ಕರ್ನಾಟಕದಲ್ಲಿ ಹತ್ತು ವರ್ಷ ಯಾರೇ ವಾಸವಿದ್ದರೂ ಅವರೆಲ್ಲರೂ ಕನ್ನಡಿಗರು: ಡಿಸಿಎಂ ಅಶ್ವತ್ಥನಾರಾಯಣ

ಮರಾಠ ಅಭಿವೃದ್ಧಿ ನಿಗಮ ಮಾಡುವುದರಿಂದ ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ. ಬೇರೆ ರಾಜ್ಯಗಳಲ್ಲೂ ಸಾಮಾಜಿಕ ಸಮಾನತೆ ಸಾಧಿಸಲು ಅಲ್ಲಿನ ಸರಕಾರಗಳು ಇಂಥ ಕ್ರಮಗಳನ್ನು ಕೈಗೊಂಡರೆ ಉತ್ತಮ

ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ

ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ

  • Share this:
ಬೆಂಗಳೂರು(ಡಿಸೆಂಬರ್​. 04): ಮರಾಠ ಅಭಿವೃದ್ಧಿ ನಿಗಮವನ್ನು ರಾಜ್ಯದಲ್ಲಿರುವ ಮರಾಠ ಪ್ರಜೆಗಳ ಒಳಿತಿಗಾಗಿ ರಚನೆ ಮಾಡಲಾಗಿದೆಯೇ ಹೊರತು ಮರಾಠಿ ಭಾಷಿಕರಿಗಲ್ಲ. ಭಾಷೆಯನ್ನು ನಿಗಮಕ್ಕೆ ತಳುಕು ಹಾಕುವುದು ಸರಿಯಲ್ಲ. ಬಂದ್‌ ಮಾಡುವುದರಲ್ಲಿ ಅರ್ಥವೂ ಇಲ್ಲ. ಕರ್ನಾಟಕದಲ್ಲಿ ಯಾರೇ ಅಗಲಿ ಹತ್ತು ವರ್ಷ ವಾಸವಿದ್ದರೆ ಅವರೆಲ್ಲರೂ ಕಾನೂನು ಪ್ರಕಾರ ಕನ್ನಡಿಗರು ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ  ಮಾತನಾಡಿದ ಅವರು, ಮರಾಠ ನಿಗಮ ಮಾಡಿರುವುದು ರಾಜ್ಯದಲ್ಲಿರುವ ಮರಾಠ ಸಮುದಾಯದ ಜನರ ಏಳಿಗೆ ಮತ್ತು ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಉದ್ದೇಶದಿಂದ. ಶತಮಾನಗಳಿಂದ ಮರಾಠಿಗರು ರಾಜ್ಯದಲ್ಲಿ ನೆಲೆಸಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಈಗ ಮಾಡಲಾಗಿದೆ ಎಂದರು. ರಾಜ್ಯದಲ್ಲಿರುವ ತಮಿಳರು, ತೆಲುಗರಿಗೂ ಅಭಿವೃದ್ಧಿ ನಿಗಮ ಮಾಡುವಿರಾ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೂ ನಿಗಮ ಮಾಡಿದರೆ ತಪ್ಪೇನಿಲ್ಲವಲ್ಲ. ಹತ್ತು ವರ್ಷಗಳಿಂದ ರಾಜ್ಯದಲ್ಲಿ ಯಾರೇ ವಾಸ ಮಾಡುತ್ತಿದ್ದರೂ ಅವರೆಲ್ಲರೂ ಕನ್ನಡಿಗರು. ಅವರನ್ನು ಎರಡನೇ ದರ್ಜೆ ಪ್ರಜೆಗಳು ಎಂದು ಕರೆಯುವುದಾಗಲಿ ಅಥವಾ ಪರಿಗಣಿಸುವುದಾಗಲಿ ಆಗುವುದಿಲ್ಲ ಎಂದರು.

ವಿಶ್ವ ಮಾನವ ತತ್ವ, ವಸುಧೈವಕುಟುಂಬಕಂ ಎಂಬ ಮಾತುಗಳನ್ನು ಬಿಜೆಪಿ ಸರಕಾರ ಸಾಕಾರ ಮಾಡುತ್ತಿದೆ. ಅದೆಲ್ಲವನ್ನು ಬರೀ ಭಾಷಣದಲ್ಲಿ ಹೇಳಿದರೆ ಸಾಲದು, ಕೃತಿಯಲ್ಲೂ ತೋರಬೇಕು ಎನ್ನುವ ಕಾರಣಕ್ಕೆ ಈ ಕ್ರಮ ಅನುಸರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಪ್ರತಿಪಾದಿಸಿದರು.

ಮರಾಠ ಅಭಿವೃದ್ಧಿ ನಿಗಮ ಮಾಡುವುದರಿಂದ ಕನ್ನಡಿಗರಿಗೆ ಯಾವುದೇ ರೀತಿಯ ಅನ್ಯಾಯ ಆಗುವುದಿಲ್ಲ. ಬೇರೆ ರಾಜ್ಯಗಳಲ್ಲೂ ಸಾಮಾಜಿಕ ಸಮಾನತೆ ಸಾಧಿಸಲು ಅಲ್ಲಿನ ಸರಕಾರಗಳು ಇಂಥ ಕ್ರಮಗಳನ್ನು ಕೈಗೊಂಡರೆ ಉತ್ತಮ. ನಾವು ಎಲ್ಲರಿಗೂ ಮಾದರಿಯಾಗುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಗೋಕಾಕ್ ಜನ ಹಿಂದೆ ಸರಿದರೆ ಚಿಕ್ಕೋಡಿ ಜಿಲ್ಲೆ ಮಾಡಬಹುದು; ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಎಂಇಎಸ್ʼ ನಂಥ ಸಂಘಟನೆಗಳು ಕೇಳುವುದನ್ನು ತಡೆಯಲು, ಅವರಿಗೆ ಅಂಥ ಪ್ರಯತ್ನ ನಡೆಸಲು ಅವಕಾಶವನ್ನೇ ನೀಡಬಾರದು ಎಂಬ ಸದುದ್ದೇಶದಿಂದ ಸರಕಾರ ಈ ಕೆಲಸ ಮಾಡುತ್ತಿದೆ ಎಂದರು.

ಬೆಳಗಾವಿ ನಮ್ಮದು. ಒಂದು ಇಂಚು ಜಾಗವನ್ನು ಬಿಟ್ಟು ಕೊಡುವುದಿಲ್ಲ. ರಾಜ್ಯದಲ್ಲಿರುವ ಮರಾಠರು ನಮ್ಮವರು ಎನ್ನುವುದಕ್ಕೆ ನಾವು ಇದನ್ನೆಲ್ಲ ಮಾಡುತ್ತಿದ್ದೇವೆ ಎಂದು ಡಿಸಿಎಂ ಸ್ಷಷ್ಟ ಮಾತುಗಳಲ್ಲಿ ಹೇಳಿದರು.
Published by:G Hareeshkumar
First published: