• Home
  • »
  • News
  • »
  • state
  • »
  • Siddaramaiah: ಕೋಲಾರದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ? ಮೊದಲ ಸಮೀಕ್ಷೆಯ ವರದಿಯಲ್ಲೇನಿದೆ?

Siddaramaiah: ಕೋಲಾರದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ? ಮೊದಲ ಸಮೀಕ್ಷೆಯ ವರದಿಯಲ್ಲೇನಿದೆ?

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಶನಿವಾರ  ರಾತ್ರಿ ಕೋಲಾರ ಭಾಗದ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಹಿಂದೆಯೂ ಮೂರು ಬಾರಿ ಕೋಲಾರ ಭಾಗದ ಕಾಂಗ್ರೆಸ್ ಮುಖಂಡರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

2023ರ ವಿಧಾನಸಭಾ ಚುನಾವಣೆಗೆ (Assembly Election 2023) ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಸ್ಪರ್ಧೆ ಎಲ್ಲಿಂದ ಮಾಡ್ತಾರೆ ಅನ್ನೋ ಚರ್ಚೆಗಳು ಮತ್ತಷ್ಟು ಬಲಗೊಳ್ಳುತ್ತಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಅವರು ಬಾದಾಮಿಯಿಂದ (Badami Constituency) ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಮತ್ತೆ ಕ್ಷೇತ್ರ ಬದಲಾವಣೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂಬ ಸುದ್ದಿಗಳು ಕಾಂಗ್ರೆಸ್ (Congress) ಅಂಗಳದಿಂದ ಕೇಳಿ ಬರುತ್ತಿವೆ. ಈಗಾಗಲೇ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatheendra Siddaramaiah) ತಂದೆಗಾಗಿ ವರುಣಾ ಕ್ಷೇತ್ರ (Varuna Constituency) ಬಿಟ್ಟುಕೊಡಲು ಸಿದ್ಧ ಎಂಬ ಹೇಳಿಕೆ ನೀಡಿದ್ದಾರೆ. ಇತ್ತ ಬಾದಾಮಿ ಜನತೆ ತಮ್ಮ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಬಹುತೇಕ ಪಕ್ಕಾ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.


ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಒಳಿತು ಎಂಬುದರ ಬಗ್ಗೆ ಆತಂರಿಕ ಸಮೀಕ್ಷೆ ನಡೆಸಿದ್ದಾರೆ ಎನ್ನಲಾಗಿದೆ. ಕೋಲಾರದಿಂದ ಸ್ಪರ್ಧೆ ಮಾಡಿದ್ರೆ ಗೆಲುವು ಸುಲಭವಾಗಲಿದೆ. ಇದರ ಜೊತೆ ಸುತ್ತಲಿನ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲಬಹುದು ಎಂದು ಆಂತರಿಕ ಸಮೀಕ್ಷೆ ಹೇಳುತ್ತಿದೆ ಎಂದು ತಿಳಿದು ಬಂದಿದೆ.


ಈ ಹಿನ್ನೆಲೆ ಬಾದಾಮಿ, ವರುಣಾ ಬದಲಿಗೆ ಕೋಲಾರದಿಂದ ಸ್ಫರ್ಧೆ ಖಚಿತ ಎಂದು ಹೇಳಲಾಗುತ್ತಿದೆ. ತಮ್ಮ ಕ್ಷೇತ್ರ ಸೇಫ್ ಜೊತೆಗೆ ವಿರೋಧಿಗಳಿಗೆ ಠಕ್ಕರ್​ ಕೊಡಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿಕೊಂಡಿದ್ದಾರೆ.


who is siddaramaiah contest kolar constituency mrq
ಸಿದ್ದರಾಮಯ್ಯ, ಮಾಜಿ ಸಿಎಂ


ಜೆಡಿಎಸ್​ಗೆ ಶಾಕ್ ಕೊಡಲು ಪ್ಲ್ಯಾನ್!


ಹಳೆ ಮೈಸೂರು ಭಾಗ ಹೊರತುಪಡಿಸಿದ್ರೆ ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್​ ಪ್ರಬಲ ಆಗ್ತಿದೆ. ಕೋಲಾರ ಜಿಲ್ಲೆಗೆ ಪದೇ ಪದೇ ಭೇಟಿ ನೀಡುತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರು ಕೋಲಾರದಿಂದ ಕಣಕ್ಕಿಳಿದ್ರೆ ಹಾಲಿ ಶಾಸಕ ಶ್ರೀನಿವಾಸ್​​ಗೌಡರಿಗೆ ಟೆನ್ಷನ್​ ಶುರುವಾಗೋದು ಬಹುತೇಕ ಖಚಿತ.


ಶನಿವಾರ  ರಾತ್ರಿ ಕೋಲಾರ ಭಾಗದ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯರನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಹಿಂದೆಯೂ ಮೂರು ಬಾರಿ ಕೋಲಾರ ಭಾಗದ ಕಾಂಗ್ರೆಸ್ ಮುಖಂಡರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.


ಬದಾಮಿಯಲ್ಲಿ ಮಾಡಿದ್ದಂತೆ, ಕೋಲಾರದಲ್ಲೂ ಒಟ್ಟು ಮೂರು ಸುತ್ತುಗಳಲ್ಲಿ ಸಮೀಕ್ಷೆ ನಡೆಸಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಈಗಾಗ್ಲೇ ಒಂದು ಬಾರಿ ಸಮೀಕ್ಷೆ ನಡೆಸಿದ್ದು ಫಲಿತಾಂಶ ಪರವಾಗಿ ಬಂದಿದೆ. ಇನ್ನೆರಡು ಸಮೀಕ್ಷೆಗಳು ಬಳಿಕ ಸಿದ್ದರಾಮಯ್ಯ ತಮ್ಮ ಮುಂದಿನ ನಿರ್ಧಾರ ತಿಳಿಸುವ ಸಾಧ್ಯತೆಗಳಿವೆ.


ಇದನ್ನೂ ಓದಿ:  Siddaramaiah: ಬಾದಾಮಿ ಬಿಟ್ಟು ಬೆಂಗಳೂರಲ್ಲಿ ಅಖಾಡಕ್ಕೆ ಸಿದ್ದರಾಮಯ್ಯ!? ನನ್ನ ತಂದೆ ಮತ್ತೆ ಸಿಎಂ ಆಗ್ತಾರೆ- ಯತೀಂದ್ರ


ಈಗಿನಿಂದಲೇ ಬಿಜೆಪಿ ಸಿದ್ಧತೆ


2023ರ ಚುನಾವಣೆ ನನ್ನ ಕೊನೆ ಎಲೆಕ್ಷನ್ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ತನ್ನದೇ ಪ್ಲಾನ್ ಮಾಡಿಕೊಳ್ಳುತ್ತಿದೆ. ಕೊನೆಯ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.


who is siddaramaiah contest kolar constituency mrq
ಮಾಜಿ ಸಿಎಂ ಸಿದ್ದರಾಮಯ್ಯ


ಟಗರು ವಿರುದ್ಧ ಯಾರಾಗ್ತಾರೆ ಎದುರಾಳಿ?


ಇನ್ನು ಸಿದ್ದರಾಮಯ್ಯ ವಿರುದ್ಧ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದರ ಬಗ್ಗೆ ಬಿಜೆಪಿ ಅಂಗಳದಲ್ಲಿ ಚರ್ಚೆಗಳು ನಡೆಯುತ್ತಿವೆಯಂತೆ. ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಪಕ್ಷದಲ್ಲಿ ಆಂತರಿಕ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:  SriRamulu: ನಿನ್ನ ಅಹಂಕಾರ ಜಾಸ್ತಿಯಾಗಿದೆ; ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ರಾಮುಲು ವಾಗ್ದಾಳಿ


ಬಾದಾಮಿಯಿಂದ ಶ್ರೀರಾಮುಲು ಸ್ಪರ್ಧೆನಾ?


ಒಂದು ವೇಳೆ ಬಾದಾಮಿಯಿಂದ ಸ್ಪರ್ಧೆ ಮಾಡಿದ್ರೆ ಮತ್ತೆ ಶ್ರೀರಾಮುಲು ಅವರನ್ನು ಕಣಕ್ಕಿಳಿಸುವ ಕುರಿತ ಚರ್ಚೆಗಳು ನಡೆಯುತ್ತಿವೆ. ಕಾರಣ 2018ರಲ್ಲಿ ಸಿದ್ದರಾಮಯ್ಯ ಅವರಿಗೆ ನೇರಾನೇರ ಸ್ಪರ್ಧೆ ನೀಡಿದ್ದರು.

Published by:Mahmadrafik K
First published: