ಮದುವೆಯಾಗಿ ಹತ್ತು ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

news18
Updated:April 10, 2018, 8:02 PM IST
ಮದುವೆಯಾಗಿ ಹತ್ತು ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
news18
Updated: April 10, 2018, 8:02 PM IST
- ಶರಣು ಹಂಪಿ, ನ್ಯೂಸ್18 ಕನ್ನಡ 

ಬಳ್ಳಾರಿ (ಏ.10) :  ಗಣಿನಾಡು ಬಳ್ಳಾರಿಯಲ್ಲಿ ಅವಳಿ ಜವಳಿ ಅಲ್ಲ, ಬದಲಾಗಿ ಮೂರು ಮಕ್ಕಳಿಗೆ ಮಹಿಳೆಯೊಬ್ಬಳು ಜನ್ಮ ನೀಡಿದ್ದಾಳೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ಪಟ್ಟಣದ ಸದಾಶಿವ ನಗರದ ಆಸ್ಪತ್ರೆ ಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ.

ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿರುವ ತಾಯಿ ಮಾರಮ್ಮನ ಮೂವರು ತ್ರಿವಳಿ ಮಕ್ಕಳು ಆರೋಗ್ಯವಾಗಿದ್ದಾರೆ. ಮದುವೆಯಾಗಿ ಹತ್ತು ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವುದು ಕುಟುಂಬದವರಿಗೆ ತುಂಬ ಸಂತಸ ತಂದಿದೆ.

ಮದುವೆಯಾಗಿ ಒಂಬತ್ತು ವರುಷವಾದರೂ ಮಕ್ಕಳಾಗದೇ ಇದ್ದದ್ದಕ್ಕೆ ಸಾಕಷ್ಟು ನೋವು ಅನುಭವಿಸಿದ್ದರು. ಇದೀಗ ಮೂರು ಮಕ್ಕಳ ಜನ್ಮ ನೀಡಿರುವುದು ಕುಟುಂಬದವರ ಹರ್ಷಕ್ಕೆ ಪಾರವೇ ಇಲ್ಲ.
First published:April 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...