ಪ್ರಧಾನಿ ಹೇಳಿದಂತೆ ದೀಪ ಹಚ್ಚಲು ಮೇಣದಬತ್ತಿ ಎಲ್ಲಿಂದ ತರೋಣ, ಹೊರಗೆ ಹೋದರೆ ಗೂಸಾ ಬೀಳ್ತಾವೆ; ಎಚ್​ಡಿ ರೇವಣ್ಣ

ಹಾಸನದಲ್ಲಿ ಅನ್ನ ಸಿಗುತ್ತಿಲ್ಲಾ. ಆದರೆ ಎಣ್ಣೆ ವ್ಯಾಪಾರ ಜೋರಾಗಿದೆ. ಲಾರಿಗಟ್ಟಲೇ ಎಣ್ಣೆಯನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ಒಂದಕ್ಕೆ ಎರಡು ಪಟ್ಟು ಹೆಚ್ಚು ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ

ಮಾಜಿ ಸಚಿವ ಎಚ್.ಡಿ.ರೇವಣ್ಣ

  • Share this:
ಹಾಸನ: ಲಾಕ್​ಡೌನ್ ಸಮಯದಲ್ಲೂ ರಾಜ್ಯ ಸರ್ಕಾರಕ್ಕೆ ಬಡವರ ಬಗ್ಗೆ ಚಿಂತನೆ ಇಲ್ಲವಾಗಿದೆ. ಬಡವರಿಗೆ ಸರ್ಕಾರ ಯಾವುದೇ ಸೌಲಭ್ಯ ತಲುಪಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ರೇವಣ್ಣ, ಜಿಲ್ಲಾಧಿಕಾರಿ ಡಿಸಿ ಕಚೇರಿ ಬಿಟ್ಟು ಹೊರಗಡೆ ಹೋಗುತ್ತಿಲ್ಲ. ಮನೆಯಲ್ಲೇ ಯೋಗ ಮಾಡಿ ಅಂತ ಮೋದಿಯವರು ಹೇಳುತ್ತಾರೆ. ಹಳ್ಳಿಗಳಲ್ಲಿ ರೈತರು ಎಲ್ಲಿ ಯೋಗ ಮಾಡ್ತಾರೆ ಸ್ವಾಮಿ ಎಂದು ವ್ಯಂಗ್ಯವಾಡಿದರು.

ಮೋದಿ ಹೇಳ್ತಾರೆ 5ನೇ ತಾರೀಖು ಮೇಣದಬತ್ತಿ ಹಚ್ಚಿ ಅಂತ. ಈಗ ಮೇಣದಬತ್ತಿ ಎಲ್ಲಿಂದ ತರೋದು ಎಲ್ಲಾ ಕಡೆ ಲಾಕ್ ಡೌನ್ ಆಗಿದೆ. ಮೇಣದಬತ್ತಿ ತರೋಕೆ ಮನೆಯಿಂದ ಹೊರಗೆ ಹೋದ್ರೆ ಗೂಸಾ ಬೀಳುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.30 ರಷ್ಟು ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಮೋದಿಯವರು ಹೇಳ್ತಾರೆ ದೀಪ ಹಚ್ಚಿ, ಮೇಣದ ಹಚ್ಚಿ ಅಂತಾ. ಒಂದು ಮೇಣದ ಬತ್ತಿಗೆ ಹತ್ತು ರೂಪಾಯಿ ಇದೆ. ಮೇಣದ ಬತ್ತಿಗೆ ಜನ ಎಲ್ಲಿಂದ ಹಣ ತರ್ತಾರೆ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಇದನ್ನು ಓದಿ: Narendra Modi Message: ಏಪ್ರಿಲ್​ 5ರ ರಾತ್ರಿ 9 ಗಂಟೆಗೆ ಇಡೀ ವಿಶ್ವಕ್ಕೆ ಬೆಳಕಿನ ಶಕ್ತಿ ತೋರಿಸಬೇಕು; ಪ್ರಧಾನಿ ಮೋದಿ

ಹಳ್ಳಿಗಳಲ್ಲಿ ರಾತ್ರಿ ಹೊತ್ತು ಹೆಂಗಸರ ಸೀರೆ ಕತ್ತರಿಸಿ ಮಾಸ್ಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹಾಸನದಲ್ಲಿ ಅನ್ನ ಸಿಗುತ್ತಿಲ್ಲಾ. ಆದರೆ ಎಣ್ಣೆ ವ್ಯಾಪಾರ ಜೋರಾಗಿದೆ. ಲಾರಿಗಟ್ಟಲೇ ಎಣ್ಣೆಯನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ಒಂದಕ್ಕೆ ಎರಡು ಪಟ್ಟು ಹೆಚ್ಚು ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಡಿಸಿ ಕೇಳಿದರೆ ಎಣ್ಣೆ ಅಂಗಡಿ ತೆರೆದಿರೋದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಅಂತಾರೆ. ಜಿಲ್ಲಾಧಿಕಾರಿ ಅಕೌಂಟ್​ನಲ್ಲಿ 2 ಕೋಟಿ ಹಣ ಇದೆಯಂತೆ. ಆದರೆ ಈಗ ಹಣ ಖರ್ಚು ಮಾಡೋಕೆ ಸರ್ಕಾರದಿಂದ ಗೈಡ್ ಲೈನ್ಸ್ ಕೊಟ್ಟಿಲ್ವಂತೆ. ನಮ್ಮ ಸರ್ಕಾರಕ್ಕೆ ಬರ ಬಂದಿದೆ ಅಂತಾ ಯಡಿಯೂರಪ್ಪ ಅವರು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

 

 

 
First published: