COVID Vaccination ರಾಜ್ಯದಲ್ಲಿ​ ಯಾವ ಜಿಲ್ಲೆ ಫಸ್ಟ್​​, ಯಾವುದು ಲಾಸ್ಟ್?

ಈವರೆಗೆ ಅತಿಹೆಚ್ಚು ಲಸಿಕೆ ಹಾಕಿದ ದಾಖಲೆ ಮಹಾರಾಷ್ಟ್ರದ್ದಾಗಿದೆ. ಈ ರಾಜ್ಯದಲ್ಲಿ 3.03 ಕೋಟಿ ಲಸಿಕೆ ಹಾಕಲಾಗಿದೆ. ಈಗ ನಿತ್ಯ 7-8 ಲಕ್ಷ ಲಸಿಕೆ ಹಾಕುತ್ತಿರುವ ಉತ್ತರ ಪ್ರದೇಶದಲ್ಲಿ ಈವರೆಗೆ 2.99 ಕೋಟಿ ಡೋಸ್​ಗಳನ್ನ ಜನರಿಗೆ ನೀಡಲಾಗಿದೆ. ಕರ್ನಾಟಕ ಕೂಡ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಹಾಕಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ಭಾರತದಲ್ಲಿ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಈಗ ಹೊಸ ಚುರುಕು ಸಿಕ್ಕಿದೆ. ಲಸಿಕೆ ಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಜವಾಬ್ದಾರಿಯನ್ನು ಹಿಂಪಡೆದು ತಾನೇ ಖರೀದಿಸಿ ಹಂಚಿಕೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ ದೇಶಾದ್ಯಂತ ಕೋವಿಡ್ ಲಸಿಕೆ ಕಾರ್ಯ ಕ್ಷಿಪ್ರ ಗತಿಯಲ್ಲಿ ಸಾಗಿದೆ. ಸರ್ಕಾರದ ಮಾಹಿತಿ ಪ್ರಕಾರ ಜೂನ್ 21ರ ನಂತರ ದೇಶಾದ್ಯಂತ ವ್ಯಾಪಕವಾಗಿ ಲಸಿಕೆಗಳನ್ನ ಹಾಕಲಾಗಿದೆ. ಜೂನ್ 19ರಿಂದ ಜೂನ್ 25ರವರೆಗಿನ ವಾರದಲ್ಲಿ 3.98 ಕೋಟಿ ಲಸಿಕೆ ಡೋಸ್​ಗಳನ್ನ ಹಾಕಲಾಗಿರುವುದು ತಿಳಿದುಬಂದಿದೆ. ಅಂದರೆ ಒಂದೇ ವಾರದಲ್ಲಿ 4 ಕೋಟಿಯಷ್ಟು ವ್ಯಾಕ್ಸಿನ್ ಹಾಕಲಾಗಿದೆ.

  ಈಗಾಗಲೇ ಮೂರನೇ ಅಲೆಯ ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಚುರುಕುಗೊಂಡಿರುವುದು ಸಾರ್ವಜನಿಕರು ತುಸು ನಿಟ್ಟುಸಿರು ಬಿಡಬಹುದಾಗಿದೆ. ಈ ಲಸಿಕೆ ಅಭಿಯಾನ ಇದೇ ಉತ್ಸಾಹದಲ್ಲಿ ಮುಂದುವರಿದಲ್ಲಿ ಡಿಸೆಂಬರ್ ವೇಳೆಗೆ ಕೇಂದ್ರ ಇಟ್ಟುಕೊಂಡಿದ್ದ ಲಸಿಕಾ ಗುರಿಯನ್ನು ಮುಟ್ಟುವುದು ಕಷ್ಟವಾಗುವುದಿಲ್ಲ. ಡಿಸೆಂಬರ್ ವೇಳೆಗೆ 94 ಕೋಟಿ ಪ್ರಜೆಗಳಿಗೆ ಸಂಪೂರ್ಣ ಲಸಿಕೆ ಹಾಕುವ ಮಹತ್ವಾಕಾಂಕ್ಷಿ ಗುರಿಯನ್ನ ಕೇಂದ್ರ ಇಟ್ಟುಕೊಂಡಿದೆ. ಅದರಂತೆ ಕರ್ನಾಟಕದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಲಾಗಿದೆ.

  ರಾಜ್ಯದಲ್ಲಿ COVID Vaccination ವಿಷಯದಲ್ಲಿ ಯಾವ ಜಿಲ್ಲೆ ಫಸ್ಟ್​​, ಯಾವುದು ಲಾಸ್ಟ್? ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಅಂಕಿ-ಅಂಶಗಳ ಸಮೇತ ಬಿಡುಗಡೆ ಮಾಡಿದೆ. ಲಸಿಕೆ ಅಭಿಯಾನದಲ್ಲಿ ಹಾವೇರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೆ ರಾಜಧಾನಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ.

  ದೇಶಾದ್ಯಂತ ಜನವರಿ 16 ರಿಂದ ಕೋವಿಡ್ ಲಸಿಕಾಭಿಯಾನ ಆರಂಭವಾಗಿತ್ತು. ರಾಜ್ಯದ ಹಲವು ಜಿಲ್ಲೆಗಳು ಲಸಿಕಾ ಅಭಿಯಾನದಲ್ಲಿ ಶೇ. 40 ರಷ್ಟು ಕೂಡ ಸಾಧಿಸಿಲ್ಲ. ರಾಜ್ಯದ ರಾಜಧಾನಿ ಬೆಂಗಳೂರು ಮಾತ್ರ ಶೇ. 50ರಷ್ಟು ಲಸಿಕಾ ಅಭಿಯಾನ ಪೂರೈಕೆ ಮಾಡಿದೆ. ಉಳಿದಂತೆ ಹಲವು ಜಿಲ್ಲೆಗಳು ಶೇ. 20-30ರ ಅಸುಪಾಸಿನಲ್ಲಿವೆ.

  ಇದನ್ನು ಓದಿ: ದಾಖಲೆ ವೇಗದಲ್ಲಿ ಕೋವಿಡ್ ಲಸಿಕಾ ಅಭಿಯಾನ; ಒಂದೇ ವಾರದಲ್ಲಿ 4 ಕೋಟಿ ಡೋಸ್

  ಮೊದಲ ಡೋಸ್ ಪಡೆದವರು ಎಷ್ಟು ಜನ?

  18-44 ವರ್ಷ ವಯಸ್ಸು- 52,06,190

  45 ವರ್ಷ ಮೇಲ್ಪಟ್ಟವರು- 1,06,11,739

  ಒಟ್ಟು - 1,73,63,581

  ಎರಡನೇ ಡೋಸ್ ಪಡೆದವರು ಎಷ್ಟು ಜನ?

  18-44 ವರ್ಷ ವಯಸ್ಸು- 45,688

  45 ವರ್ಷ ಮೇಲ್ಪಟ್ಟವರು- 26,25,343

  ಒಟ್ಟು- 34,08,896

  ರಾಜ್ಯದಲ್ಲಿ ಒಟ್ಟಾರೆ ಈ ತನಕ 2,07,72,477 ಜನರಿಗೆ ಲಸಿಕೆಯನ್ನ ಹಾಕಲಾಗಿದೆ‌. ಇದರಲ್ಲಿ ಮೊದಲ ಡೋಸ್ ಲಸಿಕೆಯನ್ನು 1,73,63,581 ಮಂದಿ ಪಡೆದಿದ್ದು, ಎರಡನೇ ಡೋಸ್​ ಅನ್ನು 34,08,896 ಮಂದಿ ಪಡೆದಿದ್ದಾರೆ.

  ಜಿಲ್ಲಾವಾರು ವ್ಯಾಕ್ಸಿನೇಷನ್‌ ಅಂಕಿ-ಅಂಶ

  ಶೇ. 30 ರಷ್ಟು ದಾಟದ ಜಿಲ್ಲೆಗಳ ಪಟ್ಟಿ

  1. ಹಾವೇರಿ- 18.14%.

  2. ಕಲಬುರಗಿ- 18.31%.

  3. ವಿಜಯಪುರ- 22.88%.

  4. ಬೆಳಗಾವಿ - 22.93%.

  5. ರಾಯಚೂರು-23.36%.

  6. ಯಾದಗಿರಿ- 24.12%.

  7. ದಾವಣಗೆರೆ- 24.70%.

  8. ಬೀದರ್ - 27.18%.

  9. ಬಾಗಲಕೋಟೆ-27.42%

  10. ಧಾರವಾಡ- 27.94%

  11. ಬಳ್ಳಾರಿ- 27.96%

  12. ಕೊಪ್ಪಳ- 28.91%

  13. ಚಾಮರಾಜನಗರ-29.70%

  14. ಗದಗ- 29.94%.

  15. ಶಿವಮೊಗ್ಗ- 30.53%.

  16. ಚಿತ್ರದುರ್ಗ - 30.55%.


  ಶೇ. 30ಕ್ಕಿಂತ ಹೆಚ್ಚು ಲಸಿಕಾಭಿಯಾನ ಪೂರೈಸಿದ ಜಿಲ್ಲೆಗಳು:

  1. ಉಡುಪಿ- 31.11%.

  2. ಚಿಕ್ಕಮಗಳೂರು - 32.41%.

  3. ಹಾಸನ - 33.03%.

  4. ಚಿಕ್ಕಬಳ್ಳಾಪುರ- 33.86%.

  5. ಮಂಡ್ಯ- 33.92%.

  6. ಉತ್ತರ ಕನ್ನಡ- 34.53%.

  7. ಬೆಂಗಳೂರು ಗ್ರಾಮಾಂತರ- 35.09%.

  8. ದಕ್ಷಿಣ ಕನ್ನಡ- 35.36%.

  9. ಕೊಡಗು- 37.97%.

  10. ಕೋಲಾರ- 38.59%.

  11. ಮೈಸೂರು- 39.31%.

  12. ರಾಮನಗರ- 40.12%.

  13. ಉಡುಪಿ - 42.91%.

  14. ಬೆಂಗಳೂರು- 57.59%


  ಜುಲೈ ತಿಂಗಳಲ್ಲಿ ದೇಶಾದ್ಯಂತ 20 ಕೋಟಿ ಲಸಿಕೆ ಹಾಕುವುದು ಕೇಂದ್ರದ ಗುರಿಯಾಗಿದೆ. ಹಾಗೆಯೇ, ಆಗಸ್ಟ್ ತಿಂಗಳಲ್ಲಿ ಗುರಿಯನ್ನ 30 ಕೋಟಿಗೆ ಇಟ್ಟುಕೊಳ್ಳಲಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ನ್ಯೂಸ್18 ವಾಹಿನಿಗೆ ತಿಳಿಸಿದ್ದಾರೆ. ಈ ತಿಂಗಳ ಗುರಿ ಅಂದುಕೊಂಡಂತೆ ಈಡೇರಿದರೆ ಡಿಸೆಂಬರ್ ಅಂತ್ಯದ ವೇಳೆಗೆ 94 ಕೋಟಿ ಮಂದಿಗೆ ವ್ಯಾಕ್ಸಿನ್ ಹಾಕುವ ಗುರಿ ಮುಟ್ಟಬಹುದು ಎಂದು ಈ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

  ಈವರೆಗೆ ಅತಿಹೆಚ್ಚು ಲಸಿಕೆ ಹಾಕಿದ ದಾಖಲೆ ಮಹಾರಾಷ್ಟ್ರದ್ದಾಗಿದೆ. ಈ ರಾಜ್ಯದಲ್ಲಿ 3.03 ಕೋಟಿ ಲಸಿಕೆ ಹಾಕಲಾಗಿದೆ. ಈಗ ನಿತ್ಯ 7-8 ಲಕ್ಷ ಲಸಿಕೆ ಹಾಕುತ್ತಿರುವ ಉತ್ತರ ಪ್ರದೇಶದಲ್ಲಿ ಈವರೆಗೆ 2.99 ಕೋಟಿ ಡೋಸ್​ಗಳನ್ನ ಜನರಿಗೆ ನೀಡಲಾಗಿದೆ. ಕರ್ನಾಟಕ ಕೂಡ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಹಾಕಿದೆ.

  Published by:HR Ramesh
  First published: