• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • DK Shivakumar: ಕೂಲಿಯಾಗಿ ಸಿಎಂ ಸ್ಥಾನ ಕೇಳಿದ್ದ ಡಿಕೆಶಿ ಡಿಸಿಎಂ ಪೋಸ್ಟ್​ಗೆ ಒಪ್ಪಿಕೊಂಡಿದ್ದು ಹೇಗೆ?

DK Shivakumar: ಕೂಲಿಯಾಗಿ ಸಿಎಂ ಸ್ಥಾನ ಕೇಳಿದ್ದ ಡಿಕೆಶಿ ಡಿಸಿಎಂ ಪೋಸ್ಟ್​ಗೆ ಒಪ್ಪಿಕೊಂಡಿದ್ದು ಹೇಗೆ?

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Karnataka CM: ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನಕ್ಕೆ ಒಪ್ಪಿಕೊಂಡಿದ್ದಕ್ಕಿಂತ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ಕೊಡಲು ಸಮ್ಮತಿ ಸೂಚಿಸಿದ್ದು ಹೇಗೆ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ.

  • Share this:

ಬೆಂಗಳೂರು: ರಾಜ್ಯ ಕಾಂಗ್ರೆಸ್ (Karnataka Congress) ಅಧ್ಯಕ್ಷನಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ಹೈಕಮಾಂಡ್ (High command) ನೀಡಿದ ಜವಾಬ್ದಾರಿಯನ್ನು ಪೂರ್ಣ ಮಾಡಿದ್ದು, ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ (DK Shivakumar) ಕೇಳಿದ್ದರು. ಇದೇ ಮಾತನ್ನು ಡಿಕೆ ಶಿವಕುಮಾರ್ ಸೋದರ, ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದರು. ಸೋಮವಾರ ದೆಹಲಿಗೆ ತೆರಳಿದ ಕ್ಷಣದಿಂದ ನಿನ್ನೆ ರಾತ್ರಿಯವರೆಗೂ ಸಿಎಂ ಸ್ಥಾನಕ್ಕಾಗಿಯೇ ಡಿಕೆ ಶಿವಕುಮಾರ್ ಬಿಗಿಪಟ್ಟು ಹಿಡಿದಿದ್ದರು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂಧಾನ ವಿಫಲವಾಗಿತ್ತು. ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನ ಒಪ್ಪಿಕೊಂಡಿದ್ದು ಹೇಗೆ ಎಂಬುದರ ಇನ್​ಸೈಡ್​ ಸ್ಟೋರಿ ಇಲ್ಲಿದೆ.


ಹೌದು, ಡಿಕೆ ಶಿವಕುಮಾರ್ ಡಿಸಿಎಂ ಸ್ಥಾನಕ್ಕೆ ಒಪ್ಪಿಕೊಂಡಿದ್ದಕ್ಕಿಂತ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ಕೊಡಲು ಸಮ್ಮತಿ ಸೂಚಿಸಿದ್ದು ಹೇಗೆ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ.


ಸೋನಿಯಾ ಗಾಂಧಿ ಭರವಸೆ


ಹಿಮಾಚಲ ಪ್ರದೇಶದ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಧ್ಯ ಪ್ರವೇಶದಿಂದ ಸಿಎಂ ಆಯ್ಕೆಯ ಬಿಕ್ಕಟ್ಟು ಶಮನವಾಗಿದೆ ಎಂದು ತಿಳಿದು ಬಂದಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಜೊತೆಗಿನ ಸಂಧಾನ ವಿಫಲವಾದ ಬೆನ್ನಲ್ಲೇ ನೇರವಾಗಿ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಸೋನಿಯಾ ಗಾಂಧಿ ಮಾತನಾಡಿದ್ದಾರೆ.




ಇದನ್ನೂ ಓದಿ: BS Yediyurappa: ಬಿಎಸ್​ವೈ ಬದಿಗಿಟ್ಟಿದ್ದೇ ಬಿಜೆಪಿಗೆ ಮುಳುವಾಯ್ತಾ? 2024 ಚುನಾವಣೆಯಲ್ಲಿ ಮತ್ತೆ ರಾಜಕಾರಣಕ್ಕೆ 'ರಾಜಾಹುಲಿ'?


ಸೋನಿಯಾ ಮಾತಿಗೆ ಒಪ್ಪಿದ ಡಿಕೆಶಿ

top videos


    ನಿಮ್ಮ ತ್ಯಾಗವನ್ನು ಪಕ್ಷ ಗಮನಿಸಿದೆ. ಮುಂದಿನ ವರ್ಷವೇ ಲೋಕಸಭಾ ಚುನಾವಣೆ ಇರೋದರಿಂದ ಅಧಿಕಾರದ ಹಂಚಿಕೆ ಅನಿವಾರ್ಯ. ರಾಜಸ್ಥಾನದಲ್ಲಿ ನಡೆದಂತೆ ಕರ್ನಾಟಕದಲ್ಲಿ ಯಾವುದೇ ಬೆಳವಣಿಗೆ ನಡೆಯಲ್ಲ. ಪಕ್ಷಕ್ಕಾಗಿ ಇನ್ನೊಮ್ಮೆ ನೀವು ಸಿಎಂ ಸ್ಥಾನ ತ್ಯಾಗ ಮಾಡಬೇಕು ಎಂದು ಸೋನಿಯಾ ಗಾಂಧಿ ಸೂಚಿಸಿದ್ದರಂತೆ. ಈ ಹಿನ್ನೆಲೆ ಅಧಿಕಾರ ಹಂಚಿಕೆಗೆ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

    First published: