ಕೋಲಾರ(ನವೆಂಬರ್. 25): ನನ್ನ ಜತೆ ಮುಂಬೈಗೆ ಬಂದ ಸ್ನೇಹಿತರಿಗೆ ಸಚಿವ ಸ್ಥಾನ ಖಚಿತ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಹೈಕಮಾಂಡ್ನಿಂದ ಆದೇಶ ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ನನ್ನ ಜತೆ ಮುಂಬೈಗೆ ಬಂದಿದ್ದ ಸ್ನೇಹಿತರಿಗೆ ಸಚಿವ ಸ್ಥಾನ ಖಚಿತ ಎಂದರು. ಖಾತೆ ಬದಲಾವಣೆ ಸಂಬಂಧ ಮಾಹಿತಿಯಿಲ್ಲ. ಈ ಬಗ್ಗೆ ಒಂದು ವಾರದಲ್ಲಿ ಗೊತ್ತಾಗುತ್ತದೆ. ಖಾತೆ ಬದಲಾವಣೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ, ಬಿಜೆಪಿ ಪಕ್ಷ ಏನು ಜವಾಬ್ದಾರಿಯನ್ನು ಕೊಡುತ್ತದೆಯೋ ಅದನ್ನು ನಿಭಾಯಿಸಲು ನಾನು ಸಿದ್ದನಿದ್ದೇನೆ ಎಂದು ಸಚಿವ ಹೆಚ್ ನಾಗೇಶ್ ತಿಳಿಸಿದರು. ಕೊರೋನಾ ಎರಡನೇ ಅಲೆ ಭೀತಿಯನ್ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೊರೋನಾ ಲಸಿಕೆ ಬಂದ ಕ್ಷಣ ಎಲ್ಲರಿಗೂ ಸಿಗಲ್ಲ. ಅಲ್ಲಿಯ ವರೆಗೆ ಎಲ್ಲರಿಗು ಮಾಸ್ಕ್ ಒಂದೇ ಲಸಿಕೆ ಎಂದರು.
65 ವರ್ಷ ಮೇಲ್ಪಟ್ಟವರಿಗೆ ಮೊದಲು ಲಸಿಕೆ ಸಿಗಲಿದೆ. ಒಂದೇ ಸಲ ಎಲ್ಲಾ ಲಸಿಕೆ ಸಂಗ್ರಹಿಸಲು, ಬಳಸಲು ಸಾಧ್ಯವಿಲ್ಲ. ಆದ್ಯತೆಯ ಮೇರೆಗೆ ಲಸಿಕೆ ಬರಲಿದೆ, ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಸಚಿವರು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ನೀಲಗಿರಿ ತಳಿ ನಿಷೇಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾನೂನು ಸಡಿಲಿಕೆಯಿಂದ ನಿಷೇಧ ಜಾರಿ ಆದೇಶ ಜಾರಿಯಾಗಿಲ್ಲ. ಮುಂದೆ ಸಚಿವ ಸಂಪುಟದಲ್ಲಿ ನೀಲಗಿರಿ ನಿಷೇಧ ವಿಚಾರ ಪ್ರಸ್ತಾಪ ಮಾಡಿ, ನೀಲಗಿರಿ ತೆರವು ಮಾಡಲು ಅನುಮತಿ ಕೇಳುವೆ ಎಂದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ