• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Shiva Rajkumar: ಶಿವಣ್ಣ ಪ್ರಚಾರ ಮಾಡಿದ ಕಡೆಯೆಲ್ಲಾ ಜಯಭೇರಿ! ಬಾಮೈದನ ಪರ ನಿಂತು ಗೆಲ್ಲಿಸೇ ಬಿಟ್ರೂ ಹ್ಯಾಟ್ರಿಕ್ ಹೀರೋ!

Shiva Rajkumar: ಶಿವಣ್ಣ ಪ್ರಚಾರ ಮಾಡಿದ ಕಡೆಯೆಲ್ಲಾ ಜಯಭೇರಿ! ಬಾಮೈದನ ಪರ ನಿಂತು ಗೆಲ್ಲಿಸೇ ಬಿಟ್ರೂ ಹ್ಯಾಟ್ರಿಕ್ ಹೀರೋ!

ಮಧು ಬಂಗಾರಪ್ಪ, ಶಿವಣ್ಣ, ಸಿದ್ದರಾಮಯ್ಯ

ಮಧು ಬಂಗಾರಪ್ಪ, ಶಿವಣ್ಣ, ಸಿದ್ದರಾಮಯ್ಯ

ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಿದ ಬಹುತೇಕ ಅಭ್ಯರ್ಥಿಗಳು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. 

 • News18 Kannada
 • 4-MIN READ
 • Last Updated :
 • Karnataka, India
 • Share this:

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Election Results 2023) ಹೊರಬಿದ್ದಿದೆ. ಕಾಂಗ್ರೆಸ್ (Congress) ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ. ಈ ಬಾರಿ ಎಲೆಕ್ಷನ್​​ನಲ್ಲಿ ಸ್ಟಾರ್ ಪ್ರಚಾರಕರು ಅಬ್ಬರದ ಪ್ರಚಾರ ಮಾಡಿದ್ರು. ಚಲನಚಿತ್ರದ ಅನೇಕ ನಟ-ನಟಿಯರು ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ರು. ಬಿಜೆಪಿ ಪರ ಕಿಚ್ಚ ಸುದೀಪ್ ನಿಂತಿದ್ರು. ಕಾಂಗ್ರೆಸ್ (Congress) ಪರ ಶಿವರಾಜ್ ​ಕುಮಾರ್ (Shiva Rajkumar)​ ಅಖಾಡಕ್ಕಿಳಿದು ಪ್ರಚಾರ ಮಾಡಿದ್ರು.  ಶಿವಣ್ಣ ಪ್ರಚಾರ ಮಾಡಿದ ಅಭ್ಯರ್ಥಿಗಳು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. 


ಮಧು ಬಂಗಾರಪ್ಪ ಭರ್ಜರಿ ಗೆಲುವು


ಸೊರಬ ಕಾಂಗ್ರೆಸ್​ ಅಭ್ಯರ್ಥಿ ಹಾಗೂ ಬಾಮೈದುನನ ಪರ ನಟ ಶಿವರಾಜ್ ಕುಮಾರ್​ ಅಬ್ಬರದ ಪ್ರಚಾರ ನಡೆಸಿದ್ರು. ಮಧು ಬಂಗಾರಪ್ಪ ಅವರು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅಣ್ಣ, ತಮ್ಮ ಪರಸ್ಪರ ಹೋರಾಟಕ್ಕೆ ನಿಂತಿದ್ದರು. ಸೊರಬ ಕ್ಷೇತ್ರದಲ್ಲಿ ನಡೆಯುತ್ತಿರುವ ಹೋರಾಟ ಸಹೋದರರ ನಡುವೆಯ ಜಟಾಪಟಿಯಾಗಿದೆ. ಮೊದಲ ಸುತ್ತಿನ ಮತ ಏಣಿಕೆಯಿಂದಲೂ ಮುನ್ನಡೆ ಕಾದುಕೊಂಡಿದ್ದ ಮಧು ಬಂಗಾರಪ್ಪ ಗೆಲುವಿನ ನಗೆ ಬೀರಿದ್ದಾರೆ. 


ಮಧು ಬಂಗಾರಪ್ಪ, ಶಿವಣ್ಣ, ಸಿದ್ದರಾಮಯ್ಯ


ಬಾಮೈದುನನ ಪರ ಶಿವಣ್ಣ ಪ್ರಚಾರ


ಮಧು ಬಂಗಾರಪ್ಪ ಬಳಿಕ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಸೇರ್ಪಡೆಗೊಂಡರು. ಮಧು ಬಂಗಾರಪ್ಪ ಪರ  ಅಬ್ಬರದ ಪ್ರಚಾರ ಮಾಡಿದ್ರು. ಶಿವಣ್ಣ ಹೋದಲೆಲ್ಲಾ ಭಾರೀ ಜನ ಸಾಗರವೇ ಸೇರಿತ್ತು. ಅಭಿಮಾನಿಗಳು ಶಿವಣ್ಣ ಪರ ನಿಂತರು ಅಭ್ಯರ್ಥಿಗಳಿಗೂ ಭರ್ಜರಿ ಜಯ ಸಿಕ್ಕಿತು.


ಸಿದ್ದು ಪರ  ಪ್ರಚಾರ ಮಾಡಿದ್ದ ಸಿದ್ದರಾಮಯ್ಯ


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ರಮ್ಯಾ, ನಟ ದುನಿಯಾ ವಿಜಯ್ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಭರ್ಜರಿ ಪ್ರಚಾರ ಮಾಡಿದ್ರು. ಟಗರು ಸಿದ್ದು ಪರ ಟಗರು ಶಿವಣ್ಣ ಅಖಾಡದಲ್ಲಿ ಅಬ್ಬರಿಸಿದ್ರು. ಇದು ಕೂಡ ಸಿದ್ದರಾಮಯ್ಯ ಗೆಲುವಿಗೆ ಸಹಾಯವಾಗಿದೆ.


ಬೇಳೂರು ಗೋಪಾಲಕೃಷ್ಣ ಜಯಭೇರಿ


ಸಾಗರ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಪರವಾಗಿಯೂ ಶಿವರಾಜ್​ ಕುಮಾರ್​ ಭರ್ಜರಿ ಪ್ರಚಾರ ನಡೆಸಿದ್ರು. ಬೇಳೂರು ಗೋಪಾಲಕೃಷ್ಣ ಕೂಡ ಭರ್ಜರಿ ಜಯಭೇರಿ ಸಾಧಿಸಿದ್ದಾರೆ. ಸ್ಟಾರ್​ ಪ್ರಚಾರಕರಾಗಿ ಅಖಾಡಕ್ಕಿಳಿದ ಶಿವಣ್ಣ ಅನೇಕರ ಪರ ಮತಬೇಟೆಯಾಡಿದ್ರು.


ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಸೋಲು


ಮಾಜಿ ಸಿಎಂ ಜಗದೀಶ್ ಶೆಟ್ಟರ್  ಅವರು ಭಾರೀ ಮತಗಳ ಅಂತರದಿಂದ ಸೋತಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ 35 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಚುನವಣಾ ಪ್ರಚಾರದಲ್ಲಿ ಜಗದೀಶ್ ಶೆಟ್ಟರ್ ಸೋಲ್ತಾರೆ. ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ  ಭವಿಷ್ಯ ನುಡಿದಿದ್ದರು. ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದರು. ಮಾಜಿ ಸಿಎಂ ಶೆಟ್ಟರ್ ಪರವಾಗಿ ಶಿವಣ್ಣ ಭರ್ಜರಿ ಪ್ರಚಾರ ನಡೆಸಿದ್ರು.
ಇದನ್ನೂ ಓದಿ: Assembly Election: ಕಿಚ್ಚ ಸುದೀಪ್ ಪ್ರಚಾರ ಮಾಡಿದ ಅಭ್ಯರ್ಥಿಗಳು ಗೆದ್ದರಾ? ಸೋತರಾ?


ಕಾಂಗ್ರೆಸ್​ನಲ್ಲಿ ಮನೆ ಮಾಡಿದ ಸಂಭ್ರಮ


ಕಾಂಗ್ರೆಸ್ ಸರ್ಕಾರ ರಚಿಸಲು ಬೇಕಾದ 113 ಮ್ಯಾಜಿಕ್ ನಂಬರ್ ನ್ನು ದಾಟಿ ಸರಳವಾಗಿ ಬಹುಮತ ಸಿಗುವ ಸೂಚನೆ ಕಂಡುಬರುತ್ತಿದೆ. ಅದರಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಮತ ಎಣಿಕೆ ಮುಂದುವರಿಯುತ್ತಿರುವಂತೆ ಸಿದ್ದರಾಮಯ್ಯನವರು ಇಂದು ಬೆಳಗ್ಗೆ ಮುಖದಲ್ಲಿ ಸಂಭ್ರಮ, ಸಂತೋಷ ತುಂಬಿಕೊಂಡು ಗೆಲುವಿನ ನಗೆ ಬೀರುತ್ತಾ ಕೈ ಎತ್ತಿ ಗೆಲುವಿನ ಸಂಕೇತವನ್ನು ಸೂಚಿಸಿದರು.

First published: