ಡಿಕೆಶಿ ಮುಂಬೈನಲ್ಲಿ ಹೋಟೆಲ್​ ಮುಂಭಾಗ ನಿಂತಿದ್ದಾಗ ನಾನು ಹೋಟೆಲ್​ ಒಳಗಡೆಯೇ ಇದ್ದೆ; ಬಿಜೆಪಿ ನಾಯಕ ಆರ್.ಅಶೋಕ್​

ಡಿಕೆ ಶಿವಕುಮಾರ್, ತಾನು ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್​ಗಿಂದ ದೊಡ್ಡೋನು ಅಂತ ತೋರಿಸಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಹತ್ತಿರ ಒಳ್ಳೆಯವರು ಅನಿಸಿಕೊಳ್ಳಲು ಮುಂಬೈಗೆ ಬಂದು ಹೈಡ್ರಾಮಾ ಮಾಡಿದ್ದಾರೆ ಎಂದು ಡಿಕೆಶಿ ಬಗ್ಗೆ ಅಶೋಕ್ ವ್ಯಂಗ್ಯವಾಡಿದರು.

HR Ramesh | news18
Updated:July 11, 2019, 4:42 PM IST
ಡಿಕೆಶಿ ಮುಂಬೈನಲ್ಲಿ ಹೋಟೆಲ್​ ಮುಂಭಾಗ ನಿಂತಿದ್ದಾಗ ನಾನು ಹೋಟೆಲ್​ ಒಳಗಡೆಯೇ ಇದ್ದೆ; ಬಿಜೆಪಿ ನಾಯಕ ಆರ್.ಅಶೋಕ್​
ಆರ್​ ಅಶೋಕ್​​.
  • News18
  • Last Updated: July 11, 2019, 4:42 PM IST
  • Share this:
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ಮುಂಬೈನ ರೆನೈಸೆನ್ಸ್​ ಹೋಟೆಲ್ ಮುಂಭಾಗ ಇದ್ದಾಗ, ನಾನು ಹೋಟೆಲ್ ನಲ್ಲಿಯೇ ಇದ್ದೇ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ನಾನು ಸಹ ಮುಂಬೈನ ಹೋಟೆಲ್ ನಲ್ಲಿ ಇದ್ದೆ. ಪಕ್ಷೇತರ ಇಬ್ಬರ ಶಾಸಕರು ಅದೇ ಹೋಟೆಲ್​ನಲ್ಲಿ ಇದ್ದರು. ಅವರನ್ನು ಬಿಜೆಪಿಗೆ ಬೆಂಬಲ ಕೊಡುವಂತೆ ಕೇಳಲು ಹೋಗಿದ್ದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ನಾನು ಭೇಟಿ ಮಾಡಿಯೇ ಇಲ್ಲ. ಸುಮ್ಮನೆ ನನ್ನ ಮೇಲೆ ಆರೋಪ ಮಾಡೋದು ಅಲ್ಲ. ನಾನೇನು ಮುಂಬೈ ಕಮೀಷನರ್​ಗೆ ದೂರು‌ ಕೊಡಿ ಎಂದು ಶಾಸಕರಿಗೆ ಹೇಳಿಲ್ಲ. ಹೋಟೆಲ್​ ಬಳಿ 144 ಸೆಕ್ಷನ್ ಜಾರಿ ಮಾಡಿದ್ದರು. ಆಗ ಡಿಕೆಶಿ ಗಲಾಟೆ ಮಾಡಿದ್ರು. ಹಾಗಾಗಿ ವಶಕ್ಕೆ ಪಡೆದರು ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ಇಬ್ಬರು ಶಾಸಕರ ಅನರ್ಹತೆಗೆ ಮನವಿ ಮಾಡಿದ್ದೇವೆ; ದಿನೇಶ್ ಗುಂಡೂರಾವ್; ಅತೃಪ್ತರ ಮೇಲೆ ವಿಪ್​ ಅಸ್ತ್ರ ಪ್ರಯೋಗಕ್ಕೆ ಚಿಂತನೆ

ಡಿಕೆ ಶಿವಕುಮಾರ್, ತಾನು ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್​ಗಿಂದ ದೊಡ್ಡೋನು ಅಂತ ತೋರಿಸಿಕೊಳ್ಳಲು ಹಾಗೂ ರಾಹುಲ್ ಗಾಂಧಿ ಹತ್ತಿರ ಒಳ್ಳೆಯವರು ಅನಿಸಿಕೊಳ್ಳಲು ಮುಂಬೈಗೆ ಬಂದು ಹೈಡ್ರಾಮಾ ಮಾಡಿದ್ದಾರೆ. ಅವರು ಬರುವಾಗ ತಮ್ಮ ಜೊತೆಯಲ್ಲಿ ಫೋಟೋಗ್ರಾಫರ್​ನ ಕರೆದುಕೊಂಡು ಹೋಗಿ ವಿಡಿಯೋ ಮಾಡಿ ರಾಹುಲ್ ಗಾಂಧಿಗೆ ಕಳುಹಿಸಿದ್ದಾರೆ ಎಂದು ಡಿಕೆಶಿ ಬಗ್ಗೆ ಅಶೋಕ್ ವ್ಯಂಗ್ಯವಾಡಿದರು.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ