• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಲು ಕಾರಣ ಯಾರು?

Jagadish Shettar: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಲು ಕಾರಣ ಯಾರು?

ಶೆಟ್ಟರ್‌ಗೆ ಟಿಕೆಟ್ ತಪ್ಪಿಸಿದ್ದು ಯಾರು?

ಶೆಟ್ಟರ್‌ಗೆ ಟಿಕೆಟ್ ತಪ್ಪಿಸಿದ್ದು ಯಾರು?

ಟಿಕೆಟ್ ಸಿಗದವರು ಜೆಡಿಎಸ್, ಕಾಂಗ್ರೆಸ್ ಪಕ್ಷಗಳತ್ತ ಮುಖ ಮಾಡಿ ಟಿಕೆಟ್ ಪಡೆದುಕೊಂಡಿದ್ದಾರೆ. ಇತ್ತ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸಹ ಕೊತ ಕೊತ ಕುದಿತಾ ಇದ್ರು. ಕಾರಣ ಎರಡೂ ಪಟ್ಟಿ ಔಟ್ ಆದ್ರೂ ಶೆಟ್ಟರ್ ಹೆಸರು ಮಾತ್ರ ಕಂಡಿರಲಿಲ್ಲ.

  • News18 Kannada
  • 5-MIN READ
  • Last Updated :
  • Hubli-Dharwad (Hubli), India
  • Share this:

ವಿಧಾನಸಭೆ ಅಖಾಡ ರಣರಣ.. ರಣಾಂಗಣವಾಗಿ ಮಾರ್ಪಟ್ಟಿದೆ. ಚುನಾವಣೆ ಕೆಲಸಗಳು ಕೊನೇ ಹಂತಕ್ಕೆ ತಲುಪಿದ್ದು, ಎಲ್ಲಾ ಪಕ್ಷಗಳಲ್ಲೂ ಬಂಡಾಯದ ಬೆಂಕಿ ಹೊತ್ತಿಕೊಂಡು ಉರೀತಾ ಇದೆ. ಈ ಬಾರಿ ಹೊಸಬರಿಗೆ ಮಣೆ ಹಾಕಲು ಮುಂದಾದ ಬಿಜೆಪಿಯಲ್ಲಿ (BJP) ಅಸಮಧಾನದ ಹೊಗೆ ದಟ್ಟವಾಗಿ ಹಬ್ಬಿದ್ದು, ಕಮಲ ಪಾಳಯದಲ್ಲಿ ದೊಡ್ಡ ದೊಡ್ಡ ವಿಕೆಟ್ಗಳೇ ಪತನವಾಗ್ತಾ ಇವೆ. ಬೆಳಗಾವಿ ನಾಯಕ ಲಕ್ಷ್ಮಣ ಸವದಿ (Laxman Savadi) ಪಕ್ಷದ ವಿರುದ್ಧ ತೊಡೆ ತಟ್ಟಿ ಕಾಂಗ್ರೆಸ್ (Congress) ಸೇರಿದ ಬೆನ್ನಲ್ಲೇ ಈಗ ಬಿಜೆಪಿಯಲ್ಲಿ ಮತ್ತೊಂದು ದೊಡ್ಡ ವಿಕೆಟ್ ಪತನವಾಗುತ್ತಾ ಅನ್ನೋ ಅನುಮಾನಗಳು ಮೂಡಿವೆ. ಟಿಕೆಟ್ ಸಿಗದವರು ಜೆಡಿಎಸ್ (JDS), ಕಾಂಗ್ರೆಸ್ ಪಕ್ಷಗಳತ್ತ ಮುಖ ಮಾಡಿ ಟಿಕೆಟ್ ಪಡೆದುಕೊಂಡಿದ್ದಾರೆ. ಇತ್ತ ಹಿರಿಯ ನಾಯಕ ಜಗದೀಶ್ ಶೆಟ್ಟರ್ (Jagadish Shettar) ಸಹ ಕೊತ ಕೊತ ಕುದಿತಾ ಇದ್ರು. ಕಾರಣ ಎರಡೂ ಪಟ್ಟಿ ಔಟ್ ಆದ್ರೂ ಶೆಟ್ಟರ್ ಹೆಸರು ಮಾತ್ರ ಕಂಡಿರಲಿಲ್ಲ.


ಬಿಜೆಪಿ ಪಟ್ಟಿಯಲ್ಲಿ ಶೆಟ್ಟರ್ ಹೆಸರಿಲ್ಲ!


ಇದೇ ತಿಂಗಳು ಏಪ್ರಿಲ್ 11 ರಂದು ಬಿಜೆಪಿ ಅಳೆದು ತೂಗಿ ತನ್ನ ಮೊದಲ ಪಟ್ಟಿ ರಿಲೀಸ್ ಮಾಡಿತ್ತು. ಸಾಕಷ್ಟು ಮಂದಿ ಆಕಾಂಕ್ಷಿಗಳು ಅದಾಗಲೇ ಪಟ್ಟಿಗಾಗಿ ಕಾಯ್ತಾ ಕುಳಿತಿರೋದ್ರಿಂದ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಿತ್ತು ಬಿಜೆಪಿ. ಆದರೆ ಟಿಕೆಟ್ ಸಿಗೋ ಭರವಸೆಯಲ್ಲಿದ್ದ ಸಾಕಷ್ಟು ಮಂದಿ ಹಾಲಿ ಶಾಸಕರಿಗೆ ಈ ಪಟ್ಟಿ ಬಿಗ್ ಶಾಕ್ ಕೊಟ್ಟಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 52 ಹೊಸ ಮುಖಗಳಿಗೆ ಮಣೆ ಹಾಕಿತ್ತು. ಮೊದಲ ಲಿಸ್ಟ್‌ನಲ್ಲೇ ತಮಗೆ ಟಿಕೆಟ್ ಸಿಗಲಿದೆ ಅನ್ನೋ ಭರವಸೆಯಲ್ಲಿದ್ದ ಜಗದೀಶ್ ಶೆಟ್ಟರ್‌ಗೆ ಭಾರೀ ನಿರಾಸೆ ಉಂಟಾಗಿತ್ತು. ಮೊದಲ ಲಿಸ್ಟ್ ಬಿಡುಗಡೆಯಾದಾಗಲೇ ಶೆಟ್ಟರ್ ತಮ್ಮ ಅಸಮಧಾನ ಹೊರ ಹಾಕಿದ್ರು.




ಹೈಕಮಾಂಡ್ ವಿರುದ್ಧ ಶೆಟ್ಟರ್ ಅಸಮಾಧಾನ


ಮೊದಲ ಲಿಸ್ಟ್ನಲ್ಲಿ ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಅಸಮಧಾನ ವ್ಯಕ್ತಪಡಿಡಿದ್ದ ಜಗದೀಶ್ ಶೆಟ್ಟರ್ ನನ್ನ ಹೆಸರು ಮೊದಲ ಪಟ್ಟಿಯಲ್ಲಿ ಬರಬೇಕಿತ್ತು, ಬಂದಿಲ್ಲ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫೋನ್ ಮಾಡಿ ದೆಹಲಿಗೆ ಬರುವಂತೆ ಹೇಳಿದ್ದಾರೆ. ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ರು. ಅದರಂತೆ ದೆಹಲಿಗೂ ಹೋಗಿದ್ದ ಜಗದೀಶ್ ಶೆಟ್ಟರ್, ಅಲ್ಲಿ ಹೈಕಮಾಂಡ್ ಮನವೊಲಿಕೆಗೂ ಬಗ್ಗದೇ ಟಿಕೆಟ್ಗಾಗಿ ಒತ್ತಾಯಿಸಿ ಬಂದಿದ್ರು. ಹೈಕಮಾಂಡ್ ಜೊತೆ ಮಾತುಕತೆ ನಂತರ ಎರಡನೇ ಪಟ್ಟಿ ಬಿಡುಗಡೆ ಆಗಿ ಆಗಲೂ ಶೆಟ್ಟರ್‌ಗೆ ಶಾಕ್ ಎದುರಾಗಿತ್ತು. ಆದರೆ ಮೂರನೇ ಪಟ್ಟಿಯಲ್ಲಿ ಶೆಟ್ಟರ್ ಹೆಸರು ಇದ್ದೇ ಇರುತ್ತೆ ಅಂತಾ ಎಲ್ರೂ ಭಾವಿಸಿದ್ರು. ಆದರೂ ಪಟ್ಟಿ ಬಿಡುಗಡೆ ವಿಳಂಬವಾಗಿದ್ದರಿಂದ ಶೆಟ್ಟರ್ ಬೆಂಬಲಿಗರು ರೊಚ್ಚಿಗೆದ್ದಿದ್ರು.


ಇದನ್ನೂ ಓದಿ: Madhu Bangarappa: ಅಣ್ಣನ ಎದುರು ತೊಡೆ ತಟ್ಟಿರುವ ಮಧು ಯಾರು? ಇಲ್ಲಿದೆ ಬಂಗಾರಪ್ಪ ಪುತ್ರನ ರಾಜಕೀಯ ಕಹಾನಿ


ಶೆಟ್ಟರ್‌ಗೆ ಟಿಕೆಟ್ ಸಿಗದೇ ಇರೋದಕ್ಕೆ ಕಾರಣವೇನು?


ಸದ್ಯ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಸೀನಿಯರ್ ನಾಯಕರಾಗಿದ್ದಾರೆ. ಈಗಾಗಲೇ 6 ಬಾರಿ ಗೆದ್ದಿದ್ದಾರೆ. ಹಾಗಾಗಿ ಹೊಸಬರಿಗೆ ಅವಕಾಶ ಕೊಡಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ. ಹುಬ್ಬಳ್ಳಿ ಧಾರವಾಡ ಕೇಂದ್ರ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿದ್ದು ಇಲ್ಲಿ, ಯಾರೇ ಚುನಾವಣೆಗೆ ನಿಂತ್ರು ಗೆದ್ದುಕೊಂಡು ಬರ್ತಾರೆ. ಅಲ್ಲದೆ ಈ ಬಾರಿ ಶೆಟ್ಟರ್ಗೆ ಟಿಕೆಟ್ ಕೊಡಲು ಬೊಮ್ಮಾಯಿ ವಿರೋಧ ಇತ್ತು ಅಂತಲೂ ಹೇಳಲಾಗ್ತಾ ಇದೆ. ಹಾಗೇ ಶೆಟ್ಟರ್ ಪ್ರಲ್ಹಾದ್  ಜೋಶಿ ಜೊತೆಯೂ ಉತ್ತಮ ಸಂಬಂಧ ಇಟ್ಟುಕೊಂಡಿಲ್ಲ., ಇದರಿಂದಲೇ ಅವರಿಗೆ ಟಿಕೆಟ್ ವಿಳಬಂಬವಾಗಿದೆ ಅಂತಾ ಹೇಳಲಾಗ್ತಾ ಇದೆ.


ಟಿಕೆಟ್ ತಪ್ಪಿರೋ ಹಿಂದಿದ್ಯಾ ಸೇಡಿನ ಕಥೆ?


ಇದರ ಹಿಂದೆ 1985, 1994 ರ ಹಳೇ ಕಥೆ ಇದ್ಯಂತೆ. ಅದೂ ಸೇಡಿನ ಕಥೆ.. ದಶಕಗಳ ಹಿಂದಿನ ಸೇಡು ಈಗ ಶೆಟ್ಟರ್ಗೆ ಟಿಕೆಟ್ ತಪ್ಪಿಸಲು ಕಾರಣವಾಗಿದೆ ಅಂತಾ ಹೇಳಲಾಗ್ತಾ ಇದೆ. 1978 ಎಸ್ ಆರ್ ಬೊಮ್ಮಾಯಿ ಅವರು ರಾಜಕೀಯದಲ್ಲಿ ಬೆಳವಣಿಗೆ ಆಗ್ತಾ ಇದ್ದ ಕಾಲ.. ಆಗ ಅವರು ನಂಬಿಕೊಂಡಿದ್ದು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರವನ್ನ ಅಂದ್ರೆ ಈಗಿನ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ, 1978ರಿಂದ 1985ರ ವರೆಗೆ 3 ಬಾರಿ ಇದೇ ಕ್ಷೇತ್ರದಿಂದ ಚುನಾವಣೆಗೆ ನಿಂತು ಭರ್ಜರಿ ಗೆಲುವು ಸಾಧಿಸಿದ್ದ ಬೊಮ್ಮಾಯಿ 1985ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ರಾಜ್ಯದ ಸಿಎಂ ಆಗಿದ್ರು. ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಅವರನ್ನ ಬೆಳೆಸಿದ್ದು ಇದೇ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಜನತೆ. ಆದರೆ 1989ರಲ್ಲಿ ಕಾಂಗ್ರೆಸ್ ವಿರುದ್ಧ ಸೋತ ಎಸ್ ಆರ್ ಬೊಮ್ಮಾಯಿ ಈ ಕ್ಷೇತ್ರದ ಮೇಲೆ ಹಿಡಿತ ಕಳೆದುಕೊಂಡ್ರು.


ಬಸವರಾಜ ಬೊಮ್ಮಾಯಿ vs ಶೆಟ್ಟರ್


ಎಸ್ ಆರ್ ಬೊಮ್ಮಾಯಿ ಸೋತರೂ ಸಹ ಈ ಕ್ಷೇತ್ರದ ಮೇಲೆ ಮಮಕಾರ ಕಳೆದುಕೊಳ್ಳಲಿಲ್ಲ, ತಮ್ಮನ್ನ ಬೆಳೆಸಿ ಸಿಎಂ ಮಾಡಿದ ಕ್ಷೇತ್ರದಿಂದಲೇ ತಮ್ಮ ಮಗ ಬಸವರಾಜ ಬೊಮ್ಮಾಯಿ ಅವರನ್ನೂ ರಾಜಕೀಯವಾಗಿ ಬೆಳಸಬೇಕು ಅಂತಾ ಅಂದುಕೊಂಡಿದ್ರು. ಅದಕ್ಕೆ ತಾವು 1994ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಹೋದಾಗ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಪುತ್ರ ಬಸವರಾಜ ಬೊಮ್ಮಾಯಿ ಅವರನ್ನ ಜೆಡಿಯು ಪಕ್ಷದಿಂದ ಕಣಕ್ಕಿಳಿಸಿದ್ರು. ಆಗ ಬೊಮ್ಮಾಯಿ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗಿದ್ದು ಜಗದೀಶ್ ಶೆಟ್ಟರ್, 1994ರಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶೆಟ್ಟರ್ ಬೊಮ್ಮಾಯಿ ಅವರಿಗೆ ಮೊದಲ ಚುನಾವಣೆಯಲ್ಲೇ ಸೋಲಿನ ರುಚಿ ತೋರಿಸಿದ್ರು.


ಶೆಟ್ಟರ್ ಮೇಲೆಕೆ ಬೊಮ್ಮಾಯಿಗೆ ಕೋಪ?


ಮೊದಲ ಚುನಾವಣೆಯಲ್ಲಿ ಸೋತರೂ ಸಹ ಬಸವರಾಜ ಬೊಮ್ಮಾಯಿ ಅವರಿಗೆ ಹುಬ್ಬಳ್ಳಿಧಾರವಾಡ ಕ್ಷೇತ್ರದ ಮೇಲೆ ವ್ಯಾಮೋಹ ಹೋಗಿರಲಿಲ್ಲ. ತಂದೆಯನ್ನ ಬೆಳೆಸಿದ ಕ್ಷೇತ್ರದಲ್ಲಿ ತಾವು ಬೆಳೆಯಬೇಕು ಅನ್ನೋ ಆಸೆ ಇತ್ತಂತೆ. ಆದರೆ ಆ ಕ್ಷೇತ್ರ ಅದಾಗಲೇ ಬಿಜೆಪಿ ಭದ್ರಕೋಟೆಯಾಗಿತ್ತು. ಅದಕ್ಕೆ ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿಕೊಳ್ಳುವ ಮನಸ್ಸು ಮಾಡಿದ್ರು. ಆದರೆ ಬೊಮ್ಮಾಯಿ ಬಿಜೆಪಿ ಸೇರ್ಪಡೆಯನ್ನ ವಿರೋಧಿಸಿದ್ದ ಜಗದೀಶ್ ಶೆಟ್ಟರ್, ಕೆಲವೊಂದು ಕಂಡಿಷನ್ ಹಾಕಿ ಇವ್ರನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ರಂತೆ. ಯಾವುದೇ ಕಾರಣಕ್ಕೂ ಬೊಮ್ಮಾಯಿ ಅವರು ಹುಬ್ಬಳ್ಳಿ ಧಾರವಾಡ ಕ್ಷೇತ್ರಕ್ಕೆ ಬರಬಾರ್ದು ಅಂತಾ ಕಂಡಿಷನ್ ಹಾಕಿದ್ರಂತೆ. ಆ ಮೂಲಕ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಕ್ಷೇತ್ರ ಬಿಟ್ಟು ಶಿಗ್ಗಾಂವಿ ಕ್ಷೇತ್ರಕ್ಕೆ ವಲಸೆ ಬರುವಂತೆ ಆಗಿತ್ತು. ಆ ನಂತರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ಸಾಧಿಸಿದ ಜಗದೀಶ್ ಶೆಟ್ಟರ್ ಇದೇ ಕ್ಷೇತ್ರದಿಂದ ಗೆದ್ದು ಸಿಎಂ ಸಹ ಆಗಿದ್ರು. ತಾವು ಬೆಳೆಯಬೇಕಾಗಿದ್ದ ಕ್ಷೇತ್ರದಲ್ಲಿ ಶೆಟ್ಟರ್ ಬೆಳೆದು ಸಿಎಂ ಆಗಿದ್ದನ್ನ ನೋಡಿ ಬಸವರಾಜ ಬೊಮ್ಮಾಯಿ ಏನೂ ಮಾಡಲಾಗದೆ ಸುಮ್ಮನೆ ಇದ್ರಂತೆ.


ಇದನ್ನೂ ಓದಿ: Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್‌, ಸಾಹುಕಾರ್‌ಗೆ ಸ್ಕೆಚ್‌! ಕುಂದಾನಗರಿ ಕೊತ ಕೊತ!


ಬೊಮ್ಮಾಯಿ ವಿರುದ್ಧ ದನಿಯೆತ್ತಿದ್ದ ಶೆಟ್ಟರ್


ಅಂದು ಬೊಮ್ಮಾಯಿ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರ್ದು ಅಂತಾ ಹಠ ಮಾಡಿದ್ರಂತೆ ಜಗದೀಶ್ ಶೆಟ್ಟರ್ ಆದ್ರೂ ಪಕ್ಷಕ್ಕೆ ಸೇರಿಕೊಂಡು, ಹುಬ್ಬಳ್ಳಿ ಧಾರವಾಡ ಕ್ಷೇತ್ರವನ್ನ ಬಿಟ್ಟುಕೊಟ್ಟು, ಶಿಗ್ಗಾವಿಯನ್ನೇ ತಮ್ಮ ಕ್ಷೇತ್ರ ಮಾಡಿಕೊಂಡಿದ್ದಾರೆ ಬೊಮ್ಮಾಯಿ. ಶಿಗ್ಗಾವಿಯಿಂದಲೇ ಗೆದ್ದು ಈಗ ಸಿಎಂ ಸಹ ಆಗಿದ್ದಾರೆ. ಆಗಿ ಹಳೇ ಸೇಡಿನಿಂದಲೇ ಈಗ ಜಗದೀಶ್ ಶೆಟ್ಟರ್ ಟಿಕೆಟ್‌ಗೆ ಸಿಎಂ ಬೊಮ್ಮಾಯಿ ಅಡ್ಡಗಾಲು ಹಾಕಿರೋ ಸಾಧ್ಯತೆ ಇದೆ ಅಂತಾ ಹೇಳಲಾಗ್ತಾ ಇದೆ. ಆದರೆ ಇದರ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಸಿಎಂ ನಾನು ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಿಸಿಲ್ಲ ಅಂತಾ ಹೇಳಿದ್ದಾರೆ. ಮುಂದೇ ಏನಾಗುತ್ತೋ ಕಾದು ನೋಡಬೇಕು.


(ವರದಿ: ಪ್ರವೀಣ್ ಕುಮಾರ್ ಬಿ.ಎನ್. ನ್ಯೂಸ್ 18 ಕನ್ನಡ)

top videos
    First published: