ಬೆಂಗಳೂರಿನ 3 ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿ ಕೈ ಹಿಡಿಯಲು ಕಾರಣಗಳೇನು?

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಗೋಪಾಲಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೋಪಾಲಯ್ಯ ಪ್ರತಿಕ್ರಿಯಿಸದೆ ಇದದ್ದು ವೈಯಕ್ತಿಕ ವಾಗ್ದಾಳಿ ನಡೆಸದೆ ಇದ್ದದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
ಬೆಂಗಳೂರು(ಡಿ.09): ಈ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ವಿಜಯದ ನಗೆ ಬೀರಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​​ಗೆ ಭಾರೀ ಮುಖಭಂಗವಾಗಿದೆ.  ಬಿಜೆಪಿ 15 ಕ್ಷೇತ್ರಗಳಲ್ಲಿ 12 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮಹಾಲಕ್ಷ್ಮಿ ಲೇಔಟ್, ಯಶವಂತಪುರ ಮತ್ತು ಕೆ.ಆರ್​​. ಪುರಂನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ಈ ಗೆಲುವಿಗೆ ಅನೇಕ ಕಾರಣಗಳಿವೆ.

ಮಹಾಲಕ್ಷ್ಮಿ ಲೇಔಟ್​​​ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು

 • ಅಕ್ಕಪಕ್ಕ ಕ್ಷೇತ್ರಗಳ ಸಚಿವರಾದ ವಿ.ಸೋಮಣ್ಣ ಹಾಗೂ ಸುರೇಶ್ ಕುಮಾರ್​​​ಗೆ ಮಹಾಲಕ್ಷ್ಮಿ ಲೇಔಟ್​ ಕ್ಷೇತ್ರದ ಜವಾಬ್ದಾರಿ ನೀಡಿದ್ದು ಫಲಿಸಿತು. ವಿ.ಸೋಮಣ್ಣನವರ ಸ್ಟ್ರಾಟಜಿ ಪ್ರಮುಖ ಅಂಶವಾಯಿತು.

 • ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು, ಬಿಜೆಪಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದು ಮತದಾರರು ಬಿಜೆಪಿ ಕೈ ಹಿಡಿಯಲು ಕಾರಣವಾಯಿತು.

 • ಜೆಡಿಎಸ್ ಲಿಂಗಾಯತ ಅಭ್ಯರ್ಥಿ ನಿಲ್ಲಿಸಿದ್ದು, ಕಾಂಗ್ರೆಸ್ ಕೂಡ ಕುರುಬ ಅಭ್ಯರ್ಥಿ ಹಾಕಿದ್ದು, ಈ ವೇಳೆ ಒಕ್ಕಲಿಗರು ಒಟ್ಟಾಗಿದ್ದು ಬಿಜೆಪಿಗೆ ಲಾಭ ಆಯಿತು.

 • ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಗೋಪಾಲಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೋಪಾಲಯ್ಯ ಪ್ರತಿಕ್ರಿಯಿಸದೆ ಇದದ್ದು
  ವೈಯಕ್ತಿಕ ವಾಗ್ದಾಳಿ ನಡೆಸದೆ ಇದ್ದದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು.

 • ಬಂಡಾಯವೆದ್ದಿದ್ದ ಬಿಜೆಪಿ ನಾಯಕರಾದ ನೆ.ಲ ನರೇಂದ್ರಬಾಬು,ಹರೀಶ್ ಸಮಾಧಾನಿಸಿ ಜೊತೆ ಕರೆದುಕೊಂಡು ಹೋಗಿದ್ದು ಬಿಜೆಪಿ ಗೆಲ್ಲಲು ಸಹಕಾರಿಯಾಯಿತು.

 • ಆಪರೇಷನ್ ಕಮಲ ನಡೆಸಿ ಸ್ಥಳೀಯ ಪ್ರಭಾವಿ ಜೆಡಿಎಸ್ ನಾಯಕ ಆರ್.ವಿ ಹರೀಶ್ ಬೆಂಬಲ ಪಡೆದಿದ್ದು ಕೂಡ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಯಿತು.

 • ಕ್ಷೇತ್ರಕ್ಕೆ ಕಾಂಗ್ರೆಸ್​​ನ ಶಿವರಾಜ್, ಜೆಡಿಎಸ್ ನ ಗಿರೀಶ್ ನಾಶಿಯಂತಹ ದುರ್ಬಲ ಅಭ್ಯರ್ಥಿಗಳನ್ನು ಹಾಕಿದ್ದು ಬಿಜೆಪಿ ಗೆಲ್ಲಲು ಸುಲಭವಾಯಿತು.


ಇನ್ಮುಂದೆ ಕಾಂಗ್ರೆಸ್, ಜೆಡಿಎಸ್ ಟೀಕೆ ಬಿಟ್ಟು, ಪ್ರಾಮಾಣಿಕವಾಗಿ ಅಭಿವೃದ್ಧಿ ಕಡೆ ಗಮನ ಕೊಡಿ; ಸಿಎಂ ಬಿಎಸ್​ವೈ ಸಲಹೆ

 ಕೆ.ಆರ್ ಪುರಂನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು

 • ಸ್ಥಳೀಯವಾಗಿ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಸ್ಟ್ರಾಂಗ್ ಆಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು ಬಿಜೆಪಿ ಗೆಲುವು ಸಾಧಿಸಲು ಸಲೀಸಾಯಿತು.

 • ಬಂಡಾಯವೆದ್ದಿದ್ದ ಮಾಜಿ ಶಾಸಕ ನಂದೀಶ್ ರೆಡ್ಡಿ ಬೈರತಿ ಕೈ ಹಿಡಿದಿದ್ದು ಬಿಜೆಪಿ ಗೆಲುವಿಗೆ ಕಾರಣವಾಯಿತು.

 • ಗೆದ್ದರೆ ಭೈರತಿ ಬಸವರಾಜ್ ಸಚಿವರಾಗುತ್ತಾರೆ ಎನ್ನುವ ಉದ್ದೇಶದಿಂದ ಕ್ಷೇತ್ರದ ಮತದಾರರು ಭೈರತಿ ಕೈ ಹಿಡಿದರು.

 • ಕಾಂಗ್ರೆಸ್ ದುರ್ಬಲ ಅಭ್ಯರ್ಥಿ ನಾರಾಯಣಸ್ವಾಮಿ ಕಣಕ್ಕಿಳಿಸಿದ್ದು, ಜೆಡಿಎಸ್ ಅಭ್ಯರ್ಥಿ ದುರ್ಬಲ ಆಗಿದ್ದು ಬಿಜೆಪಿಗೆ ಗೆಲುವು ಸಾಧಿಸಲು ಸುಲಭವಾಯಿತು.

 • ಸಚಿವ ಆರ್ ಅಶೋಕ್ ಸ್ಟ್ರಾಟಜಿ ಕೂಡ ಇಲ್ಲಿ ಕೈ ಹಿಡಿಯಿತು.

 • ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಕುರುಬ ಮತಗಳು ಕೈ ಹಿಡಿದವು.

 • ಬಿಜೆಪಿ ನಾಯಕರು ಒಗ್ಗಟ್ಟಿನ ಕೆಲಸ ಮಾಡಿದ್ದು  ಭೈರತಿ ಗೆಲುವಿಗೆ ಕಾರಣವಾಯಿತು.

 • ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭೈರತಿ ಜೊತೆ ಬಿಜೆಪಿಗೆ ವಲಸೆ ಬಂದಿದ್ದು.

 • ಬಿಜೆಪಿಯ ಸಾಂಪ್ರದಾಯಿಕ ಮತಗಳು ಕೈ ಹಿಡಿದಿದ್ದು.


ಸೋಲಿನ ಹೊಣೆ ಹೊತ್ತು ಗುಂಡೂರಾವ್​​ ರಾಜೀನಾಮೆ; ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆಶಿ ಸೇರಿದಂತೆ ಹಲವರು ಲಾಬಿ

ಯಶವಂತಪುರದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಅಂಶಗಳು

 • ಯಶವಂತಪುರದಲ್ಲಿ ಎಸ್.ಟಿ ಸೋಮಶೇಖರ್ ಪ್ರಬಲ ಅಭ್ಯರ್ಥಿ ಆಗಿದ್ದು.

 • ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕೈ ಹಿಡಿದಿದ್ದು.

 • ಕಾಂಗ್ರೆಸ್ ಪ್ರಮುಖ ನಾಯಕರು ಎಸ್.ಟಿ ಸೋಮಶೇಖರ್ ಜೊತೆ ಬಿಜೆಪಿಗೆ ವಲಸೆ ಹೋಗಿದ್ದು.

 • ಕಾಂಗ್ರೆಸ್ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದು.

 • ಸೋಮಶೇಖರ್ ಗೆದ್ದರೆ ಮಂತ್ರಿ ಆಗುತ್ತಾರೆ. ಇದರಿಂದ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಗೊಳ್ಳುವ ಮತದಾರರ ಭರವಸೆ ಬಿಜೆಪಿ ಕೈಹಿಡಿಯಿತು.

 • ಬಂಡಾಯವೆದ್ದಿದ್ದ ಸಣ್ಣಪುಟ್ಟ ಬಿಜೆಪಿ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದು.

 • ಕೊನೆ ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ತಂತ್ರಗಾರಿಕೆ ಮಾಡುವಲ್ಲಿ ವಿಫಲ
  ಸೋಮಶೇಖರ್ ಕೈ ಹಿಡಿದ ಸರ್ವ ಜಾತಿಯ ಮತದಾರರು.


First published: