ಉಪಚುನಾವಣೆಯಲ್ಲಿ ಗೆದ್ದವರು ಯಾರು? ಎಷ್ಟು ಮತಗಳ ಅಂತರದಿಂದ? ಇಲ್ಲಿದೆ ಪೂರ್ಣ ವಿವರ

Karnataka By Elections Results | ಕನಿಷ್ಠ ಎರಡು ಕ್ಷೇತ್ರದಲ್ಲಾದರೂ ಗೆಲುವಿನ ಕನಸು ಕಂಡಿದ್ದ ಜೆಡಿಎಸ್ ಶೂನ್ಯ ಸಾಧನೆ ಮಾಡಿದ್ದು, ಭಾರೀ ಮುಖಭಂಗ ಅನುಭವಿಸಿದೆ. ಇನ್ನು ಬಿಜೆಪಿಯಿಂದ ಬಂಡಾಯ ಎದ್ದು, ಪಕ್ಷೇತರವಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಗೆಲುವಿನ ಮಾಲೆಗೆ ಕೊರಳೊಡ್ಡಿದ್ದಾರೆ.

HR Ramesh | news18-kannada
Updated:December 9, 2019, 3:25 PM IST
ಉಪಚುನಾವಣೆಯಲ್ಲಿ ಗೆದ್ದವರು ಯಾರು? ಎಷ್ಟು ಮತಗಳ ಅಂತರದಿಂದ? ಇಲ್ಲಿದೆ ಪೂರ್ಣ ವಿವರ
ಮೂರು ಪಕ್ಷಗಳ ಚಿಹ್ನೆ.
 • Share this:
ಬೆಂಗಳೂರು: 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರುವ ಮೂಲಕ ಸರ್ಕಾರದ ಅಡಿಪಾಯವನ್ನು ಭದ್ರಕೊಂಡಿದೆ. ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರವೇ ಗೆಲುವು ಕಂಡಿದೆ. ಇನ್ನು ಕನಿಷ್ಠ ಎರಡು ಕ್ಷೇತ್ರದಲ್ಲಾದರೂ ಗೆಲುವಿನ ಕನಸು ಕಂಡಿದ್ದ ಜೆಡಿಎಸ್ ಶೂನ್ಯ ಸಾಧನೆ ಮಾಡಿದ್ದು, ಭಾರೀ ಮುಖಭಂಗ ಅನುಭವಿಸಿದೆ. ಇನ್ನು ಬಿಜೆಪಿಯಿಂದ ಬಂಡಾಯ ಎದ್ದು, ಪಕ್ಷೇತರವಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಗೆಲುವಿನ ಮಾಲೆಗೆ ಕೊರಳೊಡ್ಡಿದ್ದಾರೆ.

ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗಳು, ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂಬ ವಿವರ ಇಲ್ಲಿದೆ.

ಕ್ಷೇತ್ರ                 ಗೆದ್ದವರು (ಪಕ್ಷ)                           ಸೋತವರು (ಪಕ್ಷ)                             ಅಂತರ

 1. ಅಥಣಿ         ಮಹೇಶ್ ಕುಮಟಳ್ಳಿ (ಬಿಜೆಪಿ)        ಗಜಾನನ ಮಂಗಸೂಳಿ (ಕಾಂಗ್ರೆಸ್)   23,646

 2. ಕಾಗವಾಡ     ಶ್ರೀಮಂತ ಪಾಟೀಲ್ (ಬಿಜೆಪಿ)       ಭರಮಗೌಡ ಕಾಗೆ  (ಕಾಂಗ್ರೆಸ್)         18,557

 3. ಗೋಕಾಕ್      ರಮೇಶ್ ಜಾರಕಿಹೊಳಿ (ಬಿಜೆಪಿ)  ಲಖನ್ ಜಾರಕಿಹೊಳಿ (ಕಾಂಗ್ರೆಸ್)  25,891
 4. ಯಲ್ಲಾಪುರ    ಶಿವರಾಮ್ ಹೆಬ್ಬಾರ್  (ಬಿಜೆಪಿ)       ಭಿಮಣ್ಣ ನಾಯ್ಕ  (ಕಾಂಗ್ರೆಸ್)       31,408

 5. ಹಿರೇಕೆರೂರು    ಬಿ.ಸಿ.ಪಾಟೀಲ್ (ಬಿಜೆಪಿ)                ಬನ್ನಿಕೋಡ (ಕಾಂಗ್ರೆಸ್)               24,398

 6. ರಾಣೇಬೆನ್ನೂರು  ಅರುಣ್​ಕುಮಾರ್ (ಬಿಜೆಪಿ)       ಕೋಳಿವಾಡ  (ಕಾಂಗ್ರೆಸ್)             23,222

 7. ವಿಜಯನಗರ           ಆನಂದಸಿಂಗ್​  (ಬಿಜೆಪಿ)         ಘೋರ್ಪಡೆ (ಕಾಂಗ್ರೆಸ್)                30,125

 8. ಚಿಕ್ಕಬಳ್ಳಾಪುರ       ಕೆ.ಸುಧಾಕರ್ (ಬಿಜೆಪಿ)         ಎಂ ಅಂಜನಪ್ಪ (ಕಾಂಗ್ರೆಸ್)           34,801

 9. ಕೆ.ಆರ್.ಪುರಂ      ಬೈರತಿ ಬಸವರಾಜ್ (ಬಿಜೆಪಿ) ನಾರಾಯಣಸ್ವಾಮಿ  (ಕಾಂಗ್ರೆಸ್)   44,366

 10. ಯಶವಂತಪುರ    ಎಸ್.ಟಿ.ಸೋಮಶೇಖರ್ (ಬಿಜೆಪಿ)  ಜವರಾಯಿಗೌಡ (ಜೆಡಿಎಸ್) 27,699

 11. ಮಹಾಲಕ್ಷ್ಮೀ ಲೇಔಟ್ ಕೆ.ಗೋಪಾಲಯ್ಯ (ಬಿಜೆಪಿ) ಎಂ ಶಿವರಾಜು  (ಕಾಂಗ್ರೆಸ್)   54,386

 12. ಶಿವಾಜಿನಗರ                      ರಿಜ್ವಾನ್ ಅರ್ಷದ್  (ಕಾಂಗ್ರೆಸ್)  ಎಂ ಸರವಣ  (ಬಿಜೆಪಿ) 14,600

 13. ಹೊಸಕೋಟೆ           ಶರತ್ ಬಚ್ಚೇಗೌಡ (ಪಕ್ಷೇತರ), ಎಂಟಿಬಿ ನಾಗರಾಜ್ (ಬಿಜೆಪಿ),  11,870

 14. ಕೆ.ಆರ್.ಪೇಟೆ           ನಾರಾಯಣಗೌಡ  (ಬಿಜೆಪಿ),  ಬಿ.ಎಲ್.ದೇವರಾಜ  (ಜೆಡಿಎಸ್)  9,731

 15. ಹುಣಸೂರು   ಎಚ್.ಪಿ.ಮಂಜುನಾಥ್ (ಕಾಂಗ್ರೆಸ್) , ಎಚ್.ವಿಶ್ವನಾಥ್ (ಬಿಜೆಪಿ),   39,727


ಇದನ್ನು ಓದಿ: ಸೋಲಿನ ಹೊಣೆ ಹೊತ್ತು ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್​ ಗುಂಡೂರಾವ್​ ರಾಜೀನಾಮೆ

 
First published: December 9, 2019, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading