• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Viral Post: ಯಾರ ಹೆಂಡ್ತಿ ಪತಿವ್ರತೆ ಅವರೆಲ್ಲಾ ಬಿಜೆಪಿಗೆ ವೋಟ್ ಹಾಕಿ; ಬಜರಂಗದಳ ಕಾರ್ಯಕರ್ತನ ವಾಟ್ಸಪ್ ಸ್ಟೇಟಸ್

Viral Post: ಯಾರ ಹೆಂಡ್ತಿ ಪತಿವ್ರತೆ ಅವರೆಲ್ಲಾ ಬಿಜೆಪಿಗೆ ವೋಟ್ ಹಾಕಿ; ಬಜರಂಗದಳ ಕಾರ್ಯಕರ್ತನ ವಾಟ್ಸಪ್ ಸ್ಟೇಟಸ್

ಕಾರ್ತಿಕ್, ಬಜರಂಗದಳ ಕಾರ್ಯಕರ್ತ

ಕಾರ್ತಿಕ್, ಬಜರಂಗದಳ ಕಾರ್ಯಕರ್ತ

ವಿವಾದಾತ್ಮಕ ಸ್ಟೇಟಸ್ ಹಾಕಿಕೊಂಡಿರುವ ಕಾರ್ತಿಕ್ ಬಂಧನಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Chikmagalur, India
  • Share this:

ಚಿಕ್ಕಮಗಳೂರು: ಯಾರ ಹೆಂಡತಿ ಪತಿವ್ರತೆ ಅವರೆಲ್ಲಾ ಬಿಜೆಪಿಗೆ (BJP) ಮತ (Vote) ಹಾಕಿ ಎಂಬ ಬಜರಂಗದಳ ಕಾರ್ಯಕರ್ತನ (Bajrang Dal) ವಾಟ್ಸಪ್​ ಸ್ಟೇಟಸ್ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಂಗೇನಹಳ್ಳಿ ಗ್ರಾಮದ ಬಜರಂಗದಳ ಕಾರ್ಯಕರ್ತ (Bajrang Dal Activist) ಕಾರ್ತಿಕ್ ಎಂಬಾತ ವಿವಾದಾತ್ಮಕ ಸ್ಟೇಟಸ್ ಹಾಕಿದ್ದಾನೆ. ಈ ಸ್ಟೇಟಸ್ ಖಂಡಿಸಿ ಲಕ್ಕವಳ್ಳಿ ಪೊಲೀಸ್ ಠಾಣೆ  (Lakkavalli Police Station) ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ವಿವಾದಾತ್ಮಕ ಸ್ಟೇಟಸ್ ಹಾಕಿಕೊಂಡಿರುವ ಕಾರ್ತಿಕ್ ಬಂಧನಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.



ಪತಿವ್ರತೆ ಸ್ಟೇಟಸ್ ಹಾಕಿರೋದಕ್ಕೆ ಕಾಂಗ್ರೆಸ್ ನಾಯಕರು, ಮುಸ್ಲಿಂ ಸಮುದಾಯದರು ಖಂಡಿಸಿದ್ದಾರೆ. ಪೊಲೀಸ್ ಠಾಣೆ ಮುಂದೆ ಸೇರಿದ ಜನರು ಕಾರ್ತಿಕ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.


ರಾಜ್ಯದಲ್ಲಿ ಶಾಂತಿಯುತ ಮತದಾನ 


ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka assembly elections) ಮುಗಿದಿದೆ. ರಾಜ್ಯದ 2615 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ (ballot box) ಭದ್ರವಾಗಿದೆ. ಚುನಾವಣೋತ್ತರ ಸಮೀಕ್ಷಾ ಫಲಿತಾಂಶವೂ ಬಂದಿದೆ.




ಕೆಲವು ಕಡೆ ಗಲಾಟೆ, ಕಾರ್ಯಕರ್ತರ ನಡುವೆ ಘರ್ಷಣೆ, ಕೈಕೊಟ್ಟ ಮತಯಂತ್ರ, ಕೆಲವೆಡೆ ಗೊಂದಲ ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಚುನಾವಣೆ ಮುಕ್ತಾಯವಾಗಿದೆ.


ಇದನ್ನೂ ಓದಿ: Next CM: ಸಿದ್ದರಾಮಯ್ಯ ಸಿಎಂ ಆಗ್ತಾರೋ? ಡಿಕೆಶಿ ಆಗ್ತಾರೋ? ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್‌ನಲ್ಲಿ ರೇಸ್!


ಬಹುತೇಕ ಸಮೀಕ್ಷೆಗಳು ಕರ್ನಾಟದಲ್ಲಿ (Karnataka Election) ಅತಂತ್ರ ಸ್ಥಿತಿ ನಿರ್ಮಾಣ ಆಗಲಿದ್ದು, ಕಾಂಗ್ರೆಸ್ (Congress) ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ತಿಳಿಸಿವೆ.

top videos


    ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು, ಕಾಂಗ್ರೆಸ್​ ಪಕ್ಷಕ್ಕೆ ಬಹುಮತ ಬರುವುದು ಖಚಿತವಾಗಿದೆ. ಅದನ್ನೇ ಬಹುತೇಕ ಎಲ್ಲಾ ಚುನಾವಣೋತ್ತರ ಸರ್ವೆಗಳೂ (Exit Poll) ಹೇಳಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    First published: