Narayanaswamy: ದಲಿತ ಸಿಎಂ ಕನಸು ಕಾಣೋನು ಹುಚ್ಚ; ಹೀಗ್ಯಾಕಂದ್ರು ಕೇಂದ್ರ ಸಚಿವರು?

ಈ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಒಂಭತ್ತು ಬಾರಿ ಶಾಸಕರಾಗಿ, ಮಂತ್ರಿಯಾದರೂ ಇನ್ನೇನು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅವರನ್ನು ಬೇಕು ಅಂತಲೇ ಮಾಡಲಿಲ್ಲ. ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಅಂತಲೇ ಅವರನ್ನು ಸೋಲಿಸಿದರು.

ಕೇಂದ್ರ ಸಚಿವ ನಾರಾಯಣಸ್ವಾಮಿ

ಕೇಂದ್ರ ಸಚಿವ ನಾರಾಯಣಸ್ವಾಮಿ

  • Share this:
ಆನೇಕಲ್​ (ಮೇ 15): ಕರ್ನಾಟಕ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ (Dalit CM) ಆಗುತ್ತಾರೆ ಅಂತ ಕನಸು ಕಾಣೋನು ಹುಚ್ಚ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (Union Minister A. Narayanaswamy) ಹೇಳಿದ್ದಾರೆ. ಆನೇಕಲ್‍ನ ಸಾಯಿರಾಮ್ ಕಾಲೇಜಿನಲ್ಲಿ (Sai Ram College) ನಡೆದ ಪದವಿ ಪ್ರಧಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗ್ತಾರೆ ಅಂತ ಕನಸು ಕಾಣೋನು ಹುಚ್ಚ. ದಲಿತ ಸಿಎಂ ಎನ್ನುವ ಚರ್ಚೆ ಕೇವಲ ರಾಜಕೀಯ ತೆವಲು ಅಷ್ಟೇ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈವರೆಗೆ ರಾಜ್ಯ ರಾಜಕಾರಣದಲ್ಲಿ (Politics)  ದಲಿತ ಸಿಎಂ ಯಾಕೆ ಆಗಲ್ಲ ಎಂಬುವುದಕ್ಕೆ ಈ ದೇಶದಲ್ಲಿ ಬಹಳಷ್ಟು ಉದಾಹರಣೆಗಳಿವೆ ಎಂದು ಹೇಳಿದ್ರು.

ಅಂಬೇಡ್ಕರ್​ ಅವ್ರನ್ನೇ ಮಂತ್ರಿಯಾಗಿರಲು ಬಿಡಲಿಲ್ಲ

ಸಂವಿಧಾನ ಬರೆದ ಡಾ.ಬಿ.ಆರ್. ಅಂಬೇಡ್ಕರ್‌ರವರಿಗೆ ಐದು ವರ್ಷಗಳ ಕಾಲ ಮಂತ್ರಿಯಾಗಿ ಮುಂದುವರೆಯುವುದಕ್ಕೂ ಸಹ ಬಿಡಲಿಲ್ಲ. ಅಂಬೇಡ್ಕರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೂಡ ನೀವು ಐದು ವರ್ಷ ಮಂತ್ರಿಯಾಗಿ ಮುಂದುವರಿಯಬೇಕು ಎಂದು ಅವರ ಮನೆಗೆ ಹೋಗಿ ಯಾರು ಒಂದು ಕಪ್ ಕಾಫಿಯೂ ಸಹ ಕುಡಿದಿಲ್ಲ ಎಂದು ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯನ್ನು ಮುಖ್ಯಮಂತ್ರಿ ಮಾಡಿಲ್ಲ

ಈ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಒಂಭತ್ತು ಬಾರಿ ಶಾಸಕರಾಗಿ, ಮಂತ್ರಿಯಾದರೂ ಇನ್ನೇನು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅವರನ್ನು ಬೇಕು ಅಂತಲೇ ಮಾಡಲಿಲ್ಲ. ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಅಂತಲೇ ಅವರನ್ನು ಸೋಲಿಸಿದರು. ಕರ್ನಾಟಕದ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಆಗುತ್ತಾರೆ ಅಂತ ಕನಸು ಕಾಣೋನು ಹುಚ್ಚರು. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸರಳತೆಗೆ ಹೆಸರಾಗಿರುವ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: Tragedy Love Story: ಪ್ರೀತಿಸಿದ ಹುಡುಗ ಅಪಘಾತಕ್ಕೆ ಬಲಿಯಾದ, ನೊಂದ ಹುಡುಗಿ ಸೂಸೈಡ್ ಮಾಡಿಕೊಂಡಳು! ಒಂದು ಪ್ರೇಮಕಥೆ ಎರಡು ಸಾವಿನಲ್ಲಿ ಅಂತ್ಯ

ದಲಿತರೊಬ್ಬರನ್ನು ಸಿಎಂ ಮಾಡುವೆ- ಕುಮಾರಸ್ವಾಮಿ

ಡಾ.ಬಿ.ಆರ್.‌ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತಾಡಿದ ಮಾಜಿ ಸಿಎಂ ಕುಮಾರಸ್ವಾಮಿ,  ಜೆಡಿಎಸ್‌ ಪಕ್ಷದಿಂದ ನನ್ನ ಜೀವಿತಾವಧಿಯೊಳಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಘೋಷಣೆ ಮಾಡಿದ್ರು. ‘ಈ ಹಿಂದೆ ನಮ್ಮ ಪಕ್ಷ ಹಾಸನ ಜಿಲ್ಲಾ ಪಂಚಾಯಿತಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ಆಮೇಲೆ ಅನೇಕ ದಲಿತ ನಾಯಕರು ಪಕ್ಷದಲ್ಲಿ, ಸರ್ಕಾರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು’ ಎಂದು ಹೇಳಿದರು.

ದಲಿತ ಅಭ್ಯರ್ಥಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ

ಆ ಸಂದರ್ಭದಲ್ಲಿ ನನ್ನ ಸಹೋದರ ರೇವಣ್ಣ ಅವರೂ ಮೊದಲ ಬಾರಿಗೆ ಜಿಲ್ಲಾ ಪಂಚಾಯ್ತಿಗೆ ಗೆದ್ದು ಬಂದಿದ್ದರು. ಆದರೆ, ಎಚ್.ಡಿ.ದೇವೇಗೌಡರು ಎಂಎ ಪದವೀಧರನಾಗಿದ್ದ ದಲಿತ ಅಭ್ಯರ್ಥಿಯನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಜಾತ್ಯತೀತ ಜನತಾದಳದಿಂದ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಬಂದೇ ಬರುತ್ತದೆ. ನಾನು ಭೂಮಿಯಿಂದ ಹೋಗುವ ಮುನ್ನ ದಲಿತ ಮುಖ್ಯಮಂತ್ರಿಯನ್ನು ಮಾಡೇ ಮಾಡುತ್ತೇನೆ. ಈ ನಿರೀಕ್ಷೆಯನ್ನು ಜೆಡಿಎಸ್ ಸಾಕಾರಗೊಳಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ರು.

ಇದನ್ನೂ ಓದಿ; Kaveri Water: 2030ಕ್ಕೆ ಬೆಂಗಳೂರಲ್ಲಿ ನೀರಿಗೆ ಹಾಹಾಕಾರ; ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಗಂಡಾಂತರ!

ಯಾವ ಜಾತಿ, ಧರ್ಮ ಎಂದು ನಾನು ಎಂದೂ ಕೇಳಿಲ್ಲ

ನಾನು ಮೊದಲಿನಿಂದಲೂ ಜಾತ್ಯತೀತ, ಧರ್ಮಾತೀತವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ದಿನನಿತ್ಯವೂ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದು ನನ್ನನ್ನು ಭೇಟಿ ಮಾಡುತ್ತಾರೆ. ಅವರನ್ನೆಲ್ಲ ನೀವು ಯಾವ ಜಾತಿ? ಯಾವ ಧರ್ಮ? ಎಂದು ನಾನು ಎಂದೂ ಕೇಳಿಲ್ಲ. ನಿಮ್ಮ ಕಷ್ಟವೇನು? ಎಂದಷ್ಟೇ ಕೇಳುತ್ತೇನೆ. ಇದು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಧರ್ಮ ಎಂದು ಎಚ್‍ಡಿಕೆ ಹೇಳಿದರು.
Published by:Pavana HS
First published: