ಬೆಂಗಳೂರು(ಮೇ.12): ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ 2023 (Karnataka Assembly Election Results 2023) ಶನಿವಾರ, ಮೇ 13, 2023 ರಂದು ಪ್ರಕಟವಾಗಲಿದೆ. ಕರ್ನಾಟಕ ರಾಜ್ಯ ವಿಧಾನಸಭೆ ಸ್ಥಾನಗಳಿಗೆ ಮಂಗಳವಾರ, ಮೇ 10, 2023 ರಂದು ಮತದಾನ ನಡೆದಿದೆ. ಕರ್ನಾಟಕ ವಿಧಾನಸಭೆಯ 224-ಸದಸ್ಯರನ್ನು ಆಯ್ಕೆ ಮಾಡುವ ಮತದಾನವು ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಮತದಾನ ಮುಗಿದ ಬೆನ್ನಲ್ಲೇ ಕರ್ನಾಟಕ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದೆ. ವಿವಿಧ ಏಜೆನ್ಸಿಗಳ ಎಕ್ಸಿಟ್ ಪೋಲ್ ಫಲಿತಾಂಶಗಳು (Exit Poll Results) ರಾಜ್ಯದಲ್ಲಿ ಅತಂತ್ರ ಸ್ಥಿತಿ ಉಂಟಾಗಬಹುದು ಎಂದು ಸೂಚಿಸಿವೆ. ಕರ್ನಾಟಕದ ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ (ಎಸ್) ಭವಿಷ್ಯ ನಾಳೆ ಮೇ. 13ರಂದು ಬಹಿರಂಗವಾಗಲಿದೆ.
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ದಿನಾಂಕ ಮತ್ತು ಸಮಯ
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ 2023 ಅನ್ನು ಮೇ 13, 2023 ರಂದು ಪ್ರಕಟಿಸಲಾಗುತ್ತದೆ. ಕರ್ನಾಟಕ ವಿಧಾನಸಭೆಯ 224-ಸ್ಥಾನಗಳ ಮತಗಳ ಎಣಿಕೆಯು ಮೇ 13, 2023 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತದೆ. ಹೆಚ್ಚಿನ ಕ್ಷೇತ್ರಗಳ ಫಲಿತಾಂಶಗಳು ಮಧ್ಯಾಹ್ನದ ವೇಳೆಗೆ ಸಿಗಲಿವೆ. ಎಲ್ಲಾ 224 ಕ್ಷೇತ್ರಗಳಿಗೆ 2023 ರ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಗಳು ಸಂಜೆಯೊಳಗೆ ಪ್ರಕಟಗೊಳ್ಳಲಿವೆ. ಮೇ 15, 2023ಕ್ಕೆ ಕರ್ನಾಟಕ ಚುನಾವಣೆಯ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: Savitha Bai: ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ; ಫೇಸ್‌ಬುಕ್ ಲೈವ್‌ನಲ್ಲಿ ಗಳಗಳನೇ ಅತ್ತ ಪಕ್ಷೇತರ ಅಭ್ಯರ್ಥಿ!
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ 2023 ಅನ್ನು ಎಲ್ಲಿ ವೀಕ್ಷಿಸಬೇಕು?
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ನೇರ ನವೀಕರಣಗಳನ್ನು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ - eci.gov.in ನಲ್ಲಿ ನವೀಕರಿಸಲಾಗುತ್ತದೆ.
ಇದನ್ನೂ ಓದಿ: GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್!
ನೀವು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ 2023 ರ ನೇರ ಪ್ರಸಾರವನ್ನು ನ್ಯೂಸ್ 18 ಲೈವ್ ಟಿವಿಯಲ್ಲೂ ವೀಕ್ಷಿಸಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ https://kannada.news18.com/live-tv/
ಇನ್ನು ಚುನಾವಣೆಗೆರ ಸಂಬಂಧಿಸಿದ ಕ್ಷಣ ಕ್ಷಣದ ಅಪ್ಡೇಟ್ಸ್ಗಳು ನ್ಯೂಸ್ 18 ಕನ್ನಡದ ಲೈವ್ ಬ್ಲಾಗ್ನಲ್ಲೂ ಅಪ್ಡೇಟ್ ಮಾಡಲಾಗುತ್ತದೆ. ಮೇ. 13ರಂದು ಬೆಳಗ್ಗೆ ಇದು ಆರಂಭವಾಗಲಿದೆ. ಇದನ್ನು ಹೊರತುಪಡಿಸಿ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಲೆಕ್ಕಾಚಾರ, ಸಮೀಕ್ಷಾ ವರದಿ, ಅಭ್ಯರ್ಥಿಗಳ ವಿವರ ಸೇರಿ ಎಲ್ಲಾ ವಿವರಗಳನ್ನು ನ್ಯೂಸ್ 18 ಕನ್ನಡದ ಚುನಾವಣಾ ಪೇಜ್ನಲ್ಲಿ ಪಡೆಯಬಹುದು. ಅದಕ್ಕಗಿ ಈ ಲಿಂಕ್ ಕ್ಲಿಕ್ ಮಾಡಿ https://kannada.news18.com/assembly-elections-2023/karnataka/.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ