ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಸಿಎಂ ಎಚ್​ಡಿಕೆ: ಕಾರಣವೇನು ಗೊತ್ತಾ?

ಆದರೆ ಒಂದೆರಡು ದಿನಗಳ ನಂತರ ಆಗುವ ಬೆಳವಣಿಗೆಳ ಮೇಲೆ ಸಿಎಂ ರಾಜೀನಾಮೆ ಬಗ್ಗೆ ತೀರ್ಮಾನ ಮಾಡುತ್ತಾರೆ.

Latha CG | news18
Updated:July 11, 2019, 11:49 AM IST
ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಸಿಎಂ ಎಚ್​ಡಿಕೆ: ಕಾರಣವೇನು ಗೊತ್ತಾ?
ಕುಮಾರಸ್ವಾಮಿ-ಸಿದ್ದರಾಮಯ್ಯ-ಡಿಕೆ ಶಿವಕುಮಾರ್
  • News18
  • Last Updated: July 11, 2019, 11:49 AM IST
  • Share this:
ಬೆಂಗಳೂರು,(ಜು.11): ಅತೃಪ್ತ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆ, ಸಿಎಂ ಎಚ್​.ಡಿ. ಕುಮಾರಸ್ವಾಮಿ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್​ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಎಚ್​ಡಿಕೆ ತಮ್ಮ ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಕೈ ನಾಯಕರ ಭರವಸೆ ಎನ್ನಲಾಗಿದೆ.

ಹೌದು,  ಕಾಂಗ್ರೆಸ್​ ನಾಯಕರ ಭರವಸೆ ಮೇರೆಗೆ ಸಿಎಂ ಕುಮಾರಸ್ವಾಮಿ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಅತೃಪ್ತ ಶಾಸಕರ ರಾಜೀನಾಮೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಎಚ್​ಡಿಕೆ ನಿರ್ಧರಿಸಿದ್ದರು. ಅಲ್ಲದೇ ಇಂದು ಕೈ ನಾಯಕರ ಅಭಿಪ್ರಾಯ ಪಡೆದು, ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದರು. ಆದರೆ ಇಂದು ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಮಾತಿನಿಂದ ಸಿಎಂ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿದ್ದಾಗ ಸರ್ಕಾರ ಏನಾಗಿತ್ತು? ನಾನ್ಯಾಕೆ ರಾಜೀನಾಮೆ ಕೊಡಲಿ; ಕುಮಾರಸ್ವಾಮಿ ತಿರುಗೇಟು

ನೋಡೋಣ ಎರಡು ದಿನ, ನಮ್ಮ ಶಾಸಕರನ್ನು ಮನವೊಲಿಸುತ್ತೇವೆ. ನೀವು ಅಲ್ಲಿಯವರೆಗೆ ಮುಂದುವರೆಯರಿ, ಮುಂದೆ ನೋಡೋಣ ಎಂದು ಕೈ ನಾಯಕರು ಸಿಎಂಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಮಾರಸ್ವಾಮಿ ಸದ್ಯಕ್ಕೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಆದರೆ ಒಂದೆರಡು ದಿನಗಳ ನಂತರ ಆಗುವ ಬೆಳವಣಿಗೆಳ ಮೇಲೆ ಸಿಎಂ ರಾಜೀನಾಮೆ ಬಗ್ಗೆ ತೀರ್ಮಾನ ಮಾಡುತ್ತಾರೆ. ಇಂದು ಮಾಡಿದ ರಣತಂತ್ರಕ್ಕೆ ಅತೃಪ್ತರು ಬಗ್ಗಿದರೆ ಮೈತ್ರಿ ಸರ್ಕಾರ ಸೇಫ್ ಆಗಿರುತ್ತದೆ. ಒಂದು ವೇಳೆ ಈ ರಣತಂತ್ರಗಳು ವರ್ಕ್ ಔಟ್ ಆಗಿಲ್ಲ ಅಂದರೆ ಸರ್ಕಾರದ ಉಳಿಸಿಕೊಳ್ಳುವ ಆಸೆ ಬಿಡುವ ಬಗ್ಗೆ ತೀರ್ಮಾನ ಮಾಡುತ್ತಾರೆ ಎನ್ನಲಾಗಿದೆ.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ