• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕಲಬುರ್ಗಿಯಲ್ಲಿ ರೈತರ ಪ್ರತಿಭಟನೆ; ಕನಿಷ್ಠ ಬೆಂಬಲ ಬೆಲೆ ಎಲ್ಲಿದೇ ತೋರಿಸಿ, ಪ್ರಧಾನಿ ಮೋದಿಗೆ ಯೋಗೇಂದ್ರ ಯಾದವ್ ಪ್ರಶ್ನೆ

ಕಲಬುರ್ಗಿಯಲ್ಲಿ ರೈತರ ಪ್ರತಿಭಟನೆ; ಕನಿಷ್ಠ ಬೆಂಬಲ ಬೆಲೆ ಎಲ್ಲಿದೇ ತೋರಿಸಿ, ಪ್ರಧಾನಿ ಮೋದಿಗೆ ಯೋಗೇಂದ್ರ ಯಾದವ್ ಪ್ರಶ್ನೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್

ದೇಶಾದ್ಯಂತ ರೈತರ ಮಹಾ ಪಂಚಾಯತ್‌ಗಳು ನಡೆಯುತ್ತಿವೆ, ದೇಶಾದ್ಯಂತ ಬೆಂಬಲ ಬೆಲೆ ತೋರಿಸಿ ಅಭಿಯಾನ ಆರಂಭಿಸಿದ್ದು, ಹಲವು ರಾಜ್ಯಗಳಲ್ಲಿ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ಇಂದು ಕರ್ನಾಟಕದಲ್ಲಿ ಕಲಬುರ್ಗಿ ಜಿಲ್ಲೆ ಮೂಲಕ ಬೆಳೆಗಳಿಗೆ ಬೆಂಬಲ ತೋರಿಸಿ ಎಂಬ ಅಭಿಯಾನ ಆರಂಭಿಸಿದ್ದು, ಬಳ್ಳಾರಿ, ಬೆಳಗಾವಿ ಸೇರಿದಂತೆ ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಸಹ ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಯೋಗೇಂದ್ರ ಯಾದವ್ ಹೇಳಿದರು.

ಮುಂದೆ ಓದಿ ...
  • Share this:

ಕಲಬುರ್ಗಿ: ದೇಶದಲ್ಲಿ ಕನಿಷ್ಠ ಬೆಂಬಲ ಬೆಲೆ ಎಲ್ಲಿದೇ ಅನ್ನೋದನ್ನು ತೋರಿಸಿ ಎಂದು ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ ಯೋಗೇಂದ್ರ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಯಾದವ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೊಗರಿಯ ಕಣಜ ಕಲಬುರ್ಗಿಯಲ್ಲಿ ಇಂದು ರೈತ ಕಹಳೆ ಮೊಳಗಿತು. ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿರುವ ರೈತರು ಮತ್ತು ಕಾರ್ಮಿಕರು. ಮತ್ತೊಂದೆಡೆ ರೈತರ ಹೋರಾಟಕ್ಕೆ ಬೆಂಬಲ ನೀಡಿ ಘೋಷಣೆ ಮೊಳಗಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ದಂಡು. ಅಷ್ಟಕ್ಕೂ ಇಂತಹ ದೃಶ್ಯಗಳು ಕಂಡು ಬಂದಿದ್ದು ತೊಗರಿಯ ಕಣಜ ಕಲಬುರ್ಗಿ ನಗರದ ಎಪಿಎಂಸಿ ಮಾರ್ಕೆಟ್‌ನಲ್ಲಿ.


ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು ಮತ್ತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ನೀತಿಗಳನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಇಂದು ಕಲಬುರ್ಗಿಯಲ್ಲಿ ಸಹ ರೈತರ ಪ್ರತಿಭಟನೆ ನಡೆಯಿತು.‌ ರೈತರು ಬೆಳೆದ ಬೆಳಿಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಆಗ್ರಹಿಸಿ, ಸಾಮಾನ್ಯ ಕನಿಷ್ಠ ಬೆಲೆ ಎಲ್ಲಿದೆ ಎಂದು ಪ್ರಶ್ನಿಸಿ ಜನಾಂದೋಲನ ನಡೆಸಲಾಯಿತು. ಕಲಬುರ್ಗಿಯ ಎ.ಪಿ.ಎಂ.ಸಿ ಆವರಣದಲ್ಲಿ ಆಯೋಜಿಸಲಾಗಿದ್ದ ಕನಿಷ್ಠ ಬೆಂಬಲ ಬೆಲೆ ಎಲ್ಲಿದೆ ಎಂಬ ಜನಾಂದೋಲನದಲ್ಲಿ ಯೋಗೇಂದ್ರ ಯಾದವ್ ಹಾಗೂ ಪಂಜಾಬ್ ನಿಂದ ಆಗಮಿಸಿದ ಹಲವು ರೈತ ಮುಖಂಡರು ಭಾಗಿಯಾಗಿದ್ದರು.


ಕಲಬುರ್ಗಿಯ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ಎಂ.ಎಸ್.ಪಿ. ಕುರಿತು ಆಂದೋಲನದಲ್ಲಿ ಭಾಗಿಯಾದ ಅವರು, ಎಪಿಎಂಸಿಯಲ್ಲಿನ ವರ್ತಕರ ಬಳಿ ತೆರಳಿ ಚರ್ಚಿಸಿದರು. ತೊಗರಿ ಇತ್ಯಾದಿಗಳ ಸದ್ಯದ ಬೆಲೆ, ಬೆಂಬಲ ಬೆಲೆ ಕೊಡುತ್ತಿದ್ದಾರೆಯೇ ಅನ್ನೋ ಕುರಿತು ಚರ್ಚೆ ನಡೆಸಿದರು. ನಂತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರೈತ ವಿರೋಧಿ ಕಾಯ್ದೆಗಳು ಜಾರಿಯಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕನಿಷ್ಠ ಬೆಂಬಲ ಬೆಲೆ ಇದೆ ಎಂದು ಸುಳ್ಳು ಹೇಳುತ್ತಲೇ ಹೋಗುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಎಂ.ಎಸ್.ಪಿ. ಕಾಣಿಸುತ್ತಲೇ ಇಲ್ಲ ಎಂದು ಕಿಡಿಕಾರಿದರು.


ನಾವು ಬೆಂಬಲ ಬೆಲೆ ಎಲ್ಲಿದೆ ಅಂತಾ ಕೇಳ್ತಿದ್ದರು ಸಹ ಪ್ರಧಾನಿ ಮೋದಿ ಉತ್ತರ ಕೊಡುತ್ತಿಲ್ಲ. ಮಾಧ್ಯಮಗಳ ಮುಂದೆ ಪ್ರಧಾನಿ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಬೇಕೆಂದು ಒತ್ತಾಯಿಸಿದರು. ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲು ಒತ್ತಾಯಿಸಿ ರೈತರು ಹೋರಾಟ ಮಾಡ್ತಿದ್ದರೂ ಪ್ರಧಾನಿ ಮೋದಿ ತಲೆ ಕೆಡಿಸಿಕೊಳ್ತಿಲ್ಲ. ಇನ್ನು ಇದೇ ವಿಚಾರದಲ್ಲಿ ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಜನ ತಿರಸ್ಕರಿಸಬೇಕೆಂದು ಯಾದವ್ ಕರೆ ನೀಡಿದರು.


ಇದನ್ನು ಓದಿ: ಮೈಸೂರು ಮೇಯರ್ ಆಯ್ಕೆ ವಿಚಾರದ ಬಗ್ಗೆ ಹೈಕಮಾಂಡಿಗೆ ವರದಿ ಸಲ್ಲಿಸಿದ ಮಧು ಯಾಸ್ಕಿ ಗೌಡ್


ದೇಶಾದ್ಯಂತ ರೈತರ ಮಹಾ ಪಂಚಾಯತ್‌ಗಳು ನಡೆಯುತ್ತಿವೆ, ದೇಶಾದ್ಯಂತ ಬೆಂಬಲ ಬೆಲೆ ತೋರಿಸಿ ಅಭಿಯಾನ ಆರಂಭಿಸಿದ್ದು, ಹಲವು ರಾಜ್ಯಗಳಲ್ಲಿ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ಇಂದು ಕರ್ನಾಟಕದಲ್ಲಿ ಕಲಬುರ್ಗಿ ಜಿಲ್ಲೆ ಮೂಲಕ ಬೆಳೆಗಳಿಗೆ ಬೆಂಬಲ ತೋರಿಸಿ ಎಂಬ ಅಭಿಯಾನ ಆರಂಭಿಸಿದ್ದು, ಬಳ್ಳಾರಿ, ಬೆಳಗಾವಿ ಸೇರಿದಂತೆ ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಸಹ ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಯೋಗೇಂದ್ರ ಯಾದವ್ ಹೇಳಿದರು.


ಎಂ.ಎಸ್.ಪಿ. ತೋರಿಸಿ ಆಂದೋಲನಕ್ಕೆ ಕಲಬುರ್ಗಿ ಕಾಂಗ್ರೆಸ್ ಘಟಕ ಕೂಡ ಸಾಥ್ ನೀಡಿತು. ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ, ಮಾಜಿ ಶಾಸಕರಾದ ಬಿ ಆರ್ ಪಾಟೀಲ್, ರೈತ ಸಂಘದ ಮುಖಂಡರಾದ ಚಾಮರಸ ಮಾಲೀಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

  • ವರದಿ - ಶಿವರಾಮ ಅಸುಂಡಿ

Published by:HR Ramesh
First published: