• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Election: ಕರಾವಳಿ ಕರ್ನಾಟಕದ ಜನತೆಗೆ ಈ ಎರಡರಲ್ಲಿ ಯಾವುದು ಮುಖ್ಯ? ಮತದಾರನ ಮನದಾಳ ಏನು?

Karnataka Election: ಕರಾವಳಿ ಕರ್ನಾಟಕದ ಜನತೆಗೆ ಈ ಎರಡರಲ್ಲಿ ಯಾವುದು ಮುಖ್ಯ? ಮತದಾರನ ಮನದಾಳ ಏನು?

ಕರಾವಳಿ ಕರ್ನಾಟಕ ಜನತೆಯ ಮನದಾಳ ಏನು?

ಕರಾವಳಿ ಕರ್ನಾಟಕ ಜನತೆಯ ಮನದಾಳ ಏನು?

Coastal Karnataka: 2018 ರಲ್ಲಿ, ಬಿಜೆಪಿ ಈ ಭಾಗದ 21 ಸ್ಥಾನಗಳನ್ನು ಗೆದ್ದಿತು, ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿತು. 2013 ರಲ್ಲಿ, ಈ 21 ಸ್ಥಾನಗಳಲ್ಲಿ ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದುಕೊಂಡಿತು, ಬಿಜೆಪಿಯ 5 ಮತ್ತು 3 ಸ್ವತಂತ್ರ ಅಭ್ಯರ್ಥಿಗಳ ಪಾಲಾಯಿತು.

 • Trending Desk
 • 5-MIN READ
 • Last Updated :
 • Karnataka, India
 • Share this:

ಬೆಂಗಳೂರು: ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಪಕ್ಷಗಳು (Political Party) ಭರದಿಂದಲೇ ಪ್ರಚಾರದ (Campaign) ಭರಾಟೆಯಲ್ಲಿ ತೊಡಗಿವೆ ಆದರೆ ಮತದಾರ (Voters) ಮಾತ್ರ ಮೇ 10 ರಂದೇ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸೂಕ್ತ ಉತ್ತರ ನೀಡಲು ಉತ್ಸುಕರಾಗಿದ್ದಾರೆ. ಕೊಡಗಿನ (Kodagu) ಬೆಟ್ಟ ಪ್ರದೇಶಗಳಲ್ಲಿರುವ ಊರುಗಳು ಸೇರಿದಂತೆ 21 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ (Coastal Karnataka) ಧರ್ಮ ರಾಜಕೀಯ ಮುನ್ನಡೆಯನ್ನು ಹಾಗೂ ಜನರ ಜೀವನದ ರೀತಿ ನೀತಿಗಳನ್ನು ನಿರ್ಧರಿಸುತ್ತದೆ.


ಉಡುಪಿಯಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶವಿಲ್ಲ ಈ ವಿಷಯವಾಗಿ ಪ್ರತಿಭಟನೆ ನಡೆಸಿದ್ದ ಯಶ್‌ಪಾಲ್ ಸುವರ್ಣ ಇದೀಗ ಉಡುಪಿ ಬಿಜೆಪಿ ಅಭ್ಯರ್ಥಿ.


ಮತದಾರರು ಪಕ್ಷಕ್ಕಿಂತ ಧರ್ಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ


ಮಂಗಳೂರಿನ ಸಮೀಪದ ಬೆಳ್ಳಾರೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಉದಯೋನ್ಮುಖ ನಾಯಕ ಪ್ರವೀಣ್ ನೆಟ್ಟಾರ್ ಅವರನ್ನು ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಕೊಲ್ಲಲಾಗಿದೆ ಎಂಬ ವದಂತಿ ಸುದ್ದಿಯ ಮಧ್ಯೆ ಯುವ ಬಿಜೆಪಿ ನಾಯಕ ಬಲಿಯಾದರು.


coastal karnataka election, karnataka election update, communal clash, karnataka religion, communal fight, kannada news, karnataka news, ಕರಾವಳಿ ಕರ್ನಾಟಕ, ಕರಾವಳಿ ಕೋಮು ಸಂಘರ್ಷ, ಕೋಮು ಗಲಾಟೆ, ಹಿಜಾಬ್ ಗಲಾಟೆ, ಹಲಾಲ್ ವಿವಾದ, ಅಜಾನ್ ವಿವಾದ, halal row, hijab row, azan row
ಪ್ರವೀಣ್ ನೆಟ್ಟಾರು ಮತ್ತು ಶಫಿ ಬೆಳ್ಳಾರೆ


ನೆಟ್ಟಾರು ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಇಸ್ಮಾಯಿಲ್ ಶಾಫಿ ಎಸ್‌ಡಿಪಿಐನಿಂದ ಸ್ಪರ್ಧಿಸಿರುವ ಅಭ್ಯರ್ಥಿಯಾಗಿದ್ದಾರೆ. ಈ ಭಾಗದ ಮತದಾರರು ಹಿಂದೂ ಧರ್ಮವನ್ನು ಉಳಿಸಲು ಮತ ಹಾಕುತ್ತೇವೆ ಎಂಬ ಇಂಗಿತವನ್ನು ತೋರ್ಪಡಿಸಿದ್ದಾರೆ.


ಗ್ರಾಮೀಣ ಭಾಗಗಳಲ್ಲಿ ಧರ್ಮದ ಬಗೆಗಿನ ನಂಬಿಕೆ


ಗ್ರಾಮೀಣ ಭಾಗದಲ್ಲಿ ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚಾಗಿ ಜಾತಿ, ಧರ್ಮ ಮತದಾರರಿಗೆ ಮುಖ್ಯವಾಗಿರುತ್ತದೆ. ಪಟ್ಟಣಗಳಲ್ಲಿ ಈ ಅಂಶಗಳನ್ನು ಕಾಣದೇ ಇದ್ದರೂ ಗ್ರಾಮೀಣ ಪರಿಸರಗಳಲ್ಲಿ ಧರ್ಮದ ಬಗೆಗಿನ ನಂಬಿಕೆ ಹೆಚ್ಚಾಗಿಯೇ ಇದೆ.


ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ರಾಜಕೀಯ ತಜ್ಞ ಎ ನಾರಾಯಣ ಮಾತನಾಡಿ ಕರಾವಳಿ ಕರ್ನಾಟಕವು ಧಾರ್ಮಿಕ ರೇಖೆಗಳ ಸುತ್ತ ಹೆಚ್ಚು ಆಧಾರವಾಗಿರುವುದು ನಿಜ ಎಂದು ತಿಳಿಸಿದ್ದಾರೆ. ಅವರು ಇದಕ್ಕೆ ಸೂಕ್ತ ಉದಾಹರಣೆ ನೀಡಿದ್ದು ಕೊಡಗು ಇದೀಗ ಸಂಪೂರ್ಣ ಬಿಜೆಪಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.


coastal karnataka election, karnataka election update, communal clash, karnataka religion, communal fight, kannada news, karnataka news, ಕರಾವಳಿ ಕರ್ನಾಟಕ, ಕರಾವಳಿ ಕೋಮು ಸಂಘರ್ಷ, ಕೋಮು ಗಲಾಟೆ, ಹಿಜಾಬ್ ಗಲಾಟೆ, ಹಲಾಲ್ ವಿವಾದ, ಅಜಾನ್ ವಿವಾದ, halal row, hijab row, azan row
ಬಿಜೆಪಿ ಧ್ವಜ


2018 ರಲ್ಲಿ, ಬಿಜೆಪಿ ಈ ಭಾಗದ 21 ಸ್ಥಾನಗಳನ್ನು ಗೆದ್ದಿತು, ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿತು. 2013 ರಲ್ಲಿ, ಈ 21 ಸ್ಥಾನಗಳಲ್ಲಿ ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದುಕೊಂಡಿತು, ಬಿಜೆಪಿಯ 5 ಮತ್ತು 3 ಸ್ವತಂತ್ರ ಅಭ್ಯರ್ಥಿಗಳ ಪಾಲಾಯಿತು.


ಬಿಜೆಪಿಯ ಮುನ್ನಡೆ ಸಾಧ್ಯವೇ?


ಇದಕ್ಕೂ ಮೊದಲು, 2004 ಮತ್ತು 2008 ರ ನಡುವೆ, ಈ ಪ್ರದೇಶದಲ್ಲಿ ಸತತ ಎರಡು ಚುನಾವಣಾ ಚಕ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು ಎಂದು ನಾರಾಯಣ್ ತಿಳಿಸಿದ್ದಾರೆ.


ಕಳೆದ ಎರಡು ವರ್ಷಗಳಲ್ಲಿ ನಡೆದ ಹಿಜಾಬ್, ಹಲಾಲ್, ಆಜಾನ್ ಇತ್ಯಾದಿಗಳ ಜೊತೆಗೆ ಬಿಜೆಪಿ ತನ್ನ ಮುನ್ನಡೆಯನ್ನು ಉಳಿಸಿಕೊಳ್ಳಲು ಸಾಧ್ಯವಾದರೆ ಅದು ಪಕ್ಷಕ್ಕೆ ಸಲ್ಲುವ ಜಯವಾಗಿದೆ ಎಂಬುದು ನಾರಾಯಣ್ ಹೇಳಿಕೆಯಾಗಿದೆ.


ಚುನಾವಣೆಯಲ್ಲಿ ಇದೀಗ ಮತದಾರರು ಪಕ್ಷಗಳು ಮಾಡುವ ಕೆಲಸವನ್ನು ಆಧರಿಸಿ ಮತ ಹಾಕುವ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಮೂರು ವರ್ಷಗಳಿಂದ ಮಂಗಳೂರಿನ ಬಲ್ಮಠದಲ್ಲಿ ಗಾರ್ಮೆಂಟ್ ಅಂಗಡಿ ಹೊಂದಿರುವ ಪ್ರಣವ್ ಕೃಷ್ಣ ತಮ್ಮನ್ನು ಬಿಜೆಪಿ ಬೆಂಬಲಿಗ ಎಂದು ಗುರುತಿಸಿಕೊಂಡಿದ್ದರೂ ಮೇ 10 ರಂದು ಯಾವ ಪಕ್ಷಕ್ಕೆ ವೋಟು ಒತ್ತಬೇಕು ಎಂಬುದರ ಬಗ್ಗೆ ತೀರ್ಮಾನಿಸಿಲ್ಲ ಎಂದು ಹೇಳಿದ್ದಾರೆ.


KR Pete congress candidate meets naga sadhu for bleesings mrq
ಸಾಂದರ್ಭಿಕ ಚಿತ್ರ


ಪಕ್ಷಗಳ ಮೇಲೆ ಬೇಸರ ಉಂಟಾಗಿದೆ


ಕಾರಣ ಪ್ರಸ್ತುತ ಸರಕಾರದಿಂದ ಯಾವುದೇ ಪ್ರಯೋಜನ ತಮಗುಂಟಾಗಿಲ್ಲ ಎಂದೇ ನೇರವಾಗಿ ತಿಳಿಸಿದ್ದಾರೆ. ಎಲ್ಲಾ ಪಕ್ಷಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.


ಮತಪ್ರಚಾರದ ಸಮಯದಲ್ಲಿ ಹೇಳುವ ಯಾವುದೇ ಭರವಸೆಗಳನ್ನು ಪಕ್ಷಗಳು ಈಡೇರಿಸುತ್ತಿಲ್ಲ. ರಸ್ತೆಗಳ ಅಗಲೀಕರಣವಾಗಿರಬಹುದು, ನೀರಿನ ಪೂರೈಕೆಯಾಗಿರಬಹುದು ಹೀಗೆ ಈ ಹಿಂದಿನ ಸಮಸ್ಯೆಗಳು ಇನ್ನೂ ಹಾಗೆಯೇ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:  Siddaramaiah: ಚುನಾವಣಾ ಪ್ರಣಾಳಿಕೆ ಎಂಬುದು ಮತ ಗಳಿಕೆಯ ಸಾಧನ ಅಲ್ಲ, ಬದಲಾವಣೆಯನ್ನು ತರಲು ಇರುವ ಮಾರ್ಗ; ಸಿದ್ದರಾಮಯ್ಯ

top videos


  ಮಂಗಳೂರಿನ ಚುನಾವಣಾ ಭವಿಷ್ಯವು ಕಳೆದ ಮೂರು ಚುನಾವಣೆಗಳಲ್ಲಿ ಕರಾವಳಿ ಕರ್ನಾಟಕವನ್ನು ಪ್ರತಿಬಿಂಬಿಸಿದೆ. ಜಿಲ್ಲೆಯಲ್ಲಿ ಮೂರು ಸ್ಥಾನಗಳನ್ನು ಹೊಂದಿದ್ದು, 2008 ಮತ್ತು 2018ರಲ್ಲಿ ಬಿಜೆಪಿ ಎರಡರಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನ ಯು.ಟಿ.ಖಾದರ್ ಒಂದರಲ್ಲಿ ಗೆಲುವು ಸಾಧಿಸಿದ್ದರು. 2013ರಲ್ಲಿ ಈ ಮೂರು ಸ್ಥಾನಗಳಲ್ಲಿಯೂ ಗೆಲುವು ಸಾಧಿಸಿತ್ತು.

  First published: