಅಭ್ಯರ್ಥಿ ಆಯ್ಕೆ ವಿಚಾರವಾಗಿ ಈ ಹಿಂದೆ ಮಾತನಾಡಿದ ಶ್ರೀರಾಮುಲು,  ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯ ನಾಯಕರು ಬೂತ್ ಬಳಿಯೇ ಬಂದು ಕುಳಿತರೂ ಸಹ ನಮ್ಮ ಕಾರ್ಯಕರ್ತರ ಬಳಿ ನಮ್ಮದೇ ಆದ ಶಕ್ತಿ ಇದೆ. ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದಿದ್ದರು.

ಇವತ್ತಿನಿಂದ ಗುರುಬಲ ಬಂದಿದೆ: 

ಬಳ್ಳಾರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈಗ ಶುಭ ಘಳಿಗೆ ಬಂದಿದೆ. ಗುರು ಇವತ್ತಿನಿಂದ ಬದಲಾಗಿದ್ದಾನೆ. ಎಲ್ಲ ಒಳ್ಳೆಯದಾಗುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಬುಧವಾರ ಡಿಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಬಳ್ಳಾರಿ ಆಭ್ಯರ್ಥಿ ಆಯ್ಕೆ ಸಭೆಗೆ ಅಲ್ಲಿನ ಶಾಸಕರು ಗೈರಾದ ಹಿನ್ನಲೆ ಸಭೆ ವಿಫಲವಾಗಿತ್ತು. ಈ ಹಿನ್ನಲೆ ಸಿದ್ದರಾಮಯ್ಯ ಅವರ ಹೆಗಲಿಗೆ ಅಭ್ಯರ್ಥಿ ಆಯ್ಕೆ ಜವಾಬ್ದಾರಿ ನೀಡಲಾಗಿದೆ.ಇದನ್ನು ಓದಿ: ಅದೆಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ ಶ್ರೀರಾಮುಲು? ಬಳ್ಳಾರಿಯಲ್ಲಿ ಎಷ್ಟು ಉಪ ಚುನಾವಣೆ ನಡೆದಿದೆ ಗೊತ್ತಾ?

ಒಗ್ಗಟ್ಟಿನಿಂದ ಕೆಲಸ: 

ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಉಪಚುನಾವಣೆ ಎದುರಿಸಲಿದೆ. ಯಾರೇ ಅಭ್ಯರ್ಥಿ ಆದರೂ ಎಲ್ಲ ಶಾಸಕರು ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.

ಮೂವರು ಅಭ್ಯರ್ಥಿಗಳು ಫೈನಲ್​: 

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ನೇತೃತ್ವದಲ್ಲಿ ಇಂದು ಬಳ್ಳಾರಿ ಶಾಸಕರ ಸಭೆ ನಡೆಸಲಾಯಿತು. ಅನಿಲ್​ ಲಾಡ್​ ಒಬ್ಬರನ್ನು ಬಿಟ್ಟು ಜಿಲ್ಲೆಯ ಎಲ್ಲ ಶಾಸಕರು ಸಭೆಗೆ ಹಾಜರಾಗಿದ್ದರು.

ದೇವೇಂದ್ರಪ್ಪ, ಶಾಸಕ ಬಿ.ನಾಗೇಂದ್ರ ಸೋದರ ವೆಂಕಟೇಶ್​ಪ್ರಸಾದ್​ , ವಿ.ಎಸ್​.ಉಗ್ರಪ್ಪ ಹೆಸರು ಪ್ರಸ್ತಾಪವಾಗಿದ್ದು,  ಈ ಮೂವರಲ್ಲಿ ಒಬ್ಬರನ್ನು ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆ ಇದೆ.

First published:October 12, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading