ಕೋವಿಡ್​ನಿಂದ 4 ಲಕ್ಷ ಜನ ಮೃತಪಟ್ಟಿದ್ದಾರೆ ಆದರೆ, ಸರ್ಕಾರ ಯಾರಿಗೂ ಸಹಾಯ ಮಾಡಿಲ್ಲ; ಡಿ.ಕೆ. ಶಿವಕುಮಾರ್

ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ರು. 36 ಮನೆಗೂ ಹೋಗಿ , ಒಂದು ಲಕ್ಷ ಕೊಟ್ಟು ಬಂದ್ವಿ. ಯಡಿಯೂರಪ್ಪ ಸರ್ಕಾರ ಅದನ್ನ ಮಾಡಿಲ್ಲ. ಯಾರ್ಯಾರು ಸತ್ತಿದ್ದಾರೆ, ಅವ್ರಿಗೆ ಪರಿಹಾರ ಕೊಡಿಸಬೇಕು. ನಾವು ಹೋರಾಟ ಮಾಡ್ತೀವಿ ಎಂದು ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್.

ಡಿ.ಕೆ. ಶಿವಕುಮಾರ್.

 • Share this:
  ಬೆಂಗಳೂರು (ಆಗಸ್ಟ್​ 22); ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಜ‌ನ ಸತ್ತಿದ್ದಾರೆ. ದೇಶದಲ್ಲಿ ಮಾರಕ ಕೊರೋನಾ ಸೋಂಕಿನಿಂದ ಕನಿಷ್ಟ 4 ಲಕ್ಷ ಜನ ಸಾವನ್ನಪ್ಪಿದ್ದಾರೆ.  ಬೆಡ್ ಸಿಗದೆ, ಓಡಾಡಿ ನೂರಾರು ಜನ ಸತ್ತಿದ್ದಾರೆ. ಆದರೆ, ರಾಜ್ಯ-ಕೇಂದ್ರ ಸರ್ಕಾರದಿಂದ ಬಾಧಿತ ಜನರಿಗೆ ಈವರೆಗೆ ಯಾವುದೇ ಸಹಾಯವಾ ಗಿಲ್ಲ. ಪರಿಹಾರ ಕೊಡಬೇಕಾಗುತ್ತದೆ ಎಂದು ಆ ಲೆಕ್ಕವನ್ನೇ ತೆಗೆದುಬಿಟ್ಟಿದ್ದಾರೆ. ಗುಜರಾತ್ ನಲ್ಲಿ‌ ಎಲ್ಲಾ ಟ್ಯಾಕ್ಸ್ ಗಳನ್ನ ಮನ್ನಾ ಮಾಡಿದರು. ಆದರೆ, ಇಲ್ಲಿ ಡಬಲ್ ಡಬಲ್ ಟ್ಯಾಕ್ಸ್ ಹಾಕಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್​ ಪಕ್ಷ ಅಸೆಂಬ್ಲಿಯಲ್ಲಿ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ತಿಳಿಸಿದ್ದಾರೆ.

  ಕಾಂಗ್ರೆಸ್​ ವತಿಯಿಂದ ಇಂದು ಕೊರೋನಾ ವಾರಿಯರ್ಸ್​ಗಳಿಗಾಗಿ ಹಮ್ಮಿಕೊಂಡಿದ್ದ ಸಸ್ಮಾನ ಕಾರ್ಯಕ್ರಮದಲ್ಲಿ ರಾಜ್ಯ-ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಡಿ.ಕೆ. ಶಿವಕುಮಾರ್​, "ಹುಟ್ಟು ಸಾವಿನ ಮಧ್ಯೆದಲ್ಲಿ ನಾವ್ ಏನು ಮಾಡ್ತೀವಿ ಅನ್ನೋದ್ ಮುಖ್ಯ. ಸಮಾಜದ ಸೇವೆ ಬಹಳ ಮುಖ್ಯ. ಸ್ವಾರ್ಥವಿಲ್ಲದೇ ಸೇವೆ ಮಾಡಿದ್ರೆ ಸಮಾಜ ಗೌರವಿಸುತ್ತದೆ. ಪಕ್ಷ ಭೇದವಿಲ್ಲದೇ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ತ್ಯಾಗ ಮಾಡಿದವ್ರಿಗೆ ಪಕ್ಷ ಮುಖ್ಯವಲ್ಲ, ಗೌರವ ಮುಖ್ಯ. ನಾವೆಲ್ಲಾ ಭಾರತೀಯರು.

  ಅವ್ನ್ ಯಾರೋ ಎಂಪಿ, ಎಲ್ಲಾರು ಪಂಕ್ಚರ್ ಹಾಕೋರ್ ಅಂದ. ಎದೆ ಸೀಳಿದ್ರೆ ಎರಡು ಅಕ್ಷರ ಇಲ್ಲ ಎಂದು ಹೇಳಿದ್ದ. ಅವರವರ ವೃತ್ತಿಗೆ ಸಂಬಂಧಿಸಿದಂತೆ ಕೆಲಸ ಮಾಡ್ತಾರೆ. ಅದರಲ್ಲಿ ತಪ್ಪೇನಿದೆ? ಪಂಕ್ಚರ್ ಹಾಕಿಲ್ಲ ಅಂದ್ರೆ ಗಾಡಿ‌ ಮುಂದಕ್ಕೆ ಹೋಗುತ್ತಾ, ಅವರೇ ಪಂಕ್ಚರ್ ಹಾಕ್ಕೊಂಡು ಹೋಗ್ತಾರಾ? ಹೆಸ್ರು ಹೇಳೋದ್ ಬೇಡ ಅಂತೇಳಿ ತೇಜಸ್ವಿ ಸೂರ್ಯಗೆ ಟಾಂಗ್ ಕೊಟ್ಟ ಡಿಕೆಶಿ‌.

  ಇದೇ ಸಂದರ್ಭದಲ್ಲಿ ಜನರ ಸಹಾಯಕ್ಕೆ ಮುಂದಾಗದ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧವೂ ಕಿಡಿಕಾರಿದರು. "ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ಸಾವನ್ನಪ್ಪಿದ್ರು. 36 ಮನೆಗೂ ಹೋಗಿ , ಒಂದು ಲಕ್ಷ ಕೊಟ್ಟು ಬಂದ್ವಿ. ಯಡಿಯೂರಪ್ಪ ಸರ್ಕಾರ ಅದನ್ನ ಮಾಡಿಲ್ಲ. ಯಾರ್ಯಾರು ಸತ್ತಿದ್ದಾರೆ, ಅವ್ರಿಗೆ ಪರಿಹಾರ ಕೊಡಿಸಬೇಕು. ನಾವು ಹೋರಾಟ ಮಾಡ್ತೀವಿ. ಕೊರೋನಾದಿಂದ ಸಾವಿರಾರು ಜನ ಸತ್ರು. ಕೋವಿಡ್ ಕಾಲದಲ್ಲಿ ಜನರಿಗೆ ಸಾಕಷ್ಟು ತೊಂದ್ರೆ ಆಯ್ತು. ಇದಕ್ಕೆಲ್ಲಾ ಸರ್ಕಾರ ಕಾರಣ. ಯಾವ ಸರ್ಕಾರವೂ ಜನರ ನೆರವಿಗೆ ಮುಂದಾಗಿಲ್ಲ.

  ಇದನ್ನೂ ಓದಿ: ಅಫ್ಘಾನ್‌ನಿಂದ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ: ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

  ಸರ್ಕಾರ ಕೋವಿಡ್ ನಿಂದ ಸತ್ತವರಿಗೆ ಒಬ್ರಿಗೂ ಸಹಾಯ ಮಾಡಿಲ್ಲ. ವ್ಯಾಪಾರಿಗಳಿಗೆ ಯಾವೊಂದು ಟ್ಯಾಕ್ಸ್ ಕಡಿಮೆ ಮಾಡಲಿಲ್ಲ. ನನ್ನ ವಿರುದ್ದ ಬೇಕಾದಷ್ಟು ಟೀಕೆ ಟಿಪ್ಪಣಿ ಮಾಡ್ತಾರೆ. ನಾನು ಮುಸ್ಲಿಂರನ್ನು ಓಲೈಕೆ ಮಾಡ್ತೇನೆ ಹಾಗೇ ಹೀಗೆ ಅಂತ ಬೇಕಾದಷ್ಟು ಮಾತಾಡಿಬಿಟ್ಟರು. ಹೌದು, ನಾನು ಒಪ್ಕೋತೆನೆ, ಮುಸ್ಲಿಂರೆಲ್ಲ ನನ್ನ ಸಹೋದರರು" ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

  ಇದನ್ನೂ ಓದಿ: ಜಾತಿ ಗಣತಿಗೆ ಬಿಜೆಪಿ ಮೀನಾ- ಮೇಷ; ಸರ್ವಪಕ್ಷ ನಿಯೋಗದೊಂದಿಗೆ ಮೋದಿ ಭೇಟಿ ಆಗಲು ಹೊರಟ ನಿತೀಶ್​ ಕುಮಾರ್​
  ಜಮೀರ್ ಅಹಮದ್ ಹಾಗೂ ವಿನಯ್ ಕುಲಕರ್ಣಿ ಪರವೂ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, "ವಿನಯ್ ಕುಲಕರ್ಣಿ ಯನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ತೇವೆ. ಅದರಲ್ಲಿ ಯಾವುದೇ ಅನುಮಾನವೇ ಬೇಡ. ವಿನಯ್ ಕುಲಕರ್ಣಿ ನಮ್ಮ ಹಿರಿಯ ನಾಯಕರು, ಮಂತ್ರಿ ಆಗಿದ್ದವರು. ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ನಮ್ಮ ಪಕ್ಷ ಇದೆ. ಕುಲಕರ್ಣಿ ವಿರುದ್ದ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸ್ ಮಾಡಿದ್ದಾರೆ. ಜಮೀರ್ ಅಹಮದ್ ಸಹ ತಮ್ಮ ಮೇಲೆ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಈ ಇಬ್ಬರ ಬೆನ್ನಿಗೂ ಪಕ್ಷ ಇದೆ" ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: