• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Justice Nagarathna| ಸುಪ್ರೀಂನ ನ್ಯಾಯಾಧೀಶೆಯಾಗಿ ಜಸ್ಟೀಸ್​ ನಾಗರತ್ನ ಆಯ್ಕೆ; 2027ಕ್ಕೆ ಇವರೇ ಮೊದಲ ಮಹಿಳಾ ಸಿಜೆಐ!

Justice Nagarathna| ಸುಪ್ರೀಂನ ನ್ಯಾಯಾಧೀಶೆಯಾಗಿ ಜಸ್ಟೀಸ್​ ನಾಗರತ್ನ ಆಯ್ಕೆ; 2027ಕ್ಕೆ ಇವರೇ ಮೊದಲ ಮಹಿಳಾ ಸಿಜೆಐ!

ಜಸ್ಟೀಸ್​ ಬಿ.ವಿ. ನಾಗರತ್ನ.

ಜಸ್ಟೀಸ್​ ಬಿ.ವಿ. ನಾಗರತ್ನ.

ನ್ಯಾ.ಸೂರ್ಯಕಾಂತ್‌ ಅವರ ಉತ್ತರಾಧಿಕಾರಿಯಾಗಿ 2027ರ ಅಕ್ಟೋಬರ್‌ನಲ್ಲಿ ಜಸ್ಟೀಸ್ ಬಿ.ವಿ. ನಾಗರತ್ನ ಅಧಿಕಾರ ಸ್ವೀಕರಿಸಬಹುದು. ಆಗ 2027ರ ಅಕ್ಟೋಬರ್‌ 29ರವರೆಗೆ ಅಂದರೆ ಕೇವಲ 1 ತಿಂಗಳ ಅವಧಿಗೆ ಮಾತ್ರ ನ್ಯಾಯಮೂರ್ತಿ. ನಾಗರತ್ನ ಈ ಹುದ್ದೆಯಲ್ಲಿ ಇರಲಿದ್ದಾರೆ.

  • Share this:

    ನವ ದೆಹಲಿ (ಆಗಸ್ಟ್​ 26); ಕೊನೆಗೂ ಸುಪ್ರೀಂ ಕೋರ್ಟ್​ಗೆ (supreme Court) ಹೊಸ ನ್ಯಾಯಮೂರ್ತಿ ಗಳನ್ನು ಹೆಸರಿಸಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ (Ramnat Kovind) ಇಂದು ಮೂವರು ಮಹಿಳಾ ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಹೊಸ ನ್ಯಾಯಾಧೀಶ ರನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ, ಈ ಪೈಕಿ ಸುಪ್ರೀಂ ಕೋರ್ಟ್​ನ್ಯಾಯಾಮೂರ್ತಿ ಯಾಗಿ ಆಯ್ಕೆಯಾಗಿರುವ ಕನ್ನಡತಿ ಜಸ್ಟೀಸ್​ ಬಿ.ವಿ. ನಾಗರತ್ನ (Justice Nagarathna) ಅವರ ಹೆಸರು ಪ್ರಸ್ತುತ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿದೆ. ಏಕೆಂದರೆ ಸ್ವತಂತ್ರ್ಯ ಭಾರತದಲ್ಲಿ ಈವರೆಗೆ ಮಹಿಳಾ ನ್ಯಾಯಮೂರ್ತಿ ಗಳನ್ನು ಸುಪ್ರೀಂ ಕೋರ್ಟ್​ನ​ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದ ಇತಿಹಾಸವೇ ಇಲ್ಲ. ಆದರೆ, ಇದೇ ಮೊದಲ ಬಾರಿಗೆ ಭಾರತ ಸರ್ಕಾರ ಕರ್ನಾಟಕ ಹೈಕೋರ್ಟ್​ನ ನ್ಯಾಯಮೂರ್ತಿ (Karnataka high Court) ಜಸ್ಟೀಸ್​ ಬಿ.ವಿ. ನಾಗರತ್ನ ಅವರನ್ನು ಸುಪ್ರೀಂ ಕೋರ್ಟ್​ಗೆ ನ್ಯಾಯಮೂರ್ತಿಯನ್ನಾಗಿ ಘೋಷಣೆ ಮಾಡಿದೆ. ಅಲ್ಲದೆ, ಅವರು 2027ರಲ್ಲಿ ದೇಶದ ಮೊದಲ ಮಹಿಳಾ ಮುಖ್ಯನ್ಯಾಯಮೂರ್ತಿ ಯಾಗಿಯೂ ಹೆಸರಿಸುವ ಮೂಲಕ ಹೊಸ ಇತಿಹಾಸಕ್ಕೆ ಅಂಕಿತ ಹಾಕಲಾಗಿದೆ.


    supreme cji
    ರಾಷ್ಟ್ರಪತಿ ರಾಮನಾಥ ಕೋವಿಂದ್ ಆದೇಶ ಪ್ರತಿ.


    ಸುಪ್ರೀಂ ಕೋರ್ಟ್​ನಲ್ಲಿ ಹಾಲಿ ಸಿಜೆಐ ಬಳಿಕ ಹಿರಿತನದ ಆಧಾರದಲ್ಲಿ ನ್ಯಾ.ಯು.ಯು. ಲಲಿತ್‌, ನ್ಯಾ.ಚಂದ್ರಚೂಡ್‌, ನ್ಯಾ.ಸಂಜೀವ್‌ ಖನ್ನಾ, ನ್ಯಾ.ಸೂರ್ಯಕಾಂತ್‌ ಅವರು ಮುಂದಿನ ಸಿಜೆಐ ಆಗುವ ಅವಕಾಶ ಹೊಂದಿದ್ದಾರೆ. ಈ ಪೈಕಿ ಕಡೆಯವರಾದ ನ್ಯಾ.ಸೂರ್ಯಕಾಂತ್‌ ಅವಧಿ 2027ರ ಫೆಬ್ರವರಿಗೆ ಮುಗಿಯಲಿದೆ. ಆ ಹಂತದಲ್ಲಿ ಹಿರಿತನ ಪಡೆಯುವವರ ಪೈಕಿ ನ್ಯಾ.ನಾಗರತ್ನ ಮುಂಚೂಣಿಗೆ ಬಂದು ಆ ವೇಳೆಗೆ ಅವರು ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ದೇಶದ ಮೊದಲ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಾಮೂರ್ತಿಯಾದ ಇತಿಹಾಸವನ್ನು ನಿರ್ಮಿಸಲಿದ್ದಾರೆ.


    ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿಯಾಗಿದ್ದ ಜಸ್ಟೀಸ್​ ಬಿ.ವಿ. ನಾಗರತ್ನ ಅವರನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್​ಗೆ ನೇಮಕ ಮಾಡುವ ಮೂಲಕ ಪದೋನ್ನತಿ ನೀಡಿದೆ. ಆದರೆ, ನ್ಯಾಯಮೂರ್ತಿ ನಾಗರತ್ನ ಈ ಪದೋನ್ನತಿಗೆ ಒಪ್ಪಿದರೆ ಮಾತ್ರ 2027ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶೆ ಆಗುವ ಸಾಧ್ಯತೆ ಇದೆ. ನ್ಯಾ.ಸೂರ್ಯಕಾಂತ್‌ ಅವರ ಉತ್ತರಾಧಿಕಾರಿಯಾಗಿ 2027ರ ಅಕ್ಟೋಬರ್‌ನಲ್ಲಿ ಜಸ್ಟೀಸ್ ಬಿ.ವಿ. ನಾಗರತ್ನ ಅಧಿಕಾರ ಸ್ವೀಕರಿಸಬಹುದು. ಆಗ 2027ರ ಅಕ್ಟೋಬರ್‌ 29ರವರೆಗೆ ಅಂದರೆ ಕೇವಲ 1 ತಿಂಗಳ ಅವಧಿಗೆ ಮಾತ್ರ ನ್ಯಾಯಮೂರ್ತಿ. ನಾಗರತ್ನ ಈ ಹುದ್ದೆಯಲ್ಲಿ ಇರಲಿದ್ದಾರೆ.


    ಜಸ್ಟೀಸ್​ ಬಿ.ವಿ. ನಾಗರತ್ನ ಪರಿಚಯ:


    ಅಕ್ಟೋಬರ್ 30, 1962 ರಂದು ಜನಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಅಕ್ಟೋಬರ್ 28, 1987 ರಂದು ಬೆಂಗಳೂರಿನಲ್ಲಿ ಕರ್ನಾಟಕ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ವೃತ್ತಿ ಬದುಕನ್ನು ಆರಂಭಿಸಿದ್ದರು. ಈ ವೇಳೆ ಅವರು ಸಾಂವಿಧಾನಿಕ ಕಾನೂನು, ವಾಣಿಜ್ಯ ಕಾನೂನು, ವಿಮಾ ಕಾನೂನು, ಸೇವಾ ಕಾನೂನು, ಆಡಳಿತಾತ್ಮಕ ಮತ್ತು ಸಾರ್ವಜನಿಕ ಕಾನೂನು, ಭೂಮಿ ಮತ್ತು ಬಾಡಿಗೆಗೆ ಸಂಬಂಧಿಸಿದ ಕಾನೂನು, ಕೌಟುಂಬಿಕ ಕಾನೂನು, ಒಪ್ಪಂದಗಳು ಮತ್ತು ಒಪ್ಪಂದಗಳ ತಿಳುವಳಿಕೆ ಕಾನೂನುಗಳ ಬಗ್ಗೆ ಸಾಕಷ್ಟು ಅಧ್ಯಯನ ನಡಸುವ ಮೂಲಕ ಹೆಸರುವಾಸಿಯಾಗಿದ್ದರು.


    ಇದನ್ನೂ ಓದಿ: Delhi University Controversy| ವಿವಾದದಲ್ಲಿ ದೆಹಲಿ ವಿವಿ; ಮಹಾಶ್ವೇತಾದೇವಿ ಸೇರಿದಂತೆ ಪ್ರಮುಖ ದಲಿತ ಲೇಖಕರ ಪಠ್ಯ ಹೊರಕ್ಕೆ!


    ಹೀಗಾ ಬಿ.ವಿ. ನಾಗರತ್ನ ಅವರನ್ನು ಫೆಬ್ರವರಿ 18, 2008 ರಂದು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು. ಎರಡು ವರ್ಷಗಳ ನಂತರ ಖಾಯಂ ನ್ಯಾಯಾಧೀಶರನ್ನಾಗಿ ಮಾಡಲಾಗಿತ್ತು. ಆದರೆ, ನ್ಯಾಯಾಧೀಶರಾಗಿ ತಮ್ಮ 13 ವರ್ಷಗಳ ಸುದೀರ್ಘ ಅವಧಿಯಲ್ಲಿ, ನ್ಯಾಯಮೂರ್ತಿ ನಾಗರತ್ನ ಅವರು ಮಾಧ್ಯಮಗಳನ್ನು ಮತ್ತು ವಕೀಲರನ್ನು ಕೋರ್ಟ್​ನಲ್ಲಿನ ಅವರ ಮಿತಿ ಮೀರಿದ ವರ್ತನೆಯ ಬಗ್ಗೆ ಎಂದಿಗೂ ಚಕಾರ ಎತ್ತಿಲ್ಲ ಎಂಬ ಮಾತೂ ಇದೆ.


    ಇದನ್ನೂ ಓದಿ: ಕಾಂಗ್ರೆಸ್​​ನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಗೃಹ ಸಚಿವ ಅರಗ ಜ್ಞಾನೇಂದ್ರ ಅಸೂಕ್ಷ್ಮ ಹೇಳಿಕೆ!


    ನವೆಂಬರ್ 2009 ರಲ್ಲಿ, ಕರ್ನಾಟಕದ ಅಂದಿನ ಮುಖ್ಯ ನ್ಯಾಯಾಧೀಶರಾದ ಪಿ ಡಿ ದಿನಕರನ್ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಲಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲೇ ಪ್ರತಿಭಟಿಸಿದ್ದ ವಕೀಲರು, ಭ್ರಷ್ಟಾಚಾರ ಆರೋಪದಲ್ಲಿ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಲು ಯತ್ನಿಸಿದರು. ಅಲ್ಲದೆ, ಅಂದಿನ ನ್ಯಾಯಾಧೀಶರಾದ ವಿ.ಗೋಪಾಲ ಗೌಡ ಮತ್ತು ಬಿ.ವಿ. ನಾಗರತ್ನ ಅವರನ್ನು ನ್ಯಾಯಾಲಯದ ಕೋಣೆಯಲ್ಲಿ ಬಂಧಿಸಿಟ್ಟಿದ್ದರು.


    ಆದರೆ, ಈ ಬಗ್ಗೆ ಆಗ ಮಾತನಾಡಿದ್ದ ಜಸ್ಟೀಸ್​ ಬಿ.ವಿ. ನಾಗರತ್ನ"ವಕೀಲರ ಇಂತಹ ವರ್ತನೆ ಬಗ್ಗೆ ನಮಗೆ ಕೋಪವಿಲ್ಲ, ಆದರೆ ಬಾರ್ ಕೌನ್ಸಿಲ್ ನಮಗೆ ಹೀಗೆ ಮಾಡಿರುವುದು ದುಃಖಕರವಾಗಿದೆ. ನಾಚಿಕೆಯಿಂದ ನಾವು ತಲೆ ತಗ್ಗಿಸಿಕೊಳ್ಳಬೇಕು. ನಾವು ಬಾರ್‌ ಕೌನ್ಸಿಲ್ ಆಜ್ಞೆಯ ಮೇರೆಗೆ ಕೆಲಸ ಮಾಡಬೇಕು ಮತ್ತು ಅದರ ನಿಯಮಗಳನ್ನು ಪಾಲಿಸಬೇಕು" ಎಂದು ಹೇಳಿಕೆ ನೀಡಿದ್ದರು.

    Published by:MAshok Kumar
    First published: