• Home
  • »
  • News
  • »
  • state
  • »
  • ದಿಲ್ಲಿ ಪೋಸ್ಟ್​ | 'ನಮಗೂ ಕೂಡ ಕೆಲವರು ಸೋಲಲೇ ಬೇಕಿತ್ತಲ್ಲವೇ'!; ಬಿಎಸ್​ವೈ ಹೀಗೆ ಹೇಳಿದ್ದು ಯಾಕೆ?

ದಿಲ್ಲಿ ಪೋಸ್ಟ್​ | 'ನಮಗೂ ಕೂಡ ಕೆಲವರು ಸೋಲಲೇ ಬೇಕಿತ್ತಲ್ಲವೇ'!; ಬಿಎಸ್​ವೈ ಹೀಗೆ ಹೇಳಿದ್ದು ಯಾಕೆ?

ದಿಲ್ಲಿ ಪೋಸ್ಟ್.

ದಿಲ್ಲಿ ಪೋಸ್ಟ್.

ನವದೆಹಲಿ ಕೇವಲ ರಾಷ್ಟ್ರ ನಾಯಕರ ಕೇಂದ್ರ ಸ್ಥಾನವಷ್ಟೇ ಅಲ್ಲ. ರಾಜ್ಯ ನಾಯಕರ ಚಲನವಲನಗಳು ಕೂಡ ಆರಂಭಗೊಳ್ಳುವುದು ಇದೇ ದೆಹಲಿಯಿಂದ. ಸರ್ಕಾರ ಮಟ್ಟದ ಕೆಲಸಗಳಿಂದ ಹಿಡಿದು ಹೈಕಮಾಂಡ್ ಕೃಪೆಗಾಗಿ ಎಲ್ಲ ನಾಯಕರು ದೆಹಲಿಗೆ ಬರುತ್ತಾರೆ. ಹೀಗೆ ಬಂದ ನಾಯಕರ ಮಾತುಕತೆ, ಸನ್ನಿವೇಶ ಎಲ್ಲವೂ ಸುದ್ದಿಯಾಗುವುದಿಲ್ಲ. ಸುದ್ದಿಯಾಗದ ಕುತೂಹಲಕಾರಿ, ಅಚ್ಚರಿಯ ಕೆಲವು ಸಂಗತಿಗಳು ದಿಲ್ಲಿ ಪೋಸ್ಟ್​ನಲ್ಲಿ ಪ್ರಕಟವಾಗಲಿದೆ.

ಮುಂದೆ ಓದಿ ...
  • Share this:

ಹೇಗೆ ನಡಿತಿದೆ ವಿಜಯೇಂದ್ರ ಸರ್ಕಾರ?


ರಾಜ್ಯ ಬಿಜೆಪಿ ನಾಯಕರಿಗೀಗ 'ವಿಜಯೇಂದ್ರ ಸರ್ಕಾರ ಹೇಗೆ ನಡಿತಿದೆ?' ಎಂಬ ಪ್ರಶ್ನೆಗಳು ಜಾಸ್ತಿ ಕೇಳಿಬರುತ್ತಿವೆಯಂತೆ. ವಿಧಾನಸಭೆಯ ಲಾಂಜ್, ಮೊಗಸಾಲೆಯಿಂದ ಹಿಡಿದು ಊಟಕ್ಕೆ ಅಂತಾ ಹೊರಗೆ ಹೋದಾಗ, ಬಿಜಿನೆಸ್ ಬಗ್ಗೆ ಸೇರಿದಾಗ, ದೂರದ ದೆಹಲಿಯಲ್ಲೂ ಎಲ್ಲೆಂದರಲ್ಲಿ 'ವಿಜಯೇಂದ್ರ ಸರ್ಕಾರ'ದ್ದೇ ಹವಾ!


ಪಾಪ, ಆನ್ ರೆಕಾರ್ಡ್ ಆಗಿದ್ದರೆ ಬಿಜೆಪಿ ನಾಯಕರು 'ನಮ್ಮದು ಯಡಿಯೂರಪ್ಪ ಸರ್ಕಾರ' ಅಂತಾ ಸಮರ್ಥಿಸಿಕೊಳ್ಳುತ್ತಿದ್ದರೇನೋ... ಆದರೆ ಎಲ್ಲರೂ ನಾವು-ನೀವು ಪರಸ್ಪರ ಭೇಟಿಯಾದಾಗ 'ಹೇಗಿದಿರಿ? ಹೇಗೆ ನಡಿತಿದೆ ಕೆಲಸ?' ಅಂತಾ ನಡೆಸುವ ಉಭಯ ಕುಶಲೋಪಹರಿ ರೀತಿ ಬಿಜೆಪಿ ನಾಯಕರ 'ಯೋಗಕ್ಷೇಮ' ವಿಚಾರಿಸುವುದರಿಂದ ನಕ್ಕು ಸುಮ್ಮನಾಗದೆ ಬೇರೆ ದಾರಿ ಇಲ್ಲದಂತಾಗಿದೆ.


ಇಷ್ಟಕ್ಕೂ ಮೀರಿ ಕೆಲ ಕಟ್ಟರ್ ಪಕ್ಷ ನಿಷ್ಠರು ಸಮರ್ಥನೆಗೆ ಇಳಿದರು ಎಂದಿಟ್ಟುಕೊಳ್ಳಿ, 'ಹಿಂದಿನ ಸರ್ಕಾರವನ್ನು ನೀವೇನಂಥ ಹೇಳ್ತಿದ್ರಿ? ಎಚ್.ಡಿ. ರೇವಣ್ಣನವರ ಬಗ್ಗೆ ಏನು ಮಾತನಾಡ್ತಿದ್ರಿ? ಅನ್ನೋ‌ ಪ್ರಶ್ನೆಗಳು ತೂರಿ ಬರುತ್ತವೆ. ಆಗ ಬಿಜೆಪಿ ನಾಯಕರು ತೆಪ್ಪಗಾಗಲೇಬೇಕು. ಅಂಥ ಪರಿಸ್ಥಿತಿ ಇದೆಯಂತೆ. ಸ್ವಲ್ಪ ಲಿಬಿರಲ್ ಆಗಿರುವ ಬಿಜೆಪಿ ನಾಯಕರು ಮಾತ್ರ 'ರಾಜ್ಯದಲ್ಲಿ ದುಡ್ಡೇ ಇಲ್ಲದ ಕಾರಣಕ್ಕೆ, ಕೇಂದ್ರ ಸರ್ಕಾರದಿಂದ ಸರಿಯಾಗಿ ದುಡ್ಡು ಬರದೇ ಇರುವ ಕಾರಣಕ್ಕೆ, ಕೇಂದ್ರ ಸರ್ಕಾರದ ಮೇಲೆ ಜಬರದಸ್ತ್ ಮಾಡಿ ದುಡ್ಡು ಕೇಳಲು ಸಾಧ್ಯವಿಲ್ಲದ ಕಾರಣಕ್ಕೆ 'ಯಡಿಯೂರಪ್ಪ ಸರ್ಕಾರ' ಸಮಸ್ಯೆಯಲ್ಲಿದೆ. ಆದರೆ 'ಇನ್ ಕಮಿಂಗ್' ಮಾತ್ರ ಇರುವ ಕಾರಣಕ್ಕೆ ವಿಜಯೇಂದ್ರ ಸರ್ಕಾರ ಸೂಪರ್ ಆಗಿ ನಡಿತಿದೆ' ಎನ್ನುತ್ತಾರೆ.


ಅಂದಹಾಗೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಸರ್ಕಾರದ ರಿಪೋರ್ಟ್ ಕಾರ್ಡ್ ಜೊತೆಜೊತೆಗೆ ವಿಜಯೇಂದ್ರ ಸರ್ಕಾರದ ಸಾಧನೆ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದೆಯಂತೆ.


ಬಿಎಸ್ ವೈ ಕೊಡುಗೆ ಏನೇನೂ ಇಲ್ಲವಂತೆ!


ಬಿ.ವೈ. ವಿಜಯೇಂದ್ರ ಬೆಳವಣಿಗೆಯಲ್ಲಿ ಯಡಿಯೂರಪ್ಪ ಕೊಡುಗೆ ಏನೇನೂ ಇಲ್ಲವಂತೆ. ವಿಜಯೇಂದ್ರ ಹಗಲು ರಾತ್ರಿ ದುಡಿದು ಒಂದೊಂದೇ ಹಂತ ಮೇಲೆರುತ್ತಿದ್ದಾರಂತೆ. ಸರ್ಕಾರದಲ್ಲಿ ರವಷ್ಟು ಕೂಡ ಹಸ್ತಕ್ಷೇಪ ಇಲ್ಲವಂತೆ. ಮಂತ್ರಿಗಿರಿಗಾಗಿ ವಿಜಯೇಂದ್ರ ಬಳಿ ಯಾರೊಬ್ಬರೂ ಲಾಬಿ ಮಾಡಿಲ್ಲವಂತೆ. ಹೀಗೆ ಒಂದೇ ಏಟಿಗೆ ಎಲ್ಲಾ ಆರೋಪಗಳಿಗೂ ಓಲ್ ಸೇಲ್ ಆಗಿ ಕ್ಲೀನ್ ಚೀಟ್ ಕೊಟ್ಡಿದ್ದು ಯಾರೋ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಅಥವಾ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಲ್ಲ, ಸ್ವತಃ ಯಡಿಯೂರಪ್ಪ. ಎಷ್ಟೇಯಾದರೂ ಪುತ್ರ ವ್ಯಾಮೋಹವಲ್ಲವೇ?


ವಿಶ್ವನಾಥ್, ಎಂಟಿಬಿ ಸೋಲಲೇ ಬೇಕಿತ್ತಲ್ಲವೇ?


'ಅತೃಪ್ತ ಆಲಿಯಾಸ್ ಅನರ್ಹರ' ಪೈಕಿ ಹೆಚ್‌. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಸೋತ ಬಗ್ಗೆ ಮತ್ತು ಅವರಿಗೆ ಮಂತ್ರಿಗಿರಿ ಕೊಡುವ ಬಗ್ಗೆ ಯಡಿಯೂರಪ್ಪ ದೆಹಲಿ ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು‌. ಮಾತಿನ ಮಧ್ಯೆ 'ನಮಗೂ ಕೂಡ ಕೆಲವರು ಸೋಲಲೇ ಬೇಕಿತ್ತಲ್ಲವೇ' ಎಂದರು. ಆಗ ಹತ್ತದಿನೈದು ನಿಮಿಷ ಯಡಿಯೂರಪ್ಪ ಬಾಯಿಂದ ಏನಾದರೂ ಹೊಸ ಮಾಹಿತಿ ಬಿಡಿಸಬೇಕೆಂದು ಪಡಿಪಾಟಿಲು ಪಡುತ್ತಿದ್ದ ಪತ್ರಕರ್ತರ ಮುಖದಲ್ಲಿ ಮಿಂಚು ಮೂಡಿತ್ತು.


ಯಾರಾದರೂ ಎಕ್ಸಪೆರಿ ಆದಾಗ ಎಕ್ಸಪೆನ್ಷನ್!


ವಿಶ್ವನಾಥ್ ವರ್ಷನ್ ಅನ್ನೂ ಕೇಳಿಬಿಡಿ... ಪತ್ರಕರ್ತರೆಂದರೆ ವಿಶ್ವನಾಥ್ ಗೆ ವಿಶೇಷ ಪ್ರೀತಿ. ಪತ್ರಕರ್ತರಿಗೂ ಕೂಡ ಅನ್ನಿ. ದೆಹಲಿಗೆ ಬರುವ ವಿಶ್ವನಾಥ್ ಅವರಿಗೆ ಪತ್ರಕರ್ತರ ಜೊತೆ ಗಂಟೆಗಟ್ಟಲೇ ಪಟ್ಟಾಂಗ ಹೊಡೆದರೆ ಮಾತ್ರ ಕಿಕ್ಕು. ಹೀಗೆ ಮಾತನಾಡುತ್ತಿದ್ದಾಗ ಅವರ ಮಂತ್ರಿಗಿರಿ ವಿಷಯ ಮಧ್ಯ ಪ್ರವೇಶ ಮಾಡಿತು. 'ಯಾವಾಗ ಸಾರ್ ಕ್ಯಾಬಿನೆಟ್ ಎಕ್ಸಪೆನ್ಷನ್?' ಎಂದು ಕೇಳಿದ್ದೇ ತಡ, ವಿಶ್ವನಾಥ್ 'ಯಾರಾದ್ರೂ ಎಕ್ಸಪೆರಿ' ಆದಾಗ ಎಂದುಬಿಟ್ಟರು. ಯಡಿಯೂರಪ್ಪ ಅವರಂತೆ ವಿಶ್ವನಾಥ್ ಕೂಡ ಕ್ಲಿಯರ್ ಆಗಿದ್ದಂತಿತ್ತು ಅವರ ಮಾತು

Published by:HR Ramesh
First published: