• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Heavy Rain: ಕ್ಲಾಸ್ ನಡೆಯುತ್ತಿದ್ದಾಗಲೇ ಶಾಲೆಗೆ ನುಗ್ಗಿದ ಮಳೆನೀರು, ವಿದ್ಯಾರ್ಥಿಗಳು ಶಿಕ್ಷಕರ ಪರದಾಟ!

Heavy Rain: ಕ್ಲಾಸ್ ನಡೆಯುತ್ತಿದ್ದಾಗಲೇ ಶಾಲೆಗೆ ನುಗ್ಗಿದ ಮಳೆನೀರು, ವಿದ್ಯಾರ್ಥಿಗಳು ಶಿಕ್ಷಕರ ಪರದಾಟ!

ರಾಜ್ಯದಲ್ಲಿ ಮಳೆಯಬ್ಬರ

ರಾಜ್ಯದಲ್ಲಿ ಮಳೆಯಬ್ಬರ

3 ಗಂಟೆಗು ಅಧಿಕ ಕಾಲ ಸುರಿದ ಭಾರೀ ಮಳೆಗೆ ಗದಗದ ಜನತೆ ಹೈರಾಣಾಗಿ ಹೋಗಿದ್ದಾರೆ. ಭಾರೀ ಮಳೆಗೆ ಶಾಲೆಗೆ ನೀರು ನುಗ್ಗಿದೆ. ಪರಿಣಾಮ ಶಾಲೆಯಲ್ಲಿದ್ದ ದಾಖಲೆ ಪತ್ರಗಳು ಹಾನಿಯಾಗಿದೆ. ಶಾಲೆಯ ಅಡುಗೆ ಕೊಠಡಿಯಲ್ಲಿದ್ದ ಬಿಸಿಯೂಟದ ರೇಷನ್ ಕೂಡ ನೀರುಪಾಲಾಗಿದೆ.

  • Share this:

ಕರ್ನಾಟಕದಲ್ಲಿ ಎಡೆಬಿಡದೇ ಮಳೆಯಾಗುತ್ತಿದೆ. ಮಳೆಯಬ್ಬರಕ್ಕೆ (Heavy Rain) ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಗದಗದಲ್ಲಿ (Gadaga) ಮಳೆಗೆ ಅವಾಂತರವೇ ಸೃಷ್ಠಿಯಾಗ್ತಿದೆ. ವರುಣ ಆರ್ಭಟಕ್ಕೆ ತರಗತಿ (Classroom) ನಡೆಯುತ್ತಿದ್ದಾಗಲೇ ಶಾಲೆಗೆ (School) ನೀರು ನುಗ್ಗಿದೆ. ಏಕಾಏಕಿ ಶಾಲೆಗೆ ನೀರು ನುಗ್ಗಿದ ಪರಿಣಾಮ ವಿದ್ಯಾರ್ಥಿಗಳು, ಶಿಕ್ಷಕರು (Students Teachers) ಪರದಾಡಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1 ರಿಂದ 7 ತರಗತಿಯ ವಿದ್ಯಾರ್ಥಿಗಳ ಕೊಠಡಿಗಳಿಗೆ ಮಳೆ ನೀರು ನುಗ್ಗಿದೆ. ತರಗತಿ ನಡೆಯುತ್ತಿರುವ ವೇಳೆ ಏಕಾಏಕಿ ಶಾಲೆಗೆ ನೀರು ನುಗ್ಗಿದ ಪರಿಣಾಮ ಒಂದು ಬಾರಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ರು.


3 ಗಂಟೆಗು ಅಧಿಕ ಕಾಲ ಸುರಿದ ಭಾರೀ ಮಳೆಗೆ ಗದಗದ ಜನತೆ ಹೈರಾಣಾಗಿ ಹೋಗಿದ್ದಾರೆ. ಭಾರೀ ಮಳೆಗೆ ಶಾಲೆಗೆ ನೀರು ನುಗ್ಗಿದೆ. ಪರಿಣಾಮ ಶಾಲೆಯಲ್ಲಿದ್ದ ದಾಖಲೆ ಪತ್ರಗಳು ಹಾನಿಯಾಗಿದೆ. ಶಾಲೆಯ ಅಡುಗೆ ಕೊಠಡಿಯಲ್ಲಿದ್ದ ಬಿಸಿಯೂಟದ ರೇಷನ್ ಕೂಡ ನೀರುಪಾಲಾಗಿದೆ.


ನೀರನ್ನು ಹೊರಹಾಕಲು ಪರದಾಟ
ಚರಂಡಿ ದುರಸ್ತಿ ಇಲ್ಲದಿರುವ ಕಾರಣ ಶಾಲೆಗೆ ಮಳೆಯ ನೀರು ನುಗ್ಗಿದೆ. ಶಾಲೆಯೊಳಗೆ ನುಗ್ಗಿದ್ದ ನೀರನ್ನು ಹೊರಹಾಕಲು ಶಾಲಾ ಸಿಬ್ಬಂದಿ ಹೈರಾಣಾದರು. ಇನ್ನು ಭಾರೀ ಮಳೆಗೆ ಬೆನಹಾಳ ಗ್ರಾಮದ ರಸ್ತೆಗಳು ಕೆರೆಯಂತಾಗಿವೆ. ವಿದ್ಯಾರ್ಥಿಗಳು ಪರದಾಡುವಂತಾಗಿದೆ.


ಇದನ್ನೂ ಓದಿ: ಜನರೇ ಗಮನಿಸಿ, ರಾಜ್ಯದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಭಾರೀ ಮಳೆ


ಕೊಚ್ಚಿ ಹೋದ ಬೈಕ್, ಸವಾರ ಬಚಾವ್!
ವರುಣನ ಆರ್ಭಟಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿರುವ ಬಡಗಿ ಹಳ್ಳ ಉಕ್ಕಿ ಹರಿಯುತ್ತಿದೆ. ಈ ವೇಳೆ ಹಳ್ಳ ದಾಟಲು ಯತ್ನಿಸಿದ ರೈತ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಹಳ್ಳದಲ್ಲಿ ಬೈಕ್ ಕೊಚ್ಚಿ ಹೋಗಿದ್ದು, ಬೈಕ್ ಸವಾರ ಬಚಾವ್ ಆಗಿದ್ದಾರೆ.


ರೈತ ಕುಮಾರ ಬ್ಯಾಟಿ ಎಂಬುವರಿಗೆ ಸೇರಿದ ಬೈಕ್ ಇದಾಗಿದೆ. ಜಮೀನನಲ್ಲಿ ಕೆಲಸಕ್ಕೆ ಅಂತಾ ಹೋಗಿದ್ದರು. ಕೆಲಸ ಮುಗಿಸಿ ವಾಪಸ್ ಹಳ್ಳ ದಾಟುವ ವೇಳೆ ಬೈಕ್ ಕೊಚ್ಚಿಹೋಗಿದೆ. ಇನ್ನು ಹಳ್ಳದ ಸೇತುವೆ ಜಲಾವೃತವಾದ ಕಾರಣ ರೈತರು ಕಂಗಾಲಾಗಿದ್ದಾರೆ.


ಚಾಮರಾಜನಗರದಲ್ಲಿ ಸೇತುವೆ ಮುಳುಗಡೆ, ಜನ ಪರದಾಟ
ಭಾರೀ ಮಳೆ ಹಿನ್ನಲೆ ಚಾಮರಾಜನಗರದ ಮಸ್ಕಿತ್ತಿಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕೊಳ್ಳೆಗಾಲ - ತಮಿಳುನಾಡು ಸತ್ಯಮಂಗಲಂ ಅಂತರರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಶಾಲೆಗಳಿಗೆ ತೆರಳಿದ ವಿದ್ಯಾರ್ಥಿಗಳು, ಶಿಕ್ಷಕರು, ಜಮೀನುಗಳಿಗೆ ತೆರಳಿದ ರೈತರು, ಕೆಲಸಕಾರ್ಯಗಳಿಗೆ ತೆರಳಿದ್ದ ಸಾರ್ವಜನಿಕರು ವಾಪಸ್ ತೆರಳಲು ಪರದಾಡುವಂತಾಗಿದೆ.


ಹೊಸ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿ ಆರು ತಿಂಗಳಾದರು ಸೇತುವೆ ನಿರ್ಮಾಣವಾಗಿಲ್ಲ. ಹಳೆಯ ಸೇತುವೆ ಶಿಥಿಲಗೊಂಡಿದೆ. ಹಳೆ ಸೇತುವೆ ಮೇಲೆ ನೀರು ಉಕ್ಕಿ ರಭಸವಾಗಿ ಹರಿಯುತ್ತಿದೆ.


ತುಮಕೂರಿನಲ್ಲಿ ತುಂಬಿದ ಕೆರೆ, ಜನರಲ್ಲಿ ಆತಂಕ
ಸತತ ಮಳೆಗೆ ತುಮಕೂರಿನ ಕೆರೆಗಳು ಭರ್ತಿಯಾಗಿದೆ. ಮಾತ್ರವಲ್ಲದೇ ಕೆರೆಗಳು ಭರ್ತಿಯಾಗಿ ಕಟ್ಟೆಯಲ್ಲಿ ನೀರು ಸೋರಿಕೆಯಾಗುತ್ತಿದೆ. ತುಮಕೂರು ತಾಲೂಕಿನ ದೇವರಾಯಪಟ್ಟಣದ ಕೆರೆಯಿಂದ ನೀರು ಸ್ವಲ್ಪಸ್ವಲ್ಪವೇ ಹೊರಬರ್ತಿದೆ. ಕೆರೆಯಿಂದ ನೀರು ಲೀಕ್ ಹಿನ್ನೆಲೆ ಸ್ಥಳೀಯರ ಆತಂಕ ಮನೆಮಾಡಿದೆ.


ಇದನ್ನೂ ಓದಿ: ಸ್ಮಶಾನ ಇಲ್ಲದೇ ಹೆಣ ಹೂಳಲು ಪಂಚಾಯ್ತಿ ಆವರಣದಲ್ಲಿ ಗುಂಡಿ ತೆಗೆದ ಗ್ರಾಮಸ್ಥರು


ಮಡಿಕೇರಿಯಲ್ಲಿ ಮಳೆ, ಬಡಾವಣೆ ಜಲಾವೃತ
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಹಾಗಾಗಿ ಮಡಿಕೇರಿ ನಗರದ ಹಲವೆಡೆ ಪ್ರವಾಹ ಭೀತಿ ಎದುರಾಗಿದೆ. ಮಡಿಕೇರಿ ನಗರದ ಕಾವೇರಿ ಬಡಾವಣೆ, ಕೈಗಾರಿಕಾ ಬಡಾವಣೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.


ಕಾರು, ಬೈಕ್ ಮುಳುಗಡೆ
ಕಾವೇರಿ ಬಡಾವಣೆಯಂತೂ ಸಂಪೂರ್ಣ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಮನೆ ಮುಂಭಾಗ ನಿಲ್ಲಿಸಿದ್ದ ಬೈಕು ಕಾರುಗಳು ಮುಳುಗಡೆಯಾಗಿದೆ. ಪ್ರವಾಹದ ಪರಿಸ್ಥಿತಿಯಿಂದ ಜನ ಪರದಾಟ ನಡೆಸುವಂತಾಗಿದೆ.

First published: