ACB Raid: ಸರ್ಕಾರಕ್ಕೆ 135 ಕೋಟಿ ಕೊಡಬೇಕಿರುವ BBMP ನೌಕರ ಮಾಯಣ್ಣ ಯಾರು ಗೊತ್ತಾ?

ಬಿಬಿಎಂಪಿ ರಸ್ತೆ ವಿಭಾಗದ ಎಫ್ ಡಿಸಿ ಮಾಯಣ್ಣ ವಿರುದ್ದ ನೂರಾರು ಆರೋಪಗಳಿವೆ. ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಮಾಯಣ್ಣ ಕುಳಿತುಕೊಳ್ಳುತ್ತಿದ್ದನು. 2012 - 2015ರವರೆಗೆ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ 135 ಕೋಟಿ ನೀಡಿರುವ ಆರೋಪ ಇದೆ.

ಬಿಬಿಎಂಪಿ ನೌಕರ ಮಾಯಣ್ಣ

ಬಿಬಿಎಂಪಿ ನೌಕರ ಮಾಯಣ್ಣ

  • Share this:
ಬೆಂಗಳೂರು: ಇಂದು ಎಸಿಬಿ (ACB) 15 ಭ್ರಷ್ಟ ಕುಳಗಳನ್ನು ತನ್ನ ಬಲೆಯಲ್ಲಿ ಬೀಳಿಸಿಕೊಂಡಿದೆ. ಬೆಳಗ್ಗೆ ದಾಳಿ ನಡೆಸಿದ್ರೂ ಇನ್ನು ಹಣ ಎಣಿಕೆಯ ಮತ್ತು ದಾಖಲೆಗಳ ಪರೀಶಿಲನೆಯೇ ಮುಕ್ತಾಯಗೊಂಡಿಲ್ಲ. ಈ 15 ಭ್ರಷ್ಟ ಕುಳಗಲ್ಲಿ ಬಿಬಿಎಂಪಿ ನೌಕರ ಮಾಯಣ್ಣ (BBMP FDA Mayanna) ಓರ್ವ. ಮಾಯಣ್ಣನ ಹೆಸರು ಬಿಬಿಎಂಪಿ ನೌಕರಿಗಿಂತ ಬಿಬಿಎಂಪಿ (BBMP) ಅಕ್ರಮಗಳಲ್ಲೇ ಹೆಚ್ಚಾಗಿ ಕೇಳಿ ಬರುತ್ತಿತ್ತು. ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಲ್ಲಿ ಪ್ರಥಮದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಯಣ್ಣನ ಸುತ್ತಲೂ ಅಕ್ರಮಗಳ ಕೋಟೆಯೇ ಇದೆ ಅಂತ ಹೇಳಾಗುತ್ತಿದೆ. ಹೆಚ್ಚಾಗಿ ಅಕ್ರಮಗಳ ಮೂಲಕ, ಬಿಬಿಎಂಪಿ ಎಂಪ್ಲೈಯ್ ಅಸೋಸಿಯೇಷನ್ ಮೂಲಕ ಹಾಗೂ ಸಾಹಿತ್ಯ ಪರಿಷತ್ ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದನು. ಕೆಲಸಕ್ಕಿಂತ ಬೇರೆ ಬೇರೆ ಡೀಲ್ ಗಳಲ್ಲೇ ಮಾಯಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿ ಇರುತ್ತಿದ್ದನು.

2009 ರಿಂದ 11 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿರುವ ಮೂಲಕ ಮಾಯಣ್ಣ ಇತಿಹಾಸ ಬರೆದಿದ್ದಾನೆ. 2012 /13 ರಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ 135 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿರುವ ಆರೋಪ  ಸಹ ಮಾಯಣ್ಣನ ಮೇಲಿದೆ. ಜೊತೆಗೆ  26 ಕೋಟಿರೂಪಾಯಿ‌ ಹೆಚ್ಚಿನ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿದ್ದ ಆರೋಪ ಇದೆ.  ಬಿಬಿಎಂಪಿ ಲೆಕ್ಕಪರಿಶೋಧಕ ವರದಿಯಲ್ಲಿ ಮಾಯಣ್ಣ ಅಕ್ರಮ ಬಯಲು ಆಗಿತ್ತು.

ಇದನ್ನೂ ಓದಿ:  ACB Raid: ಬೆಳ್ಳಂಬೆಳಗ್ಗೆ ರಾಜ್ಯದ 60 ಕಡೆ 100 ಅಧಿಕಾರಿ, 300 ಸಿಬ್ಬಂದಿಯಿಂದ ದಾಳಿ

ಮಾಯಣ್ಣ ಸ್ವಂತ ಅಕೌಂಟ್ ನಿಂದ ಹಣ ವಸೂಲಿ ‌ಮಾಡುವಂತೆ  ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿತ್ತು. ಸಾಕಷ್ಟು ಬಾರಿ ಬಿಬಿಎಂಪಿಯ ಬೇರೆ ವಿಭಾಗಗಳಿಗೆ  ವರ್ಗವಣೆಗಳಾದ್ರು ಮತ್ತದೇ ಪೋಸ್ಟ್ ನಲ್ಲಿ ಒತ್ತಡ ತಂದು ಉಳಿದುಕೊಳ್ಳುತ್ತಿದ್ದನು.

ಎಸಿಬಿ ಬೇಟೆಗೆ ಬಿದ್ದ ಮಾಯಣ್ಣ ಸರ್ಕಾರಕ್ಕೆ ಕೊಡಬೇಕು  135 ಕೋಟಿ..!

ಬಿಬಿಎಂಪಿ ರಸ್ತೆ ವಿಭಾಗದ ಎಫ್ ಡಿಸಿ ಮಾಯಣ್ಣ ವಿರುದ್ದ ನೂರಾರು ಆರೋಪಗಳಿವೆ. ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಮಾಯಣ್ಣ ಕುಳಿತುಕೊಳ್ಳುತ್ತಿದ್ದನು. 2012 - 2015ರವರೆಗೆ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ 135 ಕೋಟಿ ನೀಡಿರುವ ಆರೋಪ ಇದೆ. ಅನ್ವಯ ಮಾಯಣ್ಣರಿಂದ 135 ಕೋಟಿ ವಸೂಲಿಗೆ ನಗರಾಭಿವೃದ್ಧಿ ಇಲಾಖೆಗೆ ಕೋರ್ಟ್ ಸೂಚನೆ ನೀಡಿದ್ರೂ ಮಾಯಣ್ಣ ಮಾತ್ರ  ಕ್ಯಾರೆ ಎನ್ನದೇ ಅದೇ ಹುದ್ದೆಯಲ್ಲಿ ಮುಂದುವರಿದಿದ್ದನು.

ಇದನ್ನೂ ಓದಿ:  ACB Raid: ಎಸಿಬಿ ದಾಳಿಗೆ ಒಳಗಾದ 15 ಅಧಿಕಾರಿಗಳ ಸಂಪೂರ್ಣ ವಿವರ ಇಲ್ಲಿದೆ

 ಮಾಯಣ್ಣ , ಪ್ರಥಮ ದರ್ಜೆ ಸಹಾಯಕರು , ಟಿಟಿಎಂಪಿ ಕೇಂದ್ರ ಕಛೇರಿ , ಎನ್ ಆರ್.ವೃತ್ತ , ಬೆಂಗಳೂರು ನಗರ

ತನ್ನ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ ಹೊಂದಿರುವ ಕುರಿತು ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ , ಪೊಲೀಸ್ ಅಧೀಕ್ಷಕರು , ಎಸಿಬಿ , ಬೆಂಗಳೂರು ನಗರ ವಿಭಾಗ , ಬೆಂಗಳೂರು ರವರ ನೇತೃತ್ವದಲ್ಲಿ ಒಟ್ಟು 48 ಅಧಿಕಾರಿ ಹಾಗೂ ಸಿಬ್ಬಂದಿಗಳ 8 ತಂಡಗಳೊಂದಿಗೆ ಸರ್ಕಾರಿ ನೌಕರನಿಗೆ ಸೇರಿದ 8 ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಲಾಗಿದ್ದು , ಶೋಧನಾ ಕಾರ್ಯ ಮುಂದುವರೆದಿದೆ  ಎಂದು ಎಸಿಬಿ ಹೇಳಿದೆ.ACB ದಾಳಿಗೊಳಗಾದ ಸರ್ಕಾರಿ ಅಧಿಕಾರಿಗಳ ವಿವರ


 1.ಕೆ ಎಸ್ ಲಿಂಗೇಗೌಡ, ಇಇ ಸ್ಮಾರ್ಟ್ ಸಿಟಿ ಮಂಗಳೂರು.

2.ಶ್ರೀನಿವಾಸ್. ಕೆ,ಎಕ್ಸಿಕ್ಯುಟಿವ್ ಇಂಜಿನಿಯರ್, ಹೆಚ್ ಎಲ್ ಬಿಸಿ ಮಂಡ್ಯ

3 .ಲಕ್ಷ್ಮೀನರಸಿಂಹಯ್ಯ, ರೆವಿನ್ಯೂ ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ.
4.ವಾಸುದೇವ, ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ ಬೆಂಗಳೂರು.

5.ಬಿ. ಕೃಷ್ಣಾ ರೆಡ್ಡಿ, ಜನರಲ್ ಮ್ಯಾನೇಜರ್, ನಂದಿನಿ ಡೈರಿ ಬೆಂಗಳೂರು.

6.ಟಿ ಎಸ್ ರುದ್ರೇಶಪ್ಪ, ಜಂಟಿ ನಿರ್ದೇಶಕರು, ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ಗದಗ.

7.ಎ ಕೆ ಮಾಸ್ತಿ, ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್, ಸವದತ್ತಿ ಬೈಲಹೊಂಗಲ.

8.ಸದಾಶಿವ ಮಾರಲಿಂಗಣ್ಣನವರ್, ಸೀನಿಯರ್ ಮೋಟಾರ್ ಇನ್ಸ್‌ಪೆಕ್ಟರ್ ಗೋಕಾಕ್.

9.ನತಾಜಿ ಹೀರಾಜಿ ಪಾಟೀಲ್, ಗ್ರೂಪ್ ಸಿ ಹೆಸ್ಕಾಂ ಬೆಳಗಾವಿ.

10.ಕೆ ಎಸ್ ಶಿವಾನಂದ, ನಿವೃತ್ತ ಸಬ್ ರಿಜಿಸ್ಟರ್ ಬಳ್ಳಾರಿ.

11.ರಾಜಶೇಖರ್, ಪಿಸಿಯೋಥೆರಾಪಿಸ್ಟ್, ಯಲಹಂಕ ಸರ್ಕಾರಿ ಅಸ್ಪತ್ರೆ.

12.ಮಾಯಣ್ಣ, ಪ್ರಥಮ ದರ್ಜೆ ಕ್ಲರ್ಕ್, ಬಿಬಿಎಂಪಿ ಮೇಜರ್ ರೋಡ್ಸ್ ಆಂಡ್ ಇನ್ಪ್ರಾಸ್ಟ್ರಕ್ಚರ್ ಬೆಂಗಳೂರು.

13.ಎಲ್ ಸಿ ನಾಗರಾಜ್, ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ ಸಕಾಲ ಬೆಂಗಳೂರು

14.ಜಿ ವಿ ಗಿರಿ, ಗ್ರೂಪ್ ಡಿ ಬಿಬಿಎಂಪಿ, ಯಶವಂತಪುರ ಬೆಂಗಳೂರು

15.ಎಸ್ ಎಂ ಬಿರಾದಾರ್, ಜೂನಿಯರ್ ಇಂಜಿನಿಯರ್ ಪಿಡ್ಬ್ಯೂಡಿ ಜೇವರ್ಗಿ.

Published by:Mahmadrafik K
First published: