DK Shivakumar| ಬಿಜೆಪಿಯ 2 ಕೋಟಿ ಉದ್ಯೋಗದ ಆಶ್ವಾಸನೆ ಏನಾಯ್ತು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಎಲ್ಲಿ?; ಡಿ.ಕೆ. ಶಿವಕುಮಾರ್ ಪ್ರಶ್ನೆ

ನಮ್ಮ ಜನ, ನಮ್ಮ ಯುವಕರು, ಪದವಿ ಪಡೆದವರು ಉದ್ಯೋಗವಿಲ್ಲದೆ ಹಳ್ಳಿಗಳಲ್ಲಿ ನರೇಗಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸರ್ಕಾರ ಆರ್ಥಿಕವಾಗಿ ಸಹಾಯವನ್ನು ಕೊಡಬೇಕಾಗಿದೆ. ಆದರೆ, ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳಿಗೆ ಮಾತ್ರ ಅನೇಕ ಘೋಷಣೆಗಳನ್ನು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಡಿಕೆ ಶಿವಕುಮಾರ್.

ಡಿಕೆ ಶಿವಕುಮಾರ್.

 • Share this:
  ಬೆಂಗಳೂರು (ಸೆಪ್ಟೆಂಬರ್​ 26); "ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ 2014 ರಲ್ಲಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ (2 Crore Employment) ಸೃಷ್ಟಿ ಮಾಡುತ್ತೇವೆ, ದೇಶದಲ್ಲಿ ನಿರುದ್ಯೋಗ ವನ್ನು ತೊಡಗಿಸಿ ಯುವಕರನ್ನು ಸ್ವಾವಲಂಭಿಗಳನ್ನಾಗಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು 7 ವರ್ಷವಾಯ್ತು. ವರ್ಷಕ್ಕೆ 2 ಕೋಟಿಯಂತೆ 14 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿತ್ತು. ಆದರೆ, ಸೃಷ್ಟಿಯಾದ ಉದ್ಯೋಗಗಳು ಎಷ್ಟು? ನಾನು ನಿಮ್ಮಲ್ಲಿ ಸರ್ಕಾರದ ಉದ್ಯೋಗವನ್ನು ಕೊಡಿ ಎಂದು ಕೇಳುತ್ತಿಲ್ಲ. ಖಾಸಗಿ ಉದ್ಯೋಗಗಳನ್ನಾದರೂ (Private Job) ಸೃಷ್ಟಿ ಮಾಡುವ ಅವಕಾಶ ಸರ್ಕಾರಕ್ಕೆ ಇಲ್ಲವೇ?" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ (DK Shivakumar) ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರವನ್ನು(BJP Government) ಪ್ರಶ್ನೆ ಮಾಡಿದ್ದಾರೆ.  ಬಿಜೆಪಿ ಸರ್ಕಾರವನ್ನು ಪ್ರಶ್ನಿಸಬೇಕು ಮತ್ತು ಸಮಾಜದ ಜ್ವಲಂತ ಸಮಸ್ಯೆಗಳನ್ನು ಜನರ ನಡುವೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶದಿಂದ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರೀಯರಾಗಿದ್ದಾರೆ. ಅಲ್ಲದೆ, ಸರ್ಕಾರವನ್ನು ಪ್ರಶ್ನಿಸುವ 'ಒಂದು ಪ್ರಶ್ನೆ' ವಿಡಿಯೋ ಸರಣಿಯನ್ನೂ ಆರಂಭಿಸಿದ್ದಾರೆ. ಈ ವಿಡಿಯೋ ಸರಣಿಯ ನಾಲ್ಕನೇ ಕಂತಿನಲ್ಲಿ 'ಉದ್ಯೋಗ ಸೃಷ್ಟಿ'ಯ ಕುರಿತು ಧ್ವನಿ ಎತ್ತಿರುವ ಡಿ.ಕೆ. ಶಿವಕುಮಾರ್,

  "ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಏಳು ವರ್ಷ ಆಯಿತು. ಹದಿನಾಲ್ಕು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕಿತ್ತು. ನಾನು ನಿಮ್ಮಲ್ಲಿ ಸರ್ಕಾರದ ಉದ್ಯೋಗವನ್ನು ಕೊಡಿ ಎಂದು ಕೇಳುತ್ತಿಲ್ಲ. ಖಾಸಗಿ ಉದ್ಯೋಗಗಳನ್ನು ಸೃಷ್ಟಿ ಮಾಡುವ ಅವಕಾಶ ಸರ್ಕಾರಕ್ಕೆ ಇಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.

  "ನಮ್ಮ ಜನ, ನಮ್ಮ ಯುವಕರು, ಪದವಿ ಪಡೆದವರು ಉದ್ಯೋಗವಿಲ್ಲದೆ ಹಳ್ಳಿಗಳಲ್ಲಿ ನರೇಗಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸರ್ಕಾರ ಆರ್ಥಿಕವಾಗಿ ಸಹಾಯವನ್ನು ಕೊಡಬೇಕಾಗಿದೆ. ಆದರೆ, ಬಿಜೆಪಿ ಸರ್ಕಾರ ಬಂಡವಾಳ ಶಾಹಿಗಳಿಗೆ ಮಾತ್ರ ಅನೇಕ ಘೋಷಣೆಗಳನ್ನು ಮಾಡುತ್ತಿದೆ" ಎಂದು ಟೀಕಿಸಿದ್ದಾರೆ.

  "ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ, ನಗರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದ್ದವರಿಗೆ ಯಾವುದೇ ಸಹಕಾರವನ್ನು ನೀಡುತ್ತಿಲ್ಲ. ಸರ್ಕಾರ ಇಂತಹ ವಿಚಾರಗಳಲ್ಲಿ ಯಾವ ದಿಕ್ಕಿನಲ್ಲಿ ಹೋಗಬೇಕು? ಉದ್ಯೋಗಗಳನ್ನು ಸೃಷ್ಟಿ ಮಾಡಲಿಕ್ಕೆ, ಕೈಗಾರಿಕೆಗಳನ್ನು ತರಲಿಕ್ಕೆ, ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳನ್ನು ಜನರಿಗೆ ಕೊಡಲಿಕ್ಕೆ ಯಾವೆಲ್ಲ ರೀತಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ನಿಮ್ಮ ಸಲಹೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನಲ್ಲಿ ತಿಳಿಸಿರಿ" ಎಂದು ಅವರು ಮನವಿ ಮಾಡಿದ್ದಾರೆ.

  ಡಿ.ಕೆ.ಶಿವಕುಮಾರ್‌ ಅವರು ಮೂರನೇ ಕಂತಿನಲ್ಲಿ 'ಕೋವಿಡ್‌ ಪರಿಹಾರ' ಕುರಿತು ಪ್ರಸ್ತಾಪಿಸಿದ್ದರು. “ಮಳೆ ಹೆಚ್ಚಾದಾಗ, ಭೂಕಂಪವಾದಾಗ ಯಾವುದೇ ಸಂದರ್ಭಗಳಲ್ಲಿ ಸರ್ಕಾರ ಪರಿಹಾರಗಳನ್ನು ಘೋಷಣೆ ಮಾಡಿದೆ. ಕೋವಿಡ್‌ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಸರ್ಕಾರ ಬಿಡುಗಾಸು ಪರಿಹಾರ ನೀಡಿಲ್ಲ. ಕೋವಿಡ್‌ನಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ. ಸರ್ಕಾರವೇ ನಂಬರ್‌ ಬಿಡುಗಡೆ ಮಾಡಿದೆ. ಒಬ್ಬರಿಗೂ ಪರಿಹಾರ ನೀಡಿಲ್ಲ” ಎಂದು ಟೀಕಿಸಿದ್ದರು.

  ಇದನ್ನೂ ಓದಿ: Delhi's Rohini Court shoot out Case: ಮೂವರ ಸಾವಿಗೆ ಕಾರಣವಾದ ದೆಹಲಿ ಕೋರ್ಟ್​ ಶೂಟೌಟ್ ಪ್ರಕರಣ; ಇಬ್ಬರ ಬಂಧನ!

  ಎರಡನೇ ಕಂತಿನಲ್ಲಿ 'ಸಿಲಿಂಡರ್‌ ಬೆಲೆ ಏರಿಕೆ'ಯ ಕುರಿತು ಮಾತನಾಡುತ್ತಾ, "ಸಿಲಿಂಡರ್ ಬೆಲೆ 888 ರೂ. ಇದ್ದು, ಸದ್ಯದಲ್ಲೇ 900 ರೂಪಾಯಿಯಿಂದ 1000 ರೂ.ವರೆಗೆ ತಲುಪಬಹುದು. ರಾಜ್ಯದ ಜನತೆಗೆ ಎಂತಹ ಸಂಕಷ್ಟ ನೋಡಿ. ಕೋವಿಡ್‌ನಿಂದ ಜನ ಸಾಯುತ್ತಿದ್ದಾರೆ. ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ ಬೆಲೆ ಮಾತ್ರ ಕಡಿಮೆಯಾಗಲಿಲ್ಲ" ಎಂದಿದ್ದರು. ಮೊದಲ ಕಂತಿನಲ್ಲಿ 'ಎನ್‌ಇಪಿಯನ್ನು ನಾಗಪುರ ಎಜುಕೇಷನ್‌ ಪಾಲಿಸಿ' ಎಂದು ವಿಶ್ಲೇಷಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: