HOME » NEWS » State » WHY AKHANDA SRINIVASA MURTHY SHIFTED HIS HOUSE BEFORE THE DJ HALLI ROIT GNR

Bangalore violence: ಗಲಭೆ ಜಾಡು ಹಿಡಿದು ಮೊದಲೇ ಮನೆ ಖಾಲಿ ಮಾಡಿದ್ರಾ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ?

ಗಲಭೆಯ ಜಾಡು ಹಿಡಿದು ಗಲಾಟೆ ಆಗೋದಕ್ಕೂ ಮೊದಲೇ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಇಡೀ ಕುಟುಂಬದೊಂದಿಗೆ ಪುಲಿಕೇಶಿನಗರದ ಮನೆ ಖಾಲಿ ಮಾಡಿದ್ದರು. ಇಲ್ಲದೇ ಹೋದಲ್ಲಿ ಇಡೀ ಕುಟುಂಬ ಮನೆಯಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಬೇಕಿತ್ತು. ಆದರೆ, ಮೊದಲೇ ಪ್ಲಾನ್​ ಮಾಡಿಕೊಂಡು ಶಾಸಕರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.

news18-kannada
Updated:August 12, 2020, 10:54 AM IST
Bangalore violence: ಗಲಭೆ ಜಾಡು ಹಿಡಿದು ಮೊದಲೇ ಮನೆ ಖಾಲಿ ಮಾಡಿದ್ರಾ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ?
ಶಾಸಕ ಅಖಂಡ ಶ್ರೀನಿವಾಸ್‌
  • Share this:
ಬೆಂಗಳೂರು(ಆ.12): ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರಳಿಯ ನವೀನ್ ಎಂಬುವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಫೇಸ್​​ಬುಕ್​​ನಲ್ಲಿ ಪೋಸ್ಟ್​ ಹಾಕಿದ್ದಾರೆ ಎಂದು ಆರೋಪಿಸಿ ಕಿಡಿಗೇಡಿಗಳ ಗುಂಪೊಂದು ನಿನ್ನೆ ದಾಂಧಲೆ ನಡೆಸಿರುವುದು ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.

ಮಂಗಳವಾರ ರಾತ್ರಿ 8 ಗಂಟೆ ವೇಳೆ ಕಾವಲ್ ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಕಿಡಿಗೇಡಿಗಳು ಗಲಾಟೆ ಶುರು ಮಾಡಿದ್ದರು. ಈ ವೇಳೆ ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಿದ್ದರು. ಈ ವಿಚಾರ ಸದ್ಯ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಹೀಗಾಗಿ ಪುಲಕೇಶಿ ನಗರ, ಕಾವಲ್ ಬೈರಸಂದ್ರ, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕರ್ಫ್ಯೂ ಜಾರಿಗೊಳಿಸಿದ್ದಾರೆ.

ಇನ್ನು, ಮನೆ ಮುಂದೆ ಗಲಭೆ ನಡೆದಾಗ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಸ್ಥಳದಲ್ಲಿ ಇರಲಿಲ್ಲ. ಇಡೀ ಕುಟುಂಬದ ಜತೆಗೆ ಗಲಾಟೆ ನಡೆಯುವ ಒಂದು ಗಂಟೆ ಮುನ್ನವೇ ಮುನ್ನೆಚ್ಚರಿಕೆಯಿಂದ ಬೇರೆ ಕಡೆ ಶಿಫ್ಟ್​ ಆಗಿದ್ದರು. ಆದರೀಗ, ಶಾಸಕರಿಗೆ ಮೊದಲೇ ಗಲಾಟೆ ಬಗ್ಗೆ ಗೊತ್ತಿತ್ತೇ ಎಂಬ ಅನುಮಾನ ಶುರುವಾಗಿದೆ.

ಗಲಭೆಯ ಜಾಡು ಹಿಡಿದು ಗಲಾಟೆ ಆಗೋದಕ್ಕೂ ಮೊದಲೇ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಇಡೀ ಕುಟುಂಬದೊಂದಿಗೆ ಪುಲಿಕೇಶಿನಗರದ ಮನೆ ಖಾಲಿ ಮಾಡಿದ್ದರು. ಇಲ್ಲದೇ ಹೋದಲ್ಲಿ ಇಡೀ ಕುಟುಂಬ ಮನೆಯಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಬೇಕಿತ್ತು. ಆದರೆ, ಮೊದಲೇ ಪ್ಲಾನ್​ ಮಾಡಿಕೊಂಡು ಶಾಸಕರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Bangalore violence: ಡಿ.ಜೆ ಹಳ್ಳಿ ಗಲಭೆ ಪ್ರಕರಣ: ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ‌ - ಸಿಎಂ ಯಡಿಯೂರಪ್ಪ

ಕಿಡಿಗೇಡಿಗಳು ಶಾಸಕರ ಮನೆ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಪೊಲೀಸರು ಅಕ್ಕಪಕ್ಕದ ಎಲ್ಲಾ ರಸ್ತೆಗಳನ್ನು ಮುಚ್ಚಿದ್ದಾರೆ. ಬೆಂಕಿಗೆ ಶಾಸಕರ ಇಡೀ ಮನೆ ಸುಟ್ಟು ಭಸ್ಮವಾಗಿದೆ.
Published by: Ganesh Nachikethu
First published: August 12, 2020, 10:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories