ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ಅತಿ ಹೆಚ್ಚು ಗಿಡಮರ ನೆಲಕ್ಕುರುಳಲು ಕಾರಣ ಭೂಮಿಯ ಕೆಳಮಟ್ಟದಲ್ಲಿ ಗಾಳಿ (Wind) ಬೀಸುತ್ತಿರೋದು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ವೇಗದ ಗಾಳಿ ಪರಿಣಾಮ ಗಿಡಮರ, ವಿದ್ಯುತ್ ಕಂಬಕ್ಕೆ ಹಾನಿ ಆಗ್ತಿದೆ. ಮಳೆಯ (Rainfall) ಜೊತೆ ಬಿರುಗಾಳಿ ಬೀಸಿರೋದರಿಂದ ಅನಾಹುತಗಳಾಗಿವೆ. ರಾಜಧಾನಿಯಲ್ಲಿಯೇ 50-70 ವರ್ಷದ ಹಳೆಯ 500ಕ್ಕೂ ಹೆಚ್ಚು ಗಿಡ ಮರ ನೆಲಕ್ಕುರುಳಿವೆ. ಈ ಹಿಂದಿನ ಮಳೆಗೆ ಮೇಲ್ಮಟ್ಟದಲ್ಲಿ ಬಿರುಗಾಳಿ ಇರುತ್ತಿತ್ತು. ಇದರ ಪರಿಣಾಮ ಮಳೆ ಹೆಚ್ಚು, ಬಿರುಗಾಳಿ ಕಡಿಮೆ ಇರುತ್ತಿತ್ತು. ಗಿಡಮರಗಳಿಗೆ ಹೆಚ್ಚಿನ ಅನಾಹುತ ಆಗುತ್ತಿರಲಿಲ್ಲ. ಈ ಬಾರಿ ಮಳೆ ಕಡಿಮೆ, ನೆಲಗಾಳಿ ಹೆಚ್ಚು ಇರುವುದರಿಂದ ಹೆಚ್ಚು ಹಾನಿಯಾಗ್ತಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ 100ಕ್ಕೂ ಹೆಚ್ಚು ಗಿಡ-ಮರಗಳಿಗೆ ಹಾನಿಯಾಗಿದೆ. ನಗರದ ಪ್ರಮುಖ, ಒಳ ರಸ್ತೆಯಲ್ಲಿ ಮುನ್ನೂರಕ್ಕೂ ಹೆಚ್ಚು ಗಿಡಮರ ಧರಗೆ ಉರುಳಿವೆ.
ಯಾಕೆ ಈ ಮಳೆ?
ಅರಬ್ಬಿ ಸಮುದ್ರ ಮೇಲ್ಮಟ್ಟದ ಮೇಲೆ ಸುಮಾರು 900 ಮೀಟರ್ನಲ್ಲಿ ಚಂಡಮಾರುತ ಸುಳಿಗಾಳಿ ಬೀಸುತ್ತಿರುವ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದೆ. ಈ ಸುಳುಗಾಳಿ ತಮಿಳುನಾಡು, ಆಂಧ್ರ, ಕರ್ನಾಟಕದ ಮೂಲಕದ ಹಾದು ಹೋಗುತ್ತದೆ.
ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಮೈಸೂರ, ಬೆಂಗಳೂರು ಭಾರೀ ಮಳೆಯಾಗುವ ನಿರೀಕ್ಷೆಗಳಿದ್ದು, ನೆಲಗಾಳಿ 40-50 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಜ್ಞ ವಿಜ್ಞಾನಿ ಎ ಶ್ರೀಧರ್ ಹೇಳುತ್ತಾರೆ.
ಇದನ್ನೂ ಓದಿ: Karnataka Rains: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಗುಡುಗು-ಸಿಡಿಲು ಸಹಿತ ಅಬ್ಬರದ ಮಳೆ
ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!
ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಆರ್ಭಟ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹವಮಾನ ಇಲಾಖೆ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ