• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Opposition Leader: ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲ್ ಹಾಕೋರು ಯಾರು? ಈ ಮೂವರಲ್ಲಿ ಯಾರಾಗ್ತಾರೆ ವಿಪಕ್ಷ ನಾಯಕ?

Opposition Leader: ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲ್ ಹಾಕೋರು ಯಾರು? ಈ ಮೂವರಲ್ಲಿ ಯಾರಾಗ್ತಾರೆ ವಿಪಕ್ಷ ನಾಯಕ?

 ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

Karnataka Politics: ರಾಜ್ಯ ಬಿಜೆಪಿಯಲ್ಲಿ ಸದ್ಯ ಮೂವರ ಹೆಸರು ವಿರೋಧ ಪಕ್ಷದ ನಾಯಕರ ರೇಸ್​ನಲ್ಲಿವೆ. ಈ ಮೂವರಲ್ಲಿ ಯಾರು ಎಂಬ ಪ್ರಶ್ನೆಗೆ ಇನ್ನು ತೆರೆ ಬಿದ್ದಿಲ್ಲ.

  • Share this:

ಬೆಂಗಳೂರು: ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ (Congress Government) ರಚನೆ ಮಾಡಿದೆ. ನಾಳೆಯಿಂದ ಮೂರು ದಿನ ವಿಶೇಷ ಅಧಿವೇಶನವನ್ನು (Assembly Session) ಸಹ ಕರೆಯಲಾಗಿದೆ. ವಿರೋಧ ಪಕ್ಷದಲ್ಲಿರುವ ಬಿಜೆಪಿಗೆ (BJP) ಈಗ ಯಾರನ್ನು ವಿಪಕ್ಷ ನಾಯಕರನ್ನಾಗಿ (Opposition Leader) ಮಾಡಬೇಕು ಎಂಬ ತಲೆನೋವು ಆರಂಭವಾಗಿದೆ. ಫಲಿತಾಂಶ (Karnataka Election Results) ಬಂದು ವಾರ ಕಳೆದ್ರೂ ಈ ಬಗ್ಗೆ ಬಿಜೆಪಿ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿ ನಾಯಕರೇ ಸೋತಿರುವ ಹಿನ್ನೆಲೆ ಯಾರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡೋ ಗೊಂದಲ ಬಿಜೆಪಿಯಲ್ಲಿ (Karnataka BJP) ಶುರುವಾಗಿದೆ ಎನ್ನಲಾಗಿದೆ.


ರಾಜ್ಯ ಬಿಜೆಪಿಯಲ್ಲಿ ಸದ್ಯ ಮೂವರ ಹೆಸರು ವಿರೋಧ ಪಕ್ಷದ ನಾಯಕರ ರೇಸ್​ನಲ್ಲಿವೆ. ಈ ಮೂವರಲ್ಲಿ ಯಾರು ಎಂಬ ಪ್ರಶ್ನೆಗೆ ಇನ್ನು ತೆರೆ ಬಿದ್ದಿಲ್ಲ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ ಆರ್ ಅಶೋಕ್ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ವಿಪಕ್ಷ ನಾಯಕರ ಸ್ಪರ್ಧೆಯಲ್ಲಿವೆ.


2a reservation fight mla yatnal gave warning to cm bommai mrq
ಬಸವರಾಜ್ ಬೊಮ್ಮಾಯಿ ಮತ್ತು ಶಾಸಕ ಯತ್ನಾಳ್


ಬಸನಗೌಡ ಪಾಟೀಲ್ ಯತ್ನಾಳ್ ಹೆಸರು?


ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಂದು ಫಯರ್ ಬ್ರ್ಯಾಂಡ್​ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಸದನದ ಒಳಗೆ ಸಿಎಂ ಸಿದ್ದರಾಮಯ್ಯ ಅವರನ್ನು ಎದರಿಸೋದು ಅಷ್ಟು ಸುಲಭವಲ್ಲ.


ಸರ್ಕಾರದ ವಿರುದ್ಧ ತಾರ್ಕಿಕವಾಗಿ ಮುಗಿಬೀಳಬೇಕಾಗುತ್ತದೆ. ಇದು ಯತ್ನಾಳ್ ಅವರಿಂದ ಸಾಧ್ಯವಿಲ್ಲ ಅನ್ನೋ ಚರ್ಚೆಗಳು ಕಮಲ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಅನುಭವವುಳ್ಳ ಹಾಗೂ ಹಿರಿಯ ಶಾಸಕರೇ ವಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತ ಎಂಬುವುದು ಬಿಜೆಪಿ ಲೆಕ್ಕಾಚಾರ.


ಆರ್ ಅಶೋಕ್, ಮಾಜಿ ಸಚಿವ


ಮೊದಲ ಸ್ಥಾನದಲ್ಲಿ ಬೊಮ್ಮಾಯಿ ಹೆಸರು


ಇನ್ನು ಆರ್ ಅಶೋಕ್ ಒಕ್ಕಲಿಗರಾಗಿದ್ದರೂ ಮಾಸ್ ಲೀಡರ್ ಅಲ್ಲ ಅನ್ನೋ ಅಭಿಪ್ರಾಯ ಕೆಲವರಲ್ಲಿದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸದನದ ಹೊರಗೆ ಅಬ್ಬರಿಸುತ್ತಾರೆ. ಆದ್ರೆ ಸದನದೊಳಗೆ ಶಾಂತವಾಗಿರುತ್ತಾರೆ ಅನ್ನೋ ಅಭಿಪ್ರಾಯ ಇದೆ. ಆದರೆ ಆಡಳಿತ ಅನುಭವ, ಜ್ಞಾನ, ಮಾತುಗಾರಿಕೆ ಸದನದ ಒಳಗೆ ಸಿದ್ದು ಸರ್ಕಾರವನ್ನು ಕಟ್ಟಿ ಹಾಕುವ ಸಾಮರ್ಥ್ಯ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ.




ಇದನ್ನೂ ಓದಿ:  Explained: ಚುನಾಯಿತರಾದ ಶಾಸಕರಲ್ಲಿ ರಾಜಕೀಯ ಕುಟುಂಬದಿಂದ ಬಂದವರೆಷ್ಟು ಮಂದಿ? ಬಯಲಾಯ್ತು ಅಚ್ಚರಿಯ ಮಾಹಿತಿ!

top videos


    ಸದ್ಯ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೆಸರು ಮುನ್ನೆಲೆಯಲ್ಲಿದೆ. ಉಪ ನಾಯಕನ ಸ್ಥಾನಕ್ಕೆ ಆರ್ ಅಶೋಕ್ ಅವರ ಹೆಸರು ಕೇಳಿ ಬರುತ್ತಿದೆ.

    First published: